HOME » NEWS » National-international » INDIA EXPECTED TO DOLE OUT 7 3 PERCENTAGE INCREMENT IN THIS YEAR SURVEY REVEALS STG SCT

ಗರಿಗೆದರಿದ ಆರ್ಥಿಕ ಚಟುವಟಿಕೆ; ಉದ್ಯೋಗಿಗಳಿಗೆ 7.3% ಇನ್ಕ್ರಿಮೆಂಟ್ ಹೆಚ್ಚಳ ನಿರೀಕ್ಷೆ

ಸಂಶೋಧನೆಗಳ ಪ್ರಕಾರ, ಈ ವರ್ಷ ಶೇ. 20ರಷ್ಟು ಕಂಪನಿಗಳು ತಮ್ಮ ನೌಕರರಿಗೆ ಡಬಲ್ ಡಿಜಿಟ್ ಇನ್ಕ್ರಿಮೆಂಟ್ ನೀಡಲು ಯೋಚಿಸಿವೆ.

news18-kannada
Updated:February 19, 2021, 12:25 PM IST
ಗರಿಗೆದರಿದ ಆರ್ಥಿಕ ಚಟುವಟಿಕೆ; ಉದ್ಯೋಗಿಗಳಿಗೆ 7.3% ಇನ್ಕ್ರಿಮೆಂಟ್ ಹೆಚ್ಚಳ ನಿರೀಕ್ಷೆ
ಸಾಂದರ್ಭಿಕ ಚಿತ್ರ
  • Share this:
ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿನ ಕಂಪನಿಗಳು ನಿರೀಕ್ಷಿತ ಪ್ರಮಾಣಕ್ಕಿಂತಲೂ ವೇಗವಾಗಿ ಆರ್ಥಿಕ ಚೇತರಿಕೆ ಕಾಣುತ್ತಿವೆ. ಅಲ್ಲದೇ ವ್ಯಾಪಾರ ಮತ್ತು ಗ್ರಾಹಕರ ವಿಶ್ವಾಸ ವೃದ್ಧಿಸುವುದರ ಜೊತೆಗೆ ಈ ವರ್ಷ ಉದ್ಯೋಗಿಗಳಿಗೆ ಸರಾಸರಿ ಶೇ.7.3ರಷ್ಟು ವೇತನ ಹೆಚ್ಚಳ ಮಾಡುವ ನಿರೀಕ್ಷೆಯಿದೆ.

ಡೆಲೊಯಿಟ್ ಟೌಚೆ ತೋಹ್ಮಾಟ್ಸು ಇಂಡಿಯಾ ಎಲ್‌ಎಲ್‌ಪಿ (ಡಿಟಿಟಿಐಎಲ್‌ಪಿ) ನಡೆಸಿದ 2021ರ ವರ್ಕ್‌ಫೋರ್ಸ್ ಮತ್ತು ಇನ್ಕ್ರಿಮೆಂಟ್ ಟ್ರೆಂಡ್ಸ್ ಸಮೀಕ್ಷೆಯ ಮೊದಲ ಹಂತದ ಪ್ರಕಾರ, ಈ ವರ್ಷದ ಸರಾಸರಿ ಇನ್ಕ್ರಿಮೆಂಟ್ ಹೆಚ್ಚಳವು 2020ಕ್ಕೆ ಹೋಲಿಸಿದರೆ ಶೇ.4.4ಕ್ಕಿಂತಲೂ ಹೆಚ್ಚಾಗುತ್ತದೆ. ಆದರೆ 2019ರಲ್ಲಿ ಕಂಪನಿಗಳು ನೀಡಿರುವ ಶೇ.8.6ರಷ್ಟು ಇನ್ಕ್ರಿಮೆಂಟ್ ಗಿಂತಲೂ ಕಡಿಮೆಯಿರುತ್ತದೆ ಎಂದು ಹೇಳಿದೆ.

2021ರಲ್ಲಿ ಇನ್ಕ್ರಿಮೆಂಟ್ ಹೆಚ್ಚಳ ಮಾಡುವ ಈ ಸಮೀಕ್ಷೆಯಲ್ಲಿ ಶೇ.92ರಷ್ಟು ಕಂಪನಿಗಳು ಭಾಗವಹಿಸಿದ್ದು, ಕಳೆದ ವರ್ಷ ಕೇವಲ ಶೇ.60ರಷ್ಟು ಕಂಪನಿಗಳು ಮಾತ್ರ ಭಾಗವಹಿಸಿದ್ದವು. ಬಿ 2 ಬಿ ಇಂಡಿಯಾದ ನಿರ್ದಿಷ್ಟ ಸಮೀಕ್ಷೆಯಾಗಿ 2020ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಲಾದ ಈ ಸಮೀಕ್ಷೆಯು 7 ವಲಯಗಳು ಮತ್ತು 25 ಉಪ ವಲಯಗಳಲ್ಲಿ ಸುಮಾರು 400 ಸಂಸ್ಥೆಗಳನ್ನು ಒಳಗೊಂಡಿದೆ.

‘ಭಾರತದಲ್ಲಿನ ಕಂಪನಿಗಳ ಇನ್ಕ್ರಿಮೆಂಟ್ ಸರಾಸರಿ ಏರಿಕೆಯು 2020ರಲ್ಲಿ ಶೇ4.4 ರಿಂದ ಶೇ.7.3ರಷ್ಟು ಆಗುವ ನಿರೀಕ್ಷೆಯಿದೆ. ಈ ಶೇ.7.3 ಯೋಜಿತ ಏರಿಕೆ 2019ರಲ್ಲಿ ಸರಾಸರಿ ಶೇ.8.6ರ ಹೆಚ್ಚಳಕ್ಕಿಂತ ಕಡಿಮೆಯಾಗಿದೆ. ಇನ್ಕ್ರಿಮೆಂಟ್ ಬಜೆಟ್ ಹೆಚ್ಚಳವು ನಿರೀಕ್ಷಿತಕ್ಕಿಂತ ವೇಗವಾಗಿ ಆರ್ಥಿಕ ಚೇತರಿಕೆ, ವ್ಯವಹಾರದಲ್ಲಿ ಹೆಚ್ಚಳ, ಗ್ರಾಹಕರ ವಿಶ್ವಾಸ ಮತ್ತು ಸಾಂಸ್ಥಿಕ ಲಾಭದಾಯಕತೆಯನ್ನು ಸುಧಾರಿಸುವ ಆರಂಭಿಕ ಲಕ್ಷಣಗಳಿಗೆ ಅನುಗುಣವಾಗಿರುತ್ತದೆ’ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

ಇದನ್ನೂ ಓದಿ: Real Estate: ಹೂಡಿಕೆಗೆ ಮತ್ತೆ ರಿಯಲ್‌ ಎಸ್ಟೇಟ್‌ ಬೆಸ್ಟ್‌!; ಲಾಕ್‌ಡೌನ್‌ ಬಳಿಕ ನಡೆದ ಸಮೀಕ್ಷೆಯಲ್ಲಿ ಬಯಲು

ಸಂಶೋಧನೆಗಳ ಪ್ರಕಾರ, ಈ ವರ್ಷ ಶೇ. 20ರಷ್ಟು ಕಂಪನಿಗಳು ತಮ್ಮ ನೌಕರರಿಗೆ ಡಬಲ್ ಡಿಜಿಟ್ ಇನ್ಕ್ರಿಮೆಂಟ್ ನೀಡಲು ಯೋಚಿಸಿವೆ. 2020ಕ್ಕೆ ಹೊಲಿಸಿದರೆ ಇದು ಕೇವಲ ಶೇ. 12ರಷ್ಟಾಗಿತ್ತು. 2020ರಲ್ಲಿ ಇನ್ಕ್ರಿಮೆಂಟ್ ನೀಡಿದ ಶೇ. 60ರಷ್ಟು ಕಂಪನಿಗಳ ಪೈಕಿ 3ನೇ ಒಂದು ಭಾಗವು ಆಫ್-ಸೈಕಲ್ ಇನ್ಕ್ರಿಮೆಂಟ್ ಮೂಲಕ ಮಾಡಿವೆ. 2020ರಲ್ಲಿ ಇನ್ಕ್ರಿಮೆಂಟ್ ನೀಡದ ಕಂಪನಿಗಳಲ್ಲಿ, ‘ಹಿಂದಿನ ವರ್ಷ ಉದ್ಯೋಗಿಗಳಿಗೆ ಶೇ.30ರಷ್ಟು ಹೆಚ್ಚಿನ ವೇತನ ಏರಿಕೆ ಅಥವಾ ಬೋನಸ್‌ಗಳ ಮೂಲಕ ಪರಿಹಾರ ನೀಡಲು ಯೋಜನೆ ಇತ್ತು’ ಎಂದು ಸಮೀಕ್ಷೆ ತಿಳಿಸಿದೆ.

ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳು ಕಡಿಮೆ ಇನ್ಕ್ರಿಮೆಂಟ್ ನೀಡುತ್ತಲೇ ಇದ್ದರೆ, ಜೀವವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರಗಳು ಹೆಚ್ಚಿನ ಇನ್ಕ್ರಿಮೆಂಟ್ ನೀಡುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ತಿಳಿಸಿದೆ. ‘ಲೈಫ್ ಸೈನ್ಸಸ್ ಮಾತ್ರ 2019ರಲ್ಲಿ ಇನ್ಕ್ರಿಮೆಂಟ್ ಮಟ್ಟವನ್ನು ಹೊಂದಿಸಲು ಸಾಧ್ಯವಾಗುವ ಏಕೈಕ ವಲಯವಾಗಿದೆ. ಇತರ ಕ್ಷೇತ್ರಗಳಲ್ಲಿ 2021ರಲ್ಲಿ ಸರಾಸರಿ ಇನ್ಕ್ರಿಮೆಂಟ್ ಏರಿಕೆ 2019 ಕ್ಕಿಂತ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.‘ಡಿಜಿಟಲ್ ಮತ್ತು ಇ-ಕಾಮರ್ಸ್ ಕಂಪನಿಗಳು ಮಾತ್ರ 2021ರಲ್ಲಿ ಡಬಲ್ ಡಿಜಿಟ್ ಸರಾಸರಿ ಇನ್ಕ್ರಿಮೆಂಟ್ ನೀಡುವ ನಿರೀಕ್ಷೆಯಿದೆ. ಹಾಸ್ಪಿಟ್ಯಾಲಿಟಿ, ರಿಯಲ್ ಎಸ್ಟೇಟ್, ಮೂಲಸೌಕರ್ಯ ಮತ್ತು ನವೀಕರಿಸಬಹುದಾದ ಇಂಧನ ಕಂಪನಿಗಳಲ್ಲಿ ಇದು ಕಡಿಮೆ ಆಗಿರಬಹುದು’ ಎಂದು ತಿಳಿಸಿದೆ. ಕೋವಿಡ್-19 ಸಾಂಕ್ರಾಮಿಕದ ಕಾರಣ ಹಲವು ಕಂಪನಿಗಳು ತಮ್ಮ ನೌಕರರ ವೇತನ ಹೆಚ್ಚಳ ಮಾಡಲು ಹಿಂದೇಟು ಹಾಕಿವೆ ಎಂದು ಡಿಟಿಟಿಐಎಲ್‌ಪಿ ಪಾಲುದಾರ ಆನಂದೋರುಪ್ ಘೋಷ್ ಹೇಳಿದ್ದಾರೆ.

ಇದನ್ನೂ ಓದಿ: Viral Video | ಮೇಲೆ ಹಾರಿ ತಟ್ಟೆಗೆ ಬೀಳುತ್ತೆ ಮಸಾಲೆ ದೋಸೆ!; ಮುಂಬೈನ ಫ್ಲೈಯಿಂಗ್ ದೋಸೆ ವಿಡಿಯೋ ವೈರಲ್

2021ರಲ್ಲಿ ಭಾರತದ ಸರಾಸರಿ ಇನ್ಕ್ರಿಮೆಂಟ್ ಶೇ7.3ರಷ್ಟಾಗಿದ್ದು, ಅದು 2019ಕ್ಕಿಂತಲೂ (ಶೇ.8.6) ಕಡಿಮೆಯಾಗಿದೆ. ವ್ಯಾಪಾರ ಚಟುವಟಿಕೆಗಳು ಶೀಘ್ರವಾಗಿ ಯಥಾಸ್ಥಿತಿಗೆ ಮರಳುವಾಗ, ಸಂಸ್ಥೆಗಳು ತಮ್ಮ ಕೈಗೆಟುಕುವಿಕೆ ಮತ್ತು ಸ್ಥಿರ ವೆಚ್ಚ ಹೆಚ್ಚಳದ ಸುಸ್ಥಿರತೆಯನ್ನು ಪರಿಗಣಿಸಿ ಪರಿಹಾರ ಬಜೆಟ್ ಅನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿವೆ ಎಂದು ಘೋಷ್ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ ಮಾರ್ಚ್ 2020ರ ನಂತರ ಹೆಚ್ಚಿನ ಕಂಪನಿಗಳು ಇನ್ಕ್ರಿಮೆಂಟ್ ನೀಡದಿರಲು ಅಥವಾ ಹೆಚ್ಚು ಸ್ಪಷ್ಟತೆ ಪಡೆಯುವವರೆಗೆ ಅವುಗಳನ್ನು ಮುಂದೂಡದಿರಲು ನಿರ್ಧರಿಸಿಸಿವೆ. ಸುಮಾರು ಶೇ. 25ರಷ್ಟು ಕಂಪನಿಗಳು ತಮ್ಮ ಹಿರಿಯ ನೌಕರರ ವೇತನ ಕಡಿತಕ್ಕೆ ಮುಂದಾಗಿವೆ.

2021ರ ಆದ್ಯತೆಗಳ ಪೈಕಿ ಹೆಚ್ಚಿನ ಸಂಸ್ಥೆಗಳು ಮಾನವ ಸಂಪನ್ಮೂಲದಲ್ಲಿ ಹೆಚ್ಚಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು, ನೌಕರರ ಕ್ಷೇಮ ಕಲಿಕೆ ಮತ್ತು ಅಭಿವೃದ್ಧಿಯಲ್ಲಿ ಮುಂದುವರಿದ ಹೂಡಿಕೆಯನ್ನು ಮೊದಲ 3 ಕೇಂದ್ರೀಕೃತ ಕ್ಷೇತ್ರಗಳಾಗಿ ಗುರುತಿಸಿಕೊಂಡಿವೆ.
Published by: Sushma Chakre
First published: February 19, 2021, 12:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories