ದನದ ಮಾಂಸ ರಫ್ತಿನಲ್ಲಿ ಭಾರತಕ್ಕೆ ಎರಡನೇ ಸ್ಥಾನ!

ವಿಶ್ವದ ನಾನಾ ರಾಷ್ಟ್ರಗಳು ಗೋ ಮಾಂಸವನ್ನು ರಫ್ತು ಮಾಡುತ್ತವೆ. ಇದರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. 2017-19ರ ಅವಧಿಯಲ್ಲಿ ಗೋಮಾಂಸ ರಫ್ತಿನಲ್ಲಿ ಬ್ರೆಜಿಲ್​ ಮೊದಲ ಸ್ಥಾನ ಪಡೆದುಕೊಂಡರೆ, ಭಾರತಕ್ಕೆ ಎರಡನೇ ಸ್ಥಾನದಲ್ಲಿದೆ.

news18-kannada
Updated:December 30, 2019, 8:28 AM IST
ದನದ ಮಾಂಸ ರಫ್ತಿನಲ್ಲಿ ಭಾರತಕ್ಕೆ ಎರಡನೇ ಸ್ಥಾನ!
ಗೋವಿನ ಚಿತ್ರ
  • Share this:
ನವದೆಹಲಿ (ಡಿ.30): ದೇಶದಲ್ಲಿ ಗೋವುಗಳ ರಕ್ಷಣೆಗೆ ಗೋ ಹತ್ಯೆ ನಿಷೇಧ ಕಾಯ್ದೆ ತರಬೇಕು. ಕಸಾಯಿ ಖಾನೆಗಳನ್ನು ಮುಚ್ಚಿಸಬೇಕು ಎನ್ನುವ ಕೂಗು ಹಿಂದು ಸಂಘಟನೆಗಳಿಂದ ಕೇಳಿ ಬರುತ್ತಲೇ ಇದೆ. ದೇಶದ ಕೆಲ ರಾಜ್ಯಗಳಲ್ಲಿ ಮಾತ್ರ ಗೋ ಹತ್ಯೆ ನಿಷೇಧ ಮಾಡಲಾಗಿದೆ. ಈ ಮಧ್ಯೆ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ದನದ ಮಾಂಸ ರಫ್ತಿನಲ್ಲಿ ಭಾರತಕ್ಕೆ ಎರಡನೇ ಸ್ಥಾನ ದೊರೆತಿದೆ.

ವಿಶ್ವದ ನಾನಾ ರಾಷ್ಟ್ರಗಳು ಗೋ ಮಾಂಸವನ್ನು ರಫ್ತು ಮಾಡುತ್ತವೆ. ಇದರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. 2017-19ರ ಅವಧಿಯಲ್ಲಿ ಗೋಮಾಂಸ ರಫ್ತಿನಲ್ಲಿ ಬ್ರೆಜಿಲ್​ ಮೊದಲ ಸ್ಥಾನ ಪಡೆದುಕೊಂಡರೆ, ಭಾರತಕ್ಕೆ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಇದೆ.

2017ರಲ್ಲಿ18 ಲಕ್ಷ ಮೆಟ್ರಿಕ್​ ಟನ್, 2018ರಲ್ಲಿ 19 ಮೆಟ್ರಿಕ್​ ಲಕ್ಷ ಟನ್​​ ಗೋಮಾಂಸವನ್ನುಭಾರತ ರಫ್ತು ಮಾಡಿದೆ. 2019ರಲ್ಲಿ ಇದು 16 ಲಕ್ಷ ಮೆಟ್ರಿಕ್​ ಟನ್​ಗೆ ಇಳಿಕೆ ಆಗಿದೆ. ಬ್ರೆಜಿಲ್​ 2017ರಲ್ಲಿ 19 ಮೆಟ್ರಿಕ್​ ಟನ್​ ದನದ ಮಾಂಸ ರಫ್ತು ಮಾಡಿದ್ದರೆ, 2019ರಲ್ಲಿ ಈ ಪ್ರಮಾಣ 22 ಲಕ್ಷ ಮೆಟ್ರಿಕ್ ಟನ್​ಗೆ ಏರಿಕೆ ಆಗಿದೆ. ಅಮೆರಿಕದ ಕೃಷಿ ಇಲಾಖೆ ಈ ವರದಿಯನ್ನು ಬಿಡುಗಡೆ ಮಾಡಿದೆ.

First published:December 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading