HR RameshHR Ramesh
|
news18-kannada Updated:January 3, 2020, 6:54 PM IST
ಹತ್ಯೆಗೀಡಾ ಜನರಲ್ ಖಾಸಿಮ್ ಸುಲೈಮಾನಿ. (ಸಂಗ್ರಹ ಚಿತ್ರ)
ನವದೆಹಲಿ: ಇರಾನಿನ ಕ್ವಾಡ್ಸ್ ಫೋರ್ಸ್ ಮುಖ್ಯಸ್ಥ ಜನರಲ್ ಖಾಸಿಮ್ ಸೊಲೈಮಾನಿಯನ್ನು ಅಮೆರಿಕ ವಾಯುಪಡೆ ಹತ್ಯೆಗೈದ ಬಳಿಕ ಎರಡು ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಭಾರತ ವಿದೇಶಾಂಗ ಇಲಾಖೆ, ಎರಡು ರಾಷ್ಟ್ರಗಳು ಶಾಂತಿ, ಸ್ಥಿರತೆ ಮತ್ತು ಭದ್ರತೆ ಕಾಯ್ದುಕೊಳ್ಳುವಂತೆ ಕರೆ ನೀಡಿದೆ.
ಇರಾನಿನ ಉನ್ನತ ಸೇನಾಧಿಕಾರಿ ಹತ್ಯೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ವಿದೇಶಾಂಗ ಇಲಾಖೆ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದು ಇಡೀ ಜಗತ್ತಿಗೆ ಎಚ್ಚರಿಕೆಯ ಗಂಟೆಯಾಗಿದೆ. ಈ ಭಾಗದಲ್ಲಿನ ಶಾಂತಿ, ಸ್ಥಿರತೆ ಮತ್ತು ಭದ್ರತೆ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದೆ. ಅಲ್ಲದೇ, ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ ನೋಡಿಕೊಳ್ಳಬೇಕು ಎಂದು ವಿದೇಶಾಂಗ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ. "ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಿರುವುದು ಅತ್ಯಗತ್ಯ. ಭಾರತ ನಿರಂತರವಾಗಿ ಸಂಯಮವನ್ನು ಪ್ರತಿಪಾದಿಸುತ್ತದೆ ಮತ್ತು ಅದನ್ನು ಮುಂದುವರಿಸುತ್ತದೆ ಎಂದು ಹೇಳಿದೆ.
ಇರಾನ್ನ ಸರ್ವೋಚ್ಚ ನಾಯಕ ಅಯಾತೊಲ್ಹಾ ಅಲಿ ಖಾಮೆನಿ ಶುಕ್ರವಾರ ಹತ್ಯೆಗೀಡಾದ ಸೊಲೈಮಾನಿ ಸ್ಥಾನಕ್ಕೆ ಇಸ್ಮೈಲ್ ಖಾನಿ ಅವರನ್ನು ನೇಮಿಸಿದ್ದಾರೆ. ಘಟನೆ ಬಳಿಕ ತೆಹ್ರಾನ್ನಲ್ಲಿ ಸಾವಿರಾರು ಜನರು ರಸ್ತೆಗಿಳಿದು ಅಮೆರಿಕದ ಕೃತ್ಯವನ್ನು ಖಂಡಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಿಳೆಯರು, ಪುರುಷರು ಹಾಗೂ ಯುವಕರು ಇರಾನ್ ಸರ್ವೋಚ್ಚ ನಾಯಕ ಅಯಾತೊಲ್ಹಾ ಅಲಿ ಖಮೆನಿಯಾ ಭಿತ್ತಿಚಿತ್ರ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಇದನ್ನು ಓದಿ: ಕೂಡಲೇ ಇರಾಕ್ನಿಂದ ಜಾಗ ಖಾಲಿ ಮಾಡುವಂತೆ ತನ್ನ ಪ್ರಜೆಗಳಿಗೆ ಕಟ್ಟಪ್ಪಣೆ ಹೊರಡಿಸಿದ ಅಮೆರಿಕ ರಾಯಭಾರ ಕಚೇರಿ
Published by:
HR Ramesh
First published:
January 3, 2020, 6:54 PM IST