• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • India Global Week 2020: ಜಾಗತಿಕ ಹೂಡಿಕೆದಾರರಿಗೆ ಭಾರತ ರೆಡ್ ಕಾರ್ಪೆಟ್ ಹಾಸಲು ಸಿದ್ದವಿದೆ; ಪ್ರಧಾನಿ ನರೇಂದ್ರ ಮೋದಿ

India Global Week 2020: ಜಾಗತಿಕ ಹೂಡಿಕೆದಾರರಿಗೆ ಭಾರತ ರೆಡ್ ಕಾರ್ಪೆಟ್ ಹಾಸಲು ಸಿದ್ದವಿದೆ; ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

PM Modi: ಸಡಿಲವಾದ ಎಫ್‌ಡಿಐ ಮಾನದಂಡಗಳೊಂದಿಗೆ ರಕ್ಷಣಾ ಕ್ಷೇತ್ರಗಳಲ್ಲೂ ಹೂಡಿಕೆ ಅವಕಾಶಗಳಿವೆ. ವಿಶ್ವದ ಅತಿದೊಡ್ಡ ಮಿಲಿಟರಿ ಸೇನೆ ನಿಮ್ಮನ್ನು ಹೂಡಿಕೆಗೆ ಆಹ್ವಾನಿಸುತ್ತಿದೆ. ಈ ಸೇನೆಯ ಭಾಗವಾಗಿ ಉತ್ಪನ್ನಗಳ ತಯಾರಿಕೆಗೆ ಅವಕಾಶ ನೀಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ಧಾರೆ.

ಮುಂದೆ ಓದಿ ...
  • Share this:

ನವ ದೆಹಲಿ )ಜುಲೈ 09); ಭಾರತವು ವಿಶ್ವದ ಅತ್ಯಂತ ಮುಕ್ತ ಆರ್ಥಿಕತೆಗಳಲ್ಲಿ ಒಂದಾಗಿದ್ದು, ಜಾಗತಿಕ ಹೂಡಿಕೆದಾರರನ್ನು ನಾವು ಮುಕ್ತವಾಗಿ ಆಹ್ವಾನಿಸುತ್ತಿದೆ. ರೆಡ್‌ ಕಾರ್ಪೆಟ್‌ ಸ್ವಾಗತಕ್ಕೆ ಇಡೀ ದೇಶ ಸಿದ್ದವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

"ಇಂಡಿಯಾ ಗ್ಲೋಬಲ್ ವೀಕ್ 2020" ಕಾರ್ಯಕ್ರಮವನ್ನು ಇಂದು ಉದ್ಘಾಟಿಸಿ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಜಾಗತಿಕ ಮಟ್ಟದಲ್ಲಿ ಎಲ್ಲಾ ಕಂಪೆನಿಗಳು ಭಾರತದಲ್ಲಿ ತಮ್ಮ ಅಸ್ಥಿತ್ವವನ್ನು ಸ್ಥಾಪಿಸಲು ನಾವು ರೆಡ್ ಕಾರ್ಪೆಟ್ ಹಾಕುತ್ತಿದ್ದೇವೆ. ಭಾರತ ಇಂದು ನೀಡುತ್ತಿರುವ ಈ ಅವಕಾಶವನ್ನು ಕೇವಲ ಕೆಲವೇ ದೇಶಗಳು ಮಾತ್ರ ಒದಗಿಸುತ್ತಿವೆ. ಭಾರತದ ವಿವಿಧ ಕ್ಷೇತ್ರಗಳಲ್ಲಿ ಹಲವು ಸಾಧ್ಯತೆಗಳಿವೆ. ಹೀಗಾಗಿ ನಾವು ಹೂಡಿಕೆದಾರರಿಗೆ ಸಂಪೂರ್ಣ ಹೂಡಿಕೆಗೆಗೆ ಅವಕಾಶ ನೀಡಲು ಮುಂದಾಗಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ಹೂಡಿಕೆಗೆ ಇರುವ ಅವಕಾಶದ ಕುರಿತು ಮಾಹಿತಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, “ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿ ಕೇಂದ್ರ ಸರ್ಕಾರವು ಎಂಎಸ್ಎಂಇ ಕ್ಷೇತ್ರದಲ್ಲಿ ವಿವಿಧ ಸುಧಾರಣೆಗಳನ್ನು ತಂದಿದೆ. ಸಡಿಲವಾದ ಎಫ್‌ಡಿಐ ಮಾನದಂಡಗಳೊಂದಿಗೆ ರಕ್ಷಣಾ ಕ್ಷೇತ್ರಗಳಲ್ಲೂ ಹೂಡಿಕೆ ಅವಕಾಶಗಳಿವೆ. ವಿಶ್ವದ ಅತಿದೊಡ್ಡ ಮಿಲಿಟರಿ ಸೇನೆ ನಿಮ್ಮನ್ನು ಹೂಡಿಕೆಗೆ ಆಹ್ವಾನಿಸುತ್ತಿದೆ. ಈ ಸೇನೆಯ ಭಾಗವಾಗಿ ಉತ್ಪನ್ನಗಳ ತಯಾರಿಕೆಗೆ ಅವಕಾಶ ನೀಡಲಾಗುತ್ತಿದೆ.

ಇದನ್ನೂ ಓದಿ : Laxman Savadi: ಡಿಸಿಎಂ ಸವದಿ ತವರಿನಲ್ಲೇ ಕೈ ಮೀರಿದ ಕೊರೋನಾ; ಸ್ಥಳೀಯರಿಂದಲೇ ಮಹಾರಾಷ್ಟ್ರದ ರಸ್ತೆ ಬಂದ್


ಇನ್ನೂ ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲೂ ಖಾಸಗಿ ಹೂಡಿಕೆಗೆ ಹೆಚ್ಚಿನ ಅವಕಾಶಗಳಿವೆ. ಅಂದರೆ ಜನರ ಅನುಕೂಲಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನು ವಾಣಿಜ್ಯ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Published by:MAshok Kumar
First published: