ವಿಶ್ವಸಂಸ್ಥೆ (ಜೂ.18): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾತ್ಕಾಲಿಕ ಸದಸ್ಯನಾಗಿ ಭಾರತ ಆಯ್ಕೆ ಆಗಿದೆ. 193 ಮತಗಳ ಪೈಕಿ ಭಾರತಕ್ಕೆ 184 ಮತಗಳು ಬಿದ್ದಿವೆ. ಬುಧವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆದಿತ್ತು. ಭಾರತದ ಜೊತೆಗೆ ಐರ್ಲೆಂಡ್, ಮೆಕ್ಸಿಕೋ ಮತ್ತು ನಾರ್ವೇ ಕೂಡ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯನಾಗಿ ಆಯ್ಕೆ ಆಗಿವೆ. ಇದರ ಅವಧಿ 2 ವರ್ಷಗಳ ಕಾಲ ಇರಲಿದೆ.
193 ರಾಷ್ಟ್ರಗಳಿಗೆ ಮತದಾನದಲ್ಲಿ ಪಾಲ್ಗೊಳ್ಳುತ್ತವೆ. ಈ ಪೈಕಿ 192 ರಾಷ್ಟ್ರಗಳು ಮತದಾನ ಮಾಡುತ್ತವೆ. ಮೆಜಾರಿಟಿ ಬರಲು 2/3 ಮತ ಬೀಳಬೇಕು. ಅಂದರೆ, 128 ಮತಗಳು ಪರವಾಗಿ ಬೀಳಬೇಕು. ಭಾರತಕ್ಕೆ 186 ಮತಗಳು ಬಿದ್ದಿದ್ದವು. ಇನ್ನು, ಕೆನಡಾ ಚುನಾವಣೆಯಲ್ಲಿ ಸೋತಿದೆ.
ಇದನ್ನೂ ಓದಿ: Petrol Price: ಸತತ 12ನೇ ದಿನವೂ ತುಟ್ಟಿಯಾದ ಪೆಟ್ರೋಲ್-ಡೀಸೆಲ್; ಇಂದಿನ ದರ ಎಷ್ಟು?
ಭದ್ರತಾ ಮಂಡಳಿ ವಿಶ್ವಮಂಡಳಿಯಲ್ಲೇ ಅತ್ಯಂತ ಬಲಿಷ್ಠ ವಿಭಾಗವಾಗಿದೆ. ಮುಂದಿನ ಎರಡು ವರ್ಷಗಳ ಕಾಲ ಚೀನಾ, ಫ್ರಾನ್ಸ್, ರಷ್ಯಾ, ಅಮೆರಿಕ ಹಾಗೂ ಇಂಗ್ಲೆಂಡ್ ಜೊತೆ ಭಾರತ ಕೂಡ ಇರಲಿದೆ.
ಈ ಮೊದಲು ಭಾರತ 1950-1951, 1967-1968, 1972-1973, 1977-1978, 1984-1985, 1991-1992 ಹಾಗೂ 2011-2012ನಲ್ಲಿ ತಾತ್ಕಾಲಿಕ ಸದಸ್ಯತ್ವ ಪಡೆದುಕೊಂಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ