ಭಾರತ, ಚೀನಾ ಅಭಿವೃದ್ಧಿಶೀಲ ದೇಶಗಳಲ್ಲ, ಇನ್ನು ಮುಂದೆ ಯಾವುದೇ ಪ್ರಯೋಜನ ಪಡೆಯಲು ಬಿಡುವುದಿಲ್ಲ; ಟ್ರಂಪ್​

ಭಾರತ ಮತ್ತು ಚೀನಾ ಅಭಿವೃದ್ಧಿಶೀಲ ರಾಷ್ಟ್ರಗಳು ಎಂಬ ಟ್ಯಾಗ್​ನಿಂದ ವಿಶ್ವ ವಾಣಿಜ್ಯ ಸಂಸ್ಥೆಯಿಂದ ಪ್ರಯೋಜನ ಪಡೆದುಕೊಳ್ಳುತ್ತಿವೆ. ಇದರಿಂದ ಅಮೆರಿಕಾಗೆ ಅನಾನುಕೂಲವಾಗುತ್ತಿದೆ. ಅವುಗಳು (ಭಾರತ ಮತ್ತು ಚೀನಾ) ಹಲವು ವರ್ಷಗಳಿಂದ ನಮ್ಮಿಂದ ಸಾಕಷ್ಟು ಅನುಕೂಲ ಪಡೆದುಕೊಂಡಿವೆ ಎಂದು ಹೇಳಿದರು.

HR Ramesh | news18
Updated:August 14, 2019, 4:05 PM IST
ಭಾರತ, ಚೀನಾ ಅಭಿವೃದ್ಧಿಶೀಲ ದೇಶಗಳಲ್ಲ, ಇನ್ನು ಮುಂದೆ ಯಾವುದೇ ಪ್ರಯೋಜನ ಪಡೆಯಲು ಬಿಡುವುದಿಲ್ಲ; ಟ್ರಂಪ್​
ಡೊನಾಲ್ಡ್​ ಟ್ರಂಪ್​
  • News18
  • Last Updated: August 14, 2019, 4:05 PM IST
  • Share this:
ವಾಷಿಂಗ್ಟನ್​: ಭಾರತ ಮತ್ತು ಚೀನಾ ಇನ್ನು ಮುಂದೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲ ಮತ್ತು ಅಭಿವೃದ್ಧಿಶೀಲ ದೇಶಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡು ಅವುಗಳು ವಿಶ್ವ ವಾಣಿಜ್ಯ ಸಂಸ್ಥೆಯಿಂದ ಅನುಕೂಲ ಪಡೆದುಕೊಳ್ಳುತ್ತಿವೆ. ಇನ್ನು ಮುಂದೆ ಆ ಪ್ರಯೋಜನ ಪಡೆಯಲು ಬಿಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಹೇಳಿದ್ದಾರೆ.

ಅಮೆರಿಕ ಮೊದಲು ನೀತಿಯನ್ನು ಪ್ರತಿಪಾದಿಸಿಕೊಂಡು ಬಂದಿರುವ ಟ್ರಂಪ್​, ಅಮೆರಿಕದ ಉತ್ಪನ್ನಗಳಿಗೆ ಭಾರತ ಅತಿಯಾದ ತೆರಿಗೆ ವಿಧಿಸಿರುವುದು ಮತ್ತು ಅಮೆರಿಕವನ್ನು 'ಸುಂಕದ ರಾಜ' (ಟಾರಿಫ್​ ಕಿಂಗ್​)​​ ಎಂದು ಬಣ್ಣಿಸಿರುವುದನ್ನು ಕಟುವಾಗಿ ಟೀಕಿಸಿದ್ದಾರೆ.


ಜುಲೈಗೂ ಮುನ್ನ ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ಟ್ರಂಪ್​ ಅವರು, ಜಾಗತಿಕ ವಾಣಿಜ್ಯ ನಿಯಮಗಳಿಂದ ರಿಯಾಯಿತಿ ಪಡೆಯುತ್ತಿರುವ ಚೀನಾ, ಟರ್ಕಿ ಮತ್ತು ಭಾರತದಂತಹ ದೇಶಗಳು ಅಭಿವೃದ್ಧಿಶೀಲ ದೇಶದ ಸ್ಥಾನಮಾನವನ್ನು ಹೇಗೆ ಹೊಂದುತ್ತವೆ ಎಂದು ಹೇಳಿದ್ದರು.
ಪೆನ್ಸಿಲ್ವೆನಿಯಾದಲ್ಲಿ ಮಂಗಳವಾರ ಮಾತನಾಡಿದ ಟ್ರಂಪ್​, ಏಷ್ಯಾದಲ್ಲಿ ಭಾರತ ಮತ್ತು ಚೀನಾ ಆರ್ಥಿಕ ದೈತ್ಯ ರಾಷ್ಟ್ರಗಳು. ಇನ್ನು ಮುಂದೆ ಅವುಗಳು ಅಭಿವೃದ್ಧಿಶೀಲ ರಾಷ್ಟ್ರಗಳು ಅಲ್ಲ. ಮತ್ತು ವಿಶ್ವ ವಾಣಿಜ್ಯ ಸಂಸ್ಥೆಯಿಂದ ಇನ್ನು ಮುಂದೆ ಯಾವುದೇ ಪ್ರಯೋಜನಗಳನ್ನು ಅವು ಪಡೆಯಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.


ಆದಾಗ್ಯೂ, ಭಾರತ ಮತ್ತು ಚೀನಾ ಅಭಿವೃದ್ಧಿಶೀಲ ರಾಷ್ಟ್ರಗಳು ಎಂಬ ಟ್ಯಾಗ್​ನಿಂದ ವಿಶ್ವ ವಾಣಿಜ್ಯ ಸಂಸ್ಥೆಯಿಂದ ಪ್ರಯೋಜನ ಪಡೆದುಕೊಳ್ಳುತ್ತಿವೆ. ಇದರಿಂದ ಅಮೆರಿಕಾಗೆ ಅನಾನುಕೂಲವಾಗುತ್ತಿದೆ. ಅವುಗಳು (ಭಾರತ ಮತ್ತು ಚೀನಾ) ಹಲವು ವರ್ಷಗಳಿಂದ ನಮ್ಮಿಂದ ಸಾಕಷ್ಟು ಅನುಕೂಲ ಪಡೆದುಕೊಂಡಿವೆ ಎಂದು ಹೇಳಿದರು.

ಜಿನೆವಾ ಮೂಲದ ವಿಶ್ವ ವಾಣಿಜ್ಯ ಸಂಸ್ಥೆ ದೇಶಗಳ ನಡುವೆ ಅಂತಾರಾಷ್ಟ್ರೀಯ ವಾಣಿಜ್ಯ ವಹಿವಾಟನ್ನು ನಿಯಂತ್ರಿಸುವ ಸಂಸ್ಥೆಯಾಗಿದೆ.

First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ