PM Modi: ಭಾರತ ಈಗ ಶಸ್ತ್ರಾಸ್ತ್ರ ವಿಚಾರದಲ್ಲಿ ಸ್ವಾವಲಂಬಿ, ಎಲ್ಲಾ Make in India ಪರಿಣಾಮ

ಶೌರ್ಯ ಮತ್ತು ವೀರತೆಯ ಕೊರತೆಯಿಂದಾಗಿ ದೇಶವು ಎಂದಿಗೂ ಸೋಲಿನ ರುಚಿ ಅನುಭವಿಸಲಿಲ್ಲ ಎಂದು ಹೇಳಿದ ಪ್ರಧಾನಿ, ರಾಣಿ ಲಕ್ಷ್ಮೀ ಬಾಯಿ ಅವರೊಂದಿಗೆ ಸಾಕಷ್ಟು ಸಂಪನ್ಮೂಲಗಳು ಮತ್ತು ಶಸ್ತ್ರಾಸ್ತ್ರಗಳು ಇದ್ದಿದ್ದರೆ ದೇಶದ ಇತಿಹಾಸವು ವಿಭಿನ್ನವಾಗಿರುತ್ತಿತ್ತು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • Share this:
ಶಸ್ತ್ರಾಸ್ತ್ರಗಳ ಆಮದು (Importing Weapons) ಮಾಡಿಕೊಳ್ಳುವ ದೇಶವಾಗಿ ಹೆಸರುವಾಸಿಯಾಗಿರುವ ಭಾರತ ಈಗ ರಕ್ಷಣಾ ಕ್ಷೇತ್ರದಲ್ಲಿ (Defence) ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು “ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್” (Make in India, Make for the world) ಎಂಬ ಮಂತ್ರವನ್ನು ಅಳವಡಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು. ಸಶಸ್ತ್ರ ಪಡೆಗಳಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರಕ್ಷಣಾ ಪ್ಲಾಟ್‌ಫಾರ್ಮ್‌ಗಳನ್ನು ಹಸ್ತಾಂತರಿಸಿದ ಪ್ರಧಾನಿ ಮೋದಿ (PM Modi) ಈ ವೇಳೆ ಈ ಮಾತುಗಳನ್ನು ಹೇಳಿದರು. ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದ (UP Elections) ಝಾನ್ಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಲಘು ಯುದ್ಧ ವಿಮಾನ (LCH) ಅನ್ನು ವಾಯುಪಡೆ ಮುಖ್ಯಸ್ಥರಿಗೆ, ಡ್ರೋನ್ ಮತ್ತು ಭಾರತೀಯ ಸ್ಟಾರ್ಟ್-ಅಪ್‌ಗಳು ನಿರ್ಮಿಸಿದ UAVಗಳನ್ನು ಭೂಸೇನಾ ಮುಖ್ಯಸ್ಥರಿಗೆ, ಮತ್ತು DRDO-ವಿನ್ಯಾಸಗೊಳಿಸಿದ ಹಾಗೂ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನೌಕಾ ಹಡಗುಗಳಿಗಾಗಿ ತಯಾರಿಸಿದ ಸುಧಾರಿತ ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್‌ಗಳನ್ನು (Electronics Software Suit) ನೌಕಾಪಡೆ (Navy) ಮುಖ್ಯಸ್ಥರಿಗೆ ಔಪಚಾರಿಕವಾಗಿ ಹಸ್ತಾಂತರಿಸಿದರು.

ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಅಡಿಪಾಯ

ಭಾರತ್ ಡೈನಾಮಿಕ್ಸ್ ಅಡಿಯಲ್ಲಿ 400 ಕೋಟಿ ರೂ ವೆಚ್ಚದ ಸ್ಥಾವರ, ಟ್ಯಾಂಕ್ ವಿರೋಧಿ ಗೈಡೆಡ್ ಕ್ಷಿಪಣಿಗಳಿಗೆ ಪ್ರೊಪಲ್ಷನ್ ಸಿಸ್ಟಮ್ ಮತ್ತು 3,013 ಕೋಟಿ ರೂ. ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 600 ಮೆಗಾವ್ಯಾಟ್ ಅಲ್ಟ್ರಾ ಮೆಗಾ ಸೋಲಾರ್ ಪವರ್ ಪಾರ್ಕ್ ಸೇರಿದಂತೆ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಅಡಿಪಾಯ ಹಾಕಿದರು.

ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ದೇಶದ ಮಂತ್ರ

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ಭಾರತದ ಗುರುತು ಈ ಹಿಂದೆ ಶಸ್ತ್ರಾಸ್ತ್ರಗಳ ಆಮದುದಾರನದ್ದಾಗಿತ್ತು. ಇಂದು ದೇಶದ ಮಂತ್ರ ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’. ನಮ್ಮ ಸಶಸ್ತ್ರ ಪಡೆಗಳನ್ನು 'ಆತ್ಮನಿರ್ಭರ್' (ಸ್ವಾವಲಂಬಿ) ಮಾಡಲು ದೇಶವು ಕೆಲಸ ಮಾಡುತ್ತಿದೆ" ಎಂದು ಹೇಳಿದರು.

"ನಾವು ನಮ್ಮ ರಕ್ಷಣಾ ವಲಯದೊಂದಿಗೆ ಖಾಸಗಿ ವಲಯದ ಪ್ರತಿಭೆ ಸೇರಿಸುತ್ತಿದ್ದೇವೆ ಮತ್ತು ಹೊಸ ಸ್ಟಾರ್ಟ್‌ಅಪ್‌ಗಳಿಗೆ ಈ ವಲಯದಲ್ಲಿ ತಮ್ಮ 'ಕಮಾಲ್' ತೋರಿಸಲು ಅವಕಾಶ ನೀಡಲಾಗುತ್ತಿದೆ" ಎಂದು ಪ್ರಧಾನಿ ಮೋದಿ 'ರಾಷ್ಟ್ರ ರಕ್ಷಾ ಸಮರ್ಪಣ್ ಪರ್ವ್' ನ ಅಂತಿಮ ದಿನದಂದು ಹೇಳಿದರು.

ಇದನ್ನೂ ಓದಿ: Farm Laws: ಪ್ರಧಾನಿ ಮೋದಿ ಮಹತ್ವದ ಘೋಷಣೆ: ಮೂರು ಕೃಷಿ ಕಾಯ್ದೆಗಳು ರದ್ದು

ಝಾನ್ಸಿಯಲ್ಲಿ 3 ದಿನಗಳ 'ಪರ್ವ್' ಸಮಯದಲ್ಲಿ ಹಲವಾರು ಉಪಕ್ರಮಗಳು ಮತ್ತು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದ್ದು, ಈ ವೇಳೆ ರಾಣಿ ಲಕ್ಷ್ಮೀ ಬಾಯಿಯವರ 193ನೇ ಜನ್ಮದಿನ ಆಚರಿಸಲಾಗಿದೆ.

ಸೈನಿಕ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಪ್ರವೇಶ ಆರಂಭ

ಇನ್ನು, ಈ ಬಾರಿ ಸೈನಿಕ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಪ್ರವೇಶ ಆರಂಭವಾಗಿದ್ದು, ಭವಿಷ್ಯದಲ್ಲಿ ರಾಣಿ ಲಕ್ಷ್ಮೀ ಬಾಯಿಯಂತಹ ವೀರ ಮಹಿಳೆಯರು ಈ ಶಾಲೆಗಳಿಂದ ಹೊರಬಂದು ದೇಶಕ್ಕೆ ಸೇವೆ ಸಲ್ಲಿಸಲಿದ್ದಾರೆ ಎಂದು ಈ ವೇಳೆ ಪ್ರಧಾನಿ ಮೋದಿ ಹೇಳಿದರು.

ಶೌರ್ಯ ಮತ್ತು ವೀರತೆಯ ಕೊರತೆಯಿಂದಾಗಿ ದೇಶವು ಎಂದಿಗೂ ಸೋಲಿನ ರುಚಿ ಅನುಭವಿಸಲಿಲ್ಲ ಎಂದು ಹೇಳಿದ ಪ್ರಧಾನಿ, ರಾಣಿ ಲಕ್ಷ್ಮೀ ಬಾಯಿ ಅವರೊಂದಿಗೆ ಸಾಕಷ್ಟು ಸಂಪನ್ಮೂಲಗಳು ಮತ್ತು ಶಸ್ತ್ರಾಸ್ತ್ರಗಳು ಇದ್ದಿದ್ದರೆ ದೇಶದ ಇತಿಹಾಸವು ವಿಭಿನ್ನವಾಗಿರುತ್ತಿತ್ತು ಎಂದು ಹೇಳಿದರು.

ಇದನ್ನೂ ಓದಿ: Vedanta: ಭಾರತದ ಯುದ್ಧತಂತ್ರ ವಿಚಾರಗಳಿಗೆ ಆಧ್ಯಾತ್ಮಿಕ ಮಾರ್ಗದರ್ಶಿ

"ಶಸ್ತ್ರಾಸ್ತ್ರಗಳ ಖರೀದಿಗಾಗಿ ರಕ್ಷಣಾ ಬಜೆಟ್‌ನ ಹೆಚ್ಚಿನ ಭಾಗವನ್ನು 'ಮೇಕ್ ಇನ್ ಇಂಡಿಯಾ' ಉಪಕರಣಗಳಿಗೆ ಖರ್ಚು ಮಾಡಲು ನಿರ್ಧರಿಸಲಾಗಿದೆ ಮತ್ತು ರಕ್ಷಣಾ ಸಚಿವರು ಆಮದು ಮಾಡಿಕೊಳ್ಳಲಾಗದ 200 ಉಪಕರಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ," ಎಂದರು.

ಪ್ರಧಾನ ಮಂತ್ರಿಗಳು ವಾಯುಪಡೆಗೆ ಹಸ್ತಾಂತರಿಸಿದ LCH ಸುಧಾರಿತ ತಂತ್ರಜ್ಞಾನಗಳು ಮತ್ತು ಪರಿಣಾಮಕಾರಿ ಯುದ್ಧ ಪಾತ್ರಗಳಿಗಾಗಿ ರಹಸ್ಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸಶಸ್ತ್ರ ಪಡೆಗಳಿಂದ ಭಾರತೀಯ UAVಗಳ ನಿಯೋಜನೆಯು ಭಾರತೀಯ ಡ್ರೋನ್ ಉದ್ಯಮದ ವ್ಯವಸ್ಥೆಯ ಬೆಳೆಯುತ್ತಿರುವ ಪ್ರಬುದ್ಧತೆಯ ಪುರಾವೆಯಾಗಿದೆ ಮತ್ತು ಸುಧಾರಿತ EW ಸೂಟ್ ಅನ್ನು ವಿಧ್ವಂಸಕ ಮತ್ತು ಯುದ್ಧನೌಕೆಗಳು ಸೇರಿದಂತೆ ವಿವಿಧ ನೌಕಾ ಹಡಗುಗಳಲ್ಲಿ ಬಳಸಲಾಗುತ್ತದೆ.

ಝಾನ್ಸಿಯಲ್ಲಿ ಅಟಲ್ ಏಕತಾ ಪಾರ್ಕ್ ಉದ್ಘಾಟನೆ

ಉತ್ತರ ಪ್ರದೇಶದ ಝಾನ್ಸಿಯಲ್ಲಿ, ಮೋದಿ ಉತ್ತರ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಬುಂದೇಲ್‌ಖಂಡ್ ಪ್ರದೇಶದ ಬೆಳವಣಿಗೆಯನ್ನು ತ್ವರಿತಗೊಳಿಸಲು 3,425 ಕೋಟಿ ರೂ.ಗಳ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಹಾಗೂ ಕೆಲ ಯೋಜನೆಗಳಿಗೆ ಅಡಿಪಾಯ ಹಾಕಿದರು. ಈ ವೇಳೆ ಝಾನ್ಸಿಯಲ್ಲಿ ಅಟಲ್ ಏಕತಾ ಪಾರ್ಕ್ ಅನ್ನು ಪ್ರಧಾನಿ ಉದ್ಘಾಟಿಸಿದರು.

ಸುಮಾರು 40,000 ಚದರ ಮೀಟರ್ ವಿಸ್ತೀರ್ಣದಲ್ಲಿ ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಪಾರ್ಕ್‌ಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡಲಾಗಿದೆ. ಈ ಉದ್ಯಾನವನದಲ್ಲಿ ವಾಜಪೇಯಿ ಅವರ ಪ್ರತಿಮೆ ಜೊತೆಗೆ ಗ್ರಂಥಾಲಯವೂ ಇರುತ್ತದೆ.

ಇದನ್ನೂ ಓದಿ: Single environment Act| ಏಕ ರೂಪ ಕಾಯ್ದೆ ಜಾರಿಗೊಳಿಸಲು 60 ಅಂಶಗಳಿರುವ ಕ್ರಿಯಾ ಯೋಜನೆ ಸಿದ್ಧಪಡಿಸಿದ ಕೇಂದ್ರ ಸರ್ಕಾರ!

ಈ ಪ್ರತಿಮೆಯನ್ನು ಸ್ಟ್ಯಾಚ್ಯೂ ಆಫ್ ಯೂನಿಟಿಯ ರೂವಾರಿ ಖ್ಯಾತ ಶಿಲ್ಪಿ ರಾಮ್ ಸುತಾರ್ ನಿರ್ಮಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ (PMO) ಹೇಳಿದೆ.

ಹಾಗೂ, ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವರ್ಧಿತ ರಿಯಾಲಿಟಿ ಚಾಲಿತ ಎಲೆಕ್ಟ್ರಾನಿಕ್ ಕಿಯೋಸ್ಕ್‌ಗಳನ್ನು ಪ್ರಧಾನ ಮಂತ್ರಿ ರಾಷ್ಟ್ರಕ್ಕೆ ಸಮರ್ಪಿಸಿದರು. ಇಲ್ಲಿಗೆ ಭೇಟಿ ನೀಡುವವರು ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಲು ಬಟನ್‌ ಕ್ಲಿಕ್ ಮಾಡಿದರೆ ಸಾಕು.

ಇದಕ್ಕೂ ಮುನ್ನ, ಮಹೋಬಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಬರಡಾಗಿರುವ ಬುಂದೇಲ್‌ಖಂಡ್ ಪ್ರದೇಶದ ರೈತರಿಗೆ ನೀರಿನ ಕೊರತೆ ಕೊನೆಗೊಳಿಸುವ ಉದ್ದೇಶದಿಂದ 3,240 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು. 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿದೆ.
Published by:Soumya KN
First published: