• Home
  • »
  • News
  • »
  • national-international
  • »
  • Himachal Pradesh: ಸ್ವತಂತ್ರ ಭಾರತದ ಮೊದಲ ಮತದಾರ 106 ವರ್ಷದ ಶ್ಯಾಮ್​ ಶರಣ್ ನೇಗಿ ನಿಧನ

Himachal Pradesh: ಸ್ವತಂತ್ರ ಭಾರತದ ಮೊದಲ ಮತದಾರ 106 ವರ್ಷದ ಶ್ಯಾಮ್​ ಶರಣ್ ನೇಗಿ ನಿಧನ

ಶ್ಯಾಮ್ ಶರಣ್ ನೇಗಿ

ಶ್ಯಾಮ್ ಶರಣ್ ನೇಗಿ

ದೇಶದ ಮೊದಲ ಮತದಾರರ ಗುರು ಶ್ಯಾಮ್ ಸರನ್ ನೇಗಿ ಶನಿವಾರ ನಿಧನರಾಗಿದ್ದಾರೆ. ಶ್ಯಾಮ್ ಶರಣ್ ನೇಗಿ ಅವರು ಎರಡು ದಿನಗಳ ಹಿಂದೆ ಹಿಮಾಚಲ ವಿಧಾನಸಭಾ ಚುನಾವಣೆಗೆ ತಮ್ಮ 106 ನೇ ವಯಸ್ಸಿನಲ್ಲಿ ಮತ ಚಲಾಯಿಸಿದ್ದರು. ಸಾವನ್ನು ಖಚಿತಪಡಿಸಿದ ಕಿನ್ನೌರ್ ಡಿಸಿ ಅಬಿದ್ ಹುಸೇನ್ ಸಾದಿಕ್, ಮಾಸ್ಟರ್ ಶ್ಯಾಮ್ ಸರನ್ ನೇಗಿ ಇಂದು ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Shimla, India
  • Share this:

ಶಿಮ್ಲಾ(ಅ.05): ದೇಶದ ಮೊದಲ ಮತದಾರ (First Voter of India) ಮಾಸ್ಟರ್ ಶ್ಯಾಮ್ ಶರಣ್ (Shyam Saran Negi) ನೇಗಿ ವಿಧಿವಶರಾಗಿದ್ದಾರೆ. ಹಿಮಾಚಲ ಪ್ರದೇಶದ (Himachal Pradesh) ಕಿನ್ನೌರ್ ಜಿಲ್ಲೆಯ ಕಲ್ಪಾದಲ್ಲಿರುವ ತಮ್ಮ ಸ್ವಗೃಹದಲ್ಲಿ ಗುರುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಕಿನ್ನೌರ್ ಡಿಸಿ ಅಬಿದ್ ಹುಸೇನ್ ಮಾಸ್ಟರ್ ನೇಗಿ ಅವರ ಸಾವನ್ನು ಖಚಿತಪಡಿಸಿದ್ದಾರೆ. ನೇಗಿ ಅವರಿಗೆ 106 ವರ್ಷ ವಯಸ್ಸಾಗಿತ್ತು. ಅವರು ದೇಶದಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಮೊದಲ ಮತ ಚಲಾಯಿಸಿದ್ದರೆಂಬುವುದು ಉಲ್ಲೇಖನೀಯ. ಮಾಹಿತಿಯ ಪ್ರಕಾರ ಕಳೆದ ಕೆಲವು ದಿನಗಳಿಂದ ಮಾಸ್ಟರ್ ನೇಗಿ ಅವರ ಆರೋಗ್ಯ ಹದಗೆಟ್ಟಿತ್ತು. ಇದರಿಂದಾಗಿ ಮಾಸ್ಟರ್ ನೇಗಿ ಅವರು ನವೆಂಬರ್ 2 ರಂದು ಹಿಮಾಚಲ ವಿಧಾನಸಭಾ ಚುನಾವಣೆಗೆ ಬ್ಯಾಲೆಟ್ ಪೇಪರ್ ಮೂಲಕ ಮತ ಚಲಾಯಿಸಿದ್ದರು.


ಮೊದಲ ಮತದಾರ ಶ್ಯಾಮ್ ಸರನ್ ನೇಗಿ ಅವರ ಕಿವಿ ನೋವು ಹೆಚ್ಚಾಗಿತ್ತು, ಅಲ್ಲದೇ ದೃಷ್ಟಿ ಕಡಿಮೆಯಾಗಲಾರಂಭಿಸಿತ್ತು. ನವೆಂಬರ್ 2 ರಂದು ಅವರು ತಮ್ಮ ಜೀವನದಲ್ಲಿ 34 ನೇ ಬಾರಿಗೆ ಮತ ಚಲಾಯಿಸಿದ್ದರು.


Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಲೈನ್​!


ನೇಗಿ ಸಾವಿನ ಸುದ್ದಿ ಖಚಿತಪಡಿಸಿದ ಡಿಸಿ


ಸುದ್ದಿಯನ್ನು ಖಚಿತಪಡಿಸಿದ ಡಿಸಿ ಕಿನ್ನೌರ್ ಅಬಿದ್ ಹುಸೇನ್ ಸಾದಿಕ್, ಮಾಸ್ಟರ್ ಶ್ಯಾಮ್ ಶರಣ್ ನೇಗಿ ಅವರು ಜಗತ್ತಿಗೆ ವಿದಾಯ ಹೇಳಿದ್ದಾರೆ, ಅವರ ಆರೋಗ್ಯ ಬಹಳ ದಿನಗಳಿಂದ ಹದಗೆಟ್ಟಿತ್ತು. ಅಲ್ಲದೇ ಶುಕ್ರವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಅವರು ನಿಧನರಾಗಿದ್ದಾರೆಂಬುವುದು ಖಚಿತವಾಗಿದೆ. ಇಂದು ಆಡಳಿತ ಮಂಡಳಿ ಅವರ ಅಂತಿಮ ಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸಲಿದೆ. ಶ್ಯಾಮ್ ಶರಣ್ ನೇಗಿ ಅವರ ಪುತ್ರ ಸಿಪಿ ನೇಗಿ ಮಾತನಾಡಿ, ತಮ್ಮ ತಂದೆ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆಂದು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ.


ಕೊನೆಯ ಬಾರಿ ಏನು ಹೇಳಿದ್ದರು?


ನವೆಂಬರ್ 2 ರಂದು ಮತ ಚಲಾಯಿಸಿದ ನಂತರ ಮಾತನಾಡಿದ್ದ ದೇಶದ ಮೊದಲ ಮತದಾರ ಮಾಸ್ಟರ್ ಶ್ಯಾಮ್ ಶರಣ್ ನೇಗಿ ಅವರು ಬ್ರಿಟಿಷರಿಂದ ಮತ್ತು ರಾಜರ ಆಳ್ವಿಕೆಯಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿದ್ದರು. ಇಂದು ಪ್ರಜಾಪ್ರಭುತ್ವದ ಈ ಮಹಾನ್ ಹಬ್ಬದಲ್ಲಿ ದೇಶವನ್ನು ಅಭಿವೃದ್ದಿಪಡಿಸುವ ವ್ಯಕ್ತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಪ್ರತಿಯೊಬ್ಬ ವ್ಯಕ್ತಿಗೂ ನೀಡಲಾಗಿದೆ. ಆರೋಗ್ಯ ಹದಗೆಟ್ಟ ಕಾರಣ ಅವರು ಮನೆಯಲ್ಲೇ ಮತ ಚಲಾಯಿಸಿದ್ದೇನೆ. ಪ್ರಜಾಪ್ರಭುತ್ವದ ಮಹಾ ಹಬ್ಬದಲ್ಲಿ ನಾನು ಭಾಗಿಯಾಗಿದ್ದೇನೆ ಎಂದಿದ್ದರು.


ಕಲ್ಪದಿಂದ ಐದನೇ ತರಗತಿವರೆಗೆ ಓದಿದ್ದಾರೆ


ದೇಶದಲ್ಲಿ ಮೊದಲ ಲೋಕಸಭೆ ಚುನಾವಣೆ ನಡೆದಿದ್ದು 1952ರಲ್ಲಿ. ಏಕೆಂದರೆ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಚುನಾವಣೆ ವೇಳೆ ಭಾರೀ ಹಿಮಪಾತವಾಗುವ ಸಾಧ್ಯತೆ ಇತ್ತು. ಆದ್ದರಿಂದ, ಕಿನ್ನೌರ್‌ನಲ್ಲಿ, ಆರು ತಿಂಗಳ ಹಿಂದೆ 1951 ರಲ್ಲಿಯೇ ಮತಗಳನ್ನು ಚಲಾಯಿಸಲಾಯಿತು ಮತ್ತು ಮಾಸ್ಟರ್ ನೇಗಿ ಅವರು ಮೊದಲ ಮತ ಚಲಾಯಿಸಿದರು. 1917 ರಲ್ಲಿ ಜನಿಸಿದ ಶ್ಯಾಮ್ ಶರಣ್ ನೇಗಿ ಅವರು 10 ನೇ ವಯಸ್ಸಿನಲ್ಲಿ ಶಾಲೆಗೆ ಹೋಗಿದ್ದರು ಮತ್ತು ಕಲ್ಪದಲ್ಲಿ ಐದನೇ ತರಗತಿಯವರೆಗೆ ಓದಿದರು.


Karnataka Assembly Elections: ಕೃಷ್ಣನೂರು ಉಡುಪಿಯ ಸಾರಥಿ ಯಾರು? ನಾವಿಕನಿಲ್ಲದ ದೋಣಿಯಂತಾದ ಕಾಂಗ್ರೆಸ್​, ಬಿಜೆಪಿಯಲ್ಲಿ ರೇಸ್​!


ಇದಾದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ರಾಂಪುರಕ್ಕೆ ಹೋದರು. ರಾಂಪುರವನ್ನು ತಲುಪಲು ಮೂರು ದಿನಗಳು ಕಾಲ್ನಡಿಗೆಯಲ್ಲೇ ಸಾಗಬೇಕಾಯ್ತು. ರಾಂಪುರದಲ್ಲಿ IXನೇ ತರಗತಿಯವರೆಗೆ ಓದಿದರು. ವಯಸ್ಸಾದ ಕಾರಣ 10ನೇ ತರಗತಿಗೆ ಪ್ರವೇಶ ಸಿಗಲಿಲ್ಲ. ಬಳಿಕ 1940ರಿಂದ 1946ರವರೆಗೆ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕಾರ್ಯನಿರ್ವಹಿಸಿದ್ದರು. ಆ ನಂತರ ಶಿಕ್ಷಣ ಇಲಾಖೆಗೆ ಹೋಗಿ ಕಲ್ಪ ಲೋವರ್ ಮಿಡಲ್ ಸ್ಕೂಲ್ ನಲ್ಲಿ ಶಿಕ್ಷಕರಾದರು.

Published by:Precilla Olivia Dias
First published: