Vaccine: ದೇಶದ ಅರ್ಧಕ್ಕಿಂತ ಹೆಚ್ಚಿನ ಜನರಿಗೆ ಕೋವಿಡ್​ ಮೊದಲ ಡೋಸ್​ ಲಸಿಕೆ: ಕೇಂದ್ರ ಆರೋಗ್ಯ ಇಲಾಖೆ

ಸರಿಸುಮಾರು 47.3 ಕೋಟಿ ಜನರು ತಮ್ಮ ಮೊದಲ ಡೋಸ್ ಪಡೆದಿದ್ದರೆ, 13.8 ಕೋಟಿ ಜನರು ತಮ್ಮ ಎರಡನೇ ಡೋಸ್ ಪಡೆದಿದ್ದಾರೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ನವದೆಹಲಿ (ಆ. 27): ಕೋವಿಡ್ (Covid 19​ ವಿರುದ್ಧ ಹೋರಾಡಲು ಲಸಿಕೆ ಪಡೆಯುವುದು ಅತ್ಯಗತ್ಯವಾಗಿದ್ದು, ತಪ್ಪದೇ ಲಸಿಕೆ (vaccination) ತೆಗೆದುಕೊಳ್ಳುವಂತೆ ಈಗಾಗಲೇ ಸರ್ಕಾರ ಜನರಿಗೆ ಮನವಿ ಮಾಡುತ್ತಿದೆ. ಮೂರನೇ ಅಲೆ ಸೋಂಕಿನ (third wave covid) ಹಿನ್ನಲೆ ಈ ಲಸಿಕಾ ಅಭಿಯಾನಕ್ಕೆ ಇನ್ನಷ್ಟು ಒತ್ತು ನೀಡಲಾಗಿದೆ. ಕಳೆದ ಜನವರಿಯಲ್ಲಿ ಮೊದಲ ಬಾರಿಗೆ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಮೂಲಕ ದೇಶದಲ್ಲಿ ಲಸಿಕಾ ಅಭಿಯಾನ (vaccination Drive) ಆರಂಭವಾಗಿದ್ದು, ಇದುವರೆಗೂ ದೇಶದ ಅರ್ಥಕ್ಕಿಂತ ಹೆಚ್ಚು ಜನರು ಮೊದಲ ಡೋಸ್​ ಕೋವಿಡ್​ ಲಸಿಕೆ ಪಡೆದಿದ್ದಾರೆ ಎಂದು ಸರ್ಕಾರದ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಈ ಮಾಹಿತಿ ಪ್ರಕಾರ ದೇಶದ ಆರೋಗ್ಯ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶೇ. 99 ರಷ್ಟು ಜನರು ಲಸಿಕೆ ಪಡೆದಿದ್ದು, ಶೇ 100 ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ ಎಂಬುದು ತಿಳಿದು ಬಂದಿದೆ.

    ಹಿರಿಯ ನಾಗರಿಕರು ಅಂದರೆ 60 ವರ್ಷ ಮೇಲ್ಪಟ್ಟ ಶೇ 60 ರಷ್ಟು ಜನರು ಕೋವಿಡ್​ ಮೊದಲ ಡೋಸ್​ ಲಸಿಕೆ ಪಡೆದಿದ್ದಾರೆ. ದೇಶದಲ್ಲಿ ಪ್ರಸ್ತುತ ಸರಿಸುಮಾರು 47.3 ಕೋಟಿ ಜನರು ತಮ್ಮ ಮೊದಲ ಡೋಸ್ ಪಡೆದಿದದರೆ, 13.8 ಕೋಟಿ ಜನರು ತಮ್ಮ ಎರಡನೇ ಡೋಸ್ ಪಡೆದಿದ್ದಾರೆ.

    ಈ ಕುರಿತು ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಆರೋಗ್ಯ ಸಚಿವಾರಾದ ಮನ್ಸೂಖ್​ ಮಂಡೋವಿಯಾ, ಲಸಿಕೆ ಅಭಿಯಾನದಲ್ಲಿ ಭಾರತ ಅಭೂತಪೂರ್ವ ಮೈಲಿಗಲ್ಲು ಸಾಧಿಸಿದೆ. ದೇಶದ ಶೇ 50ರಷ್ಟು ಅರ್ಹ ಜನರು ಕೋವಿಡ್​ ಲಸಿಕೆ ಪಡೆದಿದ್ದು, ಕೋವಿಡ್​ ವಿರುದ್ಧದ ಹೋರಾಡೋಣ ಎಂದಿದ್ದಾರೆ.

    ಇದನ್ನು ಓದಿ: ಶಾಂತಿಯುತ ಅಫ್ಘಾನ್​ ಅನ್ನು ಭಾರತ ಬಯಸುತ್ತದೆ; ವಿದೇಶಾಂಗ ಸಚಿವಾಲಯ

    ಲಸಿಕೆ ಅಭಿಯಾನದ ಮೂರನೇ ಹಂತ ಅಂದರೆ 18-44 ವಯಸ್ಸಿನ ಆರಂಭವಾದಗಿನಿಂದ 23,18,95,731 ಜನರು ಮೊದಲ ಡೋಸ್​ ಕೋವಿಡ್​ ಲಸಿಕೆ ಪಡೆದಿದ್ದರೆ, 2,33,74,357 ಜನರು ಎರಡು ಡೋಸ್​ ಕೋವಿಡ್​ ಲಸಿಕೆ ಪಡೆದಿದ್ದಾರೆ. ಈ ವರ್ಷದ ಅಂತ್ಯದ ಒಳಗೆ ದೇಶದ ಎಲ್ಲಾರಿಗೂ ಕೋವಿಡ್​ ಲಸಿಕೆ ನೀಡುವುದು ಸರ್ಕಾರ ಗುರಿಯಾಗಿದೆ.

    ಕಳೆದ 85 ದಿನಗಳಿಗೆ ಹೋಲಿಸಿದರೆ ಭಾರತ ಕಳೆದ 19ದಿನಗಳಲ್ಲಿ 10 ಕೋಟಿ ಲಸಿಕೆ ಡೋಸ್​ ನೀಡಿದೆ. ಜನವರಿಯಲ್ಲಿ ಅಭಿಯಾನ ಆರಂಭವಾದಾಗಿನಿಂದ ದೇಶದಲ್ಲಿ 14.6 ರಷ್ಟು ವಯಸ್ಕರಿಗೆ ಮಾತ್ರ ಸಂಪೂರ್ಣ ಲಸಿಕೆ ಹಾಕಲಾಗಿದೆ. ಇದರಲ್ಲಿ 83% ಆರೋಗ್ಯ ಮತ್ತು 79ರಷ್ಟು ಮುಂಚೂಣಿ ಹೋರಾಟಗಾರರು ಇದ್ದಾರೆ.

    ಆಗಸ್ಟ್‌ನಲ್ಲಿ ಪ್ರತಿ ದಿನ ಸರಾಸರಿ 52.16 ಲಕ್ಷ ಲಸಿಕೆಗಳನ್ನು ನೀಡಲಾಗಿದ್ದು, ಜುಲೈ ಮತ್ತು ಜೂನ್‌ನಲ್ಲಿ ಕ್ರಮವಾಗಿ 43.41 ಲಕ್ಷ ಮತ್ತು 39.38 ಲಕ್ಷ ಡೋಸೇಜ್‌ಗಳನ್ನು ನೀಡಲಾಗಿದೆ. ಅಷ್ಟೇ ಅಲ್ಲದೇ, ಈ ಹಿಂದೆ ಕೇಳಿ ಬಂದಿದ್ದ ಲಸಿಕೆ ಕೊರತೆ ಕೂಗು ಈಗ ಕೇಳಿಸುತ್ತಿಲ್ಲ. ಎಲ್ಲಾ ರಾಜ್ಯಗಳಿಗೂ ಲಸಿಕೆ ಪೂರೈಕೆಯಾಗುತ್ತಿದೆ. ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಪೂರೈಕೆಗೆ ಕೇಂದ್ರ ಒತ್ತು ನೀಡುತ್ತಿದೆ.

    ಎರಡನೇ ಡೋಸ್​ ಕೋವಿಡ್ ಲಸಿಕೆ ನೀಡುವಿಕೆಗೆ ಹೆಚ್ಚಿಸುವಂತೆ ಈಗಾಗಲೇ ರಾಜ್ಯಕ್ಕೆ ಕೇಂದರ ಮನವಿ ಮಾಡಿದೆ. ಅದರಲ್ಲಿಯೂ ಕೇರಳದಲ್ಲಿ ಲಸಿಕೆ ನೀಡುವಿಕೆಗೆ ವೇಗ ನೀಡುವಂತೆ ಸೂಚನೆ ನೀಡಲಾಗಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
    Published by:Seema R
    First published: