• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಭಾರತಕ್ಕೆ ಪ್ರತ್ಯುತ್ತರ ನೀಡಲು ಪಾಕ್​ ನಿರ್ಧಾರ; ಎಲ್ಲದಕ್ಕೂ ಸಿದ್ಧರಾಗುವಂತೆ ಪಾಕ್​ ಜನತೆಗೆ ಇಮ್ರಾನ್​ ಖಾನ್ ಮನವಿ​

ಭಾರತಕ್ಕೆ ಪ್ರತ್ಯುತ್ತರ ನೀಡಲು ಪಾಕ್​ ನಿರ್ಧಾರ; ಎಲ್ಲದಕ್ಕೂ ಸಿದ್ಧರಾಗುವಂತೆ ಪಾಕ್​ ಜನತೆಗೆ ಇಮ್ರಾನ್​ ಖಾನ್ ಮನವಿ​

ಇಮ್ರಾನ್​ ಖಾನ್​ ಸಭೆ

ಇಮ್ರಾನ್​ ಖಾನ್​ ಸಭೆ

ಗಡಿ ನಿಯಂತ್ರಣದಲ್ಲಿ ನಡೆದಿರುವ ದಾಳಿಯಲ್ಲಿ 200ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂಬ ಭಾರತದ ಹೇಳಿಕೆಯನ್ನು ಇಮ್ರಾನ್​ ಖಾನ್​ ತಳ್ಳಿ ಹಾಕಿದ್ದಾರೆ. ಭಾರತದ ವಾಯುಪಡೆ ದಾಳಿಯಿಂದಾಗಿದೆ ಯಾವುದೇ ಹಾನಿಯಾಗಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

  • News18
  • 2-MIN READ
  • Last Updated :
  • Share this:

ಇಸ್ಲಾಮಾಬಾದ್​ (ಫೆ.26): ಪಾಕಿಸ್ತಾನ ಬೆಂಬಲಿತ ಉಗ್ರರು ಪುಲ್ವಾಮಾದಲ್ಲಿ ನಡೆಸಿದ ದಾಳಿಗೆ ಭಾರತ ಇಂದು ಪ್ರತೀಕಾರ ನಡೆಸಿದೆ. ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಪ್ರದೇಶಗಳಾದ ಬಾಲಕೋಟ್​, ಚಕೋಟಿ ಮತ್ತು ಮುಜಾಫರ್​ಬಾದ್​ ಪ್ರದೇಶಗಳ ಮೇಲೆ ದಾಳಿ ನಡೆಸಿದ್ದು, ಜೈಷೆ-ಇ-ಮೊಹಮ್ಮದ್​ ಉಗ್ರರ ನೆಲೆ ಹೊಡೆದುರುಳಿಸಿದೆ.

ಈ ದಾಳಿಯ ಬೆನ್ನಲ್ಲೇ ಇಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​, ತುರ್ತು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪಾಕ್​ ವಿದೇಶಾಂಗ ಸಚಿವ, ರಕ್ಷಣಾ, ಹಣಕಾಸು ಸಚಿವರು ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

ಭಾರತ ದಿಡೀರ್​ ಆಕ್ರಮಣ ನಡೆಸಿದ್ದು, ಈ ದಾಳಿಗೆ ಪಾಕಿಸ್ತಾನ ಕೂಡ ಸರಿಯದ ಸಮಯಕ್ಕೆ ಸೂಕ್ತ ಸ್ಥಳದಲ್ಲಿ ಸಮರ್ಥ ಉತ್ತರ ನೀಡಲಿದೆ. ಇದಕ್ಕಾಗಿ ದೇಶದ ಜನರು ಸಜ್ಜಾಗಬೇಕಿದೆ ಎಂದು ಪಾಕ್​ ರಾಷ್ಟ್ರೀಯ ರಕ್ಷಣಾ ಸಮಿತಿ ತಿಳಿಸಿದೆ ಎಂದು ಇಮ್ರಾನ್​ ಖಾನ್​ ಸಭೆಯಲ್ಲಿ ತಿಳಿಸಿದ್ದಾರೆ ಎಂದು ರೇಡಿಯೋ ಪಾಕಿಸ್ತಾನ ಪತ್ರಿಕೆ ವರದಿ ಮಾಡಿದೆ.



ಗಡಿ ನಿಯಂತ್ರಣದಲ್ಲಿ ನಡೆದಿರುವ ದಾಳಿಯಲ್ಲಿ 200ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂಬ ಭಾರತದ ಹೇಳಿಕೆಯನ್ನು ಇಮ್ರಾನ್​ ಖಾನ್​ ತಳ್ಳಿ ಹಾಕಿದ್ದಾರೆ. ಭಾರತದ ವಾಯುಪಡೆ ದಾಳಿಯಿಂದಾಗಿದೆ ಯಾವುದೇ ಹಾನಿಯಾಗಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

 


200 ಉಗ್ರರ ಮೇಲೆ ದಾಳಿ ನಡೆಸಿದ್ದೇವೆ ಎಂದು ಭಾರತ ಹೇಳುತ್ತಿರುವ ಪ್ರದೇಶ ನಿರ್ಜನ ಪ್ರದೇಶವಾಗಿದೆ. ದಾಳಿ ನಡೆದ ಪ್ರದೇಶದ ನೈಜತೆ ಕುರಿತು ಪರಿಶೀಲನೆಗೆ ಕೂಡ ಮುಂದಾಗಬಹುದು.  ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಮಾಧ್ಯಮಗಳು ಕೂಡ ಇದಕ್ಕೆ ಮುಕ್ತ ಅವಕಾಶವಿದೆ ಎಂದಿದ್ದಾರೆ.

ಇದನ್ನು ಓದಿ: ಭಾರತೀಯ ವಾಯುಪಡೆ ಗಡಿ ಪ್ರವೇಶಿಸಿದೆ. ಆದರೆ, ಯಾವುದೇ ಹಾನಿಯಾಗಿಲ್ಲ; ಪಾಕ್

ಭಾರತದಲ್ಲಿ ಚುನಾವಣೆ ಹಿನ್ನಲೆ ಈ ಕಾರ್ಯಚಾರಣೆ ನಡೆದಿದೆ. ಈ ಮೂಲಕ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಅಪಾಯದ ಸ್ಥಿತಿ ತಲುಪಿದೆ. ಈ ಪ್ರಚೋದನಾ ದಾಳಿಗಳು ಎರಡು ರಾಷ್ಟ್ರಗಳನ್ನು  ಎಲ್ಲಿಗೆ ಕೊಂಡಯ್ಯಲಿದೆ ಎಂಬ ಬಗ್ಗೆ ಭಾರತ ಅರಿತುಗೊಳ್ಳಬೇಕಾಗಿದೆ.

ಯಾವುದೇ ಸಮಯದಲ್ಲಿ ಈ ದಾಳಿಗೆ ಪ್ರತ್ಯುತ್ತರ ನೀಡಲು ನಾವು ಸಿದ್ದರಾಗಬೇಕಾಗಿದೆ. ಪಾಕಿಸ್ತಾನದ ಸೇನೆ ಹಾಗೂ ಜನರು ಇದಕ್ಕಾಗಿದೆ ಸಿದ್ಧರಾಗಬೇಕಾಗಿದೆ. ಭಾರತದ ಬೇಜಾವಬ್ದಾರಿತನದ ಕುರಿತು ಬಹಿರಂಗಪಡಿಸಲು ಜಾಗತಿಕ ನಾಯಕರ ಜೊತೆ ಒಟ್ಟುಗೂಡಲು ನಿರ್ಧಾರಿಸಲಾಗಿದೆ.

First published: