ಜಿಡಿಪಿ ಅಭಿವೃದ್ಧಿಯಲ್ಲಿ ಮನಮೋಹನ್​ಗಿಂತ ಹಿಂದುಳಿದ ಮೋದಿ; ರಾಜೀವ್ ಸರಕಾರದಲ್ಲೇ ಬೆಸ್ಟ್ ಜಿಡಿಪಿ ರೇಟ್


Updated:August 18, 2018, 4:21 PM IST
ಜಿಡಿಪಿ ಅಭಿವೃದ್ಧಿಯಲ್ಲಿ ಮನಮೋಹನ್​ಗಿಂತ ಹಿಂದುಳಿದ ಮೋದಿ; ರಾಜೀವ್ ಸರಕಾರದಲ್ಲೇ ಬೆಸ್ಟ್ ಜಿಡಿಪಿ ರೇಟ್

Updated: August 18, 2018, 4:21 PM IST
- ನ್ಯೂಸ್18 ಕನ್ನಡ

ನವದೆಹಲಿ(ಆ. 18): ಕೇಂದ್ರ ಸರಕಾರದ ಹೊಸ ಮಾನದಂಡಗಳೊಂದಿಗೆ ದೇಶದ ಪರಿಷ್ಕೃತ ಜಿಡಿಪಿ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಮನಮೋಹನ್ ಸಿಂಗ್ ನೇತೃತ್ವದ ಸರಕಾರದ ಅವಧಿಯಲ್ಲಿ ಭಾರತವು ಶೇ. 10.08 ಆರ್ಥಿಕ ಪ್ರಗತಿ ಸಾಧಿಸಿತ್ತಂತೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದು ಎರಡನೇ ಅತ್ಯುತ್ತಮ ಪ್ರಗತಿ ಸಾಧನೆಯಾಗಿದೆ. ಸರಾಸರಿ ಲೆಕ್ಕಾಚಾರದಲ್ಲೂ ಈಗಿನ ಎನ್​ಡಿಎ ಸರಕಾರಕ್ಕಿಂತ ಯುಪಿಎ ಸರಕಾರದ ಸಾಧನೆ ಉತ್ತಮವೆಂಬ ವಿಚಾರ ಬೆಳಕಿಗೆ ಬಂದಿದೆ. ಮೋದಿ ನೇತೃತ್ವದಲ್ಲಿ 4 ವರ್ಷದ ಆಡಳಿತದಲ್ಲಿ ಸರಾಸರಿ ಶೇ. 7.3ರಷ್ಟು ಆರ್ಥಿಕ ಅಭಿವೃದ್ಧಿಯಾದರೆ, ಯುಪಿಎ ಸರಕಾರದ ಎರಡು ಅವಧಿಯಲ್ಲಿ ಶೇ. 8.1 ಸರಾಸರಿ ಅಭಿವೃದ್ಧಿಯಾಗಿದೆ.

1988-89ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಆಡಳಿತದ ವೇಳೆ ಭಾರತ 10.20% ಜಿಡಿಪಿ ಬೆಳವಣಿಗೆ ಸಾಧಿಸಿದ್ದೇ ಇದೂವರೆಗಿನ ಗರಿಷ್ಠ ಮಟ್ಟವಾಗಿದೆ. ಅದಾದ ನಂತರ ಮನಮೋಹನ್ ಸಿಂಗ್ ಪ್ರಧಾನಿಯಾದ 2006-07ರ ವರ್ಷದಂದು ಭಾರತದ ಆರ್ಥಿಕತೆ ಶೇ. 10.08ರಷ್ಟು ದರದಲ್ಲಿ ಬೆಳವಣಿಗೆ ಸಾಧಿಸಿತ್ತೆನ್ನಲಾಗಿದೆ.

ಈ ಮುಂಚಿನ ಜಿಡಿಪಿ ಲೆಕ್ಕಾಚಾರದಲ್ಲಿ ಹಲವು ಲೋಪದೋಷಗಳಿದ್ದವು. ಬಹುತೇಕ ಅಸಂಘಟಿತ ವಲಯಗಳ ಒಟ್ಟು ಉತ್ಪನ್ನಗಳು ಈ ಲೆಕ್ಕಾಚಾರದಲ್ಲಿ ಕೈಬಿಟ್ಟುಹೋಗುತ್ತಿದ್ದವು. ಕೃಷಿ ಮತ್ತು ಕಾರ್ಪೊರೇಟ್ ವಲಯದ ಅನೇಕ ವ್ಯವಹಾರಗಳನ್ನು ಹಿಂದಿನ ಪದ್ಧತಿಯಲ್ಲಿ ನಿಖರವಾಗಿ ಅಂದಾಜಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಜಿಡಿಪಿ ಲೆಕ್ಕಾಚಾರಕ್ಕೆ ವಿಶ್ವ ಸಂಸ್ಥೆ 2008ರಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳನ್ನ ರಚಿಸಿತು. ಪ್ರತೀ ಐದು ವರ್ಷಗಳಿಗೊಮ್ಮೆ ಮೂಲ ವರ್ಷ(ಬೇಸ್ ಇಯರ್)ವನ್ನು ಬದಲಿಸಬೇಕೆಂಬುದು ಈ ಸೂತ್ರಗಳಲ್ಲೊಂದಾಗಿದೆ. ವಿಶ್ವಾದ್ಯಂತ ಅನೇಕ ರಾಷ್ಟ್ರಗಳು ತಮ್ಮ ಜಿಡಿಪಿ ಅಳತೆಗೆ ಈ ಹೊಸ ವಿಧಾನವನ್ನು ಅನುಸರಿಸುತ್ತಿವೆ. ಭಾರತ ಸರಕಾರ ಕೂಡ 2015ರಲ್ಲಿ ಇದನ್ನು ಪ್ರಾರಂಭಿಸಿದೆ. ಈ ಹೊಸ ಸೂತ್ರಗಳನ್ನ ಇಟ್ಟುಕೊಂಡು ಭಾರತದ ಹಿಂದಿನ ಆರ್ಥಿಕ ಅಭಿವೃದ್ಧಿ ದರಗಳೆಲ್ಲವನ್ನೂ ಪರಿಷ್ಕರಿಸಿದೆ.
First published:August 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ