ಸಂಸದ, ಶಾಸಕರ ಅನರ್ಹತೆ ಅಧಿಕಾರ ಸ್ಪೀಕರ್​ಗೆ ಬೇಡ: ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ

ನ್ಯಾ| ರೋಹಿಂಗ್ಟನ್ ಎಫ್ ನಾರಿಮನ್ ನೇತೃತ್ವದ ತ್ರಿಸದಸ್ಯ ಸುಪ್ರೀಂ ನ್ಯಾಯಪೀಠವು, ಜನಪ್ರತಿನಿಧಿಗಳ ಅನರ್ಹತೆಯ ವಿಚಾರದಲ್ಲಿ ಸ್ವತಂತ್ರ ಸಂಸ್ಥೆಗೆ ಅಧಿಕಾರ ನೀಡುವ ಬಗ್ಗೆ ಸಂಸತ್ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದೆ.

news18
Updated:January 21, 2020, 12:20 PM IST
ಸಂಸದ, ಶಾಸಕರ ಅನರ್ಹತೆ ಅಧಿಕಾರ ಸ್ಪೀಕರ್​ಗೆ ಬೇಡ: ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ
ಸುಪ್ರೀಂ ಕೋರ್ಟ್​.
  • News18
  • Last Updated: January 21, 2020, 12:20 PM IST
  • Share this:
ನವದೆಹಲಿ(ಜ. 21): ಇತ್ತೀಚಿನ ದಿನಗಳಲ್ಲಿ ಸಂಸದರು ಮತ್ತು ಶಾಸಕರ ಅನರ್ಹತೆಗೊಳಿಸುವ ವಿಚಾರ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಆಡಳಿತ ಪಕ್ಷದ ಪರವಾಗಿರುವ ಸ್ಪೀಕರ್ ಅವರ ನಿರ್ಧಾರದಲ್ಲಿ ಪಕ್ಷಪಾತಿತನ ಇರುತ್ತದೆ ಎಂಬ ಆಕ್ಷೇಪಗಳು ವ್ಯಕ್ತವಾಗುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಅನರ್ಹತೆಯ ವಿಧಾನವನ್ನು ಹೆಚ್ಚು ನ್ಯಾಯಸಮ್ಮತವಾಗಿ ಮಾಡಬೇಕೆಂದು ಸುಪ್ರೀಂ ಕೋರ್ಟ್ ಪ್ರಯತ್ನಿಸಿದೆ. ಸಂಸದರು ಮತ್ತು ಶಾಸಕರನ್ನು ಅನರ್ಹಗೊಳಿಸುವ ವಿಶೇಷಾಧಿಕಾರವನ್ನ ಸ್ಪೀಕರ್​ಗೆ ನೀಡುವ ಬದಲು ಸ್ವತಂತ್ರ ಹಾಗೂ ಖಾಯಂ ಸಂಸ್ಥೆಯೊಂದಕ್ಕೆ ಈ ಅಧಿಕಾರ ನೀಡುವುದು ಒಳ್ಳೆಯದು ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಣಿಪುರದಲ್ಲಿ ಕಾಂಗ್ರೆಸ್ ಟಿಕೆಟ್​ನಿಂದ ಗೆದ್ದು ಬಳಿಕ ಬಿಜೆಪಿ ಸರ್ಕಾರ ಸೇರ್ಪಡೆಗೊಂಡಿದ್ದ ಅರಣ್ಯ ಮತ್ತು ಪರಿಸರ ಸಚಿವ ಟಿ. ಶ್ಯಾಮಕುಮಾರ್ ಅವರ ಅನರ್ಹತೆಗೊಳಿಸಿದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯಕ್ಕೆ ಬಂದಿದೆ.

ಇದನ್ನೂ ಓದಿ: ಅಮರಾವತಿ, ವೈಜಾಗ್ ಮತ್ತು ಕರ್ನೂಲ್; ಆಂಧ್ರಕ್ಕೆ 3 ರಾಜಧಾನಿ ನೀಡುವ ಮಸೂದೆಗೆ ವಿಧಾನಸಭೆ ಅನುಮೋದನೆ

ನ್ಯಾ| ರೋಹಿಂಗ್ಟನ್ ಎಫ್ ನಾರಿಮನ್ ನೇತೃತ್ವದ ತ್ರಿಸದಸ್ಯ ಸುಪ್ರೀಂ ನ್ಯಾಯಪೀಠವು, ಜನಪ್ರತಿನಿಧಿಗಳ ಅನರ್ಹತೆಯ ವಿಚಾರದಲ್ಲಿ ಸ್ವತಂತ್ರ ಸಂಸ್ಥೆಗೆ ಅಧಿಕಾರ ನೀಡುವ ಬಗ್ಗೆ ಸಂಸತ್ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದೆ.

ಇವತ್ತು ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು ಕೆಲ ಸಾಧ್ಯಾಸಾಧ್ಯತೆಗಳನ್ನು ವಿಮರ್ಶಿಸಿತು. ಅನರ್ಹತೆ ಅರ್ಜಿಗಳ ವಿಚಾರವನ್ನು ಸ್ಪೀಕರ್ ನಿರ್ಧಾರಕ್ಕೆ ಬಿಡುವುದು ಸರಿಯಾಗುವುದಿಲ್ಲ. ಯಾಕೆಂದರೆ ಸ್ಪೀಕರ್ ಅವರು ಒಂದು ರಾಜಕೀಯ ಪಕ್ಷದ ಸದಸ್ಯರೇ ಆಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಸ್ವತಂತ್ರವಾದ ಇತರ ಒಂದು ಸಂಸ್ಥೆಯನ್ನು ರಚಿಸುವುದು ಸೂಕ್ತ ಎಂದು ತಿಳಿಸಿತು.

ಹಾಗೆಯೇ, ಶಾಸಕರ ಅನರ್ಹತೆಯ ಅರ್ಜಿಯ ವಿಚಾರಣೆಯನ್ನು ಸ್ಪೀಕರ್ ಹೆಚ್ಚು ವಿಳಂಬ ಮಾಡಬಾರದು. ಮೂರು ತಿಂಗಳೊಳಗೆ ಈ ಅರ್ಜಿಯ ಇತ್ಯರ್ಥ ಪಡಿಸಬೇಕು ಎಂದೂ ಸುಪ್ರೀಂ ಕೋರ್ಟ್ ಸೂಚಿಸಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ