ಪೆಟ್ರೋಲ್​​-ಡೀಸೆಲ್​​​ ಬೆಲೆ ಏರಿಕೆಗೆ ತತ್ತರಿಸಿದ ವಾಹನ ಸವಾರ; ಇಲ್ಲಿದೆ ಬೆಲೆ ವಿವರ

ಇತ್ತೀಚೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಕಾರಣ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ. ಮೂರು ತಿಂಗಳ ಮುನ್ನ ಬೆಲೆ ಏರಿಕೆಗೆ ತತ್ತರಿಸಿ ಹೋಗಿದ್ದ ವಾಹನ ಸವಾರರಿಗೆ ಮತ್ತೆ ಸಂಕಷ್ಟ ಸಿಲುಕಿದ್ದಾರೆ.

news18
Updated:September 26, 2019, 3:57 PM IST
ಪೆಟ್ರೋಲ್​​-ಡೀಸೆಲ್​​​ ಬೆಲೆ ಏರಿಕೆಗೆ ತತ್ತರಿಸಿದ ವಾಹನ ಸವಾರ; ಇಲ್ಲಿದೆ ಬೆಲೆ ವಿವರ
ಪೆಟ್ರೋಲ್​​ ಬಂಕ್​​​
news18
Updated: September 26, 2019, 3:57 PM IST
ಬೆಂಗಳೂರು(ಸೆ.26): ಸೌದಿ ಅರೇಬಿಯಾದ ತೈಲ ಉತ್ಪಾದಕ ಘಟಕಗಳ ಮೇಲೆ ಡ್ರೋನ್ ದಾಳಿ ನಡೆದ ಬಳಿಕ ಪೆಟ್ರೋಲ್​​-ಡೀಸೆಲ್​​ ಬೆಲೆ ಏರಿಕೆಯಾಗುತ್ತಲೇ ಇದೆ. ಇಂದಿನ ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿಯೂ ಡೀಸೆಲ್​​​-ಪೆಟ್ರೋಲ್​​ ದರ ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 7 ಪೈಸೆ ಹಾಗೂ ಡಿಸೇಲ್ ಬೆಲೆ 6 ಪೈಸೆ ಏರಿಕೆಯಾಗಿದೆ. ಈ ಮೂಲಕ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್​​​ಗೆ ರೂ. 74.19, ಡೀಸೆಲ್​​​ಗೆ ರೂ. 67.14 ಆಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ರೂ. 76.73 ಆಗಿದೆ. ಅಲ್ಲದೇ ಡಿಸೇಲ್ 7 ಪೈಸೆ ಏರಿಕೆಯೊಂದಿಗೆ ಪ್ರತಿ ಲೀಟರ್ ಗೆ ರೂ. 69.43 ಆಗಿದೆ.

ಇತ್ತೀಚೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಕಾರಣ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ. ಮೂರು ತಿಂಗಳ ಮುನ್ನ ಬೆಲೆ ಏರಿಕೆಗೆ ತತ್ತರಿಸಿ ಹೋಗಿದ್ದ ವಾಹನ ಸವಾರರಿಗೆ ಮತ್ತೆ ಸಂಕಷ್ಟ ಸಿಲುಕಿದ್ದಾರೆ. ಮುಂದಿನ ದಿನಗಳಲ್ಲಿಯೂ ಇಂಧನ ದರದಲ್ಲಿ ಭಾರೀ ಏರಿಕೆಯಾಗಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಲೀಟರ್​​ಗೆ 5 ರೂ.ನಿಂದ 10 ರೂ. ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.

ತೈಲ ರಾಷ್ಟ್ರಗಳ ಅಂತಾರಾಷ್ಟ್ರೀಯ ಕಚ್ಛಾ ತೈಲ ಮಾರಾಟ ದರ ಸಮಾನವಾಗಿರುವುದಿಲ್ಲ. ಅಮೆರಿಕ ಮೊದಲಾದ ರಾಷ್ಟ್ರಗಳಿಗೆ ಕಡಿಮೆ ದರಕ್ಕೆ ತೈಲ ಸಿಗುತ್ತದೆ. ಆದರೆ, ಭಾರತ ತೆರಬೇಕಾದ ಬೆಲೆ ತುಸು ಹೆಚ್ಚು. ಇದರ ಜೊತೆಗೆ ಈ ವಹಿವಾಟು ನಡೆಯುವುದು ಡಾಲರ್ ಕರೆನ್ಸಿಯಲ್ಲೇ. ಹೀಗಾಗಿ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಷ್ಟೂ ಭಾರತ ತೆರಬೇಕಾದ ತೈಲ ಬೆಲೆ ಇನ್ನಷ್ಟು ಹೆಚ್ಚಳವಾಗುತ್ತಲೇ ಇರುತ್ತದೆ.

ಇದನ್ನೂ ಓದಿ: ಮತ್ತೆ ಪೆಟ್ರೋಲ್​​-ಡೀಸೆಲ್​​ ಬೆಲೆಯಲ್ಲಿ ಇಳಿಕೆ: ಇಲ್ಲಿದೆ ದರದ ಪಟ್ಟಿ

ಕೇಂದ್ರದಿಂದ ವಿಧಿಸಲಾಗುವು ಅಬಕಾರಿ ಸುಂಕವು ನಿರ್ದಿಷ್ಟ ಮೊತ್ತದಾಗಿರುತ್ತದೆ. ಅಂತಾರಾಷ್ಟ್ರಿಯ ಬೆಲೆಗಳು ಎಷ್ಟೇ ಏರಿಳಿಕೆಯಾದರೂ ಅಬಕಾರಿ ಸುಂಕದಲ್ಲಿ ವ್ಯತ್ಯಾಸವಿರುವುದಿಲ್ಲ. ಆದರೆ, ರಾಜ್ಯಗಳು ವಿಧಿಸುವ ವ್ಯಾಟ್ ತೆರಿಗೆಯು ಶೇಕಡಾವಾರು ಲೆಕ್ಕದಲ್ಲಿರುತ್ತದೆ. ಹೀಗಾಗಿ, ಪೆಟ್ರೋಲ್ ಬೆಲೆ ಹೆಚ್ಚಳದಲ್ಲಿ ವ್ಯಾಟ್ ತೆರಿಗೆ ಪಾತ್ರ ಮಹತ್ವದ್ದಿರುತ್ತದೆ.
--------------
First published:September 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...