HR RameshHR Ramesh
|
news18-kannada Updated:January 24, 2020, 5:39 PM IST
ಪ್ರಾತಿನಿಧಿಕ ಚಿತ್ರ.
ನವದೆಹಲಿ: ಆರ್ಥಿಕ ಬೆಳವಣಿಗೆಯ ತೀವ್ರ ಕುಸಿತ ಮತ್ತು ಕಾರ್ಪೊರೇಟ್ ತೆರಿಗೆ ದರಗಳಲ್ಲಿ ಕಡಿತದ ನಡುವೆಯೂ ಪ್ರಸ್ತುತ ವರ್ಷದ ದೇಶದ ಕಾರ್ಪೊರೇಟ್ ಮತ್ತು ಆದಾಯ ತೆರಿಗೆ ಸಂಗ್ರಹ ಇದೇ ಮೊದಲ ಬಾರಿಗೆ ಕನಿಷ್ಠ ಎರಡು ದಶಕಗಳ ಕುಸಿತ ಕಂಡಿದೆ ಎಂದು ಹಿರಿಯ ತೆರಿಗೆ ಅಧಿಕಾರಿಗಳು ರಾಯಿಟರ್ಸ್ಗೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ಆರ್ಥಿಕ ವರ್ಷದ ಅಂತ್ಯ ಮಾರ್ಚ್ 31ರ ವೇಳೆಗೆ 13.5 ಲಕ್ಷ ಕೋಟಿ (189 ಮಿಲಿಯನ್ ಡಾಲರ್) ರೂ. ನೇರ ತೆರಿಗೆ ಸಂಗ್ರಹ ಗುರಿ ಹೊಂದಿತ್ತು. ಇದು ಕಳೆದ ಆರ್ಥಿಕ ವರ್ಷಕ್ಕಿಂತ ಶೇ.17ರಷ್ಟು ಹೆಚ್ಚಾಗಿತ್ತು.
ಆದಾಗ್ಯೂ, ಬೇಡಿಕೆ ಕುಸಿತದಿಂದಾಗಿ ಉದ್ಯಮ ಚಟುವಟಿಕೆ ಕುಂಠಿತಗೊಂಡಿರುವುದು, ಕಂಪನಿಗಳು ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಕಡಿತಗೊಳಿಸಿದ್ದು ತೆರಿಗೆ ಸಂಗ್ರಹದ ಮೇಲೆ ಭಾರೀ ಪೆಟ್ಟು ನೀಡಿದೆ.ತೆರಿಗೆ ಇಲಾಖೆಯೂ ಜನವರಿ 23ರವರೆಗೆ ಕೇವಲ 7.3 ಲಕ್ಷ ಕೋಟಿ ತೆರಿಗೆಯನ್ನು ಮಾತ್ರ ಸಂಗ್ರಹಿಸಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಗ್ರಹಿಸಿದ್ದ ತೆರಿಗೆ ಪ್ರಮಾಣಕ್ಕಿಂತ ಶೇ.5.5ರಷ್ಟು ಕಡಿಮೆಯಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳ ಲೆಕ್ಕಾಚಾರದ ಪ್ರಕಾರ, ಮೊದಲ ಮೂರು ತ್ರೈಮಾಸಿಕಗಳಲ್ಲಿ ಕಂಪನಿಗಳಿಂದ ಮುಂಗಡ ತೆರಿಗೆ ಸಂಗ್ರಹಿಸುವ ಅಧಿಕಾರಿಗಳು ಕೊನೆಯ ಮೂರು ತಿಂಗಳುಗಳಲ್ಲಿ ಸಾಮಾನ್ಯವಾಗಿ ಶೇ.30-35ರಷ್ಟು ನೇರ ತೆರಿಗೆ ಸಂಗ್ರಹಿಸುತ್ತಿದ್ದಾರೆ. ಆದರೆ, ಎಂಟು ಮಂದಿ ಹಿರಿಯ ಅಧಿಕಾರಿಗಳು ಹೇಳಿರುವಂತೆ, ಈ ಬಾರಿ ಗರಿಷ್ಠ ಪ್ರಯತ್ನಗಳ ಹೊರತಾಗಿಯೂ ನೇರ ತೆರಿಗೆ ಸಂಗ್ರಹ 11.5 ಲಕ್ಷ ಕೋಟಿಗಿಂತಲೂ (2018-19ನೇ ಸಾಲಿನಲ್ಲಿ ಸಂಗ್ರಹವಾಗಿದ್ದ ನೇರ ತೆರಿಗೆ) ಕಡಿಮೆ ಇರಲಿದೆ.
ಇದನ್ನು ಓದಿ: ವೈಯಕ್ತಿಕ ಆದಾಯದ ಮೇಲೆ ತೆರಿಗೆ ವಿನಾಯಿತಿ ನೀಡಲು ಮುಂದಾದ ಕೇಂದ್ರ; 7 ಲಕ್ಷ ರೂ.ಗಳವರೆಗಿನ ಸುಂಕ ಶೇ.5
ಗುರಿಯನ್ನು ಬಿಟ್ಟುಬಿಡಿ ನೇರ ತೆರಿಗೆ ಸಂಗ್ರಹದಲ್ಲಿ ಇಷ್ಟೊಂದು ಕುಸಿತವಾಗಿರುವುದು ಇದೇ ಮೊದಲು. ಆದರೆ, ಪ್ರಸ್ತುತ ಆರ್ಥಿಕ ವರ್ಷದ ನೇರ ತೆರಿಗೆ ಸಂಗ್ರಹವನ್ನು ಕಳೆದ ಹಣಕಾಸು ವರ್ಷದ 11.5 ಲಕ್ಷ ಕೋಟಿ ರೂ.ಗಿಂತ ಕಡಿಮೆಯಾಗದಂತೆ ಸಂಗ್ರಹಿಸಲು ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ರಾಯಿಟರ್ಸ್ ಸುದ್ದಿಸಂಸ್ಥೆಗೆ ಹಿರಿಯ ಎಂಟು ತೆರಿಗೆ ಅಧಿಕಾರಿಗಳು ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
First published:
January 24, 2020, 5:39 PM IST