ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್​​ಗಳನ್ನು ಹೊಂದಿರುವ ದೇಶ ಯಾವುದು ಗೊತ್ತೇ?​

news18
Updated:September 6, 2018, 5:16 PM IST
ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್​​ಗಳನ್ನು ಹೊಂದಿರುವ ದೇಶ ಯಾವುದು ಗೊತ್ತೇ?​
news18
Updated: September 6, 2018, 5:16 PM IST
-ನ್ಯೂಸ್​ 18 ಕನ್ನಡ

ನವದೆಹಲಿ, (ಸೆ. 06): ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಹಿಂದೆ ಅಡುಗೆ ಮನೆಗಷ್ಟೇ ಸೀಮಿತವಾಗಿದ್ದ ಮಹಿಳೆ ಇಂದು ಪ್ರತಿಯೊಂದು ಕ್ಷೇತ್ರಗಳಲ್ಲೂ ಕಾಣಿಸುತ್ತಾರೆ. ದೇಶದ ಚುಕ್ಕಾಣಿ ಹಿಡಿಯುವ ಮಹಿಳೆ, ಬಾನಂಗಳದಲ್ಲಿ ಹಕ್ಕಿಯಂತೆ ಹಾರಾಡಬಲ್ಲೆವು ಎಂಬುದನ್ನೂ ನಿರೂಪಿಸಿದ್ದಾರೆ.

ಸಮೀಕ್ಷೆಯೊಂದರ ಪ್ರಕಾರ, ವಾಣಿಜ್ಯ ವಿಮಾನಗಳಲ್ಲಿ ಪೈಲಟ್​ಗಳಾಗಿ ಕಾರ್ಯನಿರ್ವಹಿಸುವ ಮಹಿಳೆಯರ ಪ್ರಮಾಣ ಭಾರತದಲ್ಲಿ ಅತ್ಯಧಿಕವಾಗಿದೆ ಎಂದು ತಿಳಿಸಿದೆ. ವಿಶ್ವದಲ್ಲಿರುವ ಒಟ್ಟು ಮಹಿಳಾ ಪೈಲಟ್​ಗಳ ಪೈಕಿ ಶೇ.12 ರಷ್ಟು ಮಹಿಳೆಯರು ಭಾರತದಲ್ಲಿದ್ದಾರೆ.

ಅಮೇರಿಕಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಎಲ್ಲ ಪಾಶ್ಚಿಮಾತ್ಯ ದೇಶಗಳಲ್ಲಿರುವ ಮಹಿಳಾ ಪೈಲಟ್​​ಗಳಿಗಿಂತ ಹೆಚ್ಚಿನ ಮಹಿಳಾ ಪೈಲಟ್​ಗಳು ಭಾರತದಲ್ಲಿದ್ದಾರೆ. ಜಾಗತಿಕವಾಗಿ ಒಟ್ಟು ಪೈಲಟ್​ಗಳ ಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇ.5 ಕ್ಕಿಂತ ಕಡಿಮೆ ಇದೆ ಎಂದು ಇಂಟರ್​ನ್ಯಾಷನಲ್​ ಸೊಸೈಟಿ ಆಫ್​ ವುಮನ್​ ಏರ್​ಲೈನ್​ ಪೈಲಟ್ಸ್​ ಅಂದಾಜಿಸಿದೆ.

ಬಹಳಷ್ಟು ಮಂದಿ ಭಾರತೀಯ ಮಹಿಳೆಯರು ಪೈಲಟ್​ಗಳಾಗಲು ಮುಂದೆ ಬರುತ್ತಿದ್ದಾರೆ. ಕೇಂದ್ರ ಸರ್ಕಾರ ಕಡ್ಡಾಯಪಡಿಸಿದ ಸಮಾನ ವೇತನ, ಸುರಕ್ಷಿತ ಕೆಲಸದ ಸ್ಥಳ, ಡೇ ಕೇರ್ ವ್ಯವಸ್ಥೆ ಹೀಗೆ ವಿಮಾನಯಾನ ಕ್ಷೇತ್ರದಲ್ಲಿ ಬಹಳಷ್ಟು ಪ್ರಯೋಜನಗಳು ಮಹಿಳೆಯರಿಗೆ ಇವೆ ಎಂದು ಜೆಟ್​​ ಏರ್​ವೇಸ್​ನಲ್ಲಿ ಹಿರಿಯ ತರಬೇತುದಾರರಾಗಿರುವ ​ ಶ್ವೇತಾ ಸಿಂಗ್​ ಅಭಿಪ್ರಾಯಪಡುತ್ತಾರೆ.

Shweta Singh, a Jet Airways pilot, poses for a picture inside her house in Gurugram, September 3, 2018. REUTERS/Adnan Abidi


ಪುರುಷ ಪ್ರಧಾನ ಕ್ಷೇತ್ರಕ್ಕೆ ಲಗ್ಗೆ ಇಡುವುದು ಸುಲಭವೇನೂ ಆಗಿರಲಿಲ್ಲ. ನಾನು 20 ವರ್ಷಗಳ ಹಿಂದೆ ಮಹಿಳೆಯರಿಗೆ ಸಾಮಾನ್ಯವಲ್ಲದ ಈ ವೃತ್ತಿಯನ್ನು ಮೊಟ್ಟಮೊದಲ ಬಾರಿಗೆ ಆಯ್ಕೆ ಮಾಡಿಕೊಳ್ಳುವಾಗ ತಂದೆ-ತಾಯಿಯ ಮನವೊಲಿಸಲುಮತ್ತು ಕಾಕ್​ಪಿಟ್​ ಪುರುಷ ಸಹೋದ್ಯೋಗಿಗಳನ್ನು ನಿಭಾಯಿಸಲು ಸಾಕಷ್ಟು ಕಷ್ಟಪಟ್ಟಿದ್ದೆ. ಆದರೆ ಇಂದು ಮಹಿಳೆಯರಿಗೆ ಸುಲಭ ವೃತ್ತಿ ಅವಕಾಶ ಇದೆ ಎಂದು ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು.
Loading...

ವಿಮಾನಯಾನ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಮುಂದಿನ 20 ವರ್ಷಗಳಲ್ಲಿ 7.9 ಲಕ್ಷ ಪೈಲಟ್​ಗಳು ಬೇಕಾಗುತ್ತಾರೆ ಎಂದು ಬೋಯಿಂಗ್​ ಕಂಪೆನಿ ಅಂದಾಜು ಮಾಡಿದೆ. ಲಿಂಗಬೇಧವಿಲ್ಲದೆ ಮಹಿಳಾ ಪೈಲಟ್​ಗಳಿಗೆ ಸಂಬಳ ನೀಡಲಾಗುತ್ತದೆ. ಹಾರಾಟ ಭತ್ಯೆ ಸೇರಿದಂತೆ ಮಹಿಳಾ ಪೈಲಟ್​ಗಳಿಗೆ ನೀಡುವ ಪ್ರಾರಂಭಿಕ ಸಂಬಳ $ 25,000 ದಿಂದ $ 47,000 ಇರುತ್ತದೆ.

ಒಟ್ಟಾರೆ ಇಂದು ಮಹಿಳೆಯರು ಸರ್ವ ಕ್ಷೇತ್ರಗಳಿಗೂ ಕಾಲಿರಿಸಿದ್ದು, ದೇಶಕ್ಕೆ ತಮ್ಮದೇಯಾದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...