ಚೇತರಿಕೆ ಕಾಣದ ದೇಶದ ಆರ್ಥಿಕತೆ; ಶೇ.5ಕ್ಕೆ ಕುಸಿದ ಜಿಡಿಪಿ

ತೀವ್ರ ಗತಿಯಲ್ಲಿ ಕುಸಿಯುತ್ತಿರುವ ಭಾರತ ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಕೆಲವು ದಿನಗಳ ಹಿಂದೆ ಹಲವು ಕ್ರಮಗಳನ್ನು ತೆಗೆದುಕೊಂಡಿತು. ಆದರೂ ಜಿಡಿಪಿ ಬೆಳವಣಿಗೆ ಚೇತರಿಸಿಕೊಳ್ಳುವಲ್ಲಿ ಎಡವಿದ್ದು, ಮೋದಿ ಸರ್ಕಾರಕ್ಕೆ ಭಾರೀ ಹಿನ್ನಡೆ ಉಂಟು ಮಾಡಿದೆ.

HR Ramesh | news18-kannada
Updated:August 31, 2019, 12:49 PM IST
ಚೇತರಿಕೆ ಕಾಣದ ದೇಶದ ಆರ್ಥಿಕತೆ; ಶೇ.5ಕ್ಕೆ ಕುಸಿದ ಜಿಡಿಪಿ
ರೇಖಾಚಿತ್ರ - ಮೀರ್ ಸುಹೈಲ್​
  • Share this:
ನವದೆಹಲಿ: ಕೇಂದ್ರ ಸಂಖ್ಯಾಶಾಸ್ತ್ರ ಕಚೇರಿ ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದ ಭಾರತದ ತ್ರೈಮಾಸಿಕ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಬೆಳವಣಿಗೆ ಶೇ.5ಕ್ಕೆ ಕುಸಿದಿದೆ. ಕಳೆದ ತ್ರೈಮಾಸಿಕ ಜಿಡಿಪಿಗೆ ಹೊಲಿಕೆ ಮಾಡಿದರೆ ಈ ಶೇಕಡ 0.8ರಷ್ಟು ಜಿಡಿಪಿ ಕುಸಿತಗೊಂಡಿದೆ. ಅಷ್ಟೇ ಅಲ್ಲದೇ, ಕಳೆದ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇ.7.8ರಷ್ಟಿತ್ತು. 

ತೀವ್ರ ಗತಿಯಲ್ಲಿ ಜಿಡಿಪಿ ಕುಸಿದಿರುವುದಕ್ಕೆ ಉತ್ಪಾದನಾ ವಲಯ ಮತ್ತು ಖಾಸಗಿ ವಲಯ ಕೇಂದ್ರ ಸರ್ಕಾರವನ್ನು ನಿಂದಿಸಿವೆ. ಜಿಡಿಪಿ ಕನಿಷ್ಠ ಆರು ವರ್ಷಗಳ ಮಟ್ಟಕ್ಕೆ ಕುಸಿದಿದೆ.

ಜಿಡಿಪಿ ಬೆಳವಣಿಗೆ ಅಂಕಿಸಂಖ್ಯೆಗಳನ್ನು ಅಧಿಕೃತ ಇಲಾಖೆ ಬಿಡುಗಡೆ ಮಾಡುವ ಮುನ್ನವೇ ಹಲವು ಸಂಶೋಧನಾ ಸಂಸ್ಥೆಗಳು ಭಾರತದ ಜಿಡಿಪಿ ತೀವ್ರಗತಿಯಲ್ಲಿ ಕುಸಿದಿರುವುದನ್ನು ಅಂದಾಜಿಸಿದ್ದವು.

ಇದನ್ನು ಓದಿ: ಕೆನರಾ, ಸಿಂಡಿಕೇಟ್​ ಸೇರಿ ಹಲವು ಬ್ಯಾಂಕುಗಳು ವಿಲೀನ; ಬ್ಯಾಂಕಿಂಗ್ ವಲಯದ ಬಲವರ್ಧನೆಗೆ ಕ್ರಮ ಎಂದ ವಿತ್ತ ಸಚಿವೆ

ತೀವ್ರ ಗತಿಯಲ್ಲಿ ಕುಸಿಯುತ್ತಿರುವ ಭಾರತ ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಕೆಲವು ದಿನಗಳ ಹಿಂದೆ ಹಲವು ಕ್ರಮಗಳನ್ನು ತೆಗೆದುಕೊಂಡಿತು. ಆದರೂ ಜಿಡಿಪಿ ಬೆಳವಣಿಗೆ ಚೇತರಿಸಿಕೊಳ್ಳುವಲ್ಲಿ ಎಡವಿದ್ದು, ಮೋದಿ ಸರ್ಕಾರಕ್ಕೆ ಭಾರೀ ಹಿನ್ನಡೆ ಉಂಟು ಮಾಡಿದೆ.

First published:August 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ