ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ (Maharashtra Deputy Chief Minister) ದೇವೇಂದ್ರ ಫಡ್ನವೀಸ್ (Devendra Fadnavis) ಅವರ ಪತ್ನಿ ಅಮೃತಾ ಫಡ್ನವೀಸ್ (Amruta Fadnavis) ಅವರು, ಭಾರತ ಇಬ್ಬರು ರಾಷ್ಟ್ರಪಿತಾರನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ (Maharashtra Deputy Chief Minister) ಅವರನ್ನು ನವ ಭಾರತದ ಪಿತಾಮಹ ಎಂದು ಕರೆದಿದ್ದಾರೆ. ಅಭಿರೂಮ್ ನ್ಯಾಯಾಲಯದ ಅಣಕು ನ್ಯಾಯಾಲಯದ ಸಂದರ್ಶನದಲ್ಲಿ ಮಾತನಾಡಿದ ಅವರು, ನಮಗೆ ಇಬ್ಬರು ರಾಷ್ಟ್ರ ಪಿತರಿದ್ದಾರೆ. ನರೇಂದ್ರ ಮೋದಿ ಅವರು ನವ ಭಾರತದ ಪಿತಾಮಹ ಮತ್ತು ಮಹಾತ್ಮ ಗಾಂಧಿ (Mahatma Gandhi) ಅವರು ಹಿಂದಿನ ಕಾಲದ ರಾಷ್ಟ್ರದ ಪಿತಾಮಹರಾಗಿದ್ದಾರೆ ಎಂದು ಹೇಳಿದ್ದಾರೆ.
ಅಮೃತಾ ಫಡ್ನವೀಸ್ ಕೈ ನಾಯಕಿ ಟೀಕೆ
ಅಮೃತಾ ಫಡ್ನವೀಸ್ ಅವರ ಈ ಹೇಳಿಕೆ ಕುರಿತಂತೆ ಕಾಂಗ್ರೆಸ್ ನಾಯಕಿ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವೆ ಯಶೋಮತಿ ಠಾಕೂರ್ ಟೀಕೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮತ್ತು ಆರ್ಎಸ್ಎಸ್ ಸಿದ್ಧಾಂತವನ್ನು ಅನುಸರಿಸುತ್ತಿರುವ ಜನರು ಗಾಂಧೀಜಿಯನ್ನು ಮತ್ತೆ ಮತ್ತೆ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳನ್ನು ಪುನರಾವರ್ತಿಸುವ ಮತ್ತು ಗಾಂಧೀಜಿಯಂತಹ ಮಹಾನ್ ವ್ಯಕ್ತಿಗಳನ್ನು ನಿಂದಿಸುವ ಮೂಲಕ ಇತಿಹಾಸವನ್ನು ಬದಲಾಯಿಸುವ ಗೀಳು ಹೊಂದಿರುವ ಇವರು ಇಂತಹ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೋದಿಯವರು ರಾಷ್ಟ್ರಪಿತರೇ, ಹಾಗಾದರೆ ಮಹಾತ್ಮ ಗಾಂಧಿ ಯಾರು?
ಅಣಕು ನ್ಯಾಯಾಲಯದ ಸಂದರ್ಶನದಲ್ಲಿ, ಅಮೃತಾ ಅವರು ಕಳೆದ ವರ್ಷ ಮೋದಿಯನ್ನು ರಾಷ್ಟ್ರಪಿತ ಎಂದು ಕರೆದಿದ್ದ ಬಗ್ಗೆ ಪ್ರಶ್ನಿಸಲಾಯಿತು. ಮೋದಿಯವರು ರಾಷ್ಟ್ರಪಿತರೇ, ಹಾಗಾದರೆ ಮಹಾತ್ಮ ಗಾಂಧಿ ಯಾರು ಎಂದು ಸಂದರ್ಶಕರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಮೃತಾ ಅವರು, ಮಹಾತ್ಮ ಗಾಂಧಿ ದೇಶದ ರಾಷ್ಟ್ರಪಿತ ಮತ್ತು ಮೋದಿ ನವಭಾರತದ ರಾಷ್ಟ್ರಪಿತ ಎಂದು ಹೇಳಿದರು. ನಮಗೆ ಇಬ್ಬರು ರಾಷ್ಟ್ರಪಿತರಿದ್ದಾರೆ. ನರೇಂದ್ರ ಮೋದಿ ನವ ಭಾರತದ ರಾಷ್ಟ್ರಪಿತ ಮತ್ತು ಮಹಾತ್ಮ ಗಾಂಧಿ ಹಿಂದಿನ ಕಾಲದ ರಾಷ್ಟ್ರಪಿತ ಎಂದು ಉತ್ತರಿಸಿದ್ದಾರೆ.
ಛತ್ರಪತಿ ಶಿವಾಜಿ ಕುರಿತಂತೆ ವಿವಾದತ್ಮಕ ಹೇಳಿಕೆ ನೀಡಿದ್ದ ಭಗತ್ ಸಿಂಗ್ ಕೋಶ್ಯಾರಿ
ಇತ್ತೀಚೆಗಷ್ಟೇ ಛತ್ರಪತಿ ಶಿವಾಜಿ ಕುರಿತಂತೆ ಮಹಾರಾಜ ಕುರಿತಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ವಿವಾದಾತ್ಮಕ ಹೇಳಿಕೆ ನೀಡಿ ಪ್ರತಿಪಕ್ಷಗಳಿಂದ ಟೀಕೆಗೊಳಗಾಗಿದ್ದರು. ಇದೀಗ ಅಮೃತ ಅವರು ನೀಡಿರುವ ಮೋದಿ ಪರ ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.
ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ನಿತಿನ್ ಗಡ್ಕರಿ ಮತ್ತು ಎನ್ಸಿಪಿ ನಾಯಕ ಶರದ್ ಪವಾರ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮಾತನಾಡಿದ್ದರು. ಈ ವೇಳೆ ನಿಮ್ಮ ಆದರ್ಶಪ್ರಾಯರು ಯಾರು ಎಂದರೆ ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಮತ್ತು ಮಹಾತ್ಮ ಗಾಂಧಿ ಎಂಬ ಹೆಸರು ಬರುತ್ತಿದ್ದವು. ಮಹಾರಾಷ್ಟ್ರದಲ್ಲಿ ನೀವು ಎಲ್ಲಿಯೂ ನೋಡಬೇಕಾದ ಅಗತ್ಯವಿಲ್ಲ, ಎಲ್ಲ ಕಡೆಯೂ ಅನೇಕ ಐಕಾನ್ಗಳಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಗತಕಾಲದ ಐಕಾನ್ ಆಗಿದ್ದರು. ಈಗ ಬಿಆರ್ ಅಂಬೇಡ್ಕರ್ ಮತ್ತು ನಿತಿನ್ ಗಡ್ಕರಿ ಇದ್ದಾರೆ ಎಂದು ಹೇಳಿದ್ದರು.
ಗವರ್ನರ್ ಬೆಂಬಲಕ್ಕೆ ನಿಂತಿದ್ದ ಅಮೃತಾ ಫಡ್ನವೀಸ್
ಭಗತ್ ಸಿಂಗ್ ಕೋಶ್ಯಾರಿ ನೀಡಿದ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ ಮಧ್ಯೆಯೇ ಅಮೃತಾ ಫಡ್ನವೀಸ್ ಗವರ್ನರ್ ಬೆಂಬಲಕ್ಕೆ ನಿಂತಿದ್ದರು.
ಇದನ್ನೂ ಓದಿ: PM Modi: ಜನವರಿ 12ರಂದು ರಾಜ್ಯದ ಈ ನಗರಕ್ಕೆ ಪ್ರಧಾನಿ ಮೋದಿ ಆಗಮನ
ನಾನು ವೈಯಕ್ತಿಕವಾಗಿ ರಾಜ್ಯಪಾಲರನ್ನು ಬಲ್ಲೆ. ಅವರು ಮಹಾರಾಷ್ಟ್ರಕ್ಕೆ ಬಂದ ಬಳಿ ಪ್ರೀತಿಯಿಂದಲೇ ಮರಾಠಿ ಭಾಷೆ ಕಲಿತರು. ಅವರು ಮರಾಠಿ ಭಾಷೆ ಹಾಗೂ ಮರಾಠರನ್ನು ನಿಜವಾಗಿಯೂ ಪ್ರೀತಿಸುತ್ತಾರೆ. ಇದು ನನ್ನ ಅನುಭವಕ್ಕೆ ಬಂದಿದೆ. ಆದರೆ ಅವರು ಯಾವುದಾದರೂ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದಾಗ ಅದನ್ನು ಬೇರೆ ಅರ್ಥ ಬರುವ ರೀತಿಯಲ್ಲಿ ವ್ಯಾಖ್ಯಾನ ಮಾಡಿರುವುದು ಸಾಕಷ್ಟು ಬಾರಿ ನಡೆದಿದೆ. ಆದರೆ, ಅವರು ಸದಾ ಮರಾಠಿಗರ ಹೃದಯದಲ್ಲಿದ್ದಾರೆ ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ