ಭೋಪಾಲ್(ಆ.13): ಈ ಬಾರಿ ಕೊರೋನಾ ಹಿನ್ನೆಲೆ, ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುತ್ತಿಲ್ಲ, ಬದಲಾಗಿ ಸರಳವಾಗಿ ಆಚರಿಸಲಾಗುತ್ತಿದೆ. ಆಗಸ್ಟ್ 15ರಂದು 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ತುಂಬಾ ಸರಳವಾಗಿ ಆಚರಿಸಲಾಗುತ್ತಿದೆ. ಆದರೆ ದೇಶದಲ್ಲಿ 5 ದಿನಗಳ ಮೊದಲೇ ಈ ಸಂಭ್ರಮವನ್ನು ಆಚರಿಸಿದ ನಗರವೂ ಇದೆ.
ಹೌದು, ಮೂರು ದಶಕಗಳಿಂದ ನಡೆದು ಬರುತ್ತಿರುವ ಪರಂಪರೆಯನ್ನು ಮುಂದುವರೆಸಿಕೊಂಡು ಮಧ್ಯಪ್ರದೇಶದ ಮಂದಸೌರ್ ನಗರದ ಪ್ರಸಿದ್ಧ ಪಶುಪತಿನಾಥ ದೇವಸ್ಥಾನದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಗಸ್ಟ್ 10 ರಂದೇ ಆಚರಿಸಲಾಗಿದೆ. ವಾಸ್ತವವಾಗಿ, ಇಂಧೋರ್ನಿಂದ 250 ಕಿ. ಮೀ ದೂರದಲ್ಲಿರುವ ಮಂದಸೌರ್ನ ಶಿವನಾ ನದಿ ಕಿನಾರೆಯಲ್ಲಿರುವ ಈ ದೇವಸ್ಥಾನದಲ್ಲಿ ಸ್ವಾತಂತ್ರ್ಯೋತ್ಸವವನ್ನು ಹಿಂದೂ ಪಂಚಾಂಗದಂತೆ ಆಚರಿಸಲಾಗುತ್ತದೆ.
Gaganachukki Falls: ಧುಮ್ಮಿಕ್ಕಿ ಹರಿಯುತ್ತಿರುವ ಗಗನಚುಕ್ಕಿ ಜಲಪಾತ ನೋಡಲು ಎರಡು ಕಣ್ಣು ಸಾಲದು..!
ಪಶುಪತಿನಾಥ ದೇವಸ್ಥಾನದ ಪುರೋಹಿತ ಹಾಗೂ ಆಡಳಿತ ಸಂಸ್ಥೆಯ ಅಧ್ಯಕ್ಷ ಉಮೆಶ್ ಜೋಷಿ ಈ ಕುರಿತಾಗಿ ಮಾತನಾಡುತ್ತಾ, 1947 ರ ಆಗಸ್ಟ್ 15 ರಂದು ಬ್ರಿಟಿಷ್ ದಾಸ್ಯದಿಂದ ಭಾರತ ಮುಕ್ತವಾದಾಗ, ಹಿಂದೂ ಪಂಚಾಂಗದ ಅನ್ವಯ ಶ್ರಾವಣ ಮಾಸದ ಕೃಷ್ಣಾ ಪಕ್ಷದ ಚತುರ್ದಶಿಯಾಗಿತ್ತು. ಹೀಗಾಗಿ ಶಿವ ಮಂದಿರದಲ್ಲಿ ಪ್ರತಿ ವರ್ಷ ಇದೇ ತಿಥಿಯನ್ವಯ ಪೂಜೆ ಮಾಡಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ ಎಂದಿದ್ದಾರೆ.
![]()
ಮಧ್ಯಪ್ರದೇಶದ ಮಂದ್ಸೌರ್ನ ಶಿವನಾ ನದಿ ಕಿನಾರೆಯಲ್ಲಿರುವ ಪಶುಪತಿನಾಥ ದೇವಸ್ಣಾನ ಫೋಟೋ ಕೃಪೆ: ಸುರೆಶ್ ರಾಥೋಡ್(Facebook)
ಅಲ್ಲದೇ ಈ ಬಾರಿ ಇದು(ಶ್ರೌವಣ ಕೃಷ್ಣ ಚತುರ್ದಶಿ) ಆಗಸ್ಟ್ 10ಕ್ಕೆ ಬಂದಿದೆ. ಹೀಗಾಗಿ ನಾವು ನಮ್ಮ ಪರಂಪರೆಯಂತೆ ಅಂದು ಪಶುಪತಿನಾಥ ದೇವಸ್ಥಾನದಲ್ಲಿ ಭಗವಂತ ಶಿವನಿಗೆ ವಿಶೇಷ ಪೂಜೆ ಮಾಡಿದೆವು. ಈ ವೇಳೆ ಗರಿಕೆ ಹುಲ್ಲಿನ ನೀರನ್ನು ಅಷ್ಠಮುಖಿ ಶಿವಲಿಂಗಕ್ಕೆ ಅಭಿಷೇಕ ಮಾಡಿ ದೇಶದ ಸಮೃದ್ಧಿಗಾಗಿ ಪ್ರಾರ್ಥಿಸಿದೆವು. ಈ ಪರಂಪರೆ 1987ರಿಂದಲೇ ಆಚರಣೆಯಲ್ಲಿದೆ ಎಂದೂ ಉಮೇಶ್ ಜೋಷಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ