• Home
 • »
 • News
 • »
 • national-international
 • »
 • Independence Day 2022: 100ನೇ ಸ್ವಾತಂತ್ರ್ಯೋತ್ಸವದ ವೇಳೆ ದೇಶ ಹೀಗಿರಬೇಕು; ನಾಗರಿಕರಿಗೆ ಗುರಿ ನೀಡಿದ ಪಿಎಂ ಮೋದಿ

Independence Day 2022: 100ನೇ ಸ್ವಾತಂತ್ರ್ಯೋತ್ಸವದ ವೇಳೆ ದೇಶ ಹೀಗಿರಬೇಕು; ನಾಗರಿಕರಿಗೆ ಗುರಿ ನೀಡಿದ ಪಿಎಂ ಮೋದಿ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

5ಜಿ ಮೊಬೈಲ್ ಸೇವೆಗಳು ಭಾರತದಲ್ಲಿ ಪ್ರಾರಂಭವಾಗಲಿವೆ ಎಂದು ಸೋಮವಾರದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

 • Share this:

  ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಮುಂದಿನ 25 ವರ್ಷಗಳಲ್ಲಿ ಕರ್ತವ್ಯಗಳನ್ನು ಪೂರೈಸುವ ಐದು ನಿರ್ಣಯಗಳ ಮೇಲೆ ಶಕ್ತಿಯನ್ನು ಕೇಂದ್ರೀಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೋಮವಾರ ದೇಶದ ನಾಗರಿಕರಿಗೆ ಕರೆ ನೀಡಿದರು. ಸ್ವಾತಂತ್ರ್ಯದ 100ನೇ ವರ್ಷದೊಳಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸಾಗಿಸುವ ಗುರಿಯೊಂದಿಗೆ ನಾವು ಕೆಲಸ ಮಾಡಬೇಕಾಗಿದೆ ಎಂದು ಸ್ವಾತಂತ್ರ್ಯ ದಿನಾಚರಣೆಯಂದು (Independence Day 2022) ಕೆಂಪುಕೋಟೆಯ ಆವರಣದಿಂದ ದೇಶವನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು. ದೇಶ ಹಿಂದೆ ಬಂಧನದಲ್ಲಿದ್ದ ಪ್ರತಿಯೊಂದು ಕುರುಹುಗಳನ್ನು ತೊಡೆದುಹಾಕಲು, ದೇಶದ ಪರಂಪರೆ ಮತ್ತು ಏಕತೆಯ ಬಗ್ಗೆ ಹೆಮ್ಮೆ ಪಡುವಂತೆ ಮಾಡಲು ಮುಂದಿನ 25 ವರ್ಷಗಳಲ್ಲಿ ಶ್ರಮಿಸುವಂತೆ ಅವರು (PM Narendra Modi Speech) ಕರೆ ನೀಡಿದರು.


  5ಜಿ ಮೊಬೈಲ್ ಸೇವೆಗಳು ಭಾರತದಲ್ಲಿ ಪ್ರಾರಂಭವಾಗಲಿವೆ ಎಂದು ಸೋಮವಾರದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು. 'ಮೇಡ್-ಇನ್-ಇಂಡಿಯಾ' ತಂತ್ರಜ್ಞಾನವು ನವ ಭಾರತದ ಸವಾಲುಗಳನ್ನು ಎದುರಿಸಲಿದೆ.  ಮೊದಲ ಬಾರಿಗೆ ಭಾರತದ ತಂತ್ರಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನವು ಪ್ರತಿಯೊಂದು ಕ್ಷೇತ್ರದಲ್ಲೂ ಸುಧಾರಣೆಗಳನ್ನು ತರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದರು.


  ಪ್ರಜಾಪ್ರಭುತ್ವದ ತಾಯಿ ಭಾರತ


  ಭಾರತವನ್ನು "ಪ್ರಜಾಪ್ರಭುತ್ವದ ತಾಯಿ" ಎಂದು ಕರೆದ ಪಿಎಂ ಮೋದಿ, "ಭಾರತವು ತನ್ನ 75 ವರ್ಷಗಳ ಪ್ರಯಾಣದಲ್ಲಿ ಅಮೂಲ್ಯವಾದ ಸಾಮರ್ಥ್ಯವನ್ನು ಹೊಂದಿದೆ. ಅನೇಕ ಸವಾಲುಗಳನ್ನು ಎದುರಿಸಿದೆ ಎಂದು ಅವರು  ತಮ್ಮ ಭಾಷಣದಲ್ಲಿ ವ್ಯಾಖ್ಯಾನಿಸಿದರು.


  ದೇಶದ ಅಭಿವೃದ್ಧಿಗೆ ಸಹಕಾರ ನೀಡಿ


  ಭ್ರಷ್ಟಾಚಾರ ದೇಶವನ್ನು ದುರ್ಬಲಗೊಳಿಸುತ್ತಿದೆ. ದೇಶ ಬಿಟ್ಟವರನ್ನು ವಾಪಸ್ ಕರೆತಂದು ಶಿಕ್ಷಿಸುವ ಕೆಲಸ ಮಾಡಲಾಗ್ತಿದೆ. ಭ್ರಷ್ಟಾಚಾರ ಮುಕ್ತ ಮಾಡಲು ನನಗೆ ಸಹಕಾರ ನೀಡಿ. ನಾನು 130 ಕೋಟಿ ಜನರ ಬೆಂಬಲ ಕೇಳುತ್ತಿದ್ದೇನೆ. ಭ್ರಷ್ಟಾಚಾರಿಗಳ ಓಲೈಕೆ ಅಂತ್ಯವಾಗಬೇಕಿದೆ. ಭ್ರಷ್ಟಾಚಾರಕ್ಕೆ ದೇಶದ ವಿರೋಧ ಇದೆ. ಕುಟುಂಬ ರಾಜಕಾರಣದಿಂದ ದೇಶಕ್ಕೆ ಯಾವುದೇ ಲಾಭವಿಲ್ಲ. ಕುಟುಂಬ ರಾಜಕಾರಣದಿಂದ ಕುಟುಂಬಕಷ್ಟೇ ಲಾಭ. ಮುಂದಿನ 25 ವರ್ಷಗಳನ್ನು ದೇಶದ ಅಭಿವೃದ್ಧಿಗೆ ಮುಡಿಪಾಗಿಡಲು ಯುವಜನರನ್ನು ನಾನು ಒತ್ತಾಯಿಸುತ್ತೇನೆ. ನಾವು ಇಡೀ ಮಾನವೀಯತೆಯ ಅಭಿವೃದ್ಧಿಗೆ ಸಹ ಶ್ರಮಿಸುತ್ತೇವೆ. ಅದು ಭಾರತದ ಶಕ್ತಿ" ಎಂದು ಅವರು ಹೇಳಿದರು.


  ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ


  * ರಾಣಿ ಲಕ್ಷ್ಮೀ ಬಾಯಿ, ದುರ್ಗಾ ಭಾಬಿ, ರಾಣಿ ಚೆನ್ನಮ್ಮ ಬೇಗಂ ಹಜ್ರತ್ ಮಹಲ್​ರಂಥವರು ದೇಶದ ನಾರಿಶಕ್ತಿ ಸ್ವಾತಂತ್ರ್ಯದ ಹೋರಾಟ ಮಾಡಿದವರಿಗೆ ನಮನ, ಸ್ವಾತಂತ್ರ್ಯದ ನಂತರ ದೇಶ ನಿರ್ಮಿಸಿದವರಿಗೆ ನಮನ. ನೆಹರು, ಶಾಸ್ತ್ರಿ, ವಿನೋಬಾ ಭಾವೆ, ಅಸಂಖ್ಯ ಮಹಾಪುರುಷರು, ದೇಶ ನಿರ್ಮಿಸಿದ ಮಹಾಪುರುಷರಿಗೆ ನಮಿಸುವ ಸಮಯ


  ಇದನ್ನೂ ಓದಿ: India's 76th Independence Day: ಕೆಂಪುಕೋಟೆಯಲ್ಲಿ ಹಾರಿದ ತ್ರಿವರ್ಣ ಧ್ವಜ, ನಾರಿಶಕ್ತಿಗೆ ಮೋದಿ ನಮನ: ಇಲ್ಲಿದೆ ನಮೋ ಭಾಷಣದ ಹೈಲೈಟ್ಸ್​


  * ನಮ್ಮ ಆದಿವಾಸಿ ಸಮಾಜವನ್ನೂ ಗೌರವಿಸಬೇಕು, ಆದಿವಾಸಿ ಬಾಂಧವರಲ್ಲಿ ದೇಶಭಕ್ತಿ ಸಮ್ಮಿಲಿತವಾಗಿದೆ. ಹಲವು ಮಹಾಪುರುಷರು ದೇಶಕ್ಕಾಗಿ ದುಡಿದಿದ್ದಾರೆ, ಎಲ್ಲಾ ಮಹಾಪುರುಷರಿಗೆ ನೆನಪಿಸಿಕೊಳ್ಳುವ ಸಮಯ. ಇಂದು ದೇಶ ಎಲ್ಲಾ ವೀರರಿಗೆ ನೆನಪಿಸಿಕೊಂಡು ನಮಿಸಿದೆ


  ಇದನ್ನೂ ಓದಿ: Independence Day 2022: ಕಿತ್ತೂರು ರಾಣಿ ಚೆನ್ನಮ್ಮ, ನಾರಾಯಣ ಗುರುಗಳನ್ನು ಸ್ಮರಿಸಿದ ಪ್ರಧಾನಿ ಮೋದಿ


  * ನಿನ್ನೆ ಆ.14ರಂದು ವಿಭಜನೆಯ ಸ್ಮೃತಿ ದಿನ ನೆನಪಿಸಿಕೊಂಡಿದೆ, ವಿಭಜನೆಯ ಆ ದುಃಖವನ್ನು ದೇಶ ನೆನಪಿಸಿಕೊಂಡಿದೆ. ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ, ದೇಶದ ಸಂಕಲ್ಪ ಪೂರ್ಣಗೊಳಿಸಿದವರಿಗೆ ನಮನ. ಸೇನಾಸಿಬ್ಬಂದಿ, ಪೊಲೀಸರು, ಜನಪ್ರತಿನಿಧಿಗಳಿಗೆ ನಮನ

  Published by:guruganesh bhat
  First published: