ಭಾರತದ ಮಾತಿಗೆ ಧ್ವನಿಗೂಡಿಸಿದ ರಷ್ಯಾ ಮತ್ತು ಚೀನಾ

ಯಾವುದೇ ರೀತಿಯ ಭಯೋತ್ಪಾದನೆಯೂ ಸಲ್ಲದು. ಯಾರೂ ಕೂಡ ಇದಕ್ಕೆ ಆಸ್ಪದ ಕೊಡಬೇಡಿ ಎಂದು ವಿಶ್ವದ ರಾಷ್ಟ್ರಗಳಿಗೆ ಭಾರತ, ಚೀನಾ ಮತ್ತು ರಷ್ಯಾ ದೇಶಗಳು ಜಂಟಿ ಹೇಳಿಕೆ ಮೂಲಕ ಕರೆ ನೀಡಿವೆ.

Vijayasarthy SN | news18
Updated:February 27, 2019, 3:58 PM IST
ಭಾರತದ ಮಾತಿಗೆ ಧ್ವನಿಗೂಡಿಸಿದ ರಷ್ಯಾ ಮತ್ತು ಚೀನಾ
ರಷ್ಯಾ, ಚೀನಾ ಮತ್ತು ಭಾರತದ ವಿದೇಶಾಂಗ ಸಚಿವರು
Vijayasarthy SN | news18
Updated: February 27, 2019, 3:58 PM IST
ನವದೆಹಲಿ(ಫೆ. 27): ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗುತ್ತಿರುವಂತೆಯೇ ವಿಶ್ವದ ಅನೇಕ ದೇಶಗಳು ಶಾಂತಿ ಪಾಲನೆಗೆ ಕರೆ ಕೊಟ್ಟಿವೆ. ರಷ್ಯಾ ಮತ್ತು ಚೀನಾ ದೇಶಗಳು ಭಯೋತ್ಪಾದಕ ಕೃತ್ಯಗಳನ್ನು ಖಂಡಿಸುವ ಮೂಲಕ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿವೆ. ಭಾರತ, ರಷ್ಯಾ ಮತ್ತು ಚೀನಾ ದೇಶಗಳು ಎಲ್ಲಾ ರೀತಿಯ ಭಯೋತ್ಪಾದನೆ ಕೃತ್ಯಗಳನ್ನು ಖಂಡಿಸಿ ಜಂಟಿ ಹೇಳಿಕೆ ನೀಡಿವೆ. ಈ ಮೂರು ದೇಶಗಳ ವಿದೇಶಾಂಗ ಸಚಿವರ 16ನೇ ಸಭೆಯ ನಂತರ ಈ ಜಂಟಿ ಹೇಳಿಕೆ ನೀಡಲಾಗಿದೆ.

ಇದನ್ನೂ ಓದಿ: ಪುಲ್ವಾಮಾ ದಾಳಿಯಿಂದ ಇಲ್ಲಿಯವರೆಗೆ ಏನೆಲ್ಲ ಆಯ್ತು? ಇಲ್ಲಿದೆ ಟೈಮ್​ಲೈನ್

ಭಾರತ, ಚೀನಾ ಮತ್ತು ರಷ್ಯಾದ ವಿದೇಶಾಂಗ ಸಚಿವರಾದ ಸುಷ್ಮಾ ಸ್ವರಾಜ್, ಯಾಂಗ್ ಯೀ ಮತ್ತು ಸೆರ್ಗೇಯ್ ಲಾವ್ರೋವ್ ಅವರು ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳನ್ನು ಜಾರಿಗೊಳಿಸುವಂತೆ ಜಾಗತಿಕ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. ಯಾವುದೇ ರೀತಿಯ ಭಯೋತ್ಪಾದನೆಯೂ ಅಪಾಯಕಾರಿಯಾಗಿರುತ್ತದೆ. ಯಾವ ದೇಶ ಕೂಡ ಇದಕ್ಕೆ ಆಸ್ಪದ ಕೊಡಬಾರದು ಎಂದು ಜಂಟಿ ಹೇಳಿಕೆಯಲ್ಲಿ ಮನವಿ ಮಾಡಲಾಗಿದೆ. ಹಾಗೆಯೇ, ಭಯೋತ್ಪಾದನೆಗೆ ಗಡಿ ವಿವಾದವನ್ನು ನೆಪವನ್ನಾಗಿಸಿಕೊಳ್ಳುವ ಕ್ರಮವನ್ನೂ ಈ ಹೇಳಿಕೆಯಲ್ಲಿ ಖಂಡಿಸಲಾಗಿದೆ.
ಇದೇ ವೇಳೆ, ಭಾರತ ಹಾಗೂ ಪಾಕಿಸ್ತಾನ ದೇಶಗಳು ಪರಸ್ಪರ ದಾಳಿ ಮಾಡುವ ಬದಲು ಸ್ವಲ್ಪ ಸಂಯಮ ಚಿತ್ತ ತೋರಲಿ ಎಂದು ಚೀನಾ, ಅಮೆರಿಕ ಮೊದಲಾದ ದೇಶಗಳು ಕರೆ ನೀಡಿವೆ.
First published:February 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...