ಶ್ವೇತಭವನದಲ್ಲಿ ದೀಪಾವಳಿ ಆಚರಣೆ; ಡೋನಾಲ್ಡ್​ ಟ್ರಂಪ್​ಗೆ ಧನ್ಯವಾದ ತಿಳಿಸಿದ ಮೋದಿ

ಭಾರತದೊಂದಿಗೆ ಅತ್ಯುತ್ತಮ ವಾಣಿಜ್ಯ ಸಂಬಂಧವನ್ನು ಹೊಂದಿದ್ದೇವೆ.  ಅವರು ಉತ್ತಮ ವಾಣಿಜ್ಯ ವ್ಯಾಪಾರಿಗಳು ಹಾಗೂ ಸಂಧಾನಕಾರರು.

Seema.R | news18
Updated:November 14, 2018, 10:48 AM IST
ಶ್ವೇತಭವನದಲ್ಲಿ ದೀಪಾವಳಿ ಆಚರಣೆ; ಡೋನಾಲ್ಡ್​ ಟ್ರಂಪ್​ಗೆ ಧನ್ಯವಾದ ತಿಳಿಸಿದ ಮೋದಿ
ಭಾರತದೊಂದಿಗೆ ಅತ್ಯುತ್ತಮ ವಾಣಿಜ್ಯ ಸಂಬಂಧವನ್ನು ಹೊಂದಿದ್ದೇವೆ.  ಅವರು ಉತ್ತಮ ವಾಣಿಜ್ಯ ವ್ಯಾಪಾರಿಗಳು ಹಾಗೂ ಸಂಧಾನಕಾರರು.
  • News18
  • Last Updated: November 14, 2018, 10:48 AM IST
  • Share this:
ನ್ಯೂಸ್​ 18 ಕನ್ನಡ

ವಾಷಿಂಗ್ಟನ್ (ನ.14):  ಭಾರತೀಯ ಅಮೆರಿಕನ್​ ಅಧಿಕಾರಿಗಳೊಡನೆ ಶ್ವೇತಭವನದಲ್ಲಿ ಮಂಗಳವಾರ ದೀಪಾವಳಿ ಆಚರಣೆಯಲ್ಲಿ ಭಾಗಿಯಾದ ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಭಾರತ ಅತ್ಯುತ್ತಮ ವಾಣಿಜ್ಯ ಸಂಧಾನಕಾರ ಎಂದು ಶ್ಲಾಘನೆ ಮಾಡಿದ್ದಾರೆ.

ಶ್ವೇತಭವನದಲ್ಲಿ ದೀಪಾವಳಿ ಆಚರಣೆ ನಡೆಸಿರುವುದು ಸಂತೋಷವಾಗಿದ್ದು, ಇದಕ್ಕಾಗಿ ಟ್ರಂಪ್​ಗೆ ಪ್ರಧಾನಿ ಮೋದಿ ಧನ್ಯವಾದವನ್ನು ತಿಳಿಸಿದ್ದಾರೆ.

ಅಮೆರಿಕ ಭಾರತದೊಂದಿಗೆ ಅತ್ಯುತ್ತಮ ಸಂಬಂಧವನ್ನು ಹೊಂದಿದೆ ಹಾಗೂ ಪ್ರಧಾನಿ ಮೋದಿ ಅವರ ಗೆಳೆತನಕ್ಕೆ ಧನ್ಯವಾದವನ್ನು ಅವರು ತಿಳಿಸಿದರು.

ಎರಡನೇ ಬಾರಿ ಶ್ವೇತಭವನದಲ್ಲಿ ಭಾರತದ ಅತಿದೊಡ್ಡ ಹಬ್ಬಗಳಲ್ಲಿ ಒಂದಾದ ದೀಪಾವಳಿ ಸಂಭ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ, ಹಬ್ಬದಲ್ಲಿ ಭಾಗಿಯಾದರು.

ಈ ವೇಳೆ ಮಾತನಾಡಿದ ಅವರು, ಭಾರತದೊಂದಿಗೆ ಅತ್ಯುತ್ತಮ ವಾಣಿಜ್ಯ ಸಂಬಂಧವನ್ನು ಹೊಂದಿದ್ದೇವೆ.  ಅವರು ಉತ್ತಮ ವಾಣಿಜ್ಯ ವ್ಯಾಪಾರಿಗಳು ಹಾಗೂ ಸಂಧಾನಕಾರರು ಎಂದು ಎರಡು ರಾಷ್ಟ್ರದ ವ್ಯಾಪಾರ ಸಂಬಂಧ ಕುರಿತು ತಿಳಿಸಿದರು.

ಇನ್ನು ಈ ಸಂಭ್ರಮಕ್ಕೆ ಟ್ರಂಪ್​ ಅಮೆರಿಕದಲ್ಲಿರುವ ಭಾರತದ ರಾಯಭಾರಿ ನವತೇಜ್​ ಸಿಂಗ್​ ಸರ್ನಾ ಮತ್ತು ಅವರ ಹೆಂಡತಿ ಡಾ ಅವಿನಾ ಸರ್ನಾ ಮತ್ತು  ವಿಶೇಷ ಸಹಾಯಕ ಪ್ರತೀಕ್​ ಮಥುರ್​ ಅವರನ್ನು ಈ ವಿಶೇಷ ಸಂದರ್ಭದಲ್ಲಿ ಆಹ್ವಾನಿಸಿದ್ದರು.ಟ್ರಂಪ್​ ಅಧಿಕಾರದಲ್ಲಿ ಎರಡು ಡಜನ್​ಗಿಂತ ಹೆಚ್ಚಿನ ಅಧಿಕಾರಿಗಳು ಆಡಳಿತ ನಿರ್ವಹಿಸುತ್ತಿದ್ದಾರೆ.

 ಮೋದಿ ನನ್ನ ಮತ್ತು ಈಗ ಇವಾಂಕ ಸ್ನೇಹಿತರಾಗಿದ್ದು, ಭಾರತದ ಮೇಲೆ ನಮಗೆ ಸಾಕಷ್ಟು ಅಭಿಮಾನ ಇದೆ ಎಂದು ತಮ್ಮ ಮಗಳನ್ನು ವೀಕ್ಷಕರಿಗೆ ಪರಿಚಯಿಸಿದರು . ಈ ವೇಳೆ ಇವಾಂಕ ಕೂಡ ಕಳೆದ ವರ್ಷ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿನ ಘಟನೆ ನೆನೆದು ಹೂಗುಟ್ಟಿದರು.

ಇದನ್ನು ಓದಿ : ಅಡೆತಡೆಗಳನ್ನು ಬದಿಗೊತ್ತಿ ಮಂಗಳ ಗ್ರಹಕ್ಕೆ ಕಾಲಿಡಲು ಬೇಕು 25 ವರ್ಷ!

ಶ್ವೇತಭವನದಲ್ಲಿ ನಡೆಯುತ್ತಿರುವ ಈ ಹಬ್ಬದಲ್ಲಿ ಆತಿಥ್ಯವಹಿಸಿದ್ದು ನನಗೆ ಗೌರವದ ಸಂಗತಿಯಾಗಿದೆ.   , ವಿಶೇಷ ವ್ಯಕ್ತಿಗಳೊಂದಿಗೆ ನಾವು ಇಂದು ಈ ಹಬ್ಬ ಆಚರಿಸಲು ಸೇರಿದ್ದೇವೆ. ಲಕ್ಷಾಂತರ ಕುಟುಂಬಗಳು ಸೆರಿ ದೀಪಾವಳಿ ಹಬ್ಬ ಆಚರಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡಿದ್ಧೇವೆ ಎಂದರು  .

2003ರಲ್ಲಿ ಜಾರ್ಜ್​ ಡಬ್ಲೂ ಬುಷ್ ಮೊದಲ ಬಾರಿ ಶ್ವೇತಭವನದಲ್ಲಿ ದೀಪಾವಳಿ ಸಂಭ್ರಮ ಆಚರಿಸಿದ್ದರು.

First published:November 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading