Independence Day 2020: 'ಆತ್ಮನಿರ್ಭರ್ ಭಾರತ್​​' ಸಾಧನೆಗಾಗಿ 'ವೋಕಲ್​ ಫಾರ್​ ಲೋಕಲ್​​​'ಗೆ ಕರೆಕೊಟ್ಟ ಪ್ರಧಾನಿ ಮೋದಿ

Independence Day 2020: ಆತ್ಮನಿರ್ಭರ್ ಭಾರತದ ಘೋಷಣೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಇಂದಿನ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ವೇಳೆ ಸ್ಥಳೀಯ ಉದ್ಯಮ ಹಾಗೂ ದೇಸೀ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ಮತ್ತು ಆದ್ಯತೆ ನೀಡಬೇಕು ಎಂದು ಕರೆ ನೀಡಿದ್ದಾರೆ.

ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ

ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ

  • Share this:
    ನವದೆಹಲಿ(ಆ.15): ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ ಬಳಿಕ ಭಾಷಣವನ್ನು ಆರಂಭಿಸಿದರು. ಇಂದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನವನ್ನು ನೆನೆಯುವ ದಿನ. ನಮ್ಮ ರಕ್ಷಣೆಗಾಗಿ ಗಡಿಯಲ್ಲಿ ನಿಂತಿರುವ ಸೈನಿಕರು ಹಾಗೂ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವ ಪೊಲೀಸರು ಸೇರಿಂದತೆ ಭದ್ರತಾ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವ ದಿನ ಇದಾಗಿದೆ. ಈ ದಿನವನ್ನು ಅವರಿಗೆ ಸಮರ್ಪಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

    ಮುಂದುವರೆದ ಅವರು, ಸಾಂಕ್ರಾಮಿಕ ರೋಗ ಕೊರೋನಾ ವೈರಸ್​ ಬಗ್ಗೆ ಮಾತನಾಡಿದರು. ದೇಶಕ್ಕೆ ಕೊರೋನಾ ಕಾಲಿಟ್ಟ ಬಳಿಕ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಕೊರೋನಾದಿಂದಾಗಿ ಅದೆಷ್ಟೋ ಮಂದಿ ಸಾವನ್ನಪ್ಪಿದ್ದಾರೆ. ಹೀಗೆ ಸಾವನ್ನಪ್ಪಿದವರಿಗೆ ನಾನು ಸಂತಾಪವನ್ನು ಸೂಚಿಸುತ್ತೇನೆ ಎಂದರು.

    ಮಾರಕ ಕೊರೋನಾದಿಂದಾಗಿ ಕೆಂಪುಕೋಟೆಯಲ್ಲಿ ಇಂದು ಮಕ್ಕಳ ಕಲರವ ಇಲ್ಲ. ಅವರು ಕೊರೋನಾದಿಂದಾಗಿ ಸ್ವಾತಂತ್ರ್ಯ ಸಂಭ್ರಮದಿಂದ ದೂರ ಉಳಿಯಬೇಕಾಯಿತು ಎಂದು ಹೇಳಿದರು.

    ಪ್ರಸ್ತುತ ನಾವು ಕೊರೋನಾ ಜೊತೆಗೆ, ಪ್ರವಾಹ ಮತ್ತು ಭೂಕುಸಿತದಂತಹ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಈ ನೈಸರ್ಗಿಕ ವಿಕೋಪಗಳು ಅನೇಕ ಜನರನ್ನು ಬಲಿಪಡೆದುಕೊಂಡಿದೆ. ಈ ವಿಪತ್ತುಗಳನ್ನು ಎದುರಿಸುತ್ತಿರುವ ದೇಶದ ಅನೇಕ ರಾಜ್ಯಗಳಿಗೆ ನಾವು ಸದಾ ಬೆಂಬಲ ನೀಡುತ್ತೇವೆ ಎಂದು ಮೋದಿ ಭರವಸೆ ನೀಡಿದರು.

    ಮುಂದಿನ ವರ್ಷ 75ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಹೊಸ ಗುರಿಗಳನ್ನು ಇಟ್ಟುಕೊಳ್ಳಬೇಕು ಎಂದರು.

    Independence Day 2020: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಬಿಗಿ ಭದ್ರತೆ; ಸಾರ್ವಜನಿಕರಿಗಿಲ್ಲ ಪ್ರವೇಶ

    ಆತ್ಮನಿರ್ಭರ್​ ಭಾರತ್​ ರಾಷ್ಟ್ರಕ್ಕೆ ಕಡ್ಡಾಯ:

    ಭಾಷಣದ ವೇಳೆ ಪ್ರಧಾನಿ ಮೋದಿ ಮಹತ್ವವಾದ ವಿಷಯವನ್ನು ಪ್ರಸ್ತಾಪ ಮಾಡಿದರು. ಈ ಮಾರಕ ಕೊರೋನಾ ನಡುವೆ ಭಾರತೀಯರು ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು. ದೇಶದ ಪ್ರತಿಯೊಬ್ಬ ಪ್ರಜೆಯೂ ತಾನು ಸ್ವಾವಲಂಬಿಯಾಗಬೇಕೆಂದು ಸಂಕಲ್ಪ ಮಾಡಬೇಕು. ಇದು ರಾಷ್ಟ್ರದ ಜನರಿಗೆ ಕಡ್ಡಾಯ. ಆತ್ಮನಿರ್ಭರ್​ ಭಾರತ್ ಪರಿಕಲ್ಪನೆ ಭಾರತೀಯರ ಮನಸ್ಸಿನಲ್ಲಿದೆ. ಈ ಕನಸು ಪ್ರತಿಜ್ಞೆಯಾಗಿ ಬದಲಾಗುತ್ತಿದೆ. ಇಂದು 130 ಕೋಟಿ ಭಾರತೀಯರ ಮನಸಲ್ಲಿ ಆತ್ಮನಿರ್ಭರ್​ ಭಾರತದದ ಮಂತ್ರವಾಗಿ ಮಾರ್ಪಟ್ಟಿದೆ ಎಂದರು.

    ಆತ್ಮನಿರ್ಭರ್ ಕನಸನ್ನು ಭಾರತ ಸಾಕಾರಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ಭಾರತೀಯರ ಸಾಮರ್ಥ್ಯ ಮತ್ತು ವಿಶ್ವಾಸದ ಬಗ್ಗೆ ನನಗೆ ನಂಬಿಕೆ ಇದೆ. ಒಮ್ಮೆ ನಾವು ಏನನ್ನಾದರೂ ಮಾಡಲು ನಿರ್ಧರಿಸಿದರೆ, ಆ ಗುರಿಯನ್ನು ಸಾಧಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ ಎಂದು ಮೋದಿ ಹೇಳಿದರು.

    ಇಡೀ ಜಗತ್ತು ಒಂದೇ ಕುಟುಂಬ ಎಂದು ಭಾರತ ಯಾವಾಗಲೂ ನಂಬುತ್ತದೆ. ನಾವು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸುವಾಗ, ಇದೇ ವೇಳೆ ನಮ್ಮ ಪಯಣದಲ್ಲಿ ಮಾನವೀಯತೆಯ ಗುಣವನ್ನೂ ಸಹ ಉಳಿಸಿಕೊಳ್ಳಬೇಕು ಎಂದರು.


    ಆತ್ಮನಿರ್ಭರ್​ ಭಾರತ್​ ಸಾಧನೆಗೆ ಲಕ್ಷಾಂತರ ಸವಾಲುಗಳಿವೆ ಎಂದು ನಾನು ಕೂಡ ಒಪ್ಪುತ್ತೇನೆ. ಜಾಗತಿಕ ಸ್ಪರ್ಧೆಯಲ್ಲಿ ಇವೆಲ್ಲವೂ ಇದ್ದೇ ಇರುತ್ತದೆ. ನಮ್ಮ ದೇಸೀ ಉತ್ಪನ್ನಗಳನ್ನು ನಾವು ಉತ್ತೇಜಿಸಿ ಪ್ರಶಂಸಿಸಬೇಕು. ನಾವು ಇದನ್ನು ಮಾಡದಿದ್ದರೆ ನಮ್ಮ ಉತ್ಪನ್ನಗಳಿಗೆ ಪ್ರೋತ್ಸಾಹ ಸಿಗುವುದಿಲ್ಲ ಎಂದರು.
    Published by:Latha CG
    First published: