• Home
 • »
 • News
 • »
 • national-international
 • »
 • Economy: ಚೀನಾದ ಕೈಗಾರಿಕಾ ಯೋಜನೆ ತನ್ನೆಡೆ ಸೆಳೆಯಲು ಭಾರತದ ಬಿಗ್ ಪ್ಲಾನ್!

Economy: ಚೀನಾದ ಕೈಗಾರಿಕಾ ಯೋಜನೆ ತನ್ನೆಡೆ ಸೆಳೆಯಲು ಭಾರತದ ಬಿಗ್ ಪ್ಲಾನ್!

ಚೀನಾ ವಿರುದ್ಧ ಭಾರತದ ಪ್ಲಾನ್

ಚೀನಾ ವಿರುದ್ಧ ಭಾರತದ ಪ್ಲಾನ್

100-ಟ್ರಿಲಿಯನ್ ರೂಪಾಯಿಗಳ ($1.2 ಟ್ರಿಲಿಯನ್) ಮೆಗಾ ಯೋಜನೆಯ ಪಿಂ ಗತಿಶಕ್ತಿ ಯೋಜನೆಯು 16 ಸಚಿವಾಲಯಗಳನ್ನು ಸಂಯೋಜಿಸುವ ಡಿಜಿಟಲ್ ವೇದಿಕೆಯನ್ನು ರೂಪುಗೊಳಿಸುತ್ತದೆ. ಈ ವೇದಿಕೆಯು, ಹೂಡಿಕೆದಾರರು ಮತ್ತು ಕಂಪನಿಗಳಿಗೆ ಯೋಜನೆಗಳ ವಿನ್ಯಾಸ, ತಡೆರಹಿತ ಅನುಮೋದನೆಗಳು ಮತ್ತು ವೆಚ್ಚಗಳ ಸುಲಭ ಅಂದಾಜುಗಳಿಗಾಗಿ ಸಮರ್ಥವಾದ ಪರಿಹಾರವನ್ನು ನೀಡುತ್ತದೆ.

ಮುಂದೆ ಓದಿ ...
 • Share this:

  ನವದೆಹಲಿ(ಅ.06): ಭಾರತದಲ್ಲಿ ಎಲ್ಲಾ ಮೂಲಸೌಕರ್ಯ ಯೋಜನೆಗಳಲ್ಲಿ ಅರ್ಧದಷ್ಟು ವಿಳಂವಾಗಿದ್ದು ಇನ್ನುಳಿದ ಯೋಜನೆಗಳು ಅಂದಾಜು ಬಜೆಟ್‌ಗಿಂತ ಹೆಚ್ಚು ಹಣದಲ್ಲಿ ಚಾಲನೆಗೊಳ್ಳುತ್ತಿವೆ. ಈ ದೀರ್ಘಕಾಲಿಕ ಅಡೆತಡೆಗಳಿಗೆ ತಂತ್ರಜ್ಞಾನವೇ ಪರಿಹಾರವನ್ನೊದಗಿಸುತ್ತದೆ ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ನಂಬಿಕೆಯಾಗಿದೆ. 100-ಟ್ರಿಲಿಯನ್ ರೂಪಾಯಿಗಳ ($1.2 ಟ್ರಿಲಿಯನ್) ಮೆಗಾ ಯೋಜನೆಯ ಪಿಂ ಗತಿಶಕ್ತಿ ಯೋಜನೆಯು 16 ಸಚಿವಾಲಯಗಳನ್ನು ಸಂಯೋಜಿಸುವ ಡಿಜಿಟಲ್ ವೇದಿಕೆಯನ್ನು ರೂಪುಗೊಳಿಸುತ್ತದೆ. ಈ ವೇದಿಕೆಯು, ಹೂಡಿಕೆದಾರರು ಮತ್ತು ಕಂಪನಿಗಳಿಗೆ ಯೋಜನೆಗಳ ವಿನ್ಯಾಸ, ತಡೆರಹಿತ ಅನುಮೋದನೆಗಳು ಮತ್ತು ವೆಚ್ಚಗಳ ಸುಲಭ ಅಂದಾಜುಗಳಿಗಾಗಿ ಸಮರ್ಥವಾದ ಪರಿಹಾರವನ್ನು ನೀಡುತ್ತದೆ.


  ಸಮಯ ಮೀರದ ಹಾಗೂ ವೆಚ್ಚರಹಿತ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಇದರ ಉದ್ದೇಶವಾಗಿದೆ ಎಂಬುದಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಲಾಜಿಸ್ಟಿಕ್ಸ್ ವಿಶೇಷ ಕಾರ್ಯದರ್ಶಿ ಅಮೃತ್ ಲಾಲ್ ಮೀನಾ ತಿಳಿಸಿದ್ದಾರೆ.


  ವಿಶ್ವದ ಬೃಹತ್ ಕಂಪೆನಿಗಳು ಭಾರತವನ್ನು ತಮ್ಮ ಉತ್ಪಾದನಾ ಕೇಂದ್ರವಾಗಿ ಆಯ್ಕೆಮಾಡಿಕೊಳ್ಳುವುದು ಈ ಯೋಜನೆಯ ಹಿಂದಿರುವ ಉದ್ದೇಶವಾಗಿದೆ ಎಂದು ಅಮೃತ್ ಲಾಲ್ ತಿಳಿಸಿದ್ದಾರೆ.


  ಚೀನಾದಷ್ಟೇ ಪ್ರಬಲವಾಗಬೇಕಾದ ಭಾರತ


  ವೇಗವಾಗಿ ಕಾರ್ಯನಿರ್ವಹಿಸುವ ಯೋಜನೆಗಳು ಭಾರತಕ್ಕೆ ಪ್ರಯೋಜನವನ್ನುಂಟು ಮಾಡುತ್ತವೆ. ಚೀನಾ ಇನ್ನೂ ಹೆಚ್ಚಾಗಿ ಹೊರಗಿನ ಪ್ರಪಂಚಕ್ಕೆ ಮುಚ್ಚಿದ್ದರೂ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯು ಅಗ್ಗದ ಕಾರ್ಮಿಕರನ್ನು ಒದಗಿಸುವುದು ಮಾತ್ರವಲ್ಲದೆ ಇಂಗ್ಲಿಷ್ ಮಾತನಾಡುವ ಸಾಮರ್ಥ್ಯವುಳ್ಳವರನ್ನು ಒದಗಿಸುತ್ತಿದೆ. ಅದಾಗ್ಯೂ ಅವ್ಯವಸ್ಥೆಯ ಮೂಲಸೌಕರ್ಯವು ಅನೇಕ ಹೂಡಿಕೆದಾರರನ್ನು ದೂರವಿರಿಸಿದೆ.


  ಚೀನಾದೊಂದಿಗೆ ಸ್ಪರ್ಧಿಸಲು ಇರುವ ಏಕೈಕ ಮಾರ್ಗವೆಂದರೆ ಸಾಧ್ಯವಿರುವಷ್ಟು ವೆಚ್ಚದಲ್ಲಿ ಸ್ಪರ್ಧಾತ್ಮಕವಾಗಿರುವುದು ಎಂದು ಸಾರಿಗೆ ಮತ್ತು ಮೂಲಸೌಕರ್ಯವನ್ನು ಮುನ್ನಡೆಸುವ ಕೀರ್ನಿ ಇಂಡಿಯಾದ ಪಾಲುದಾರ ಅಂಶುಮನ್ ಸಿನ್ಹಾ ತಿಳಿಸಿದ್ದಾರೆ.


  ಮೋದಿಯವರ ಗತಿಶಕ್ತಿ ಯೋಜನೆಯು ದೇಶದ ಉದ್ದಗಲಕ್ಕೂ ಸರಕುಗಳ ಹರಿವು ಮತ್ತು ತಯಾರಿಸಿದ ಘಟಕಗಳನ್ನು ಹೊಂದಲು ಸುಲಭವಾಗುವಂತೆ ಮಾಡುತ್ತದೆ ಎಂಬುದು ಸಿನ್ಹಾ ಅವರ ಅಭಿಪ್ರಾಯವಾಗಿದೆ.


  ಲಾಜಿಸ್ಟಿಕ್ಸ್ ನೆಟ್‌ವರ್ಕ್ ಸಾಮರ್ಥ್ಯ


  ಅಸ್ತಿತ್ವದಲ್ಲಿ ಇಲ್ಲದೇ ಇರುವ ಹೊಸ ಉತ್ಪಾದನಾ ಸಾಮರ್ಥ್ಯಗಳನ್ನು ಗುರುತಿಸುವುದು ಹಾಗೂ ಅದನ್ನು ದೇಶದ ರೈಲ್ವೇ, ನೆಟ್‌ವರ್ಕ್ ಬಂದರು ಹಾಗೂ ವಿಮಾನ ನಿಲ್ದಾಣಗಳಿಗೆ ಅಳವಡಿಸುವುದು ಸಿನ್ಹಾ ಅವರ ಯೋಜನೆಯಾಗಿದೆ. ಗತಿಶಕ್ತಿ ಯೋಜನೆಯನ್ನು ಸಂಪರ್ಕಿಸುವ ಲಾಜಿಸ್ಟಿಕ್ಸ್, ನೆಟ್‌ವರ್ಕ್ ಅನ್ನು ಬಲಪಡಿಸುತ್ತದೆ ಎಂಬುದು ಸಿನ್ಹಾ ವಾದವಾಗಿದೆ.


  ಗತಿ ಶಕ್ತಿಯ ಪೋರ್ಟಲ್ ಪ್ರಸ್ತುತ ಮೇಲ್ವಿಚಾರಣೆ ಮಾಡುತ್ತಿರುವ 1,300 ಯೋಜನೆಗಳಲ್ಲಿ, ಭೂಸ್ವಾಧೀನ, ಅರಣ್ಯ ಮತ್ತು ಪರಿಸರ ಅನುಮತಿಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಸುಮಾರು 40% ವಿಳಂಬವಾಗಿದೆ, ಇದರ ಪರಿಣಾಮವಾಗಿ ವೆಚ್ಚವು ಮಿತಿಮೀರಿದೆ ಎಂಬುದು ಸಿನ್ಹಾ ಅಭಿಪ್ರಾಯವಾಗಿದೆ. 422 ಯೋಜನೆಗಳು ಕೆಲವು ಸಮಸ್ಯೆಗಳನ್ನು ಹೊಂದಿದ್ದು ಪೋರ್ಟಲ್ ಅವುಗಳಲ್ಲಿ 200 ಸಮಸ್ಯೆಗಳನ್ನು ಪರಿಹರಿಸಿದೆ.


  ಸ್ಪರ್ಧಾತ್ಮಕ ಸೂಚ್ಯಾಂಕ ಹೆಚ್ಚಳ


  ಗತಿಶಕ್ತಿ ಯೋಜನೆಯಡಿಯಲ್ಲಿ ಫೋನ್ ಕೇಬಲ್‌ಗಳು ಅಥವಾ ಗ್ಯಾಸ್ ಪೈಪ್‌ಲೈನ್‌ಗಳನ್ನು ಹಾಕಲು ಹೊಸದಾಗಿ ನಿರ್ಮಿಸಲಾದ ರಸ್ತೆಯನ್ನು ಮತ್ತೆ ಅಗೆಯದಂತೆ ಖಚಿತಪಡಿಸಿಕೊಳ್ಳಲು ಸರ್ಕಾರವು ತಂತ್ರಜ್ಞಾನವನ್ನು ಬಳಸುತ್ತದೆ.


  ಎರಡನೇ ಮಹಾಯುದ್ಧದ ನಂತರ ಯುರೋಪ್ ಹಾಗೂ ಚೀನಾ ಯಾವೆಲ್ಲಾ ಯೋಜನೆಗಳನ್ನು ರೂಪಿಸಿವೆ ಹಾಗೂ ಸ್ಪರ್ಧಾತ್ಮಕ ಸೂಚ್ಯಾಂಕವನ್ನು ಹೆಚ್ಚಿಸಲು ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿವೆ ಎಂಬ ಮಾದರಿಯಲ್ಲಿಯೇ ಮೂಲಸೌಕರ್ಯ ಯೋಜನೆಗಳನ್ನು ರೂಪಿಸಲು ಗತಿಶಕ್ತಿ ಯೋಜನೆ ಶ್ರಮಿಸುತ್ತಿದೆ ಎಂಬುದಾಗಿ ಇನ್ವೆಸ್ಟ್ ಇಂಡಿಯಾ, ಸರ್ಕಾರಿ ಸಂಸ್ಥೆ ತಿಳಿಸಿದೆ.


  ಉದ್ಯೋಗ ಸೃಷ್ಟಿಗೆ ಆಧಾರ


  ಇಂದಿನ ಭಾರತವು ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚುಹೆಚ್ಚು ಹೂಡಿಕೆ ಮಾಡಲು ಬದ್ಧವಾಗಿದೆ ಹಾಗೂ ಯಾವುದೇ ಯೋಜನೆಯೂ ವಿಳಂಬವಾಗದಂತೆ ನೋಡಿಕೊಳ್ಳಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.


  ಗುಣಮಟ್ಟದ ಮೂಲಸೌಕರ್ಯವು ಹಲವಾರು ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಮತ್ತು ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸಲು ಆಧಾರವಾಗಿದೆ. ಆಧುನಿಕ ಮೂಲಸೌಕರ್ಯವಿಲ್ಲದೆ, ಭಾರತದಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಪ್ರಧಾನಿಯವರ ಮಾತಾಗಿದೆ.

  Published by:Precilla Olivia Dias
  First published: