Monkeypox: ಅಮೆರಿಕದಲ್ಲಿ ಹೆಚ್ಚಿದ ಮಂಕಿಪಾಕ್ಸ್ ಪ್ರಕರಣ; ಕಾಯಿಲೆಯ ರೋಗಲಕ್ಷಣಗಳು ಹೀಗಿವೆ

ಅಮೆರಿಕದಲ್ಲಿ ಪತ್ತೆಯಾಗಿರುವ ಬಹುತೇಕ ಪ್ರಕರಣಗಳು ಪ್ರಯಾಣದಿಂದ ತಗುಲಿದ ಪ್ರಕರಣಗಳಾಗಿದ್ದರೂ ತಜ್ಞರ ಪ್ರಕಾರ ಸಮುದಾಯ ಹರಡುವಿಕೆಯೂ ತನ್ನ ಕೊಡುಗೆ ನೀಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋಂಕಿತ ವ್ಯಕ್ತಿಯೊಂದಿಗೆ ಅತಿ ನಿಕಟ ಸಂಪರ್ಕ ಹೊಂದಿರುವವರಲ್ಲೂ ಸಹ ಈ ಸೋಂಕು ಪತ್ತೆಯಾಗಿರುವುದೇ ತಜ್ಞರ ಈ ಅಭಿಪ್ರಾಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕಳೆದ ಎರಡು ವರ್ಷಗಳ ಹಿಂದೆ ಜಗತ್ತು ಮಹಾಮಾರಿ ಕೊರೋನಾ ವೈರಾಣುವಿನ ಬಿಗಿ ಮುಷ್ಠಿಗೆ ಸಿಲುಕಿ ನಲುಗಿತ್ತು. ಈಗಷ್ಟೆ ಅದರ ಪ್ರಭಾವ ಕಡಿಮೆಯಾಗುತ್ತಿದ್ದು ಜಗತ್ತು ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿದೆ. ಅಂಥದ್ದರಲ್ಲಿ ಅಮೆರಿಕದಲ್ಲಿ (America) ಮಂಕಿಪಾಕ್ಸ್  (Monkeypox) ವೈರಾಣು ಹರಡುತ್ತಿದ್ದು ಮತ್ತೆ ಆತಂಕದ ಮನೆ ಮಾಡುವಂತೆ ಮಾಡಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಪ್ರಸ್ತುತ ಅಂಕಿ-ಅಂಶಗಳ ಪ್ರಕಾರ ಅಮೆರಿಕದ 43 ಪ್ರದೇಶಗಳಲ್ಲಿ ಈ ವೈರಾಣು ಹರಡಿದೆ ಎಂದು ತಿಳಿದುಬಂದಿದೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ (Center for Disease Control and Prevention) ಪ್ರಕಾರ, ಈಗಾಗಲೇ ಅಮೆರಿಕದಲ್ಲಿ ಸಾವಿರಕ್ಕೂ ಹೆಚ್ಚು ಮಂಕಿಪಾಕ್ಸ್ ಅಥವಾ ಆರ್ಥೋಪಾಕ್ಸ್ (Orthopox) ವೈರಾಣು ತಗುಲಿದ ಪ್ರಕರಣಗಳು ದೃಢಪಟ್ಟಿವೆ. ಇನ್ನು, ಜಗತ್ತಿನಾದ್ಯಂತ ಈ ಬಗ್ಗೆ ತಿಳಿಯುವುದಾದರೆ ಒಟ್ಟು 59 ದೇಶಗಳಿಂದ 11,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ ಎನ್ನಲಾಗಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಅತಿ ಹೆಚ್ಚಿನ ಅಂದರೆ 161 ಮಂಕಿಪಾಕ್ಸ್ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ತದನಂತರದ ಸ್ಥಾನದಲ್ಲಿ ನ್ಯೂಯಾರ್ಕ್ ಹಾಗೂ ಇಲ್ಲಿನಾಯಿಸ್ ನಗರಗಳಿದ್ದು ಎರಡೂ ನಗರಗಳಲ್ಲಿ ಕ್ರಮವಾಗಿ 159 ಹಾಗೂ 152 ಪ್ರಕರಣಗಳು ದಾಖಲಾದ ಬಗ್ಗೆ ವರದಿಯಾಗಿದೆ.

ಹಾಗೆ ನೋಡಿದರೆ ಅಮೆರಿಕದಲ್ಲಿ ಪ್ರಥಮ ಮಂಕಿಪಾಕ್ಸ್ ಪ್ರಕರಣವು ಮೇನಲ್ಲಿ ವರದಿಯಾಗಿತ್ತು. ಕೆನಡಾಗೆ ಭೇಟಿ ನೀಡಿ ಬಂದಿದ್ದ ಮಸಾಚುಸೆಟ್ಸ್ ವ್ಯಕ್ತಿಯೋರ್ವನಲ್ಲಿ ಇದು ಪತ್ತೆಯಾಗಿತ್ತು.

ಅಮೆರಿಕದಲ್ಲಿ ಹೆಚ್ಚಿದ ಮಂಕಿಪಾಕ್ಸ್ ಪ್ರಕರಣಗಳು 
ಸದ್ಯ ಅಮೆರಿಕದಲ್ಲಿ ಪತ್ತೆಯಾಗಿರುವ ಬಹುತೇಕ ಪ್ರಕರಣಗಳು ಪ್ರಯಾಣದಿಂದ ತಗುಲಿದ ಪ್ರಕರಣಗಳಾಗಿದ್ದರೂ ತಜ್ಞರ ಪ್ರಕಾರ ಸಮುದಾಯ ಹರಡುವಿಕೆಯೂ ತನ್ನ ಕೊಡುಗೆ ನೀಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋಂಕಿತ ವ್ಯಕ್ತಿಯೊಂದಿಗೆ ಅತಿ ನಿಕಟ ಸಂಪರ್ಕ ಹೊಂದಿರುವವರಲ್ಲೂ ಸಹ ಈ ಸೋಂಕು ಪತ್ತೆಯಾಗಿರುವುದೇ ತಜ್ಞರ ಈ ಅಭಿಪ್ರಾಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Sri Lanka: ಗೋತಬಯ ರಾಜೀನಾಮೆ ಅಂಗೀಕಾರ, ಮುಂದಿನ ವಾರದೊಳಗೆ ಲಂಕಾಕ್ಕೆ ಹೊಸ ಅಧ್ಯಕ್ಷರ ಆಯ್ಕೆ

ಏತನ್ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆಯು ಈ ಸೋಂಕಿಗೆ ಸಂಬಂಧಿಸಿದಂತೆ ಜೂನ್ ಕೊನೆಯಲ್ಲಿ ಜಾಗತಿಕವಾಗಿ ಈ ಸೋಂಕಿನ ತೀವ್ರತೆಯು ಮಧ್ಯಮ ಅವಸ್ಥೆಯಲ್ಲಿದೆ ಎಂದು ಹೇಳಿದೆ.

ಅಲ್ಲದೆ, ಅಮೆರಿಕದ ಆರೋಗ್ಯ ಸಂಬಂಧಿ ಪ್ರಾಧಿಕಾರವಾದ ಸಿಡಿಸಿಯು ತನ್ನ ಪ್ರಜೆಗಳಿಗೆ ಅಮೆರಿಕದಿಂದ ಹೊರಗೆ ಪ್ರಯಾಣಿಸುವುದಕ್ಕೆ ಸಂಬಂಧಿಸಿದಂತೆ ಲೆವೆಲ್ 2 ಎಚ್ಚರಿಕೆಯನ್ನು ಜಾರಿ ಮಾಡಿದೆ. ಅಂದರೆ, ಹೀಗೆ ಹೊರಗೆ ಪ್ರಯಾಣಿಸುವವರು ಹೆಚ್ಚು ಸುಧಾರಿತ ಸುರಕ್ಷತಾ ಕ್ರಮಗಳನ್ನು ಅಚ್ಚುಕಟ್ಟಾಗಿ ಪಾಲಿಸುವುದನ್ನು ಸೂಚಿಸುತ್ತದೆ.

ಏನಿದು ಮಂಕಿಪಾಕ್ಸ್ ಕಾಯಿಲೆ?

ಸಿಡಿಸಿ ಪ್ರಕಾರ, ಮಂಕಿಪಾಕ್ಸ್ ಕಾಯಿಲೆ ಎಂಬುದು ಒಂದು ಅಪರೂಪದ ಕಾಯಿಲೆಯಾಗಿದೆ. ಇದನ್ನು ಸಾಮಾನ್ಯವಾಗಿ ಮಧ್ಯ ಅಥವಾ ಪಶ್ಚಿಮ ಆಫ್ರಿಕಾದಲ್ಲಿ ಮಾತ್ರವೇ ಕಾಣಬಹುದು. ಇದು ಪ್ರತಿ ಹತ್ತು ಜನರಲ್ಲಿ ಒಬ್ಬರನ್ನು ಸಾವಿಗೀಡು ಮಾಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.

ಪ್ರಸ್ತುತ ಅಮೆರಿಕದಲ್ಲಿ ಜೈವಿಕವಾಗಿ ಕನಿಷ್ಠ ಈ ವೈರಾಣುವಿನ ಎರಡು ರೂಪಾಂತರಗಳು ಸಕ್ರಿಯವಾಗಿವೆ ಎಂದು ಸಿಡಿಸಿ ತನ್ನ ಹೇಳಿಕೆಯಲ್ಲಿ ಪ್ರಕಟಿಸಿದೆ. ಅಮೆರಿಕದಲ್ಲಿ ಕಂಡುಬಂದಿರುವ ಈ ತಳಿಗಳು ಯುರೋಪ್ ನಲ್ಲಿನ ಕಂಡುಬಂದ ತಳಿಗಳೊಂದಿಗೆ ಸಂಬಂಧ ಹೊಂದಿವೆ ಎನ್ನಲಾಗಿದ್ದು ಇವು ಮೂಲ ಮಂಕಿಪಾಕ್ಸ್ ವೈರಾಣುವಿನಿಗಿಂತ ಕಡಿಮೆ ಘಾತಕವಾಗಿದೆ ಎನ್ನಲಾಗಿದೆ.

ಸೋಂಕು ತಗುಲಿದ ಸುಮಾರು ಒಂದು ಇಲ್ಲವೆ ಎರಡು ವಾರಗಳ ನಂತರ ಆರಂಭಿಕ ಲಕ್ಷಣಗಳು ಗೋಚರಿಸಲು ಪ್ರಾರಂಭಿಸುತ್ತವೆ ಎನ್ನಲಾಗಿದೆ. ಸಿಡಿಸಿ ಪ್ರಕಾರ, ಇನ್ಕ್ಯೂಬೇಷನ್ ಅವಧಿಯು ಕಡಿಮೆ ಎನ್ನಬಹುದಾದ ಐದು ದಿನಗಳಿಂದ ಹಿಡಿದು 21 ದಿನಗಳವರೆಗೂ ಇರಬಹುದು ಎನ್ನಲಾಗಿದೆ.

ಈ ಸೋಂಕು ಉಂಟಾದ ಲಕ್ಷಣಗಳು ಒಮ್ಮೊಮ್ಮೆ ಸಾಮಾನ್ಯವಾಗಿ ಮಂಕಿಪಾಕ್ಸ್ ಲಕ್ಷಣಗಳು ಕಂಡುಬರುವುದಕ್ಕಿಂತಲೂ ಭಿನ್ನವಾಗಿ ಕಂಡುಬರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಸರ್ವೇ ಸಾಮಾನ್ಯವಾದ ಮಂಕಿಪಾಕ್ಸ್ ಲಕ್ಷಣಗಳು 
ಜನನಾಂಗಗಳ ಸುತ್ತಲೂ ಗಾಯಗಳು, ಜ್ವರ, ಬಾತ ಲಿಂಫ್ ನೋಡುಗಳು, ನುಂಗುವಾಗ ಗಂಟಲು ನೋವು. ಮಂಕಿಪಾಕ್ಸ್ ನಲ್ಲಿ ಜ್ವರ ಬರುವುದಕ್ಕಿಂತ ಮುಂಚೆಯೇ ಚರ್ಮದ ಮೇಲೆ ರ್‍ಯಾಶುಗಳು ಉಂಟಾಗುತ್ತವೆ.

ಸಿಡಿಸಿ ಪ್ರಕಟಿಸಿದ ವರದಿಯಲ್ಲಿ ಮೊದಲಿಗೆ ಮಂಕಿಪಾಕ್ಸ್ ತಗುಲಿಸಿಕೊಂಡಿದ್ದ ಮಸಾಚುಸೆಟ್ಸ್ ವ್ಯಕ್ತಿಯ ಗುದದ್ವಾರದಲ್ಲಿ ಗಾಯಗಳು ಕಂಡುಬಂದಿದ್ದವು. ನ್ಯೂಯಾರ್ಕ್ ವ್ಯಕ್ತಿಯೊಬ್ಬರಿಗೆ ಬಾಯಲ್ಲಿ ಗಾಯ ಹಾಗೂ ಗುದದ್ವಾರದ ಗಾಯಕ್ಕೆ ಚಿಕಿತ್ಸೆ ನೀಡಲಾಗಿತ್ತು.

ಈ ಸಂದರ್ಭದಲ್ಲಿ ಆ ವ್ಯಕ್ತಿ ಲೈಂಗಿಕವಾಗಿ ಹರಡಲಾದ ಸೋಂಕಿನಿಂದ ಬಳಲುತ್ತಿರಬಹುದೆಂದೇ ಮೊದಲಿಗೆ ನಂಬಲಾಗಿತ್ತು ಎಂದು ಹೇಳಿದೆ.

ಇದನ್ನೂ ಓದಿ:  Abortion: ಮಹಿಳೆಯರೇ ಎಚ್ಚರ; ಒಪ್ಪಿಗೆಯನ್ನೇ ಪಡೆಯದೆ ಗರ್ಭಪಾತ ಮಾಡಿದ ನಕಲಿ ವೈದ್ಯ

ಈಗ ಉದ್ಭವವಾಗಿರುವ ಮಂಕಿಪಾಕ್ಸ್ ಬಿಕ್ಕಟ್ಟಿನ ಮುಂಚೆ ಮಂಕಿಪಾಕ್ಸ್ ಲಕ್ಷಣಗಳೆಂದರೆ ಜ್ವರ, ತಲೆನೋವು ಹಾಗೂ ಬೆನ್ನು ನೋವುಗಳು ಒಂದೆರಡು ದಿನಗಳ ಕಾಲ ಇರುತ್ತಿತ್ತು. ತದನಂತರ ಚರ್ಮದ ಮೇಲೆ ಕೆಂಪು ರ್‍ಯಾಶಸ್ ಗಳು ಉಂಟಾಗುತ್ತವೆ. ಈ ರ್‍ಯಾಶಸ್ ಮುಖದಿಂದ ಪ್ರಾರಂಭವಾಗಿ ತೋಳುಗಳು ಹಾಗೂ ನಂತರ ಕಾಲುಗಳವರೆಗೂ ವ್ಯಾಪಿಸುತ್ತವೆ.

ಈ ಸ್ಥಿತಿಯೂ ಸಹ ಒಂದೆರಡು ದಿನಗಳವರೆಗೆ ಇರುತ್ತದೆ. ತದನಂತರ ಇವು ಬಕ್ಕೆಗಳಾಗಿ ಮಾರ್ಪಾಡು ಹೊಂದುತ್ತವೆ ಹಾಗೂ ಆ ಸ್ಥಿತಿಯಲ್ಲಿ ಒಂದೆರಡು ದಿನಗಳ ಕಾಲ ಇರುತ್ತದೆ. ಇದಾದ ತರುವಾಯ ಬಕ್ಕೆಗಳಲ್ಲಿ ಪಸ್ ರೀತಿಯ ಬಿಳಿಯ ದ್ರವವಿರುವಿಕೆಯ ಸ್ಥಿತಿ ಉಂಟಾಗಿ ಅದು ಸ್ವಲ್ಪ ಕಾಲ ಹಾಗೆ ಇರುತ್ತದೆ. ಇದು ಮುಂದೆ ಕಲೆಯಾಗಿ ಒಣಗಲು ಪ್ರಾರಂಭಿಸುತ್ತವೆ. ಹಾಗೂ ಅಂತಿಮವಾಗಿ ತಾವೇ ಕಿತ್ತು ಬೀಳುತ್ತವೆ.

ಹರಡುವಿಕೆ

ಸ್ಮಾಲ್ ಪಾಕ್ಸ್ ಬಗ್ಗೆ ನೀವು ಕೇಳಿರಬಹುದಲ್ಲವೆ. ಅದೇ ರೀತಿ ಮಂಕಿಪಾಕ್ಸ್ ಸಹ ಲಕ್ಷಣ ಹೊಂದಿದೆ. ಅಂದರೆ ಜ್ವರ, ತಲೆನೋವು, ಮೈಕೈ ನೋವು ಇತ್ಯಾದಿ. ಆದರೆ, ಸ್ಮಾಲ್ ಪಾಕ್ಸ್ ರೀತಿಯಲ್ಲಿ ಇದು ಅಷ್ಟೊಂದು ವೇಗವಾಗಿ ಹರಡುವುದಿಲ್ಲ.

ಮಂಕಿಪಾಕ್ಸ್ ಕಾಯಿಲೆಗೆ ನಿರ್ದಿಷ್ಟ ಇಂಥದ್ದೆ ಎಂಬ ಚಿಕಿತ್ಸಾ ವಿಧಾನ ಇಲ್ಲ. ಆದಾಗ್ಯೂ, ಇದನ್ನು ನಿಯಂತ್ರಿಸಲು ಸ್ಮಾಲ್ ಪಾಕ್ಸಿಗೆ ಬಳಸುವ ಲಸಿಕೆ ಹಾಗೂ ಇತರೆ ಆಂಟಿ-ವೈರಲ್ ಔಷಧಿಗಳನ್ನು ಇದಕ್ಕೆ ನೀಡಬಹುದಾಗಿದೆ.
Published by:Ashwini Prabhu
First published: