Independence Day 2022: ಮಹಿಳೆಯರನ್ನು ಗೌರವಿಸಿ; ಮನವಿ ಮಾಡಿದ ಪಿಎಂ ಮೋದಿ

ಕೆಲವು ಕಾರಣಕ್ಕಾಗಿ ನಾವು ನಮ್ಮ ಮಾತಿನ ಮೂಲಕ, ನಮ್ಮ ನಡವಳಿಕೆಯ ಮೂಲಕ ಮಹಿಳೆಯರನ್ನು ಅಗೌರವಗೊಳಿಸುತ್ತೇವೆ. ಇಂತಹ ಮನಸ್ಥಿತಿಯನ್ನು ನಾವು ಹೋಗಲಾಡಿಸಬೇಕಿದೆ ಎಂದು ಅವರು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

 • Share this:
  ದೆಹಲಿ: ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಐತಿಹಾಸಿಕ ಕೋಟೆಯಿಂದ ಒಂಬತ್ತನೇ ಬಾರಿಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi Speech) ಮಹಿಳೆಯ ಬಗ್ಗೆ ಮಾನಸಿಕ ಬದಲಾವಣೆಗೆ ಕರೆ ನೀಡಿದರು. ಮಹಿಳೆಯರಿಗೆ ಗೌರವವು  (Respect Women) ಭಾರತದ ಬೆಳವಣಿಗೆಯ ಪ್ರಮುಖ ಆಧಾರ ಸ್ತಂಭವಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, 'ನಾರಿಶಕ್ತಿ'ಗೆ (Nari Shakti) ಬೆಂಬಲ ನೀಡುವ ಅಗತ್ಯವನ್ನು ಒತ್ತಿ ಹೇಳಿದರು. ದೈನಂದಿನ ಜೀವನದಲ್ಲಿ ಮಹಿಳೆಯರ ಬಗೆಗಿನ ಮನಸ್ಥಿತಿಯನ್ನು ಬದಲಾಯಿಸುವಂತೆ ಮನವಿ ಮಾಡಿದರು.

  ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರವನ್ನು ವಂದಿಸಿದ ಪ್ರಧಾನಿ ಮೋದಿ, ರಾಣಿ ಲಕ್ಷ್ಮೀಬಾಯಿ, ಝಲ್ಕರಿಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಬೇಗಂ ಹಜರತ್ ಮಹಲ್, ದೇಶದ ಮಹಿಳೆಯರ ಶಕ್ತಿಯನ್ನು ನೆನಪಿಸಿಕೊಂಡಾಗ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯಾಗುತ್ತದೆ ಎಂದು ಹೇಳಿದರು.

  ನಡವಳಿಕೆ, ಮಾತು ಹಿಡಿತದಲ್ಲಿರಲಿ
  ಕೆಲವು ಕಾರಣಕ್ಕಾಗಿ ನಾವು ನಮ್ಮ ಮಾತಿನ ಮೂಲಕ, ನಮ್ಮ ನಡವಳಿಕೆಯ ಮೂಲಕ ಮಹಿಳೆಯರನ್ನು ಅಗೌರವಗೊಳಿಸುತ್ತೇವೆ. ಇಂತಹ ಮನಸ್ಥಿತಿಯನ್ನು ನಾವು ಹೋಗಲಾಡಿಸಬೇಕಿದೆ ಎಂದು ಅವರು ಕರೆ ನೀಡಿದರು.

  ಕರ್ನಾಟಕದ ಕಿತ್ತೂರು ರಾಣಿ ಚೆನ್ನಮ್ಮರ ಸ್ಮರಣೆ
  ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಕರ್ನಾಟಕದ ಸ್ವಾತಂತ್ರ್ಯ ಕಲಿಗಳು ಮತ್ತು ಸಮಾಜ ಸುಧಾರಕರ ಕುರಿತು ಸಹ ಸ್ಮರಿಸಿದ್ದಾರೆ. ಕರ್ನಾಟಕದ ಹೆಮ್ಮೆಯ ಕಿತ್ತೂರು ರಾಣಿ ಚೆನ್ನಮ್ಮ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿಕೊಂಡಿದ್ದಾರೆ. ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ (Kittur Rani Chennamma) ಸೇರಿದಂತೆ ಭಾರತದ ಮಹಿಳೆಯರ ಶಕ್ತಿಯನ್ನು ಸ್ಮರಿಸಿಕೊಂಡಿದ್ದಾರೆ. ಮಹಿಳೆಯರ ಸ್ವಾತಂತ್ರ್ಯ ಹೋರಾಟವನ್ನು ನೆನೆಸಿಕೊಂಡಾಗ ಪ್ರತಿಯೊಬ್ಬ ಭಾರತೀಯನು ಹೆಮ್ಮೆಯಿಂದ ಪುಳಕಿತನಾಗುತ್ತಾನೆ ಎಂದು ಪ್ರಧಾನಿ ಮೋದಿ (Independence Day 2022) ಹೇಳಿದ್ದಾರೆ. ಅಲ್ಲದೇ ನಾರಾಯಣ ಗುರು ಅವರನ್ನು (Narayana Guru) ಸಹ ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿಕೊಂಡಿದ್ದಾರೆ.

  ದೇಶದ ಅಭಿವೃದ್ಧಿಗೆ ಸಹಕಾರ ನೀಡಿ
  ಭ್ರಷ್ಟಾಚಾರ ದೇಶವನ್ನು ದುರ್ಬಲಗೊಳಿಸುತ್ತಿದೆ. ದೇಶ ಬಿಟ್ಟವರನ್ನು ವಾಪಸ್ ಕರೆತಂದು ಶಿಕ್ಷಿಸುವ ಕೆಲಸ ಮಾಡಲಾಗ್ತಿದೆ. ಭ್ರಷ್ಟಾಚಾರ ಮುಕ್ತ ಮಾಡಲು ನನಗೆ ಸಹಕಾರ ನೀಡಿ. ನಾನು 130 ಕೋಟಿ ಜನರ ಬೆಂಬಲ ಕೇಳುತ್ತಿದ್ದೇನೆ. ಭ್ರಷ್ಟಾಚಾರಿಗಳ ಓಲೈಕೆ ಅಂತ್ಯವಾಗಬೇಕಿದೆ. ಭ್ರಷ್ಟಾಚಾರಕ್ಕೆ ದೇಶದ ವಿರೋಧ ಇದೆ. ಕುಟುಂಬ ರಾಜಕಾರಣದಿಂದ ದೇಶಕ್ಕೆ ಯಾವುದೇ ಲಾಭವಿಲ್ಲ. ಕುಟುಂಬ ರಾಜಕಾರಣದಿಂದ ಕುಟುಂಬಕಷ್ಟೇ ಲಾಭ ಎಂದು ವ್ಯಾಖ್ಯಾನಿಸಿದರು.

  ಇದನ್ನೂ ಓದಿ: Independence Day: ವಿಜಯಪುರದಲ್ಲಿ ಹಾರಾಡಿದ ವಿಶೇಷ ಧ್ವಜ: 1947, ಆಗಸ್ಟ್ 14 ರ ಮಧ್ಯರಾತ್ರಿ ಹಾರಿತ್ತು ಈ ತಿರಂಗಾ!

  ದೇಶದ ಅಭಿವೃದ್ಧಿಗೆ ಮುಡಿಪಿಡಿ

  ಮುಂದಿನ 25 ವರ್ಷಗಳನ್ನು ದೇಶದ ಅಭಿವೃದ್ಧಿಗೆ ಮುಡಿಪಾಗಿಡಲು ಯುವಜನರನ್ನು ನಾನು ಒತ್ತಾಯಿಸುತ್ತೇನೆ. ನಾವು ಇಡೀ ಮಾನವೀಯತೆಯ ಅಭಿವೃದ್ಧಿಗೆ ಸಹ ಶ್ರಮಿಸುತ್ತೇವೆ. ಅದು ಭಾರತದ ಶಕ್ತಿ" ಎಂದು ಅವರು ಹೇಳಿದರು.

  ಇದನ್ನೂ ಓದಿ: Independence Day 2022: 100ನೇ ಸ್ವಾತಂತ್ರ್ಯೋತ್ಸವದ ವೇಳೆ ದೇಶ ಹೀಗಿರಬೇಕು; ನಾಗರಿಕರಿಗೆ ಗುರಿ ನೀಡಿದ ಪಿಎಂ ಮೋದಿ

  ಪ್ರಜಾಪ್ರಭುತ್ವದ ತಾಯಿ ಭಾರತ
  ಭಾರತವನ್ನು "ಪ್ರಜಾಪ್ರಭುತ್ವದ ತಾಯಿ" ಎಂದು ಕರೆದ ಪಿಎಂ ಮೋದಿ, "ಭಾರತವು ತನ್ನ 75 ವರ್ಷಗಳ ಪ್ರಯಾಣದಲ್ಲಿ ಅಮೂಲ್ಯವಾದ ಸಾಮರ್ಥ್ಯವನ್ನು ಹೊಂದಿದೆ. ಅನೇಕ ಸವಾಲುಗಳನ್ನು ಎದುರಿಸಿದೆ ಎಂದು ಅವರು ತಮ್ಮ ಭಾಷಣದಲ್ಲಿ ವ್ಯಾಖ್ಯಾನಿಸಿದರು.

  5ಜಿ ಸೇವೆ ಶೀಘ್ರ ಆರಂಭ

  5ಜಿ ಮೊಬೈಲ್ ಸೇವೆಗಳು ಭಾರತದಲ್ಲಿ ಪ್ರಾರಂಭವಾಗಲಿವೆ ಎಂದು ಸೋಮವಾರದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು. 'ಮೇಡ್-ಇನ್-ಇಂಡಿಯಾ' ತಂತ್ರಜ್ಞಾನವು ನವ ಭಾರತದ ಸವಾಲುಗಳನ್ನು ಎದುರಿಸಲಿದೆ.  ಮೊದಲ ಬಾರಿಗೆ ಭಾರತದ ತಂತ್ರಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನವು ಪ್ರತಿಯೊಂದು ಕ್ಷೇತ್ರದಲ್ಲೂ ಸುಧಾರಣೆಗಳನ್ನು ತರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದರು.
  Published by:guruganesh bhat
  First published: