Independence Day 2020: ಭಾರತದ ರಾಷ್ಟ್ರಧ್ವಜದ ಇತಿಹಾಸ, ವಿಶೇಷತೆ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ

ಭಾರತದ ರಾಷ್ಟ್ರಧ್ವಜ

ಭಾರತದ ರಾಷ್ಟ್ರಧ್ವಜ

Indian National Flag: ಆಂಧ್ರಪ್ರದೇಶದ ಮಚಲೀಪಟ್ಟಣದ ಪಿಂಗಳಿ ವೆಂಕಯ್ಯ 30ಕ್ಕೂ ಹೆಚ್ಚು ದೇಶಗಳ ರಾಷ್ಟ್ರಧ್ವಜಗಳನ್ನು ಅಧ್ಯಯನ ಮಾಡಿ, ನಮ್ಮ ದೇಶಕ್ಕೆ ಶಾಂತಿ ಮತ್ತು ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರು ಬಣ್ಣದ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದರು.

  • Share this:

ನಾಳೆ ಭಾರತದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಆಗಸ್ಟ್ 15 ದೇಶಾದ್ಯಂತ ತ್ರಿವರ್ಣ ಧ್ವಜವನ್ನು ಹಾರಿಸಿ, ನಮಗೆ ಸ್ವಾತಂತ್ರ್ಯ ಸಿಕ್ಕ ದಿನವನ್ನು ನೆನೆಪಿಸಿಕೊಳ್ಳುವ ದಿನ. ಕೇಸರಿ, ಬಿಳಿ, ಹಸಿರು ಬಣ್ಣದ ಧ್ವಜವನ್ನು ನೋಡಿದರೆ ಪ್ರತಿಯೊಬ್ಬ ಭಾರತೀಯನೂ ರೋಮಾಂಚನಗೊಳ್ಳುತ್ತಾನೆ. ಭಾರತೀಯತೆಯ ಪ್ರತೀಕವಾದ ಈ ತ್ರಿವರ್ಣ ಧ್ವಜದ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ಮಾಹಿತಿ ಇಲ್ಲಿದೆ...


ಅದು 1947ರ ಜುಲೈ 22. ಅಂದು ಪಂಡಿತ್ ಜವಾಹರಲಾಲ್ ನೆಹರು ನೇತೃತ್ವದಲ್ಲಿ ಭಾರತದಲ್ಲಿ ರಾಷ್ಟ್ರಧ್ವಜ ಯಾವ ರೀತಿಯಾಗಿರಬೇಕೆಂಬ ಬಗ್ಗೆ ಚರ್ಚೆ ನಡೆಯಿತು. ಕೇಸರಿ, ಬಿಳಿ ಮತ್ತು ಕಡು ಹಸಿರು ಬಣ್ಣದಲ್ಲಿ ರಾಷ್ಟ್ರಧ್ವಜ ಇರಬೇಕೆಂದು ಪ್ರಸ್ತಾವನೆ ಇಡಲಾಯಿತು. ಮೂರೂ ಬಣ್ಣಗಳೂ ಸಮಾನವಾಗಿರಬೇಕು. ಮಧ್ಯದಲ್ಲಿರುವ ಬಿಳಿ ಬಣ್ಣದ ಮೇಲೆ ಕಡುನೀಲಿ ಬಣ್ಣದಲ್ಲಿ ಅಶೋಕ ಚಕ್ರವನ್ನು ಇರಿಸಬೇಕೆಂಬ ಬಗ್ಗೆಯೂ ನಿರ್ಧರಿಸಲಾಯಿತು. ಈ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿ, ಅಂತಿಮ ನಿರ್ಧಾರಕ್ಕೆ ಬರಲಾಯಿತು.


ಇದನ್ನೂ ಓದಿ: Indian Independence Day: ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಯ ವಿಶೇಷತೆ ಮತ್ತು ಮಹತ್ವ


1947ರ ಆಗಸ್ಟ್​ 15ರಂದು ದೆಹಲಿಯ ಕೆಂಪುಕೋಟೆಯಲ್ಲಿ ಜವಹರಲಾಲ್ ನೆಹರು ಈ ರಾಷ್ಟ್ರಧ್ವಜವನ್ನು ಮೊದಲ ಬಾರಿಗೆ ಹಾರಿಸಿ, ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದರು. ಮೂಲಗಳ ಪ್ರಕಾರ ಮೊದಲು ಈ ಧ್ವಜವನ್ನು ವಿನ್ಯಾಸಗೊಳಿಸಿದವರು ಸ್ವಾಮಿ ವಿವೇಕಾನಂದ ಅವರ ಶಿಷ್ಯೆ ಐರಿಷ್ ದೇಶದ ಸಿಸ್ಟರ್ ನಿವೇದಿತಾ. 1904-1906ರಲ್ಲಿ ಭಾರತದ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ್ದ ನಿವೇದಿತಾ ಅವರ ಬಳಿಕ ಈ ಧ್ವಜದಲ್ಲಿ ನಾನಾ ರೀತಿಯ ಬದಲಾವಣೆಗಳನ್ನು ಮಾಡಿ 1947ರ ವೇಳೆಗೆ ಅಂತಿಮ ರೂಪ ನೀಡಲಾಯಿತು.


ಇದನ್ನೂ ಓದಿ: 74ನೇ ಸ್ವಾತಂತ್ರ್ಯ ದಿನಾಚರಣೆ: ಸಂಜೆ 7 ಗಂಟೆಗೆ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ ಭಾಷಣ


ಈಗಿನ ರಾಷ್ಟ್ರಧ್ವಜವನ್ನು ವಿನ್ಯಾಸ ಮಾಡಿದವರು ಆಂಧ್ರಪ್ರದೇಶದ ಮಚಲೀಪಟ್ಟಣದ ಪಿಂಗಳಿ ವೆಂಕಯ್ಯ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಇವರು 1902ರ ವೇಳೆಗೆ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಮಹಾತ್ಮಾ ಗಾಂಧೀಜಿ ಅವರನ್ನು ಭೇಟಿಯಾದರು. ಆಗ ಅಲ್ಲಿ ಅವರು ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದರು. ಮಚಲೀಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು ಉನ್ನತ ಶಿಕ್ಷಣಕ್ಕೆ ಕೊಲಂಬೋಕ್ಕೆ ತೆರಳಿದರು.


30ಕ್ಕೂ ಹೆಚ್ಚು ದೇಶಗಳ ರಾಷ್ಟ್ರಧ್ವಜಗಳನ್ನು ಅಧ್ಯಯನ ಮಾಡಿ, ನಮ್ಮ ದೇಶಕ್ಕೆ ಶಾಂತಿ ಮತ್ತು ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರು ಬಣ್ಣದ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದರು. ಹಿಂದೂ ಮತ್ತು ಮುಸ್ಲಿಮರ ಸಾಮರಸ್ಯದ ಸಂಕೇತವಾಗಿ ಕೇಸರಿ ಮತ್ತು ಹಸಿರು ಬಣ್ಣವನ್ನು ಧ್ವಜದಲ್ಲಿ ಇರಿಸಲು ವೆಂಕಯ್ಯ ಪ್ರಸ್ತಾಪಿಸಿದರು. ಆಗ ಗಾಂಧೀಜಿ ಅವರು ಶಾಂತಿ ಮತ್ತು ದೇಶದ ಎಲ್ಲ ಇತರೆ ಸಮುದಾಯದ ಪ್ರತೀಕವಾಗಿ ಬಿಳಿ ಬಣ್ಣವನ್ನು ಸೇರಿಸಲು ಸೂಚಿಸಿದರು. ಹೀಗೆ, ಪಿಂಗಳಿ ವೆಂಕಯ್ಯ ವಿನ್ಯಾಸಗೊಳಿಸಿದ್ದ ಧ್ವಜವನ್ನೇ 1947ರ ಜುಲೈ 22ರಂದು ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಲಾಯಿತು.

First published: