Independence Day Stickers: ಈ ಸ್ವಾತಂತ್ರ್ಯ ದಿನಾಚರಣೆಗೆ ನಿಮ್ಮ ಪ್ರೀತಿಪಾತ್ರರಿಗೆ ವಾಟ್ಸ್ಯಾಪ್ ಸ್ಟಿಕ್ಕರ್ ಕಳುಹಿಸಿ, ಆನಂದಿಸಿ
ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ. ನಿಮ್ಮ ಪ್ರೀತಿಪಾತ್ರರಿಗೆ ವಾಟ್ಸ್ಯಾಪ್ ಸ್ಟಿಕ್ಕರ್ ಕಳುಹಿಸಲು ಮೊದಲಿಗೆ ಹೀಗೆ ಮಾಡಿ. ನಿಮ್ಮ ಮೊಬೈಲ್ನ ಪ್ಲೇ ಸ್ಟೋರ್ನಲ್ಲಿ WhatsApp stickers for Independence Day ಎಂದು ಸರ್ಚ್ ಮಾಡಿ.
ಮಾರಕ ಕೊರೋನಾದಿಂದಾಗಿ ಕೆಲವು ತಿಂಗಳಿನಿಂದ ಜನರು ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಈ ಕೊರೋನಾ ಸೋಂಕು ಎಲ್ಲರ ಖುಷಿ, ಸಂಭ್ರಮವನ್ನು ಕಿತ್ತುಕೊಂಡಿದೆ, ಹಬ್ಬಗಳು ಕಳೆಗುಂದಿವೆ. ಈ ಬಾರಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಮೇಲೂ ಕೊರೋನಾ ಕರಿಛಾಯೆ ಆವರಿಸಿದೆ.
ನಾಳೆ ಆಗಸ್ಟ್ 15. ದೇಶದೆಲ್ಲೆಡೆ 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಈ ಕೊರೋನಾ ಬಂದಿಲ್ಲವೆಂದಿದ್ದರೆ ಎಲ್ಲೆಡೆ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಬಹುದಿತ್ತು. ಈ ಮಹಾಮಾರಿ ಕೊರೋನಾದಿಂದಾಗಿ ಈಗ ಎಲ್ಲವೂ ಬದಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು, ಪರೇಡ್ ಎಲ್ಲವೂ ಬಹುಶಃ ನಾಳೆ ಇರುವುದಿಲ್ಲ. ಅದನ್ನು ನೋಡುವ ಸೌಭಾಗ್ಯವೂ ಸಹ ಇಲ್ಲ ಎನಿಸುತ್ತದೆ. ಆದರೆ ನೀವು ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ಈ ಸಲ ಕ್ರಿಯಾತ್ಮಕ ಮತ್ತು ಹಾಸ್ಯಭರಿತ ಸ್ವಾತಂತ್ರ್ಯ ದಿನಾಚರಣೆಯ ವಾಟ್ಸ್ಯಾಪ್ ಸ್ಟಿಕ್ಕರ್ಗಳನ್ನು ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಬಹುದಾಗಿದೆ.
ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ. ನಿಮ್ಮ ಪ್ರೀತಿಪಾತ್ರರಿಗೆ ವಾಟ್ಸ್ಯಾಪ್ ಸ್ಟಿಕ್ಕರ್ ಕಳುಹಿಸಲು ಮೊದಲಿಗೆ ಹೀಗೆ ಮಾಡಿ. ನಿಮ್ಮ ಮೊಬೈಲ್ನ ಪ್ಲೇ ಸ್ಟೋರ್ನಲ್ಲಿ "WhatsApp stickers for Independence Day" ಎಂದು ಸರ್ಚ್ ಮಾಡಿ.
ಬಳಿಕ ಅಲ್ಲಿ ಬರುವ ಆ್ಯಪ್ಗಳಲ್ಲಿ ನಿಮಗಿಷ್ಟವಾದ ಆ್ಯಪ್ನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ಒಂದು ಸಲ ಆ್ಯಪ್ ಇನ್ಸ್ಟಾಲ್ ಆದರೆ, ನಿಮಗೆ ಬೇಕಾದ ವಾಟ್ಸ್ಯಾಪ್ ಸ್ಟಿಕ್ಕರ್ಗಳನ್ನು Add to WhatsApp ಎಂದು ಕೊಡಬೇಕು.
ಇದಾದ ನಂತರ ನಿಮ್ಮ ಗೆಳೆಯರಿಗೆ ಮತ್ತು ಪ್ರೀತಿ ಪಾತ್ರರಿಗೆ ನಿಮಗಿಷ್ಟವಾದ ವಿವಿಧ ಬಗೆಯ ವಾಟ್ಸ್ಯಾಪ್ ಸ್ಟಿಕ್ಕರ್ಗಳನ್ನು ಕಳುಹಿಸಿ, ಆನಂದಿಸಿ.
Published by:Latha CG
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ