ನಿರ್ಣಾಯಕ ಹಂತದತ್ತ ಇಂಡೋ-ಚೀನಾ ಗಡಿ ವಿವಾದ?; ಪಾಂಗೋಂಗ್ ಟ್ಸೋ ಪ್ರದೇಶದಲ್ಲಿ ಯುದ್ಧದ ವಾತಾವರಣ

ಲಡಾಖ್‌ನಲ್ಲಿ ಚೀನಾ ಸೈನ್ಯದ ಆಕ್ರಮಣ ನಡೆಯುತ್ತಿರುವಾಗಲೂ, ಭಾರತದ ರಾಷ್ಟ್ರೀಯ ಭದ್ರತಾ ಯೋಜಕರು ಲಡಾಖ್ ಸೇರಿದಂತೆ ಚೀನಾತೆಗೆ ಭಾರತ ಹಂಚಿಕೊಂಡಿರುವ 3,488 ಕಿ.ಮೀ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಎಲ್ಲಿಯೂ ಯಾವುದೇ ಪ್ರಾದೇಶಿಕ ರಾಜಿ ಮಾಡಿಕೊಳ್ಳಬಾರದು ಎಂಬ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • News18
  • Last Updated :
  • Share this:
ಲಡಾಖ್‌ (ಸೆಪ್ಟೆಂಬರ್‌ 01); ಚೀನಾ ಮತ್ತು ಭಾರತದ ನಡುವಿನ ಗಡಿ ವಿವಾದ ಮತ್ತು ಸಂಘರ್ಷ ಮತ್ತೊಮ್ಮೆ ಕಾವು ಪಡೆದುಕೊಳ್ಳುತ್ತಿದೆ. ಎರಡೂ ದೇಶಗಳ ಗಡಿ ಪ್ರದೇಶದಲ್ಲಿ ಶಾಂತಿಯನ್ನು ಕಾಪಾಡಬೇಕು ಎಂಬ ಏಕೈಕ ಕಾರಣದಿಂದಾಗಿ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಸೈನ್ಯವನ್ನು ಗಡಿಯಿಂದ ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು. ಆದರೆ, ಹೀಗೆ ಹಿಂದಕ್ಕೆ ಸರಿದಿದ್ದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಆಗಸ್ಟ್ 29-30ರಂದು ರಾತ್ರಿ ಮತ್ತೆ ಪಾಂಗೋಂಗ್ ಟ್ಸೋ ಸರೋವರದ ದಕ್ಷಿಣ ಭಾಗದಲ್ಲಿರುವ ಎತ್ತರಪ್ರದೇಶದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಬೀಡು ಬಿಟ್ಟಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ "ಇಲ್ಲಿನ ಚುಶುಲ್ ಪ್ರದೇಶದಲ್ಲಿ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದ್ದು, ಚೀನಾ ಸೇನೆ ಸಂಪೂರ್ಣವಾಗಿ ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ಭಾರತದ ಸೈನ್ಯ ಪ್ರತ್ಯುತ್ತರ ನೀಡುವಂತೆ ನೋಡಿಕೊಳ್ಳಲು ಭಾರೀ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುತ್ತಾ ಪ್ರಚೋದಿಸುತ್ತಿದೆ. ಹೀಗಾಗಿ ಭಾರತ ಸೈನ್ಯವೂ ಸಹ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಸನ್ನದ್ಧವಾಗಿದ್ದು, ವಿಶೇಷ ರಕ್ಷಣಾ ಪಡೆಗಳು ಪಾಂಗೋಗ್ ತ್ಸೋ ಮತ್ತು ರೇಜಾಂಗ್ ಪ್ರದೇಶಗಳತ್ತ ತೆರಳುತ್ತಿವೆ" ಎಂದು ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಲಡಾಖ್‌ನ 1,597 ಕಿ.ಮೀ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಚೀನಾದ ಯಾವುದೇ ಆಕ್ರಮಣವನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆ ತಯಾರಾಗಿದೆ ಎನ್ನಲಾಗಿದೆ.

"ಭಾರತ ಸೈನ್ಯ ಚೀನಾ ವಿರುದ್ಧ ಯಾವುದೇ ಸಂದರ್ಭದಲ್ಲಿ ಪ್ರತಿದಾಳಿ ನಡೆಸಲು ವಾಸ್ತವಿಕ ನಿಯಂತ್ರಣ ರೇಖೆಯಯಲ್ಲಿ ಸನ್ನದ್ಧವಾಗಿದ್ದು, ಪ್ರಾಬಲ್ಯ ಸಾಧಿಸುತ್ತಿದೆ ಮತ್ತು ಚೀನಾದ ನಡೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಖಚಿತಪಡಿಸಿದೆ. ಹೀಗಾಗಿ ಚೀನದ ಸೇನೆ ಎತ್ತರದ ಪ್ರದೇಶದಿಂದ ದಾಳಿ ನಡೆಸುವ ಉಮೇದಿನೊಂದಿಗೆ ಪಾಂಗೋಗ್ ಟ್ಸೋ ಪ್ರದೇಶದಲ್ಲಿ ಬೀಡುಬಿಟ್ಟಿದೆ. ಈ ಮೂಲಕ ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸಲು ಹೊರಟಿದೆ ಹೀಗಾಗಿ ಗಡಿಯಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ" ಎಂದು ಮತ್ತೋರ್ವ ಮಿಲಿಟರಿ ಕಮಾಂಡರ್ ಮಾಹಿತಿ ನೀಡಿದ್ದಾರೆ.

ಶೀಘ್ರದಲ್ಲೇ ಮಾಸ್ಕೋದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ಯಿ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಈ ಮಾತುಕತೆ ನಡೆದರೆ ಎರಡೂ ದೇಶಗಳ ಗಡಿಯಲ್ಲಿ ಶಾಂತಿ ಮರುಸ್ಥಾಪನೆಗೊಳ್ಳುವ ಭರವಸೆ ಇದೆ ಎನ್ನಲಾಗುತ್ತಿದೆ. ಆದರೆ, ಚೀನಾ ಸೈನ್ಯದ ಆಕ್ರಮಣಕಾರಿ ನಡೆಯು ಈ ರಾಜತಾಂತ್ರಿಕ ಉಪಕ್ರಮವನ್ನು ತಡೆಯುವ ಎಲ್ಲಾ ಸಾಧ್ಯತೆಗಳನ್ನು ಮುಂದಿಟ್ಟಿದೆ.

ಲಡಾಖ್‌ನಲ್ಲಿ ಚೀನಾ ಸೈನ್ಯದ ಆಕ್ರಮಣ ನಡೆಯುತ್ತಿರುವಾಗಲೂ, ಭಾರತದ ರಾಷ್ಟ್ರೀಯ ಭದ್ರತಾ ಯೋಜಕರು ಲಡಾಖ್ ಸೇರಿದಂತೆ ಚೀನಾತೆಗೆ ಭಾರತ ಹಂಚಿಕೊಂಡಿರುವ 3,488 ಕಿ.ಮೀ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಎಲ್ಲಿಯೂ ಯಾವುದೇ ಪ್ರಾದೇಶಿಕ ರಾಜಿ ಮಾಡಿಕೊಳ್ಳಬಾರದು ಎಂಬ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : Pranab Mukherjee Funeral - ಪ್ರಣಬ್ ಮುಖರ್ಜಿ ಅಂತ್ಯಸಂಸ್ಕಾರ ನೆರವೇರಿಸಿದ ಮಗ ಅಭಿಜಿತ್

ಲಡಾಖ್​ನಲ್ಲಿರುವ ಭಾರತ ಮತ್ತು ಚೀನಾದ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಚೀನೀ ಸೈನಿಕರು ಕೆಲ ತಿಂಗಳ ಹಿಂದೆ ಅತಿಕ್ರಮಣ ಮಾಡಿದ್ದರು. ಪ್ಯಾಂಗೋಂಗ್ ಸರೋವರದ ಐದಾರು ಬೆಟ್ಟಗಳ ಶ್ರೇಣಿಗಳಿಗೆ ಅಕ್ರಮವಾಗಿ ಪ್ರವೇಶ ಮಾಡಿ ವಶದಲ್ಲಿಟ್ಟುಕೊಂಡಿದ್ದರು. ಭಾರತೀಯ ಸೈನಿಕರು ಪ್ರತಿರೋಧ ಒಡ್ಡಿದ ಪರಿಣಾಮ ಗಾಲ್ವನ್ ಕಣಿವೆಯಲ್ಲಿ ಪಿಎಲ್​ಎ ಸೈನಿಕರು ಅಮಾನಷವಾಗಿ ಹಲ್ಲೆ ಎಸಗಿದ್ದರು. ಈ ಘಟನೆಯಲ್ಲಿ ಎರಡೂ ಕಡೆಯ ಸೈನಿಕರಿಗೆ ಹಾನಿಯಾಗಿದೆ.

20 ಭಾರತೀಯ ಸೈನಿಕರು ಮೃತಪಟ್ಟಿದ್ದರು. ಆ ಬಳಿಕ ಎರಡೂ ಕಡೆಯ ಸೇನಾ ಪಡೆಗಳು ವಿವಿಧ ಹಂತಗಳಲ್ಲಿ ಮಾತುಕತೆ ನಡೆಸಿ ಗಡಿಯಲ್ಲಿ ಯಥಾಸ್ಥಿತಿ ಪಾಲಿಸುವ ನಿರ್ಧಾರಕ್ಕೆ ಬರಲಾಯಿತು. ಗಾಲ್ವನ್ ಕಣಿವೆಯಲ್ಲಿನ ಎಲ್ಲಾ ವಿವಾದಿತ ಸ್ಥಳಗಳಿಂದ ವಾಪಸ್ ಹೋಗುವುದೆಂಬ ಒಪ್ಪಂದಕ್ಕೆ ಬರಲಾಯಿತು. ಆದರೆ, ಸರೋವರ ಬೆಟ್ಟ ಶ್ರೇಣಿಯ 4 ಮತ್ತು 8ನೇ ಫಿಂಗರ್ ಪ್ರದೇಶಗಳಿಂದ ಚೀನೀ ಸೈನಿಕರು ಕಾಲ್ತೆಗೆಯಲು ಮೀನಮೇಷ ಎಣಿಸುತ್ತಿದ್ದಾರೆ. ಭಾರತ ನಿರಂತರವಾಗಿ ಒತ್ತಡ ಹಾಕುತ್ತಲೇ ಇದೆ.
Published by:MAshok Kumar
First published: