ಚೀನಾಗೂ (China) ಭಾರತಕ್ಕೂ (India) ಯಾವುದರಲ್ಲೂ ಸರಿ ಹೊಂದಲ್ಲ. ಇದು ನಿನ್ನೆ ಮೊನ್ನೆಯ ಕಥೆ ಅಲ್ಲ, ಬಹಳ ಹಿಂದಿನಿಂದಲೂ ಇದು ಹೀಗೆಯೇ ಮುಂದುವರಿದಿದೆ. ಅಕ್ಕ ಪಕ್ಕ ಮನೆಯ ಕೋಳಿ ಜಗಳದಂತೆ ಹಿಂದಿನಿಂದಲೂ ಭಾರತ ಮತ್ತು ಚೀನಾ ನಡುವಿನ ಸಂಬಂಧ ಎಂದರೆ ಅಷ್ಟಕಷ್ಟೆ. ಕುತಂತ್ರಿ ಚೀನಾ ಬಹಳಷ್ಟು ಸಲ ಉದ್ಧಟತನದಿಂದ ನಡೆದುಕೊಂಡ ಉದಾಹರಣೆಗಳಿವೆ. ಹೇಳಿದರೂ ಕೇಳಿಸಿಕೊಳ್ಳದೆ ತನ್ನಿಷ್ಟದಂತೆ ನಡೆಯೊ ಡ್ರ್ಯಾಗನ್ ದೇಶಕ್ಕೆ ಭಾರತ ಪ್ರಮುಖ ಮಾರುಕಟ್ಟೆ ರಾಷ್ಟ್ರ ಎನ್ನುವುದು ನಿಜ. ಹೌದು. ಚೀನಾದ ಉತ್ಪನ್ನಗಳು (China Products) ನಮ್ಮಲ್ಲಿ ಆರಾಮವಾಗಿ ಬಿಕರಿಯಾಗುತ್ತವೆ. ಆಟಿಕೆಯಿಂದ ಹಿಡಿದು ಮೊಬೈಲ್ ಆ್ಯಪ್ಗಳ (Mobile Apps) ತನಕ ಚೀನಾ ಉತ್ಪನ್ನಗಳು ಭಾರತದಲ್ಲಿ ಬೇಡಿಕೆಯಲ್ಲಿವೆ. ಚೀನಾದ ಚೀಪ್ & ಬೆಸ್ಟ್ ಪ್ರಾಡಕ್ಟ್ಗಳಿಗೆ ಪ್ರಪಂಚದಾದ್ಯಂತ ಹಲವು ರಾಷ್ಟ್ರಗಳು ಬೃಹತ್ ಮಾರುಕಟ್ಟೆಗಳಾಗಿವೆ.
ಮೊಬೈಲ್ ಫೋನ್ಗಳಿಂದ (Smart Phone) ಹಿಡಿದು ಅವುಗಳ ಒಳಗೆ ಇನ್ಸ್ಟಾಲ್ ಆಗುವ ಆ್ಯಪ್ಗಳ ತನಕ ಚೀನಾದ್ದೇ ಮೇಲುಗೈ. ಕಡಿಮೆ ಬೆಲೆಯ ಸ್ಮಾರ್ಟ್ ಫೋಣ್, ಚಾರ್ಜರ್, ಬ್ಯಾಟರಿ, ಹೆಡ್ಫೋನ್ಸ್ ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾಸಿದಿ ಮಾರಾಟ ಮಾಡುವ ಚೀನಾ (China) ಈಗ ಫೋನ್ ಆ್ಯಪ್ಗಳಲ್ಲಿಯೂ (Applications) ತನ್ನ ಮೇಲುಗೈ ತೋರಿಸುತ್ತಿದೆ. ಬಹಳಷ್ಟು ಚೀನಾ ಮೊಬೈಲ್ ಆ್ಯಪ್ಗಳನ್ನು ಈಗಾಗಲೇ ಬ್ಯಾನ್ ಮಾಡಿದ್ದರೂ ಸಹ ಪ್ರತಿದಿನ ಹೊಸ ಎಪ್ಲಿಕೇಶನ್ಗಳನ್ನು ಇಳಿಸುತ್ತೆ ಚೀನಾ. ಅದನ್ನು ಬಹಳಷ್ಟು ಭಾರತೀಯರು ಬಳಸುತ್ತಲೂ ಇದ್ದಾರೆ.
ಭದ್ರತೆಗೆ ಕುತ್ತು
ದೇಶದ ಭದ್ರತೆಗೆ (National Security) ಅಪಾಯ ತಂದೊಡ್ಡುವ ಚೀನಾದ 54 ಆ್ಯಪ್ಗಳನ್ನು ಭಾರತ ನಿಷೇಧಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇಂದು ತಿಳಿಸಿದೆ. ಈ 54 ಅಪ್ಲಿಕೇಶನ್ಗಳು ಇನ್ಸ್ಟಾಲ್ ಆಗುವ ಸಂದರ್ಭ ವಿವಿಧ ವಿಶೇಷ ಅನುಮತಿಗಳನ್ನು ಪಡೆದುಕೊಳ್ಳುತ್ತವೆ. ಈ ಮೂಲಕ ವೈಯಕ್ತಿಯ ಮಾಹಿತಿ ಲೋಕಕ್ಕೂ ಹೆಜ್ಜೆ ಇಡುತ್ತವೆ. ಸೂಕ್ಷ್ಮ ಬಳಕೆದಾರರ ಡೇಟಾವನ್ನು (Data) ಸಂಗ್ರಹಿಸುತ್ತವೆ. ಈ ಸಂಗ್ರಹಿಸಿದ ನೈಜ-ಸಮಯದ ಡೇಟಾವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಪ್ರತಿಕೂಲ ದೇಶದಲ್ಲಿರುವ ಸರ್ವರ್ಗಳಿಗೆ ಈ ಮಾಹಿತಿಗಳನ್ನು ರವಾನಿಸಲಾಗುತ್ತಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕೊರೋನಾ ಭೀತಿ ಹಿನ್ನೆಲೆ; ಕೊನೆಗೂ ಕೆಲ ಪ್ರಾಣಿಗಳ ಮಾಂಸಕ್ಕೆ ನಿಷೇಧ ಹೇರಿದ ಚೀನಾ
ಬ್ಯೂಟಿ ಸೆಲ್ಫೀ ಕ್ಯಾಮೆರಾಗಳಿಗೆ ಕುತ್ತು..!
ನಿಷೇಧಿತ ಅಪ್ಲಿಕೇಶನ್ಗಳ ಪಟ್ಟಿಯಲ್ಲಿ ಸ್ವೀಟ್ ಸೆಲ್ಫಿ ಎಚ್ಡಿ, ಬ್ಯೂಟಿ ಕ್ಯಾಮೆರಾ - ಸೆಲ್ಫಿ ಕ್ಯಾಮೆರಾ, ಗರೆನಾ ಫ್ರೀ ಫೈರ್ - ಇಲ್ಯುಮಿನೇಟ್, ವಿವಾ ವಿಡಿಯೋ ಎಡಿಟರ್, ಟೆನ್ಸೆಂಟ್ ಎಕ್ಸ್ರಿವರ್, ಒನ್ಮಿಯೋಜಿ ಅರೆನಾ, ಆಪ್ಲಾಕ್ ಮತ್ತು ಡ್ಯುಯಲ್ ಸ್ಪೇಸ್ ಲೈಟ್ ಸೇರಿವೆ.
ಕಳೆದ ವರ್ಷ 54 ಆ್ಯಪ್ಗಳು ಬ್ಯಾನ್
ಕಳೆದ ವರ್ಷ ಜೂನ್ನಲ್ಲಿ, ರಾಷ್ಟ್ರದ ಸಾರ್ವಭೌಮತ್ವ ಹಾಗೂ ಭದ್ರತೆಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಭಾರತವು ಟಿಕ್ಟಾಕ್, ವೀಚಾಟ್ ಮತ್ತು ಹೆಲೋನಂತಹ ವ್ಯಾಪಕವಾಗಿ ಬಳಸಲಾಗುತ್ತಿದ್ದ ಸೋಷಿಯಲ್ ಮೀಡಿಯಾ ಸೇರಿದಂತೆ 59 ಚೀನೀ ಮೊಬೈಲ್ ಅಪ್ಲಿಕೇಶನ್ಗಳನ್ನು ನಿಷೇಧಿಸಿತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಸೆಕ್ಷನ್ 69 ಎ ಅಡಿಯಲ್ಲಿ ಅಪ್ಲಿಕೇಶನ್ಗಳನ್ನು ನಿಷೇಧಿಸಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ಮೇ 2020 ರಲ್ಲಿ ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ನಂತರ ಭಾರತವು 321 ಅಪ್ಲಿಕೇಶನ್ಗಳನ್ನು ನಿರ್ಬಂಧಿಸಿದೆ.
ಇದನ್ನೂ ಓದಿ: Why China Backs Taliban| ಚೀನಾ ಏಕೆ ತಾಲಿಬಾನ್ ಬೆನ್ನಿಗೆ ನಿಂತಿದೆ; ಇದು ಭಾರತಕ್ಕೆ ಹೇಗೆ ಅಪಾಯಕಾರಿ?
ಗಲ್ವಾನ್ ಕಣಿವೆ ಸಂಘರ್ಷ
ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು (Soldiers) ಸಾವನ್ನಪ್ಪಿದ ನಂತರ ಜೂನ್ 2020 ರಲ್ಲಿ ಮೊದಲ ಸುತ್ತಿನ ನಿಷೇಧವನ್ನು ಘೋಷಿಸಲಾಯಿತು.
ಸೇನೆಗಳ ನಿಯೋಜನೆ
ಪ್ಯಾಂಗೊಂಗ್ ಸರೋವರದ ಪ್ರದೇಶಗಳಲ್ಲಿ ಹಿಂಸಾತ್ಮಕ ಘರ್ಷಣೆಯ ನಂತರ ಮೇ 5, 2020 ರಂದು ಭಾರತ ಮತ್ತು ಚೀನಾದ ಮಿಲಿಟರಿಗಳ ನಡುವಿನ ಪೂರ್ವ ಲಡಾಖ್ ಗಡಿ ಬಿಕ್ಕಟ್ಟು ಹೆಚ್ಚಾಯಿತು. ಸೈನಿಕರು ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ರವಾನಿಸುವ ಮೂಲಕ ಎರಡೂ ಕಡೆಯವರು ಕ್ರಮೇಣ ತಮ್ಮ ಸೈನಿಕ ನಿಯೋಜನೆಯನ್ನು ಹೆಚ್ಚಿಸಿದರು. ಈ ಸಂದರ್ಭ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ