HOME » NEWS » National-international » INDANE OIL INDANE OIL CUSTOMERS CAN BOOK LPG CYLINDER THROUGH WHATSAPP NOW SCT

Indane Oil: ಇಂಡೇನ್ ಆಯಿಲ್ ಗ್ರಾಹಕರೇ ಗಮನಿಸಿ; ವಾಟ್ಸಾಪ್​ನಲ್ಲೂ LPG ಸಿಲಿಂಡರ್ ಬುಕ್ ಮಾಡಬಹುದು!

Indane Oil Booking: ಇಂಡೇನ್ ಆಯಿಲ್ ಗ್ರಾಹಕರು REFILL ಎಂದು ಟೈಪ್ ಮಾಡಿ, ನಿಮ್ಮ ರಿಜಿಸ್ಟರ್ಡ್​​ ನಂಬರ್​ನಿಂದ 7588888824 ನಂಬರ್​ಗೆ ವಾಟ್ಸಾಪ್​ನಲ್ಲಿ ಮೆಸೇಜ್ ಕಳುಹಿಸಿದರೆ ಸಿಲಿಂಡರ್ ಬುಕ್ ಆಗುತ್ತದೆ.

Sushma Chakre | news18-kannada
Updated:November 3, 2020, 10:04 AM IST
Indane Oil: ಇಂಡೇನ್ ಆಯಿಲ್ ಗ್ರಾಹಕರೇ ಗಮನಿಸಿ; ವಾಟ್ಸಾಪ್​ನಲ್ಲೂ LPG ಸಿಲಿಂಡರ್ ಬುಕ್ ಮಾಡಬಹುದು!
Android Apps
  • Share this:
ಬೆಂಗಳೂರು (ನ. 3): ನವೆಂಬರ್ 1ರಿಂದ ಎಲ್​ಪಿಜಿ ಸಿಲಿಂಡರ್ ಬುಕಿಂಗ್ ಮತ್ತು ಡೆಲಿವರಿ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಎಲ್​ಪಿಜಿ ಗ್ರಾಹಕರ ಅನುಕೂಲಕ್ಕಾಗಿ ಇಂಡೇನ್ ಆಯಿಲ್ ಕೆಲವು ಬದಲಾವಣೆಗಳನ್ನು ತಂದಿದೆ. ಇಂಡೇನ್ ಆಯಿಲ್ ಗ್ರಾಹಕರಿಗೆ ಇನ್ನುಮುಂದೆ ಗ್ಯಾಸ್​ ಸಿಲಿಂಡರ್ ಬುಕ್ ಮಾಡುವಾಗ ಒಂದೇ ಸಂಖ್ಯೆಯ ಸೇವೆಯನ್ನು ಜಾರಿಗೊಳಿಸಿದೆ. ಇನ್ನು ಇಂಡೇನ್ ಆಯಿಲ್ ಎಲ್​ಪಿಜಿ ಗ್ರಾಹಕರು 7718955555 ಸಂಖ್ಯೆಗೆ ಫೋನ್ ಮಾಡಿ, ಸಿಲಿಂಡರ್ ಬುಕ್ ಮಾಡಬೇಕು. ದೇಶದೆಲ್ಲೆಡೆ ಇದೇ ನಂಬರ್ ಜಾರಿಯಲ್ಲಿರಲಿದ್ದು, ದೇಶದ ಎಲ್ಲ ಭಾಗದಲ್ಲಿರುವ ಇಂಡೇನ್ ಆಯಿಲ್ ಗ್ರಾಹಕರು ಇದೇ ಸಂಖ್ಯೆಗೆ ಕರೆ ಮಾಡಿ ಸಿಲಿಂಡರ್ ಬುಕ್ ಮಾಡಬಹುದು. ಈಗಾಗಲೇ ಇಂಡೇನ್ ಆಯಿಲ್ ತನ್ನ ಗ್ರಾಹಕರ ರಿಜಿಸ್ಟರ್ಡ್​ ಮೊಬೈಲ್ ನಂಬರ್​ಗೆ ಈ ಬಗ್ಗೆ ಮೆಸೇಜ್ ಕಳುಹಿಸಿ, ಮಾಹಿತಿ ನೀಡಿದೆ. ಇಷ್ಟು ಮಾತ್ರವಲ್ಲದೆ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಹಕರಿಗೆ ಇನ್ನಷ್ಟು ಸುಲಭ ಸೇವೆ ನೀಡುವ ಸಲುವಾಗಿ ಇಂಡೇನ್ ಆಯಿಲ್ ವಾಟ್ಸಾಪ್​ ಮೂಲಕ ಗ್ಯಾಸ್​ ಸಿಲಿಂಡರ್ ಬುಕ್ ಮಾಡುವ ಆಯ್ಕೆಯನ್ನೂ ನೀಡಿದೆ. ಹೀಗಾಗಿ, ನೀವೀಗ ಗ್ಯಾಸ್​ ಸಿಲಿಂಡರ್ ಬುಕ್ ಮಾಡುವುದು ಮೊದಲಿಗಿಂತಲೂ ಸುಲಭ.

ಯಾವ ರೀತಿಯಲ್ಲಿ ಇಂಡೇನ್ ಆಯಿಲ್ ಎಲ್​ಪಿಜಿ ಸಿಲಿಂಡರ್​ಗಳನ್ನು ಬುಕ್ ಮಾಡಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ...

1. ಇಂಡೇನ್ ಆಯಿಲ್ ಗ್ಯಾಸ್​ ಏಜೆನ್ಸಿ ಅಥವಾ ಡಿಸ್ಟ್ರಿಬ್ಯೂಟರ್​ ಜೊತೆ ನೇರವಾಗಿ ಮಾತನಾಡುವ ಮೂಲಕ ಸಿಲಿಂಡರ್ ಬುಕ್ ಮಾಡಬಹುದು.

2. ಗ್ಯಾಸ್​ ಏಜೆನ್ಸಿಯವರಿಗೆ ಫೋನ್ ಮಾಡಿ ಬುಕ್ ಮಾಡಬಹುದು.

3. ಇಂಡೇನ್ ಆಯಿಲ್​ನ ಈ ವೆಬ್​ಸೈಟ್​ಗೆ ಭೇಟಿ ನೀಡಿ ಅಲ್ಲಿ ಕೂಡ ಸಿಲಿಂಡರ್ ಬುಕ್ ಮಾಡಬಹುದು.

4. ಇಂಡೇನ್ ಆಯಿಲ್ ಕಂಪನಿಯ 7588888824 ವಾಟ್ಸಾಪ್​ ನಂಬರ್​ಗೆ ನಿಮ್ಮ ರಿಜಿಸ್ಟರ್ಡ್​​ ಮೊಬೈಲ್ ನಂಬರ್​ನಿಂದ ಮೆಸೇಜ್ ಕಳುಹಿಸಿ ಬುಕ್ ಮಾಡಬಹುದು.

5. ಇಂಡೇನ್ ಆಯಿಲ್ ಆ್ಯಪ್ ಡೌನ್​ಲೋಡ್ ಮಾಡಿಕೊಂಡು, ಅದರಲ್ಲಿ ಕೂಡ ಸಿಲಿಂಡರ್ ಬುಕ್ ಮಾಡಬಹುದು.ವಾಟ್ಸಾಪ್​ನಲ್ಲಿ ಬುಕ್ ಮಾಡುವುದು ಹೇಗೆ?:
ಇಂಡೇನ್ ಆಯಿಲ್ ಗ್ರಾಹಕರು 7588888824 ನಂಬರ್​ಗೆ ವಾಟ್ಸಾಪ್​ ಮೂಲಕ ಮೆಸೇಜ್ ಕಳುಹಿಸಿ, ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಬಹುದು. REFILL ಎಂದು ಟೈಪ್ ಮಾಡಿ, ನಿಮ್ಮ ರಿಜಿಸ್ಟರ್ಡ್​​ ನಂಬರ್​ನಿಂದ 7588888824 ನಂಬರ್​ಗೆ ವಾಟ್ಸಾಪ್​ನಲ್ಲಿ ಮೆಸೇಜ್ ಕಳುಹಿಸಿದರೆ ಸಿಲಿಂಡರ್ ಬುಕ್ ಆಗುತ್ತದೆ. ನಿಮ್ಮ ನಂಬರ್​ಗೆ ಬಂದ ಓಟಿಪಿಯನ್ನು ಹೇಳಿದ ನಂತರ ಡೆಲಿವರಿ ಬಾಯ್ ನಿಮಗೆ ಸಿಲಿಂಡರ್ ಡೆಲಿವರಿ ನೀಡುತ್ತಾನೆ.

ನೀವು ಯಾವ ವೇಳೆಯಲ್ಲಿ ಬೇಕಾದರೂ ನಿಮ್ಮ ರಿಜಿಸ್ಟರ್​ ಫೋನ್ ನಂಬರ್​ನಿಂದ ಕರೆ ಮಾಡಿ, ಇಂಡೇನ್ ಆಯಿಲ್ ಸಿಲಿಂಡರ್ ಬುಕ್ ಮಾಡಬಹುದು. ಈಗಾಗಲೇ ಈ ಹೊಸ ನಿಯಮ ಜಾರಿಗೆ ಬಂದಿದೆ. ಇಂಡೇನ್ ಆಯಿಲ್ ಗ್ರಾಹಕರು 7718955555 ಈ ನಂಬರ್​ಗೆ ಮೆಸೇಜ್ ಕಳುಹಿಸಿ ಅಥವಾ ಐವಿಆರ್​ಎಸ್​ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು. ಆದರೆ, ಯಾವುದೋ ನಂಬರ್​ನಿಂದ ಮೆಸೇಜ್ ಕಳುಹಿಸಿದರೆ ಗ್ಯಾಸ್​ ಸಿಲಿಂಡರ್ ಬುಕ್ ಆಗುವುದಿಲ್ಲ. ನೀವು ನಿಮ್ಮ ಗ್ಯಾಸ್​ ಕನೆಕ್ಷನ್​ನ ದಾಖಲಾತಿಯ ಜೊತೆ ಕೊಟ್ಟಿರುವ ನಂಬರ್​ನಿಂದ ಮೆಸೇಜ್ ಕಳುಹಿಸಿದರೆ ಮಾತ್ರ ಸಿಲಿಂಡರ್ ಬುಕ್ ಆಗಲಿದೆ. ಅಥವಾ ನಿಮಗೆ ನೀಡಲಾದ ಇಂಡೇನ್​ನ ಬುಕ್​ನಲ್ಲಿರುವ ಐವಿಆರ್​ಎಸ್ ಕಸ್ಟಮರ್ ಐಡಿ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು.
Published by: Sushma Chakre
First published: November 3, 2020, 10:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories