India-China Trade $100 Billion Mark| ದಾಖಲೆಯ10 ಸಾವಿರ ಶತಕೋಟಿ ಡಾಲರ್ ತಲುಪಲಿರುವ ಭಾರತ-ಚೀನಾ ವ್ಯಾಪಾರ!

2021 ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಚೀನಾದ ಒಟ್ಟು ಆಮದು ಮತ್ತು ರಫ್ತುಗಳು ವರ್ಷದಿಂದ ವರ್ಷಕ್ಕೆ ಶೇ. 22.7 ಹೆಚ್ಚಾಗಿದ್ದು 28.33 ಟ್ರಿಲಿಯನ್ ಯುವಾನ್‌ಗೆ (ಸುಮಾರು 4.38 ಲಕ್ಷ ಕೋಟಿ ಡಾಲರ್‌) ತಲುಪಿದೆ ಎಂದು ಅಧಿಕೃತ ಅಂಕಿಅಂಶಗಳು ಬುಧವಾರ ಬಿಡುಗಡೆಯಾಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭಾರತ ಮತ್ತು ಚೀನಾ (Indo-China Conflict) ನಡುವೆ ಪೂರ್ವ ಲಡಾಖ್‌ನ (Eastern Ladakh) ಗಡಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ದೊಡ್ಡ ಮಟ್ಟದ ಸೈನಿಕ ಗಲಭೆಗಳು ನಡೆಯುತ್ತಿವೆ. ಕಳೆದ ವರ್ಷ ಜೂನ್ 15 ರಂದು ಈ ಭಾಗದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಈ ಸಂಘರ್ಷದಲ್ಲಿ ಎರಡೂ ಕಡೆ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದವು.  ಈ ಘಟನೆಯ ನಂತರ ಎರಡೂ ದೇಶದ ಸಂಬಂಧವೂ ಅಷ್ಟಕ್ಕಷ್ಟೆಎಂಬಂತಿತ್ತು. ಅಲ್ಲದೆ, ಗಡಿ ಭಾಗದಲ್ಲಿ ಪ್ರಕ್ಷುಬ್ಧತೆ ನಿರಂತರವಾಗಿದ್ದು, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಇತ್ತೀಚೆಗೆ ಎರಡೂ ದೇಶದ ಕಮಾಂಡರ್​ ಮಟ್ಟದ ಮಾತುಕತೆ ನಡೆದಿತ್ತು. ಆದರೆ, ಗಡಿ ಭಾಗದಲ್ಲಿ ಸೇನಾ ಸಂಘರ್ಷದಿಂದಾಗಿ ದ್ವಿಪಕ್ಷೀಯ ಸಂಬಂಧಗಳಲ್ಲಿ ಬಿರುಕು ಬಿಟ್ಟಿದ್ದರೂ, ಉಭಯ ದೇಶಗಳ ವ್ಯಾಪಾರದ (India-China Trade) ಪ್ರಮಾಣ ಮಾತ್ರ ಈ ವರ್ಷ ದಾಖಲೆ ಬರೆದಿದೆ. ಎರಡೂ ದೇಶದ ವ್ಯಾಪಾರ ವಹಿವಾಟು ಈ ವರ್ಷ 10 ಸಾವಿರ ಕೋಟಿ ಡಾಲರ್ ದಾಟಲಿದೆ ($100 Billion Mark) ಎಂದು ಅಂದಾಜಿಸಲಾಗಿದೆ. ಈ ವರ್ಷದ ಒಂಬತ್ತು ತಿಂಗಳಲ್ಲಿ ವ್ಯಾಪಾರದ ಒಟ್ಟು ಮೊತ್ತವು ಈಗಾಗಲೇ 9 ಸಾವಿರ ಕೋಟಿ ಡಾಲರ್ ತಲುಪಿದೆ ಎಂದು ವರದಿಗಳು ತಿಳಿಸಿವೆ.

  ಭಾರತ-ಚೀನಾ ವ್ಯಾಪಾರದಲ್ಲಿ ದಾಖಲೆ:

  2021 ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಚೀನಾದ ಒಟ್ಟು ಆಮದು ಮತ್ತು ರಫ್ತುಗಳು ವರ್ಷದಿಂದ ವರ್ಷಕ್ಕೆ ಶೇ. 22.7 ಹೆಚ್ಚಾಗಿದ್ದು 28.33 ಟ್ರಿಲಿಯನ್ ಯುವಾನ್‌ಗೆ (ಸುಮಾರು 4.38 ಲಕ್ಷ ಕೋಟಿ ಡಾಲರ್‌) ತಲುಪಿದೆ ಎಂದು ಅಧಿಕೃತ ಅಂಕಿಅಂಶಗಳು ಬುಧವಾರ ಬಿಡುಗಡೆಯಾಗಿವೆ. ಈ ಅಂಕಿ-ಅಂಶವು 2019 ರ ಸಾಂಕ್ರಾಮಿಕದ ಮುಂಚಿನ ಮಟ್ಟಕ್ಕಿಂತ ಶೇ.23.4 ದಷ್ಟು ಹೆಚ್ಚಳವಾಗಿದೆ ಎಂದು ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್ಸ್ ಹೇಳಿದೆ.

  ಸೆಪ್ಟೆಂಬರ್ ಅಂತ್ಯದ ವೇಳೆಗೆ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ವ್ಯಾಪಾರವು 9 ಸಾವಿರ ಕೋಟಿ ಡಾಲರ್ ತಲುಪಿದ್ದು, ಇದು ಕಳದೆ ವರ್ಷಕ್ಕಿಂತ ಶೇ.49.3 ಹೆಚ್ಚಾಗಿದೆ ಎಂದು ಚೀನಾ ಕಸ್ಟಮ್ಸ್ ಬಿಡುಗಡೆ ಮಾಡಿದ ಒಂಬತ್ತು ತಿಂಗಳ ಅಂಕಿಅಂಶಗಳು ಹೇಳಿದೆ.

  ಭಾರತಕ್ಕೆ ಚೀನಾದ ರಫ್ತುಗಳು 6,846 ಕೋಟಿ ಡಾಲರ್‌ಗೆ ಏರಿಕೆಯಾಗಿದ್ದು, ಈ ಏರಿಕೆ ಶೇ.51.7 ರಷ್ಟಾಗುತ್ತದೆ. ಭಾರತೀಯ ರಫ್ತುಗಳು ಒಟ್ಟು 2,191 ಕೋಟಿ ಡಾಲರ್‌ಗೆ ತಲುಪಿದ್ದು, ಶೇ. 42.5 ಏರಿಕೆಯೊಂದಿಗೆ ಗಮನಾರ್ಹ ಹೆಚ್ಚಳವನ್ನು ದಾಖಲಿಸಿದೆ.

  ಬಿಜೆಪಿ ಆಡಳಿತ ಮತ್ತು ಅವರ ಬೆಂಬಲಿಗರು ಹಲವಾರು ವರ್ಷದಿಂದಲೂ ಚೀನಾ ವಸ್ತುಗಳನ್ನು ಬ್ಯಾನ್ ಮಾಡುವಂತೆ ಕರೆನೀಡುತ್ತಿದ್ದರೂ, ಬಿಜೆಪಿ ಆಡಳಿತದಲ್ಲೇ ಚೀನಾದೊಂದಿಗೆ ವ್ಯಾಪಾರ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.

  ಇದನ್ನೂ ಓದಿ: Indo China Conflict| ಭಾರತ-ಚೀನಾ ಗಡಿ ಬಿಕ್ಕಟ್ಟು; ಕಮಾಂಡರ್​​ಗಳಿಂದ 13ನೇ ಸುತ್ತಿನ ಮಾತುಕತೆ, ಸಮಸ್ಯೆ ಇತ್ಯರ್ಥಕ್ಕೆ ಒತ್ತು

  ವ್ಯಾಪಾರಕ್ಕೆ ಕುತ್ತು ತರದ ಸೇನಾ ಕಾರ್ಯಾಚರಣೆ:

  ಉಭಯ ದೇಶಗಳ ನಡುವೆ ಮುಂದುವರಿದ ಸೇನಾ ಸಂಘರ್ಷದಿಂದಾಗಿ ದ್ವಿಪಕ್ಷೀಯ ಸಂಬಂಧಗಳಲ್ಲಿ ತಣ್ಣಗಾಗಿದ್ದರೂ, ಭಾರತ-ಚೀನಾ ವ್ಯಾಪಾರ ಸಂಪುಟವು ಈ ವರ್ಷ ದಾಖಲೆ ಮೊತ್ತವನ್ನು 100 ಬಿಲಿಯನ್ ಯುಎಸ್ ಡಾಲರ್ ದಾಟಲಿದೆ ಎಂದು ಅಂದಾಜಿಸಲಾಗಿದೆ.

  ಈಗಲೂ ಲಡಾಖ್ ತನ್ನದು ಎಂದು ಚೀನಾ ವಾದಿಸುತ್ತಿದೆ. ಅಲ್ಲದೆ, ಗಡಿ ಭಾಗದಲ್ಲಿ ದಿನನಿತ್ಯ ಗಡಿರೇಖೆ ಉಲ್ಲಂಘಿಸಿ ಚೀನಾ ಸೈನಿಕರು ದೇಶದ ಒಳ ನುಸುಳುವುದು ಸಾಮಾನ್ಯವಾಗಿದೆ. ಅಲ್ಲದೆ, ಶ್ರೀಲಂಕಾದಲ್ಲೂ ಭಾರೀ ಪ್ರಮಾಣದ ಹಣ ಹೂಡಿಕೆ ಮಾಡಿರುವ ಚೀನಾ ಹಿಂದೂ ಮಹಾಸಾಗರದಲ್ಲೂ ತನ್ನ ಸಾರ್ವಭೌಮತ್ವ ಸಾಧಿಸಿ ಭಾರತಕ್ಕೆ ಆಗಿಂದಾಗ್ಗೆ ಕಿರಿಕಿರಿ ನೀಡುತ್ತಲೇ ಇದೆ.

  ಇದನ್ನೂ ಓದಿ: Indo-China Conflict: ಭಾರತದ ಗಡಿಯೊಳಗೆ ನುಗ್ಗಿದ್ದ 200 ಚೀನೀ ಸೈನಿಕರು, ಎಲ್ಲರನ್ನೂ ವಶಕ್ಕೆ ಪಡೆದ ಭಾರತೀಯ ಸೇನೆ

  ಹೀಗಾಗಿ ಸಮುದ್ರದ ಮೇಲಿನ ಚೀನಾ ಸಾರ್ವಭೌಮತ್ವವನ್ನು ಕುಗ್ಗಿಸಲು ಭಾರತ-ಅಮೆರಿಕ ಒಂದೆಡೆ ರಣತಂತ್ರ ರೂಪಿಸುತ್ತಿದ್ದರೆ, ಮತ್ತೊಂದೆಡೆ ಚೀನಾ-ಭಾರತದ ನಡುವೆ ಈ ಪ್ರಮಾಣದ ದಾಖಲೆ ವ್ಯಾಪಾರ ವಹಿವಾಟು ನಡೆಯುತ್ತಿರುವುದು ಅನೇಕರ ಅಚ್ಚರಿಕೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಇನ್ನೂ ಕೊರೋನಾ ಸಂದರ್ಭದಲ್ಲಿ ಭಿಕ್ಕಟ್ಟಿಗೆ ಒಳಗಾಗಿದ್ದ ಚೀನಾ ಕಾರ್ಖಾನೆಗಳು ಈಗ ಎಂದಿನಂತೆ ಕೆಲಸ ಕೆಲಸ ನಿರ್ವಹಿಸುತ್ತಿರುವುದೂ ಈ ವ್ಯಾಪಾರ ವೃದ್ಧಿಗೆ ಕಾರಣ ಎನ್ನಲಾಗುತ್ತಿದೆ.
  Published by:MAshok Kumar
  First published: