ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಸೇರಿ ಮೂವರು ಅರ್ಥಶಾಸ್ತ್ರಜ್ಞರಿಗೆ ನೊಬೆಲ್ ಪ್ರಶಸ್ತಿ

ಪ್ಯಾರಿನ್​ನಲ್ಲಿ ಜನಿಸಿದ 57 ವರ್ಷದ ಎಸ್ಥಾರ್ ಡುಫ್ಲೊ ಅವರು ಕೂಡ ಮಸ್ಸಾಚುಸೆಟ್ಸ್​ ತಾಂತ್ರಿಕ ಸಂಸ್ಥೆಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂಐಟಿಯಲ್ಲಿ ಪಿಎಚ್​ಡಿ ಪಡೆದಿದ್ದಾರೆ. ಮತ್ತೊಂದು ವಿಶೇಷ ಅಂದರೆ ಎಸ್ಥಾರ್ ಡುಫ್ಲೊ ಇಬ್ಬರು ಗಂಡ-ಹೆಂಡತಿ.

ಅಭಿಜಿತ್ ಬ್ಯಾನರ್ಜಿ, ಎಸ್ಥಾರ್ ಡುಫ್ಲೊ ಹಾಗೂ ಮೈಕೆಲ್ ಕ್ರೆಮರ್​

ಅಭಿಜಿತ್ ಬ್ಯಾನರ್ಜಿ, ಎಸ್ಥಾರ್ ಡುಫ್ಲೊ ಹಾಗೂ ಮೈಕೆಲ್ ಕ್ರೆಮರ್​

  • Share this:
ಸ್ಟಾಕ್​ಹೋಮ್: ಭಾರತೀಯ ಮೂಲದ ಅಮೆರಿಕದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸೇರಿದಂತೆ ಮೂವರು ಅರ್ಥಶಾಸ್ತ್ರಜ್ಞರು 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತ್ರಿಗೆ ಭಾಜನರಾಗಿದ್ದಾರೆ.

ಭಾರತೀಯ ಮೂಲದ ಅಮೆರಿಕದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಫ್ರೆಂಚ್-ಅಮೆರಿಕದ ಪ್ರಜೆ ಎಸ್ಥಾರ್ ಡುಫ್ಲೊ ಹಾಗೂ ಅಮೆರಿಕದ ಮೈಕೆಲ್ ಕ್ರೆಮರ್​ ಅವರ ಜಾಗತಿಕ ಬಡತನ ನಿವಾರಿಸಲು ಕೈಗೊಂಡ ಪ್ರಾಯೋಗಿಕ ಅಧ್ಯಯನವನ್ನು ಪರಿಗಣಿಸಿ ಸ್ವಿಡಿಶ್ ಅಕಾಡೆಮಿ ಈ ಮೂವರ ಹೆಸರನ್ನು ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಿ ಘೋಷಿಸಿದೆ. ನೊಬೆಲ್​ ಬಹುಮಾನದ ಮೊತ್ತ 9 ಮಿಲಿಯನ್ ಸ್ವಿಡಿಶ್ ಕ್ರೋನಾಅನ್ನು ಮೂವರು ಹಂಚಿಕೊಳ್ಳಲಿದ್ದಾರೆ.ಭಾರತೀಯ ಮೂಲದ ಅಮೆರಿಕ ಅರ್ಥಶಾಸ್ತ್ರ ಅಭಿಜಿತ್ ಬ್ಯಾನರ್ಜಿ

ಕೋಲ್ಕತ್ತದಲ್ಲಿ ಜನಿಸಿದ 58 ವರ್ಷದ ಅಭಿಜಿತ್ ಬ್ಯಾನರ್ಜಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್​ಡಿ ಪಡೆದು, ಅಮೆರಿಕದ ಮಸ್ಸಾಚುಸೆಟ್ಸ್​ ತಾಂತ್ರಿಕ ಸಂಸ್ಥೆಯಲ್ಲಿ (ಎಂಐಟಿ) ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ಯಾರಿನ್​ನಲ್ಲಿ ಜನಿಸಿದ 57 ವರ್ಷದ ಎಸ್ಥಾರ್ ಡುಫ್ಲೊ ಅವರು ಕೂಡ ಮಸ್ಸಾಚುಸೆಟ್ಸ್​ ತಾಂತ್ರಿಕ ಸಂಸ್ಥೆಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂಐಟಿಯಲ್ಲಿ ಪಿಎಚ್​ಡಿ ಪಡೆದಿದ್ದಾರೆ. ಮತ್ತೊಂದು ವಿಶೇಷ ಅಂದರೆ ಎಸ್ಥಾರ್ ಡುಫ್ಲೊ ಇಬ್ಬರು ಗಂಡ-ಹೆಂಡತಿ.

55 ವರ್ಷದ ಮೈಕೆಲ್ ಕ್ರೆಮರ್ ಅವರು ಹಾರ್ವರ್ಡ್​ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ವಿವಿಯಿಂದ ಪಿಎಚ್​ಡಿ ಪದವಿ ಪಡೆದಿದ್ದಾರೆ.

First published: