• Home
 • »
 • News
 • »
 • national-international
 • »
 • Single-Use Plastic: ದೇಶದಾದ್ಯಂತ ಪ್ಲಾಸ್ಟಿಕ್ ಬಳಕೆ ಬ್ಯಾನ್ , ಏನಿದು ಹೊಸ ವಿಷ್ಯ?

Single-Use Plastic: ದೇಶದಾದ್ಯಂತ ಪ್ಲಾಸ್ಟಿಕ್ ಬಳಕೆ ಬ್ಯಾನ್ , ಏನಿದು ಹೊಸ ವಿಷ್ಯ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕಡಿಮೆ ಉಪಯುಕ್ತತೆ ಮತ್ತು ಹೆಚ್ಚಿನ ಕಸದ ಸಾಮಥ್ರ್ಯವನ್ನು ಹೊಂದಿದೆ ಎಂದು ಗುರುತಿಸಲ್ಪಡುವ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಸಂಗ್ರಹಣೆ, ವಿತರಣೆ , ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಿದೆ.

 • Share this:

ಪ್ಲಾಸ್ಟಿಕ್ (Plastic) ಪರಿಸರಕ್ಕೆ ಎಷ್ಟು ಹಾನಿಕಾರಕ ಎಂಬುವುದು ಶಾಲಾ ಮಕ್ಕಳಿಗೂ (School Children) ಸಹ ತಿಳಿದಿರುವ ಸಂಗತಿ. ಅಂತದ್ದರಲ್ಲಿ, ತಿಳಿದೂ ತಿಳಿದೂ ತಪ್ಪು ಮಾಡುವವರಂತೆ, ನಾವು ಕೂಡ ದಿನನಿತ್ಯದ ಪ್ರತಿಯೊಂದು ಕೆಲಸಕ್ಕೂ ಪ್ಲಾಸ್ಟಿಕನ್ನು ಉಪಯೋಗಿಸುವ ಮೂಲಕ ಪರಿಸರ ಮಾಲಿನ್ಯಕ್ಕೆ ನಮ್ಮ ಕೆಟ್ಟ ಯೋಗದಾನವನ್ನು ನೀಡುತ್ತಲೇ ಇದ್ದೇವೆ. ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಎಂಬ ಪರಿಸರವಾದಿಗಳ ಕೂಗನ್ನು, ಸರಕಾರ (Government) ರೂಪಿಸಿದ ನಿಯಮಗಳನ್ನು ನಿರ್ಲಕ್ಷಿಸುವುದರಲ್ಲಿ ಜನರದ್ದು ಎತ್ತಿದ ಕೈ. ಇದೀಗ ಕೇಂದ್ರ ಸರಕಾರವು ಜನರ ಈ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕ ಹೊರಟಿದೆ. ಹೌದು, ಪರಿಸರಕ್ಕೆ ಹಾನಿಕಾರಕವಾಗಿರುವ ಏಕ -ಬಳಕೆಯ ಪ್ಲಾಸ್ಟಿಕ್‍ನಿಂದ (single-use plastic) ಭಾರತವನ್ನು (India) ಮುಕ್ತಗೊಳಿಸಲು ಸರಕಾರವು ಹೊಸ ಕಠಿಣ ಕ್ರಮಗಳನ್ನು ಜಾರಿಗೆ ತರಲಿದೆ.


ಏಕೆ  ಪ್ಲಾಸ್ಟಿಕ್ ನಿಷೇಧ ಮಾಡಬೇಕು?
ಪ್ಲಾಸ್ಟಿಕ್​ ಉಪಯುಕ್ತತೆ ಮತ್ತು ಹೆಚ್ಚಿನ ಕಸದ ಸಾಮಥ್ರ್ಯವನ್ನು ಹೊಂದಿದೆ ಎಂದು ಗುರುತಿಸಲ್ಪಡುವ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಿದೆ. ಇಂತಹ ಏಕ - ಬಳಕೆಯ ಪ್ಲಾಸ್ಟಿಕನ್ನು ಯಾರೂ ಆಮದು ಮಾಡಿಕೊಳ್ಳುವಂತೆಯೂ ಇಲ್ಲ.


ಪ್ಲಾಸ್ಟಿಕ್‍ಗಳಿಂದ ಉಂಟಾಗುವ ಮಾಲಿನ್ಯ ಕಡಿಮೆ ಮಾಡಲು ಈ ಕ್ರಮ
ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು , 2022 ರ ಅವಧಿಯ ಒಳಗೆ ಏಕ- ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಹಂತ ಹಂತವಾಗಿ ಬಳಕೆಯಿಂದ ಹೊರ ಹಾಕುವಂತೆ ಕರೆ ನೀಡಿದ್ದಾರೆ. ಅದಕ್ಕೆ ಅನುಗುಣವಾಗಿ, ಭಾರತ ಸರಕಾರವು ಕಸದ ಏಕ ಬಳಕೆಯ ಪ್ಲಾಸ್ಟಿಕ್‍ಗಳಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡಲು ಅತ್ಯಂತ ದೃಢವಾದ ಕ್ರಮಗಳನ್ನು ತೆಗೆದುಕೊಂಡಿದೆ. ಅದರ ಅನ್ವಯ, ಕಸವನ್ನು ಹೆಚ್ಚಿಸುವ ಸಾಮಥ್ಯವುಳ್ಳ ಏಕ -ಬಳಕೆಯ ಪ್ಲಾಸಿಕ್ ವಸ್ತುಗಳನ್ನು ಇಡೀ ದೇಶದಾದ್ಯಂತ ನಿಷೇಧಿಸಲಾಗುವುದು.


ಇದನ್ನೂ ಓದಿ: Covovax: 7-11 ವರ್ಷದ ಮಕ್ಕಳಲ್ಲಿ ಕೋವೊವಾಕ್ಸ್ ಲಸಿಕೆ ತುರ್ತು ಬಳಕೆಗಾಗಿ DCGI ಅನುಮತಿ


ನಿಷೇಧವಾಗಲಿರುವ ಪ್ಲಾಸ್ಟಿಕ್ ಗಳು ಯಾವುವು
 ಪ್ಲಾಸಿಕ್ ನಿಷೇಧದ ಅಡಿಯಲ್ಲಿ ಯಾವೆಲ್ಲಾ ಪ್ಲಾಸ್ಟಿಕ್ ವಸ್ತುಗಳು ನಿಷೇಧಕ್ಕೆ ಒಳಗಾಗಲಿವೆ? ಸರಕಾರ ಅವುಗಳ ಪಟ್ಟಿ ಬಿಡುಗಡೆ ಮಾಡಿದೆ. ಅವು ಈ ಕೆಳಗಿನಂತಿವೆ :


 • ಪ್ಲಾಸ್ಟಿಕ್ ಕಡ್ಡಿ ಹೊಂದಿರುವ ಈಯರ್‍ಬಡ್‍ಗಳು

 • ಬಲೂನ್‍ಗಳಿಗೆ ಬಳಸಲಾಗುವ ಪ್ಲಾಸ್ಟಿಕ್ ಕಡ್ಡಿಗಳು

 • ಪ್ಲಾಸ್ಟಿಕ್ ಬಾವುಟಗಳು

 • ಕ್ಯಾಂಡಿ ಪ್ಲಾಸ್ಟಿಕ್ ಕಡ್ಡಿಗಳು

 • ಐಸ್ – ಕ್ರೀಂ ಕಡ್ಡಿಗಳು

 • ಅಲಂಕಾರಕ್ಕೆ ಬಳಸಲಾಗುವ ಪಾಲಿಸ್ಟರೇನ್ ( ಥರ್ಮಕೋಲ್)

 • ಪ್ಲಾಸ್ಟಿಕ್ ತಟ್ಟೆಗಳು, ಕಪ್‍ಗಳು, ಗ್ಲಾಸ್‍ಗಳು, ಫೋರ್ಕ್, ಚಮಚ , ಚಾಕೂ, ಸ್ಟ್ರಾ ಮತ್ತು ಟ್ರೇಗಳಂತಹ ಕಟ್ಲೆರಿಗಳು.

 • ಸಿಹಿ ತಿಂಡಿ ಡಬ್ಬಗಳನ್ನು ಸುತ್ತಲೂ ಅಥವಾ ಪ್ಯಾಕ್ ಮಾಡಲು ಬಳಸುವ ಫಿಲ್ಮ್‍ಗಳು

 • ಆಮಂತ್ರಣ ಪತ್ರಿಕೆಗಳು

 • ಸಿಗರೇಟ್ ಪ್ಯಾಕೆಟ್‍ಗಳು

 • 100 ಮೈಕ್ರೋನ್‍ಗಳಿಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್‍ಗಳು

 • ಸ್ಟಿರರ್‍ಗಳು ( ಕದಡಿಸಲು ಬಳಸುವ ಕಡ್ಡಿಗಳು)


ವಿಶೇಷ ಜಾರಿ ತಂಡಗಳ ರಚನೆ
2022 ರ ಜುಲೈ 1 ರಿಂದ ಗುರುತಿಸಲಾಗಿತ್ತು. ಇದರ ಪರವಾಗಿ ಎಸ್‍ಯುಪಿ ವಸ್ತುಗಳ ನಿಷೇಧವನ್ನು ದೇಶದಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ , ರಾಷ್ಟೀಯ ಮತ್ತು ರಾಜ್ಯ ಮಟ್ಟದ ನಿಯಂತ್ರಣ ಕೊಠಡಿಗಳನ್ನು ಸಹ ಜಾರಿಗೆ ಗೊಳಿಸಲಾಗುವುದು. ಅಷ್ಟೇ ಅಲ್ಲ, ಸಿಷೇಧಿತ ಏಕ -ಬಳಕೆಯ ಪ್ಲಾಸ್ಟಿಕ್‍ನ ವಸ್ತುಗಳ ಅಕ್ರಮ ತಯಾರಿಕೆ , ಆಮದು, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಚೆಕ್ ಮಾಡಲು ವಿಶೇಷ ಜಾರಿ ತಂಡಗಳನ್ನು ರಚಿಸಲಾಗಿದೆ.


ಗಡಿಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸುವಂತೆ ಸೂಚನೆ
ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್‍ನಿಂದ ತಯಾರಿಸಲಾದ ಯಾವುದೇ ವಸ್ತುಗಳನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೊಂಡೊಯ್ಯತ್ತಿದ್ದರೆ, ಅದನ್ನು ತಡೆಯಲು ಗಡಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿಕೊಳ್ಳಲಾಗಿದೆ.


ಇದನ್ನೂ ಓದಿ: Puttur: ಸಮಾಧಿ ಮೇಲಿನ ಕಲ್ಲುಗಳಿಗೆ ಶಿವಲಿಂಗವನ್ನು ಹೋಲಿಸಿದ ಕಾಂಗ್ರೆಸ್ ನಾಯಕ; ದಾಖಲಾಯ್ತು ದೂರು


ಪ್ಲಾಸ್ಟಿಕ್ ಎಂಬ ಮಾಲಿನ್ಯಕಾರಕವನ್ನು ನಿಗ್ರಹಿಸಲು ದೇಶದ ನಾಗರೀಕರಿಗೆ ಸಾಮಥ್ರ್ಯ ನೀಡಲು, ಸಿಪಿಸಿಬಿ ಕುಂದು ಕೊರತೆ ಪರಿಹಾರ ಅಪ್ಲಿಕೇಶನ್ (Grievance Redressal App) ಅನ್ನು ಆರಂಭಿಸಲಾಗಿದೆ.

Published by:Ashwini Prabhu
First published: