ವಿಶ್ವ ಪ್ರಜಾಪ್ರಭುತ್ವ ಸೂಚ್ಯಾಂಕದಲ್ಲಿ 10 ಸ್ಥಾನ ಕುಸಿತ ಕಂಡ ಭಾರತ; ಇತಿಹಾಸದಲ್ಲೇ ಕಳಪೆ ಸಾಧನೆ..!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಜಾಪ್ರಭುತ್ವ ಸೂಚ್ಯಾಂಕವನ್ನು 2006ರಿಂದ ಪ್ರಾರಂಭಿಸಲಾಗಿದೆ. ಕಳೆದ 12 ಆವೃತ್ತಿಗಳಲ್ಲಿ ವಿವಿಧ ಮಾನದಂಡಗಳ ಅನ್ವಯ ಎಲ್ಲಾ ದೇಶಗಳಿಗೂ ಅಂಕಗಳನ್ನು ನೀಡಲಾಗುತ್ತಿದೆ. ಆದರೆ, ಈ ಅವಧಿಯಲ್ಲಿ ಭಾರತ ಅತೀ ಕಡಿಮೆ ಅಂಕವನ್ನು ಗಳಿಸುವ ಮೂಲಕ ಶ್ರೇಯಾಂಕದಲ್ಲಿ ಕಳಪೆ ಸಾಧನೆ ಮಾಡಿರುವ ವರ್ಷ 2018 ಎಂದು ಉಲ್ಲೇಖಿಸಲಾಗಿದೆ.

MAshok Kumar | news18-kannada
Updated:January 22, 2020, 10:28 PM IST
ವಿಶ್ವ ಪ್ರಜಾಪ್ರಭುತ್ವ ಸೂಚ್ಯಾಂಕದಲ್ಲಿ 10 ಸ್ಥಾನ ಕುಸಿತ ಕಂಡ ಭಾರತ; ಇತಿಹಾಸದಲ್ಲೇ ಕಳಪೆ ಸಾಧನೆ..!
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದಿ ಎಕನಾಮಿಸ್ಟ್ಸ್ ಡೆಮಾಕ್ರಸಿ ಇಂಡೆಕ್ಸ್ 2019 ರಲ್ಲಿ (ಅರ್ಥಶಾಸ್ತ್ರಜ್ಞರ ಪ್ರಜಾಪ್ರಭುತ್ವ ಸೂಚ್ಯಂಕ) 10 ಸ್ಥಾನಗಳ ಕುಸಿತ ಕಂಡಿದ್ದು 51ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 2018ರಲ್ಲಿ 7.23 ಅಂಕ ಗಳಿಸಿದ್ದ ಭಾರತ, 2019ರ ಸಾಲಿನಲ್ಲಿ ಕೇವಲ 6.9 ಅಂಕ ಗಳಿಸಿದೆ. ಈ ಮೂಲಕ ಭಾರತವನ್ನು "ದೋಷಪೂರಿತ ಪ್ರಜಾಪ್ರಭುತ್ವ" ಎಂದು ವರ್ಗೀಕರಿಸಲಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಜಾಪ್ರಭುತ್ವ ಸೂಚ್ಯಾಂಕವನ್ನು 2006ರಿಂದ ಪ್ರಾರಂಭಿಸಲಾಗಿದೆ. ಕಳೆದ 12 ಆವೃತ್ತಿಗಳಲ್ಲಿ ವಿವಿಧ ಮಾನದಂಡಗಳ ಅನ್ವಯ ಎಲ್ಲಾ ದೇಶಗಳಿಗೂ ಅಂಕಗಳನ್ನು ನೀಡಲಾಗುತ್ತಿದೆ. ಆದರೆ, ಈ ಅವಧಿಯಲ್ಲಿ ಭಾರತ ಅತೀ ಕಡಿಮೆ ಅಂಕವನ್ನು ಗಳಿಸುವ ಮೂಲಕ ಶ್ರೇಯಾಂಕದಲ್ಲಿ ಕಳಪೆ ಸಾಧನೆ ಮಾಡಿರುವ ವರ್ಷ 2018 ಎಂದು ಉಲ್ಲೇಖಿಸಲಾಗಿದೆ.

ಭಾರತದಲ್ಲಿ ನಾಗರೀಕ ಸ್ವಾತಂತ್ರ್ಯದ ಮೇಲಾಗುತ್ತಿರುವ ದಬ್ಬಾಳಿಕೆಯೇ ಪ್ರಜಾಪ್ರಭುತ್ವ ಸೂಚ್ಯಾಂಕದ ಭಾರತ ಹಿನ್ನಡೆ ಅನುಭವಿಸಲು ಕಾರಣ ಎನ್ನಲಾಗುತ್ತಿದೆ.

ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (Economist Intelligence Unit’s ) ‘ಪ್ರಜಾಪ್ರಭುತ್ವ ಸೂಚ್ಯಂಕ’ವನ್ನು ಐದು ವಿಭಾಗಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ: ಚುನಾವಣಾ ಪ್ರಕ್ರಿಯೆ ಮತ್ತು ಬಹುತ್ವ, ಸರ್ಕಾರದ ಕಾರ್ಯವೈಖರಿ, ರಾಜಕೀಯ ಭಾಗವಹಿಸುವಿಕೆ, ರಾಜಕೀಯ ಸಂಸ್ಕೃತಿ ಮತ್ತು ನಾಗರಿಕ ಸ್ವಾತಂತ್ರ್ಯ ಎಂಬ ಈ ಐದು ಈ ವರ್ಗಗಳಲ್ಲಿನ ಸೂಚಕಗಳ ಶ್ರೇಣಿಯ ಅಂಕಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ.

ಅಲ್ಲದೆ, ಈ ಸೂಚ್ಯಂಕವು ನಿರ್ದಿಷ್ಟ ದೇಶವನ್ನು ನಾಲ್ಕು ವಿಧದ ಆಡಳಿತಗಳಲ್ಲಿ ಒಂದು ಎಂದು ವರ್ಗೀಕರಿಸುತ್ತದೆ: 'ಪೂರ್ಣ ಪ್ರಜಾಪ್ರಭುತ್ವ', 'ದೋಷಪೂರಿತ ಪ್ರಜಾಪ್ರಭುತ್ವ', 'ಹೈಬ್ರಿಡ್ ಆಡಳಿತ' ಅಥವಾ 'ಸರ್ವಾಧಿಕಾರಿ ಆಡಳಿತ'.

ಈ ಐದು ವಿಭಾಗಗಳಲ್ಲಿ ಭಾರತವು ‘ಚುನಾವಣಾ ಪ್ರಕ್ರಿಯೆ ಮತ್ತು ಬಹುತ್ವ' ದಲ್ಲಿ 8.67, 'ಸರ್ಕಾರದ ಕಾರ್ಯಚಟುವಟಿಕೆ'ಯಲ್ಲಿ 6.79, 'ರಾಜಕೀಯ ಭಾಗವಹಿಸುವಿಕೆ' ಯಲ್ಲಿ 6.67, 'ರಾಜಕೀಯ ಸಂಸ್ಕೃತಿಯಲ್ಲಿ' 5.63, ಮತ್ತು 'ನಾಗರಿಕ ಸ್ವಾತಂತ್ರ್ಯ'ದಲ್ಲಿ 6.76 ಅಂಕಗಳನ್ನು ಗಳಿಸಿದೆ. ಆದರೆ, ‘ಸರ್ಕಾರದ ಕಾರ್ಯವೈಖರಿ’ ಮತ್ತು ‘ರಾಜಕೀಯ ಸಂಸ್ಕೃತಿ’ ವಿಭಾಗಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಭಾಗದಲ್ಲೂ ಭಾರತ ಕುಸಿತ ಕಂಡಿದೆ.

ಇತ್ತೀಚೆಗಿನ ಭಾರತ ರಾಜಕೀಯ ನಡೆ ಹಾಗೂ ನಾಗರೀಕರ ಸ್ಪಂದನೆಯನ್ನು ಗಮನದಲ್ಲಿಟ್ಟುಕೊಂಡು ಅಂಕಗಳನ್ನು ನಿಗದಿ ಪಡಿಸಲಾಗಿದೆ. ಕಳೆದ ಆಗಸ್ಟ್​ ತಿಂಗಳಿನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿಲುವು ಈ ಸೂಚ್ಯಾಂಕದ ಮೇಲೆ ಪ್ರಭಾವ ಬೀರಿದೆ. ಇಲ್ಲದೆ, ಅಸ್ಸಾಂನ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್​ಸಿ) ಮತ್ತು ನೂತನ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ಹಿನ್ನೆಲೆಯಲ್ಲಿ ಆರಂಭವಾದ ಜನರ ಪ್ರತಿರೋಧವೂ ಈ ಸೂಚ್ಯಾಂಕದ ಮೇಲೆ ಪ್ರಭಾವ ಬೀರಿದೆ ಎಂದು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್​ ವರದಿ ತಿಳಿಸಿದೆ.ಇದನ್ನೂ ಓದಿ : ಕಾಶ್ಮೀರದ ಬಿಕ್ಕಟ್ಟಿನಲ್ಲಿ ಮೂರನೇ ಶಕ್ತಿಯ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲ; ಡೊನಾಲ್ಡ್ ಟ್ರಂಪ್ ಆಫರ್​ ತಿರಸ್ಕರಿಸಿದ ಭಾರತ

 
First published: January 22, 2020, 10:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading