HOME » NEWS » National-international » INDIA IS MOVING TOWARDS A FORM OF ELECTED AUTOCRACY SAYS FORMER JUDGE AP SHAH MAK

ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ನಾಶಗೊಳಿಸಲಾಗುತ್ತಿದೆ, ದೇಶ ಚುನಾಯಿತ ಸರ್ವಾಧಿಕಾರದತ್ತ ವಾಲುತ್ತಿದೆ; ಎ.ಪಿ. ಶಾ

ಇಂದಿರಾ ಗಾಂಧಿ ಬಹಿರಂಗವಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಆದರೆ, ಇಂದು ಬಹಿರಂಗವಾಗಿ ಇಲ್ಲದಿದ್ದರು ಭಾರತದ ಪ್ರಜಾಪ್ರಭುತ್ವ ಕೋಮಾ ಸ್ಥಿತಿಯಲ್ಲಿರುವಂತೆ ಮಾಡಲಾಗುತ್ತಿದೆ. ಇದರ ಜೊತೆಗೆ ಕಾರ್ಯಾಂಗಕ್ಕೆ ಹೆಚ್ಚಿನ ವಿಚಾರಗಳಲ್ಲಿ ಮೇಲುಗೈ ಒದಗಿಸಲಾಗಿದೆ. ಈ ಮೂಲಕ ದೇಶ ಚುನಾಯಿತ ಸರ್ವಾಧಿಕಾರದತ್ತ ವಾಲುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎ.ಪಿ. ಶಾ ಆರೋಪಿಸಿದ್ದಾರೆ.

MAshok Kumar | news18-kannada
Updated:August 17, 2020, 10:47 PM IST
ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ನಾಶಗೊಳಿಸಲಾಗುತ್ತಿದೆ, ದೇಶ ಚುನಾಯಿತ ಸರ್ವಾಧಿಕಾರದತ್ತ ವಾಲುತ್ತಿದೆ; ಎ.ಪಿ. ಶಾ
ನಿವೃತ್ತ ನ್ಯಾಯಮೂರ್ತಿ ಎ.ಪಿ. ಶಾ.
  • Share this:
ನವ ದೆಹಲಿ: ಸರಕಾರವನ್ನು ಹದ್ದುಬಸ್ತಿನಲ್ಲಿಡುವ ಅಧಿಕಾರ ಹೊಂದಿದ ನ್ಯಾಯಾಂಗ ಸಂಸ್ಥೆಯನ್ನು ಭಾರತದಲ್ಲಿ ವ್ಯವಸ್ಥಿತವಾಗಿ ನಾಶಗೊಳಿಸಲಾಗುತ್ತಿದೆ. ಅಲ್ಲದೆ, ಭಾರತ ದೇಶ ಒಂದು ರೀತಿಯ ಚುನಾಯಿತ ಸರ್ವಾಧಿಕಾರದ ಕಡೆ ಸಾಗುತ್ತಿದೆ ಎಂದು ದೆಹಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎ.ಪಿ. ಶಾ ಆತಂಕ ವ್ಯಕ್ತಪಡಿಸಿದ್ದಾರೆ.

ಹಲವಾರು ನಾಗರಿಕ ಸಮಾಜ ಗುಂಪುಗಳು ಜಂಟಿಯಾಗಿ ಆಯೋಜಿಸಿದ್ದ ಜಂತಾ ಪಾರ್ಲಿಮೆಂಟ್ ವೆಬ್‌ನಾರ್‌ನಲ್ಲಿ ಭಾಷಣ ಮಾಡುವಾಗ ತಮ್ಮ ಅಭಿಪ್ರಾಯವನ್ನು ಹೊರಹಾಕಿರುವ ಎ.ಪಿ. ಶಾ, "ಜನರಿಗೆ ಸೂಕ್ತ ನಾಯಕತ್ವ ಒದಗಿಸಲು ಭಾರತದ ಸಂಸತ್ತು ವಿಫಲವಾಗಿದೆ. ಕೊರೋನಾ ಕಾಲದ ಈ ಸಂದಿಗ್ಧ ಸಂದರ್ಭವನ್ನು ಸರಕಾರಕ್ಕೆ ತನಗೆ ಬೇಕಿದ್ದಂತೆ ಮಾಡಲು ಸ್ವಾತಂತ್ರ್ಯ ನೀಡಿದಂತಾಗಿದೆ" ಎಂದು ತಿಳಿಸಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪರೋಕ್ಷವಾಗಿ ದಾಳಿ ನಡೆಸಿರುವ ನಿವೃತ್ತ ನ್ಯಾಯಮೂರ್ತಿ ಎ.ಪಿ. ಶಾ, "ಸರಕಾರವನ್ನು ಹದ್ದುಬಸ್ತಿನಲ್ಲಿಡುವ ಅಧಿಕಾರ ಹೊಂದಿದ ನ್ಯಾಯಾಂಗ ಸಂಸ್ಥೆಯನ್ನು ಭಾರತದಲ್ಲಿ ವ್ಯವಸ್ಥಿತವಾಗಿ ನಾಶಗೊಳಿಸಲಾಗುತ್ತಿದೆ. 2014 ರಿಂದ ಈ ಎಲ್ಲಾ ಯತ್ನಗಳು ನಡೆಯುತ್ತಿವೆ.

ಇಂದಿರಾ ಗಾಂಧಿ ಬಹಿರಂಗವಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಆದರೆ, ಇಂದು ಬಹಿರಂಗವಾಗಿ ಇಲ್ಲದಿದ್ದರು ಭಾರತದ ಪ್ರಜಾಪ್ರಭುತ್ವ ಕೋಮಾ ಸ್ಥಿತಿಯಲ್ಲಿರುವಂತೆ ಮಾಡಲಾಗುತ್ತಿದೆ. ಇದರ ಜೊತೆಗೆ ಕಾರ್ಯಾಂಗಕ್ಕೆ ಹೆಚ್ಚಿನ ವಿಚಾರಗಳಲ್ಲಿ ಮೇಲುಗೈ ಒದಗಿಸಲಾಗಿದೆ. ಈ ಮೂಲಕ ದೇಶ ಚುನಾಯಿತ ಸರ್ವಾಧಿಕಾರದತ್ತ ವಾಲುತ್ತಿದೆ" ಎಂದು ಆರೋಪಿಸಿದ್ದಾರೆ.

"ಮಾರ್ಚ್ ತಿಂಗಳಿನಿಂದ ದೇಶದ ಸಂಸತ್ತು “ಭೂತಗಳ ಪಟ್ಟಣ”ವಾಗಿದೆ ಎಂದಿರುವ ಅವರು, "ಇಂತಹ ಒಂದು ಸಾಂಕ್ರಾಮಿಕ ರೋಗ ಸೃಷ್ಟಿಸಿದ ಸಮಸ್ಯೆಯ ಸಂದರ್ಭ ಜನರಿಗೆ ನಾಯಕತ್ವ ಒದಗಿಸಲು ವಿಫಲವಾಗಿರುವುದರ ಜತೆಗೆ ಉತ್ತರದಾಯಿತ್ವ ಹಾಗೂ ಪ್ರತಿನಿಧಿತ್ವವನ್ನು ದೂರವಾಗಿಸಿ ಕಾರ್ಯಾಂಗಕ್ಕೆ ತನಗೆ ಬೇಕಿದ್ದಂತೆ ಮಾಡುವ ಸ್ವಾತಂತ್ರ್ಯ ನೀಡಲಾಗಿದೆ. ಇಂತಹ ಸಂದರ್ಭಗಳಲ್ಲಿ ಕಾರ್ಯಾಂಗದ ಉತ್ತರದಾಯಿತ್ವ ನೆನಪು ಮಾತ್ರ, ಅದರ ಕಾರ್ಯಗಳ ಕುರಿತು ಪ್ರಶ್ನೆಗಳನ್ನು ಎತ್ತಲು ಯಾರೂ ಇಲ್ಲ" ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಭಾರತೀಯ ಶಾಸ್ತ್ರೀಯ ಸಂಗೀತದ ಲೆಜೆಂಡ್ ಗಾಯಕ ಪಂಡಿತ್‌ ಜಸರಾಜ್ ನಿಧನ!

"1962 ರಲ್ಲಿ ಚೀನಾದ ಜೊತೆ ಹಾಗೂ 1971 ರಲ್ಲಿ ಪಾಕಿಸ್ತಾನದ ಜೊತೆ ಭಾರತ ಯುದ್ಧ ಮಾಡುತ್ತಿದ್ದ ಸಂದರ್ಭವೂ ಸಂಸತ್ತು ಕಾರ್ಯಾಚರಿಸುವುದನ್ನು ನಿಲ್ಲಿಸಿರಲಿಲ್ಲ. 2001ರಲ್ಲಿ ಸಂಸತ್ ಮೇಲೆ ದಾಳಿ ನಡೆದ ಮರುದಿನವೂ ಅಧಿವೇಶನ ನಡೆದಿತ್ತು. ಆದರೆ, ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ಭಾರತದ ಸಂಸತ್ತಿನ ಬಜೆಟ್ ಅಧಿವೇಶನ ಮುಂದೂಡಲಾಗಿದೆ. ಆದರೆ ಇತರ ದೇಶಗಳು ಕೊರೋನಾ ವೈರಸ್ ಭೀತಿಯ ನಡುವೆಯೇ ವರ್ಚುವಲ್ ಆಗಿ ಕಾರ್ಯಾಚರಿಸುತ್ತಿವೆ" ಎಂದು ಅವರು ಉಲ್ಲೇಖಿಸಿದ್ದಾರೆ.

ಈ ನಡುವೆ ದೇಶದ ನ್ಯಾಯಾಂಗ ವ್ಯವಸ್ಥೆಯ ವಿರುದ್ಧವೂ ಕಿಡಿಕಾರಿರುವ ಅವರು, "ದೇಶದ ನ್ಯಾಯಾಂಗ ವ್ಯವಸ್ಥೆ ಜನರ ನಿರೀಕ್ಷೆಗಳನ್ನು ಹುಸಿಯಾಗಿಸಿದೆ. ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಕುರಿತಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ಕಾರ್ಯ ನಿರ್ವಹಿಸದೆ, ಕಾರ್ಯಾಂಗ ನೇತೃತ್ವದ ಸಮಿತಿಗೆ ಈ ವಿಚಾರ ತೀರ್ಮಾನಿಸಲು ಬಿಟ್ಟಿದ್ದು ಸರಿಯಲ್ಲ" ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
Published by: MAshok Kumar
First published: August 17, 2020, 10:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories