Lok Sabha Elections 2019: ಲೋಕಸಭಾ ಚುನಾವಣೆ : ದೇಶದಲ್ಲಿ ದಾಖಲೆಯ ಮತದಾನ

ಬಟನ್ ದಬಾವೊ ದೇಶ್ ಬನಾವೊ ಎನ್ನುವ ಅಭಿಯಾನದ ಮೂಲಕ ನೆಟ್​ವರ್ಕ್​ 18 ಸಹ ಮತದಾನ ಜಾಗೃತಿಗೆ ಕೈಜೋಡಿಸಿತ್ತು.

zahir | news18
Updated:May 22, 2019, 3:53 PM IST
Lok Sabha Elections 2019: ಲೋಕಸಭಾ ಚುನಾವಣೆ : ದೇಶದಲ್ಲಿ ದಾಖಲೆಯ ಮತದಾನ
ಸಾಂದರ್ಭಿಕ ಚಿತ್ರ
  • News18
  • Last Updated: May 22, 2019, 3:53 PM IST
  • Share this:
ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಕೊನೆಗೊಂಡು ಇದೀಗ ಅದರ ಫಲಿತಾಂಶಗಳ ಘೋಷಣೆಗಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ. ಪ್ರಜಾಪ್ರಭುತ್ವದ ದೃಷ್ಠಿಯಲ್ಲಿ 2019ರ ಲೋಕಸಭಾ ಚುನಾವಣೆಯು ಮಹತ್ತರ ಯಶಸ್ಸು ಕಂಡಿದೆ. ಪ್ರಜಾಪ್ರಭುತ್ವದ ಆಯಾಮಗಳಲ್ಲಿ ಒಂದಾದ “ಜನರಿಂದ” ಸ್ಥಾಪಿತವಾಗುವ ಸರ್ಕಾರವನ್ನು ಚುನಾವಣೆ ಸೂಚಿಸುತ್ತದೆ. ಅಂದರೆ ಇಲ್ಲಿ ಮತದಾರರೇ ಪ್ರಭುಗಳು. ಮತದಾನದ ಪ್ರಮಾಣದ ಮೇಲೆ ಪ್ರಜಾಪ್ರಭುತ್ವ ನೆಲೆ ನಿಲ್ಲುತ್ತದೆ. ದೇಶದ ಎಲ್ಲಾ 542 ಕ್ಷೇತ್ರಗಳಲ್ಲಿ ಇತ್ತೀಚಿನ ಚುನಾವಣೆಗಳಲ್ಲಿ ಶೇ. 67.11 ರಷ್ಟಿನ ದಾಖಲೆಯ ಮತದಾನವಾಗಿದೆ.

ವೆಲ್ಲೋರ್ ಕ್ಷೇತ್ರದಲ್ಲಿ ಚುನಾವಣೆ ರದ್ದಾಗಿರುವ ಮತ್ತು ಮರು ಮತದಾನವನ್ನು ಮಾಡಿದ ಹೊರತಾಗಿಯೂ, ನಾವು ಕಳೆದ ಲೋಕ ಸಭಾ ಚುನಾವಣೆಗೆ ಹೋಲಿಸಿದರೆ ಶೇ 1.16 ರಷ್ಟು ಬೆಳವಣಿಗೆಯನ್ನು ಕಂಡಿದ್ದೇವೆ. ಮರು-ಚುನಾವಣೆಯ ನಂತರ ಈ ಅಂಕಿಅಂಶಗಳು ಮರು ವಿಮರ್ಶೆ ಮಾಡಲಾಗುತ್ತದೆ. 2014ರಲ್ಲಿ ಎಲ್ಲಾ 543 ಲೋಕ ಸಭಾ ಕ್ಷೇತ್ರಗಳಲ್ಲಿನ ಅಂತಿಮ ಮತದಾನವು ಶೇ. 66.44% ರಷ್ಟು ಮಾತ್ರವಾಗಿತ್ತು.ಈ ಬಾರಿಯ ಚುನಾವಣೆಯ ಮತದಾನದಕ್ಕೆ ಹೋಲಿಸಿದರೆ ಅದು ತಂಬಾ ಕಡಿಮೆ ಎನ್ನಬಹುದು.

ಜನರಲ್ಲಿ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಲು ಭಾರತೀಯ ಚುನಾವಣ ಆಯೋಗ ಅನೇಕ ಯೋಜನೆಗಳನ್ನು ಜಾರಿಗೆ ತಂದೆ. ಇಸಿಐ ದೇಶದ ಒಳಗೆ ಜನರನ್ನು ಜಾಗೃತಗೊಳಿಸುವ ಸಲುವಾಗಿ, ಏತಕ್ಕಾಗಿ ಮತದಾನ ಮಾಡಬೇಕು ಮತ್ತು, ಒಬ್ಬ ನಾಗರೀಕನಾಗಿ ಅದರಲ್ಲಿ ಏಕೆ ಭಾಗವಹಿಸಬೇಕು? ಎನ್ನುವ ಬಗ್ಗೆ ಹಲವು ಮತದಾರರ ಜಾಗೃತಿ ಫೋರಂಗಳನ್ನು ತೆರೆದಿತ್ತು. ಅಷ್ಟೇ ಅಲ್ಲದೆ ಟ್ವಿಟರ್ ಜೊತೆಗೂಡಿ “ವ್ಯವಸ್ಥಿತ ಮತದಾರರು” ಎನ್ನುವ ಜಾಗೃತಿ ಅಭಿಯಾನದ ಮೂಲಕ ಶಿಕ್ಷಣ ಮತ್ತು ಚುನಾವಣೆ ಸಹಭಾಗಿತ್ವವನ್ನು ಭಾರತೀಯ ಚುನಾವಣ ಆಯೋಗ ಪ್ರೋತ್ಸಾಹಿತ್ತು. ಸ್ವೀಪ್ ಕಾರ್ಯಕ್ರಮವು ವಿವಿಧ ಮಾರ್ಗಗಳು ಮತ್ತು ಮಾಧ್ಯಮಗಳ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶ ಹೊಂದಿದೆ. ಭಾರತೀಯ ಚುನಾವಣ ಆಯೋಗವು ಪ್ರಜಾಪ್ರಭುತ್ವದ ನಿಜವಾದ ಹಬ್ಬವನ್ನು ಜನರಿಗೆ ಮನವರಿಕೆ ಮಾಡಲು #DeshKaMahaTyohar ಎನ್ನುವ ಹ್ಯಾಶ್ ಟ್ಯಾಗ್ ಅನ್ನು ಸಹ ಪ್ರಚಾರ ಮಾಡಿತು. ಅದಲ್ಲದೆ, ಹಲವಾರು ಇತರೆ ಅಂಶಗಳಾದ ಸೆಲೆಬ್ರಿಟಿಗಳ ಬಯಕೆ, ಅಭಿಯಾನಗಳು, ಜಾಹೀರಾತುಗಳು, ಇತ್ಯಾದಿಗಳ ಮೂಲಕ, ನಾಗರೀಕರು ತಮ್ಮ ಮತದಾನದ ಹಕ್ಕುಗಳನ್ನು ಚಲಾಯಿಸಲು ಮಾರ್ಗದರ್ಶನ ಮಾಡಿತು. ಈ ಮೂಲಕ ಜನರಲ್ಲಿ ಮತದಾನ ಮಾಡಲು ಸ್ಪೂರ್ತಿಯನ್ನು ಮೂಡಿಸುವ ಪ್ರಯತ್ನ ಮಾಡಿತ್ತು.

ವಿವಿಧ ಬ್ರ್ಯಾಂಡುಗಳು ಸಹ ಸಾಮಾಜಿಕ ಹೊಣೆಗಾರಿಕೆಯನ್ನು ಮನಗಂಡು ಮತದಾನದ ಮಹತ್ವವನ್ನು ತಿಳಿಸುವಂತಹ ಅಭಿಯಾನಗಳನ್ನು ಸೃಷ್ಠಿಸಿದವು. ಕೆ.ಎಫ್.ಸಿ, ಸ್ವಿಗ್ಗಿಯಂತಹ ಬ್ರ್ಯಾಂಡ್ ಮತ್ತು ಬುಕ್ ಮೈ ಶೊ ನಂತಹ ಮೂವಿ ಟಿಕೆಟ್ ತಾಣಗಳು “ಮತದಾನದ ಹಕ್ಕಿನ” ಬಗ್ಗೆ ಯುವ ಜನರು ಮತ್ತು ಹೊಸ ಮತದಾರಿಗೆ ನೆನಪಿಸುವಂತಹ ಪರಿಣಾಮಕಾರಿ ಅಭಿಯಾನವನ್ನು ಆರಂಭಿಸಿದವು. ಎಲ್ಲಾ ಅಭಿಯಾನಗಳು ಸಹ ಒಂದೇ ಸಂದೇಶವನ್ನು ನಾಗರೀಕರಿಗೆ ತಿಳಿಸುವ ಉದ್ದೇಶವನ್ನು ಹೊಂದಿತ್ತು. ಅದುವೇ ತಮ್ಮ ಮತದಾನವನ್ನು ಚಲಾಯಿಸಿ ಎಂಬುದಾಗಿತ್ತು. “ಏಕ್ ದಿನ್ ಕಿ ಚುಟ್ಟಿ” ಎಂಬಂತಹ ಅಭಿಯಾನಗಳು ಲಕ್ಷಾಂತರ ವೀಕ್ಷಕರ ಮನಮುಟ್ಟಿದ್ದಲ್ಲದೇ, ಮತದಾನದ ಪ್ರಮಾಣದಲ್ಲಿ ಏರಿಕೆಯಾಗಲು ಮುಖ್ಯ ಕಾರಣವಾಯಿತು.

ಅದರಲ್ಲೂ ಬಹಳಷ್ಟು ಜಾಗೃತಿ ಅಭಿಯಾನಗಳು ಡಿಜಿಟಲ್ ಆಗಿದ್ದವು. ಒಂದು ಸಣ್ಣ ಆಡಿಯೋ ವಿಡಿಯೋ, ಜಿಫ್, ಮೈಕ್ರೋಸೈಟ್ಸ್, ಇತ್ಯಾದಿಗಳ ರೂಪದಲ್ಲಿ ಮತದಾನದ ಜಾಗೃತಿಗೆ ವೇದಿಕೆಯಾಯಿತು. ಡಿಜಿಟಲ್ ಜಾಲತಾಣವು ವಿಶೇಷ ಪರಿಣಾಮಕಾರಿ ಸಂವಹನ ಮಾಧ್ಯಮವಾಗಿದೆ. ಈ ಮೂಲಕ ಮತ ಜಾಗೃತಿ ಮೂಡಿಸಲು ಯಶಸ್ವಿಯಾದವು. ಹಾಗೆಯೇ ಗರಿಷ್ಟ ಪ್ರಮಾಣದ ವೀಕ್ಷಕರನ್ನು ತಲುಪುವ ಉದ್ದೇಶದಿಂದ ಹಲವಾರು ಅಭಿಯಾನಗಳನ್ನು ಫೇಸ್ ಬುಕ್ ಮತ್ತು ಯುಟ್ಯೂಬ್ ಗಳಲ್ಲಿ ಚಾಲನೆ ನೀಡಲಾಯಿತು.

ಬಟನ್ ದಬಾವೊ ದೇಶ್ ಬನಾವೊ:
ಬಟನ್ ದಬಾವೊ ದೇಶ್ ಬನಾವೊ ಎನ್ನುವ ಅಭಿಯಾನದ ಮೂಲಕ ನೆಟ್​ವರ್ಕ್​ 18 ಸಹ ಮತದಾನ ಜಾಗೃತಿಗೆ ಕೈಜೋಡಿಸಿತ್ತು. ಆರ್.ಪಿ ಸಂಜೀವ್ ಗೋಂಯೆಂಕ ಗ್ರೂಪ್ ಸಹಯೋಗದಲ್ಲಿ ಈ ಅಭಿಯಾನವನ್ನು ನಡೆಸಲಾಗಿತ್ತು. ಇದರ ಮುಖ್ಯ ಉದ್ದೇಶ ಸಾಮಾನ್ಯ ಚುನಾವಣೆಯಲ್ಲಿ ಪ್ರತಿ ಭಾರತೀಯನೂ ಸಹ ವೋಟ್ ಮಾಡಬೇಕು ಎಂಬುದಾಗಿತ್ತು. #ButtonDabaoDeshBanao ಹ್ಯಾಶ್ ಟ್ಯಾಗ್​ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಅದರಂತೆ ಟ್ವಿಟರ್​ನಲ್ಲಿ ಬಟನ್ ದಬಾವೊ ದೇಶ್ ಬನಾವೊ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದವು.
First published: May 22, 2019, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading