HOME » NEWS » National-international » INDIA IS CONDEMNED ISLAMIC FUNDAMENTALISTS FRANCE ATTACK MAK

ಫ್ರಾನ್ಸ್​ನಲ್ಲಿ ಇಸ್ಲಾಂ ಮೂಲಭೂತವಾದಿಗಳು ನಡೆಸಿರುವುದು ಬಹುತ್ವದ ಮೇಲಿನ ದಾಳಿ; ಭಾರತ ಖಂಡನೆ

ಈ ಘಟನೆ ಸಂಬಂಧ ಭಾರತವು ಫ್ರೆಂಚ್ ಅಧ್ಯಕ್ಷರೊಂದಿಗೆ ಒಗ್ಗಟ್ಟಾಗಿರುವುದಾಗಿ ತಿಳಿಸಿದೆ. ವೈಯಕ್ತಿಕವಾಗಿ ಭಾರತ ಫ್ರಾನ್ಸ್ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಈ ಸಂಬಂಧ ಮತ್ತಷ್ಟು ಗಾಢವಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

news18-kannada
Updated:November 9, 2020, 6:09 PM IST
ಫ್ರಾನ್ಸ್​ನಲ್ಲಿ ಇಸ್ಲಾಂ ಮೂಲಭೂತವಾದಿಗಳು ನಡೆಸಿರುವುದು ಬಹುತ್ವದ ಮೇಲಿನ ದಾಳಿ; ಭಾರತ ಖಂಡನೆ
ಫ್ರೆಂಚ್ ನಗರದ ಚರ್ಚ್​ ಎದುರು ನಿಂತಿರುವ ಪೊಲೀಸರು.
  • Share this:
ದೆಹಲಿ (ನವೆಂಬರ್​ 09); ಇಸ್ಲಾಮಿಕ್ ಮೂಲಭೂತವಾದಿಗಳು ಫ್ರಾನ್ಸ್ನಲ್ಲಿ ಇತ್ತೀಚೆಗೆ ನಡೆಸಿದ ಕ್ರೂರ ಭಯೋತ್ಪಾದಕ ದಾಳಿ ಬಹುತ್ವ ಮತ್ತು ಆಡಳಿತದ ಆಧಾರದ ಮೇಲೆ ನಡೆಸಿರುವ ದಾಳಿ. ಇಂತಹ ದಾಳಿಗಳು ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ಪರಿಣಾಮ ಬೀರಲಿದೆ ಎಂದು ಭಾರತೀಯ ರಾಯಭಾರ ಕಚೇರಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

ಇತ್ತೀಚೆಗೆ ವ್ಯಕ್ತಿಯೊಬ್ಬ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ಫ್ರಾನ್ಸ್ ಚರ್ಚ್ ಎದುರು ಮೂರು ಜನರನ್ನು ಚಾಕುವಿನಿಂದ ಇರಿದು ಕೊಂದಿದ್ದ. ಈ ಘಟನೆಯನ್ನು ಇಡೀ ವಿಶ್ವ ತೀವ್ರ ಖಂಡನೆಗೆ ಒಳಪಡಿಸಿತ್ತು. ಅಲ್ಲದೆ, ಈ ಘಟನೆಯ ಹಿಂದೆ ಇಸ್ಲಾಂ ಮೂಲಭೂತವಾದಿಗಳ ಭಯೋತ್ಪಾದಕ ಗುಂಪು ಇರುವುದು ಇದೀಗ ಸ್ಪಷ್ಟವಾಗಿದೆ. ಈ ಬೆನ್ನಿಗೆ ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ತನ್ನ ಖಂಡನೆಯನ್ನು ವ್ಯಕ್ತಪಡಿಸಿರುವ ಭಾರತೀಯ ರಾಯಭಾರ ಕಚೇರಿ,

“ಫ್ರಾನ್ಸ್ ಎಂಬ ರಾಷ್ಟ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆ ಆಳವಾದ ಸಂಬಂಧವಿರುವ ಇತಿಹಾಸವನ್ನು ಹೊಂದಿದೆ. ಅದೇ ರೀತಿ ಫ್ರಾನ್ಸ್ನ ಮುಸ್ಲಿಂ ಜನಸಂಖ್ಯೆಯು ಸಹ ರಾಜ್ಯ ಧರ್ಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ವಿಭಿನ್ನವಾದ ದೃಷ್ಟಿಕೋನವನ್ನು ಹೊಂದಿದೆ. ಈ ಘಟನೆಯಲ್ಲಿ ಧಾರ್ಮಿಕ ನ್ಯಾಯ ಎಂಬುದು ಕೊಲೆಘಾತಕ ವ್ಯಕ್ತಿಯಿಂದ ಏಕಪಕ್ಷೀಯವಾಗಿ ಹೊರಹೊಮ್ಮಿದೆ. ಸಾಂವಿಧಾನಿಕ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಲ್ಲಿ ಇಂತಹ ವ್ಯಯಕ್ತಿಕ ನಂಬುಗೆಗಳಿಗೆ ಜಾಗ ಇರಬಾರದು.

ಇದನ್ನೂ ಓದಿ : ಉಪಕುಲಪತಿ ಹುದ್ದೆ ಮಾರಾಟಕ್ಕಿದೆಯೇ?, ಪ್ರೊ. ಅಶೋಕ್ ಆತ್ಮಹತ್ಯೆ ನ್ಯಾಯಾಂಗ ತನಿಖೆಯಾಗಬೇಕು; ಡಿಕೆಶಿ

ಈ ಘಟನೆ ಸಂಬಂಧ ಭಾರತವು ಫ್ರೆಂಚ್ ಅಧ್ಯಕ್ಷರೊಂದಿಗೆ ಒಗ್ಗಟ್ಟಾಗಿರುವುದಾಗಿ ತಿಳಿಸಿದೆ. ವೈಯಕ್ತಿಕವಾಗಿ ಭಾರತ ಫ್ರಾನ್ಸ್ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಈ ಸಂಬಂಧ ಮತ್ತಷ್ಟು ಗಾಢವಾಗುತ್ತಿದೆ. ಆದರೆ, ಭಾರತವೂ ಸಹ ದಶಕಗಳಿಂದ ರಾಜ್ಯ ಪ್ರಾಯೋಜಿತ ಭಯೋತ್ಪಾದನೆಗೆ ಬಲಿಯಾಗಿದೆ. ಮತ್ತು ಈ ವಿಚಾರ ತುಂಬಾ ಸೂಕ್ಷ್ಮವಾದ ವಿಚಾರವಾಗಿದೆ.

ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಯೋತ್ಪಾದನೆಯ ವಿರುದ್ಧ ದಿಟ್ಟ ತನದಿಂದ ಹೋರಾಡುತ್ತಿದೆ. ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ಬೆದರಿಕೆಯಾಗಿದೆ. ಹೀಗಾಗಿ ಇದನ್ನು ಬುಡ ಸಮೇತ ಕೀಳಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುಪಕ್ಷೀಯ ಕಾರ್ಯಸೂಚಿಯನ್ನು ಜಾರಿಗೆ ತರಬೇಕಿದೆ. ಎಲ್ಲಾ ದೇಶಗಳೂ ಒಟ್ಟಾಗಿ ಭಯೋತ್ಪಾದನೆಯನ್ನು ನಿರ್ನಾಮ ಮಾಡಬೇಕಿದೆ” ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
Published by: MAshok Kumar
First published: November 9, 2020, 6:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories