Omicron Threat: ಜನವರಿ 31ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ಇರುವುದಿಲ್ಲ

Omicron Threat: ಈ ನಿರ್ಬಂಧವು ಅಂತಾರಾಷ್ಟ್ರೀಯ ಕಾರ್ಗೋ ವಿಮಾನಗಳಿಗೆ ಅನ್ವಯವಾಗುವುದಿಲ್ಲ. ಅಲ್ಲದೆ, ಡಿಜಿಸಿಎ ಅನುಮತಿಸಿರುವ ವಿಮಾನಗಳಿಗೂ ಇದು ಅನ್ವಯವಾಗುವುದಿಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದಲ್ಲಿ (Country) ಇನ್ನೇನು ಅಂತಾರಾಷ್ಟ್ರೀಯ ವಿಮಾನ ಸೇವೆ (International flights) ಸಾಮಾನ್ಯವಾಗ್ತಿದೆ ಅನ್ನೋ ಹಾಗಿತ್ತು, ಯಾಕೆಂದರೆ 2021ರ ಡಿಸೆಂಬರ್‌ 15, ರಿಂದ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಸೇವೆ ಪುನಾರಂಭಿಸಲು ಕೇಂದ್ರ ಗೃಹ ಸಚಿವಾಲಯ (Union Ministry of Home Affairs) ಅನುಮತಿ ನೀಡಿತ್ತು. ಆದರೆ, ಮತ್ತೆ ಯು - ಟರ್ನ್‌ ತೆಗೆದುಕೊಂಡ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಮತ್ತೆ ಅಮಾನತು (Suspended) ಮಾಡಿದೆ. ಇದೀಗ ಮತ್ತೆ ಓಮಿಕ್ರಾನ್‌ (Omicron Threat) ಆತಂಕದಿಂದಾಗಿ ಮುಂದಿನ ವರ್ಷ ಜನವರಿ 31 ವರೆಗೂ ವಿಮಾನ ಹಾರಾಟ ಇರುವುದಿಲ್ಲ. 

ಆಯ್ದ ಮಾರ್ಗಗಳಲ್ಲಿ ಅನುಮತಿ
ಈಗಾಗಲೇ ಜಗತ್ತಿಗೆ ಓಮಿಕ್ರಾನ್‌ ಎಂಬ ಕೋವಿಡ್‌-19ನ ಹೆಚ್ಚು ಹರಡುವ ರೂಪಾಂತರದ ಬಗ್ಗೆ ಭಯ ಆವರಿಸಿದೆ. ಈಗಲೂ ಸಹ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕೋವಿಡ್ - 19 ಪ್ರಕರಣಗಳಲ್ಲೂ ಮತ್ತೆ ಏರಿಕೆ ಕಾಣುತ್ತಿದೆ.

ಇದನ್ನೂ ಓದಿ: Omicron ಆತಂಕದ ನಡುವೆಯೇ ದುಪ್ಪಟ್ಟಾದ ವಿಮಾನ ಪ್ರಯಾಣ ದರಗಳು

ಈ ಹಿನ್ನೆಲೆ ಕೇಂದ್ರ ಸರ್ಕಾರ ಗುರುವಾರ 2022 ರ ಜನವರಿ 31, 2022 ರವರೆಗೆ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ಸೇವೆಗಳ ಅಮಾನತುಗೊಳಿಸುವಿಕೆಯನ್ನು ವಿಸ್ತರಿಸಿದೆ. ಆದರೂ, ಅಗತ್ಯತೆಯ ಅನುಗುಣವಾಗಿ ಆಯ್ದ ಮಾರ್ಗಗಳಲ್ಲಿ ಅಂತಾರಾಷ್ಟ್ರೀಯ ನಿಗದಿತ ವಿಮಾನಗಳನ್ನು ಅನುಮತಿಸಬಹುದು ಎಂದು DGCA ಹೇಳಿದೆ.

ಸುತ್ತೋಲೆ
ಡಿಸೆಂಬರ್‌ 9, 2021ರಂದು ಈ ಸಂಬಂಧ ಹೊಸ ಸರ್ಕ್ಯುಲರ್‌ ಹೊರಡಿಸಿರುವ DGCA, 2022ರ ಜನವರಿ 31 ರ 23:59 ಗಂಟೆಗಳವರೆಗೆ ಭಾರತಕ್ಕೆ ಮತ್ತು ಭಾರತದಿಂದ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗಳ ಅಮಾನತುಗೊಳಿಸುವಿಕೆಯನ್ನು ವಿಸ್ತರಿಸಲು ಸಕ್ಷಮ ಪ್ರಾಧಿಕಾರವು ನಿರ್ಧರಿಸಿದೆ ಎಂದು ವಾಯುಯಾನ ನಿಯಂತ್ರಕರು ಗುರುವಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಆದರೂ, ಈ ನಿರ್ಬಂಧವು ಅಂತಾರಾಷ್ಟ್ರೀಯ ಕಾರ್ಗೋ ವಿಮಾನಗಳಿಗೆ ಅನ್ವಯವಾಗುವುದಿಲ್ಲ. ಅಲ್ಲದೆ, ಡಿಜಿಸಿಎ ಅನುಮತಿಸಿರುವ ವಿಮಾನಗಳಿಗೂ ಇದು ಅನ್ವಯವಾಗುವುದಿಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ. ಇದರ ಕಟ್ಟುನಿಟ್ಟಾದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಿ ಎಂದೂ ಡಿಸೆಂಬರ್ 9,2021ರಂದು ಹೊರಡಿಸಿರುವ ಸರ್ಕ್ಯುಲರ್‌ನಲ್ಲಿ ಡಿಜಿಸಿಎ ಸೂಚನೆ ನೀಡಿದೆ.

ಓಮಿಕ್ರಾನ್ ಬೆದರಿಕೆ
ಈ ತಿಂಗಳ ಆರಂಭದಲ್ಲಿ, ಓಮಿಕ್ರಾನ್ ಬೆದರಿಕೆಯ ಹಿನ್ನೆಲೆಯಲ್ಲಿ "ವಿಕಸನಗೊಳ್ಳುತ್ತಿರುವ ಜಾಗತಿಕ ಸನ್ನಿವೇಶ" ವನ್ನು ಉಲ್ಲೇಖಿಸಿ ಡಿಸೆಂಬರ್ 15ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳ ಪುನಾರಂಭವನ್ನು ಮುಂದೂಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಹೊಸ ದಿನಾಂಕವನ್ನು ನಂತರ ಪ್ರಕಟಿಸುವುದಾಗಿ ಆ ಸಮಯದಲ್ಲಿ ಸರ್ಕಾರ ಹೇಳಿತ್ತು. ಕಳೆದ ತಿಂಗಳು, ಮಾರ್ಚ್ 2020ರಿಂದ ಸ್ಥಗಿತಗೊಂಡಿರುವ ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳನ್ನು ಸಾಮಾನ್ಯಗೊಳಿಸಲು ಮೋದಿ ಸರ್ಕಾರ ನಿರ್ಧರಿಸಿತ್ತು.

ಕೋವಿಡ್ ರೂಪಾಂತರ
ಆದರೆ, ಓಮಿಕ್ರಾನ್‌ ಎಂಬ ಹೊಸ ಕೋವಿಡ್ ರೂಪಾಂತರ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿದ್ದು, ಇದರ ಹೊರಹೊಮ್ಮುವಿಕೆಯ ನಂತರ ಹಲವಾರು ದೇಶಗಳು ಗಡಿಗಳನ್ನು ಮುಚ್ಚಿವೆ ಮತ್ತು ಪ್ರಯಾಣದ ನಿರ್ಬಂಧಗಳನ್ನು ಹೇರಿವೆ. WHO Omicron ಅನ್ನು 'ಕಳವಳಕಾರಿ ರೂಪಾಂತರ' ಎಂದು ಗೊತ್ತುಪಡಿಸಿದೆ.

ಇದನ್ನೂ ಓದಿ: ದಶಕದ ಬಳಿಕ ಭಾರತ - ಅಮೆರಿಕ ನಡುವೆ ವಿಮಾನ ಸೇವೆ ಮರು ಆರಂಭಿಸಿದ American Airlines: ಕಾರಣವೇನು?

ಅಲ್ಲದೆ, ಅದರ ತೀವ್ರತೆಯ ಮಟ್ಟವನ್ನು ನಿಖರವಾಗಿ ಅಳೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ. ಭಾರತದಲ್ಲೂ ಸಹ ಓಮಿಕ್ರಾನ್ ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ದೆಹಲಿ ಮತ್ತು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಹೊಸ ಸ್ಟ್ರೈನ್ ಅನ್ನು ವರದಿ ಮಾಡಿದೆ.

ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ 2020 ರಲ್ಲಿ ನಿಯಮಿತ ಅಂತರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಸಾಂಕ್ರಾಮಿಕ ಸಮಯದಲ್ಲಿ ಇತರ ದೇಶಗಳಲ್ಲಿ ಸಿಲುಕಿಕೊಂಡ ಭಾರತೀಯರನ್ನು ಸಾಗಿಸಲು ನಾಗರಿಕ ವಿಮಾನಯಾನ ಸಚಿವಾಲಯವು ವಂದೇ ಭಾರತ್ ವಿಮಾನಗಳನ್ನು ಪ್ರಾರಂಭಿಸಿತು. ವಂದೇ ಭಾರತ್ ವಿಮಾನಗಳ ನಂತರ, ಸಚಿವಾಲಯವು ಅಂತರರಾಷ್ಟ್ರೀಯ ಪ್ರಯಾಣವನ್ನು ಅನುಮತಿಸುವ ಕೆಲವು ದೇಶಗಳೊಂದಿಗೆ ವಿಮಾನ ಯಾನ ಒಪ್ಪಂದಗಳನ್ನು ಮಾಡಿಕೊಂಡಿತು.
Published by:vanithasanjevani vanithasanjevani
First published: