• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • India-China Border Clash: ಭಾರತೀಯ ಸೈನಿಕರ ಹೊಡೆತಕ್ಕೆ ಓಡಿ ಹೋದ್ರಾ ಚೀನಾ ಸೈನಿಕರು? ವೈರಲ್ ವಿಡಿಯೋ ಹಿಂದಿನ ರಹಸ್ಯ ಇಲ್ಲಿದೆ!

India-China Border Clash: ಭಾರತೀಯ ಸೈನಿಕರ ಹೊಡೆತಕ್ಕೆ ಓಡಿ ಹೋದ್ರಾ ಚೀನಾ ಸೈನಿಕರು? ವೈರಲ್ ವಿಡಿಯೋ ಹಿಂದಿನ ರಹಸ್ಯ ಇಲ್ಲಿದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚೀನಾದ ಸೈನಿಕರನ್ನು ಭಾರತೀಯ ಸೈನಿಕರು ಲಾಠಿಯಿಂದ ಹೊಡೆಯುವುದು. ಮುಷ್ಟಿಯನ್ನು ಬಳಸಿ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸೋದನ್ನು ವಿಡಿಯೋದಲ್ಲಿ ಕಾಣಬಹುದು.

  • News18 Kannada
  • 3-MIN READ
  • Last Updated :
  • Delhi, India
  • Share this:

ಭಾರತ-ಚೀನಾ (India-China) ನಡುವಿನ ಗಡಿಯಲ್ಲಿ ಕಳೆದ 30 ತಿಂಗಳಿನಿಂದ ಬಿಕ್ಕಟ್ಟು ಏರ್ಪಟ್ಟಿದ್ದು, ಸದ್ಯ ಮತ್ತೊಮ್ಮೆ ಎಲ್​​ಎಸಿ ( Line of Actual Control ) ಗಡಿ ಬಳಿ ಎರಡು ದೇಶಗಳ ಸೈನಿಕರ ನಡುವೆ ಸಂಘರ್ಷ ನಡೆದಿದೆ. ಅರುಣಾಚಲ ಪ್ರದೇಶದ (Arunachal Pradesh) ತವಾಂಗ್ ಗಡಿಯಲ್ಲಿ (Tawang Sector) ಚೀನಾದ ಸುಮಾರು 300 ಯೋಧರು ಗಡಿ ದಾಟಲು ಯತ್ನಿಸಿ, ಭಾರತೀಯ ಸೈನಿಕರನ್ನು ಕೆಣಕಿದ್ದಾರೆ. ಈ ನಡುವೆ ಭಾರತೀಯ ಸೈನಿಕರು (Indian Army) ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಿದ್ದು, ಸಂಘರ್ಷದಲ್ಲಿ ಭಾರತದ 6 ಯೋಧರು ಗಾಯಗೊಂಡಿದ್ದಾರೆ. ಈ ನಡುವೆ ಭಾರತ ಸೈನಿಕರು, ಚೀನಾ ಸೈನಿಕರೊಂದಿಗೆ ಸಂಘರ್ಷಕ್ಕೆ ಇಳಿದಿರೋ ವಿಡಿಯೋವೊಂದು (Viral Video)  ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗುತ್ತಿದೆ. ಆದರೆ ವೈರಲ್​ ಆಗುತ್ತಿರೋ ವಿಡಿಯೋ ಈ ವರ್ಷದಲ್ಲ, ಬದಲಾಗಿ ಕಳೆದ ವರ್ಷದ್ದು ಎನ್ನಲಾಗಿದೆ.


ಕೇಂದ್ರ ಸರ್ಕಾರದ ಸ್ಪಷ್ಟನೆ ಬೆನ್ನಲ್ಲೇ ವಿಡಿಯೋ ವೈರಲ್


ಭಾರತ ಹಾಗೂ ಚೀನಾ ಸೈನಿಕರ ನಡುವಿನ ಸಂಘರ್ಷ ಕುರಿತಂತೆ ಕೇಂದ್ರ ಸರ್ಕಾರ ಸದನದಲ್ಲಿ ಸ್ಪಷ್ಟನೆ ನೀಡಿದ ಒಂದು ದಿನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗುತ್ತಿದೆ. ವಿಡಿಯೋದಲ್ಲಿ ಅರುಣಾಚಲ ಪ್ರದೇಶದ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​​ಎಸಿ) ಬಳಿ ಭಾರತ-ಚೀನಾ ಸೈನಿಕರು ಪರಸ್ಪರ ಎದುರಾಗಿದ್ದು, ಭಾರತೀಯ ಸೈನಿಕರು ಲಾಠಿಗಳ ಮೂಲಕ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸುತ್ತಿರೋದನ್ನು ಕಾಣಬಹುದಾಗಿದೆ.


ಅಲ್ಲದೇ, ವಿಡಿಯೋದಲ್ಲಿ ಸೆರೆಯಾಗಿರೋ ಆಡಿಯೋದಲ್ಲಿ ಭಾರತ ಸೈನಿಕ ಪಂಜಾಬಿ ಭಾಷೆಯಲ್ಲಿ ಮಾತನಾಡಿದ್ದು, "ಅವರನ್ನು ಜೋರಾಗಿ ಹೊಡಿರಿ, ಮತ್ತೆ ಅವರು ವಾಪಸ್ ಬರೋದಿಲ್ಲ" ಎಂದು ಹೇಳಿದ್ದಾರೆ. ಮತ್ತೋರ್ವ ಸೈನಿಕ ಹಿಂದಿಯಲ್ಲಿ, "ಅವರ ತಲೆ ಮೇಲೆ ಹೊಡೆಯಿರಿ, ಮಾರೋ ಮಾರೋ.. ಅವರು ವಾಪಸ್ ಬರಬಾರದು. ಅವರನ್ನು ಓಡಿಸಿ" ಎಂದು ಹೇಳಿದ್ದಾರೆ.


ಇದನ್ನೂ ಓದಿ: Tamil Nadu: ರೈತನ ಮನವಿಗೆ ಸ್ಪಂದಿಸದ ಕಂದಾಯ ಇಲಾಖೆ, ಹೆಲಿಕಾಪ್ಟರ್ ಸೇವೆ ನೀಡುವಂತೆ ಜಿಲ್ಲಾಧಿಕಾರಿಗೆ ಮೊರೆ!


india-china border clash
ಭಾರತ ಚೀನಾ ಗಡಿ ಬಿಕ್ಕಟ್ಟು


ಎದ್ನೋ ಬಿದ್ನೋ ಅಂತ ವಾಪಸ್ ಓಡಿದ ಚೀನಾ ಸೈನಿಕರು


ಚೀನಾದ ಸೈನಿಕರನ್ನು ಭಾರತೀಯ ಸೈನಿಕರು ಲಾಠಿ, ದೊಣ್ಣೆಯಿಂದ ಹೊಡೆಯುವುದು, ಮುಷ್ಟಿಯನ್ನು ಬಳಸಿ ಹೊಡೆತ ನೀಡಿ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸುವುದನ್ನು ಕಾಣಬಹುದು. ಭಾರತೀಯ ಸೈನಿಕರ ಹೊಡೆತಗಳನ್ನು ತಡಿಯಲಾಗದೆ ಚೀನಾ ಸೈನಿಕರು ಎದ್ನೋ ಬಿದ್ನೋ ಎಂದು ಅಲ್ಲಿಂದ ಕಾಲ್ಕಿತ್ತಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.


ಆದರೆ, ಸದ್ಯ ವೈರಲ್ ಆಗುತ್ತಿರೋ ವಿಡಿಯೋ ಡಿಸೆಂಬರ್ 09 ರಂದು ನಡೆದಿರುವ ಸಂಘರ್ಷದ ವಿಡಿಯೋ ಅಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಲಡಾಖ್​​ನ ಗಲ್ವಾನ್​​ನಲ್ಲಿ ನಡೆದ ಸಂಘರ್ಷದ ಬಳಿಕ ಬಹುಶಃ ಈ ದಾಳಿ ನಡೆದಿರಬಹುದು ಎಂದು ತಿಳಿಸಿದೆ.


ಇದನ್ನೂ ಓದಿ: Madhya Pradesh: ರ‍್ಯಾಗಿಂಗ್ ಮಾಡೋರನ್ನು ಪತ್ತೆ ಹಚ್ಚಲು ವಿದ್ಯಾರ್ಥಿನಿಯಾದ ಪೊಲೀಸ್!


ಡಿ.09 ರಂದು ನಡೆದಿದ್ದ ಸಂಘರ್ಷದಲ್ಲಿ 6 ಯೋಧರಿಗೆ ಗಾಯ


ಇನ್ನು, ಡಿಸೆಂಬರ್ 09 ರಂದು ನಡೆದಿರುವ ಸಂಘರ್ಷದಲ್ಲಿ ಭಾರತದ 6 ಯೋಧರು ಗಾಯಗೊಂಡಿದ್ದು, ಚೀನಾದ ಎಷ್ಟು ಸೈನಿಕರು ಗಾಯಗೊಂಡಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಚೀನಾದಲ್ಲಿ ಕೊರೋನಾ ಲಾಕ್​​ಡೌನ್​​ನಿಂದ ಜನರು ಅಲ್ಲಿನ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.


ಚೀನಾ ಜನರ ಗಮನವನ್ನು ಬೇರೆಡೆ ಸೆಳೆಯುವ ಕಾರಣಕ್ಕಾಗಿ ಸರ್ಕಾರ ಇಂತಹ ಕಾರ್ಯಕ್ಕೆ ಮುಂದಾಗಿರಬಹುದು. ಚೀನಾದಲ್ಲಿ ಜನಾಕ್ರೋಶ ಹೆಚ್ಚಾಗಿದ್ದು, ಪ್ರತಿ ಬಾರಿ ಇಂತಹ ಬೆಳವಣಿಗೆಗಳು ನಡೆದಂತಹ ಸಂದರ್ಭದಲ್ಲಿ ಇಂತಹ ಕೃತ್ಯಗಳನ್ನು ಚೀನಾ ಸರ್ಕಾರ ಸೈನಿಕರ ಮೂಲಕ ಮಾಡುತ್ತದೆ ಎಂದು ಭಾರತದ ಮಾಜಿ ಸೇನಾ ಅಧಿಕಾರಿಗಳು ಅಭಿಪ್ರಾಯಟ್ಟಿದ್ದಾರೆ.



ಗಲ್ವಾನ್​ ಘರ್ಷಣೆಯ ಬಳಿಕ ಗಡಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ


ಚೀನಾದ ಸಾಕಷ್ಟು ಸೈನಿಕರು ಸಂಘರ್ಷದಲ್ಲಿ ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನೆ ಹೇಳುತ್ತಿದೆ. 1975ರ ಬಳಿಕ 2020ರಲ್ಲಿ ಲಡಾಖ್​​ನ ಗಲ್ವಾನ್​​​ನಲ್ಲಿ ಎರಡು ದೇಶಗಳ ನಡುವಿನ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈ ವೇಳೆ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು.


ಬಳಿಕ ಲಡಾಖ್​​ನ ಪ್ಯಾಗ್ಯಾಂಗ್​ ಪ್ರದೇಶದಲ್ಲಿ ಚೀನಾ ಸೈನಿಕರ ಗಸ್ತು ಹೆಚ್ಚಾಗಿತ್ತು. ಈ ಪ್ಯಾಗ್ಯಾಂಗ್ ಪ್ರದೇಶ 134 ಕಿಮೀ ಉದ್ದ ಇದ್ದು, ಹಿಮಾಲಯದ 14 ಸಾವಿರ ಅಡಿ ಎತ್ತರದಲ್ಲಿದೆ. ಈ ಸರೋವರದ 45 ಕಿಮೀ ಭಾರತ ನಿಯಂತ್ರಣದಲ್ಲಿದ್ದರೇ, 90 ಕಿಮೀ ಚೀನಾ ನಿಯಂತ್ರಣದಲ್ಲಿದೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು