• Home
  • »
  • News
  • »
  • national-international
  • »
  • Independence Day 2022: ಕಿತ್ತೂರು ರಾಣಿ ಚೆನ್ನಮ್ಮ, ನಾರಾಯಣ ಗುರುಗಳನ್ನು ಸ್ಮರಿಸಿದ ಪ್ರಧಾನಿ ಮೋದಿ

Independence Day 2022: ಕಿತ್ತೂರು ರಾಣಿ ಚೆನ್ನಮ್ಮ, ನಾರಾಯಣ ಗುರುಗಳನ್ನು ಸ್ಮರಿಸಿದ ಪ್ರಧಾನಿ ಮೋದಿ

ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ

ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ

PM Narendra Modi Independence Day 2022 Speech: ಕಿತ್ತೂರು ರಾಣಿ ಚೆನ್ನಮ್ಮ, ನಾರಾಯಣ ಗುರುಗಳನ್ನು ಸ್ಮರಿಸಿದ ಪ್ರಧಾನಿ ಮೋದಿ ಎಲ್ಲಾ ಭಾರತೀಯರಿಗೆ ಮತ್ತು ಭಾರತವನ್ನು ಬೆಂಬಲಿಸುವ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ.

  • Share this:

    ದೆಹಲಿ: ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಕರ್ನಾಟಕದ ಸ್ವಾತಂತ್ರ್ಯ ಕಲಿಗಳು ಮತ್ತು ಸಮಾಜ ಸುಧಾರಕರ ಕುರಿತು ಸಹ ಸ್ಮರಿಸಿದ್ದಾರೆ. ಕರ್ನಾಟಕದ ಹೆಮ್ಮೆಯ ಕಿತ್ತೂರು ರಾಣಿ ಚೆನ್ನಮ್ಮ ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi Speech) ಸ್ಮರಿಸಿಕೊಂಡಿದ್ದಾರೆ. ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ  ಚೆನ್ನಮ್ಮ (Kittur Rani Chennamma) ಸೇರಿದಂತೆ ಭಾರತದ ಮಹಿಳೆಯರ ಶಕ್ತಿಯನ್ನು ಸ್ಮರಿಸಿಕೊಂಡಿದ್ದಾರೆ. ಮಹಿಳೆಯರ ಸ್ವಾತಂತ್ರ್ಯ ಹೋರಾಟವನ್ನು ನೆನೆಸಿಕೊಂಡಾಗ ಪ್ರತಿಯೊಬ್ಬ ಭಾರತೀಯನು ಹೆಮ್ಮೆಯಿಂದ ಪುಳಕಿತನಾಗುತ್ತಾನೆ ಎಂದು ಪ್ರಧಾನಿ ಮೋದಿ (Independence Day 2022) ಹೇಳಿದ್ದಾರೆ. ಅಲ್ಲದೇ ನಾರಾಯಣ ಗುರು ಅವರನ್ನು (Narayana Guru) ಸಹ ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿಕೊಂಡಿದ್ದಾರೆ. 


    ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಭಾರತೀಯರಿಗೆ ಮತ್ತು ಭಾರತವನ್ನು ಬೆಂಬಲಿಸುವ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ. ಇದು ಹೊಸ ಸಂಕಲ್ಪದೊಂದಿಗೆ ಹೊಸ ದಿಕ್ಕಿನತ್ತ ಹೆಜ್ಜೆ ಹಾಕುವ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿದ್ದಾರೆ.


    5ಜಿ ಸೇವೆ ದೇಶದಲ್ಲಿ ಶೀಘ್ರದಲ್ಲಿ ಆರಂಭ ಎಂದ ಪ್ರಧಾನಿ ಮೋದಿ
    5ಜಿ ಮೊಬೈಲ್ ಸೇವೆಗಳು ಭಾರತದಲ್ಲಿ ಪ್ರಾರಂಭವಾಗಲಿವೆ ಎಂದು ಸೋಮವಾರದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು. 'ಮೇಡ್-ಇನ್-ಇಂಡಿಯಾ' ತಂತ್ರಜ್ಞಾನವು ನವ ಭಾರತದ ಸವಾಲುಗಳನ್ನು ಎದುರಿಸಲಿದೆ. ಮೊದಲ ಬಾರಿಗೆ ಭಾರತದ ತಂತ್ರಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನವು ಪ್ರತಿಯೊಂದು ಕ್ಷೇತ್ರದಲ್ಲೂ ಸುಧಾರಣೆಗಳನ್ನು ತರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದರು.


    ಪ್ರಜಾಪ್ರಭುತ್ವದ ತಾಯಿ ಭಾರತ


    ಭಾರತವನ್ನು "ಪ್ರಜಾಪ್ರಭುತ್ವದ ತಾಯಿ" ಎಂದು ಕರೆದ ಪಿಎಂ ಮೋದಿ, "ಭಾರತವು ತನ್ನ 75 ವರ್ಷಗಳ ಪ್ರಯಾಣದಲ್ಲಿ ಅಮೂಲ್ಯವಾದ ಸಾಮರ್ಥ್ಯವನ್ನು ಹೊಂದಿದೆ. ಅನೇಕ ಸವಾಲುಗಳನ್ನು ಎದುರಿಸಿದೆ ಎಂದು ಅವರು  ತಮ್ಮ ಭಾಷಣದಲ್ಲಿ ವ್ಯಾಖ್ಯಾನಿಸಿದರು.


    ದೇಶದ ಅಭಿವೃದ್ಧಿಗೆ ಸಹಕಾರ ನೀಡಿ


    ಭ್ರಷ್ಟಾಚಾರ ದೇಶವನ್ನು ದುರ್ಬಲಗೊಳಿಸುತ್ತಿದೆ. ದೇಶ ಬಿಟ್ಟವರನ್ನು ವಾಪಸ್ ಕರೆತಂದು ಶಿಕ್ಷಿಸುವ ಕೆಲಸ ಮಾಡಲಾಗ್ತಿದೆ. ಭ್ರಷ್ಟಾಚಾರ ಮುಕ್ತ ಮಾಡಲು ನನಗೆ ಸಹಕಾರ ನೀಡಿ. ನಾನು 130 ಕೋಟಿ ಜನರ ಬೆಂಬಲ ಕೇಳುತ್ತಿದ್ದೇನೆ. ಭ್ರಷ್ಟಾಚಾರಿಗಳ ಓಲೈಕೆ ಅಂತ್ಯವಾಗಬೇಕಿದೆ. ಭ್ರಷ್ಟಾಚಾರಕ್ಕೆ ದೇಶದ ವಿರೋಧ ಇದೆ. ಕುಟುಂಬ ರಾಜಕಾರಣದಿಂದ ದೇಶಕ್ಕೆ ಯಾವುದೇ ಲಾಭವಿಲ್ಲ. ಕುಟುಂಬ ರಾಜಕಾರಣದಿಂದ ಕುಟುಂಬಕಷ್ಟೇ ಲಾಭ. ಮುಂದಿನ 25 ವರ್ಷಗಳನ್ನು ದೇಶದ ಅಭಿವೃದ್ಧಿಗೆ ಮುಡಿಪಾಗಿಡಲು ಯುವಜನರನ್ನು ನಾನು ಒತ್ತಾಯಿಸುತ್ತೇನೆ. ನಾವು ಇಡೀ ಮಾನವೀಯತೆಯ ಅಭಿವೃದ್ಧಿಗೆ ಸಹ ಶ್ರಮಿಸುತ್ತೇವೆ. ಅದು ಭಾರತದ ಶಕ್ತಿ" ಎಂದು ಅವರು ಹೇಳಿದರು.


    ಇದನ್ನೂ ಓದಿ: Independence Day: ಕೆಂಪು ಕೋಟೆಯಲ್ಲಿ ಮೊದಲ ಬಾರಿ 'ಮೇಡ್ ಇನ್ ಇಂಡಿಯಾ' ಫಿರಂಗಿಯಿಂದ ತ್ರಿವರ್ಣ ಧ್ವಜಕ್ಕೆ ವಂದನೆ!


    ಭ್ರಷ್ಟಾಚಾರಿಗಳ ಓಲೈಕೆ ಅಂತ್ಯವಾಗಬೇಕಿದೆ. ಭ್ರಷ್ಟಾಚಾರಕ್ಕೆ ದೇಶದ ವಿರೋಧ ಇದೆ. ಕುಟುಂಬ ರಾಜಕಾರಣದಿಂದ ದೇಶಕ್ಕೆ ಯಾವುದೇ ಲಾಭವಿಲ್ಲ. ಕುಟುಂಬ ರಾಜಕಾರಣದಿಂದ ಕುಟುಂಬಕ್ಕಷ್ಟೇ ಲಾಭ. ಮುಂದಿನ 25 ವರ್ಷಗಳನ್ನು ದೇಶದ ಅಭಿವೃದ್ಧಿಗೆ ಮುಡಿಪಾಗಿಡಲು ಯುವಜನರನ್ನು ನಾನು ಒತ್ತಾಯಿಸುತ್ತೇನೆ. ನಾವು ಇಡೀ ಮಾನವೀಯತೆಯ ಅಭಿವೃದ್ಧಿಗೆ ಸಹ ಶ್ರಮಿಸುತ್ತೇವೆ. ಅದು ಭಾರತದ ಶಕ್ತಿ" ಎಂದು ಅವರು ಹೇಳಿದರು.

    ಇದನ್ನೂ ಓದಿ: Independence Day 2022: 100ನೇ ಸ್ವಾತಂತ್ರ್ಯೋತ್ಸವದ ವೇಳೆ ದೇಶ ಹೀಗಿರಬೇಕು; ನಾಗರಿಕರಿಗೆ ಗುರಿ ನೀಡಿದ ಪಿಎಂ ಮೋದಿ


    ಭಾರತದಲ್ಲೇ ಎಲ್ಲಾ ಉತ್ಪಾದನೆ ಆಗ್ತಿದೆ. ಮಕ್ಕಳು ವಿದೇಶಿ ಆಟಿಕೆ ಬೇಡ ಎಂದು ಹೇಳುತ್ತಿದ್ದಾರೆ. ವಿದೇಶಿಯರು ಸಹ ತಮ್ಮ ಕನಸುಗಳೊಂದಿಗೆ ಭಾರತಕ್ಕೆ ಬರುತ್ತಿದ್ದಾರೆ. ಉತ್ಪಾದನ ವಲಯದಲ್ಲೂ ಭಾರತ ಅಭಿವೃದ್ಧಿ ಸಾಧಿಸುತ್ತಿದೆ. ನಾವು ಸ್ವದೇಶಿಯತ್ತ ಮುನ್ನಡೆಯಬೇಕಿದೆ.

    Published by:guruganesh bhat
    First published: