ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಚೀನಾ ಆಕ್ಷೇಪ!

ಪ್ರಧಾನಿ ಭೇಟಿಯನ್ನು ಖಂಡಿಸಿರುವ ಚೀನಾಗೆ ಭಾರತವು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದ್ದು, ದೇಶದ ಪ್ರಧಾನಿ ಇತರೆ ಭಾಗಗಳಿಗೆ ಭೇಟಿ ನೀಡುವಂತೆ ಅಲ್ಲಿನ ಭಾಗಕ್ಕೂ ತೆರಳಿದ್ದಾರೆ.

zahir | news18
Updated:February 10, 2019, 8:37 AM IST
ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಚೀನಾ ಆಕ್ಷೇಪ!
ಪ್ರಧಾನಿ ಮೋದಿ
zahir | news18
Updated: February 10, 2019, 8:37 AM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದರ ಕುರಿತು ಚೀನಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಅರುಣಾಚಲ ಪ್ರದೇಶದ ಗಡಿ ಸೂಕ್ಷ್ಮ ಸಂವೇದನೆಯ ಪ್ರದೇಶವಾಗಿದ್ದು, ಅಲ್ಲಿಗೆ ಭಾರತೀಯರು ಹೋಗುವುದರಿಂದ ಉಭಯ ದೇಶಗಳ ಗಡಿ ವಿವಾದವು ಇನ್ನಷ್ಟು ಬಿಗಡಾಯಿಸಲಿದೆ ಎಂದು ಚೀನಾ ತಿಳಿಸಿದೆ.

ಶನಿವಾರ ಪ್ರಧಾನಿ ಮೋದಿಯವರು, ಅರುಣಾಚಲ ಪ್ರದೇಶದ ವಿವಿದೆಡೆ 4500 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ನೇರವೇರಿಸಿದ್ದರು. ಈಶಾನ್ಯ ಗಡಿಭಾಗದಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿರುವ ಪ್ರಧಾನಿಯವರು, ಹಲವು ಯೋಜನೆಗಳ ಶಂಕುಸ್ಥಾಪನೆಗೆ ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಅರುಣಾಚಲ ಪ್ರದೇಶದ ಗಡಿ ವಿವಾದವನ್ನು ಉಲ್ಲೇಖಿಸಿ ಪ್ರಧಾನಿ ಅವರ ಭೇಟಿಗೆ ಚೀನಾ ಅಸಮಾಧಾನ ವ್ಯಕ್ತಪಡಿಸಿದೆ. ಇದರಿಂದ ಮತ್ತೊಮ್ಮೆ ಉಭಯ ದೇಶಗಳ ನಡುವಿನ ಗಡಿ ವಿವಾದ ಭುಗಿಲೆದ್ದಿದೆ.

ಭಾರತ ಪ್ರತಿಕ್ರಿಯೆ:
ಪ್ರಧಾನಿ ಭೇಟಿಯನ್ನು ಖಂಡಿಸಿರುವ ಚೀನಾಗೆ ಭಾರತವು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದ್ದು, ದೇಶದ ಪ್ರಧಾನಿ ಇತರೆ ಭಾಗಗಳಿಗೆ ಭೇಟಿ ನೀಡುವಂತೆ ಅಲ್ಲಿನ ಭಾಗಕ್ಕೂ ತೆರಳಿದ್ದಾರೆ. ಅಲ್ಲದೆ ಇದರಲ್ಲಿ ಯಾವುದೇ ಸಂಶಯವನ್ನು ಭಾರತ ಹೊಂದಿಲ್ಲ, ಈ ವಿಚಾರವನ್ನು ಹಲವು ಬಾರಿ ಚೀನಾಗೆ ತಿಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೂಲಕ ಉಭಯ ದೇಶಗಳ ಗಡಿ ಸಮಸ್ಯೆಗೆ ಕಾರಣವಾಗಿರುವ ಭಾಗದಲ್ಲಿ ಭಾರತದ ರಾಜಕೀಯ ನಾಯಕರು ಭೇಟಿ ನೀಡುವುದು ಸರಿಯಲ್ಲ ಎಂದು ಚೀನಾ ಹೇಳಿಕೆ ಭಾರತ ಮರುತ್ತರ ನೀಡಿದೆ.

ಗಡಿ ವಿವಾದ:
ಚೀನಾ ದೇಶವು ಅರುಣಾಚಲ ಪ್ರದೇಶದ ಗಡಿಭಾಗವನ್ನು ಟಿಬೆಟ್​ ದೇಶದ ಭಾಗವೆಂದು ಮೊದಲಿನಿಂದಲೂ  ಪ್ರತಿಪಾದಿಸುತ್ತಿದೆ. 3488 ಕಿ.ಮೀ ವ್ಯಾಪ್ತಿಯ ಈ ಗಡಿಭಾಗದಲ್ಲಿ ಉಭಯ ದೇಶಗಳ ನಡುವೆ ವಿವಾದವಿದ್ದು, ಈ ಸಮಸ್ಯೆಯ ಕುರಿತು ಈಗಾಗಲೇ ಭಾರತ ಮತ್ತು ಚೀನಾ ನಡುವೆ 21 ಸುತ್ತಿನ ಮಾತುಕತೆ ನಡೆದಿದೆ. ಅಲ್ಲದೆ ಅರುಣಾಚಲ ಪ್ರದೇಶದ ಗಡಿಭಾಗವನ್ನು ಚೀನಾ ಅತಿಕ್ರಮಿಸಲು ಪ್ರಯತ್ನಿಸುತ್ತಿದೆ ಎಂದು ಭಾರತ ಹಿಂದಿನಿಂದಲೂ ದೂರುತ್ತಲೇ ಬರುತ್ತಿದೆ. ಈ ಕಾರಣದಿಂದ ಭಾರತದ ನಾಯಕರುಗಳು ಈ ಭಾಗಕ್ಕೆ ಭೇಟಿ ನೀಡುವುದನ್ನು ಚೀನಾ ವಿರೋಧಿಸುತ್ತಿದೆ.
First published:February 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...