Dog Bite: ಹೆಚ್ಚಾಗ್ತಿದೆ ನಾಯಿ ಕಡಿತ ಪ್ರಕರಣ; ಸಾಕುಪ್ರಾಣಿ ಮಾಲೀಕರೇ ಇದನ್ನು ತಪ್ಪದೇ ಓದಿ

ಉತ್ತಮ ತಳಿಯ ನಾಯಿಗಳನ್ನು ಸಾಕುವಾಗ ಮಾಲೀಕರ ಮೈಯೆಲ್ಲಾ ಕಣ್ಣಾಗಿರಬೇಕು. ಸುಮ್ಮನೆ ಇರುವವರ ಮೇಲೆ ದಾಳಿ ಮಾಡಿ ಹಾನಿ ಮಾಡಿದರೆ ಖಂಡಿತ ಇದಕ್ಕೆ ನಾಯಿ ಮಾಲೀಕರೆ ಜವಾಬ್ದಾರರಾಗಿರುತ್ತಾರೆ. ಹೀಗಾಗಿ ನಾಯಿ ಸಾಕುವಾಗ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅಗತ್ಯವಾಗಿ ತೆಗೆದುಕೊಳ್ಳಬೇಕು. ಈ ಬಗ್ಗೆ ಸಾಕುಪ್ರಾಣಿಗಳ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಇಲ್ಲಿ ತಿಳಿಯೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇತ್ತೀಚಿನ ದಿನಗಳಲ್ಲಿ ನಾಯಿ ಕಚ್ಚುವಿಕೆಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೀದಿನಾಯಿಗಳ (Street Dogs) ಜೊತೆಗೆ ಸಾಕು ನಾಯಿಗಳು ಸಹ ಮನುಷ್ಯರ ಮೇಲೆ ಆಕ್ರಮಣ ಮಾಡುತ್ತಿವೆ. ಮೊನ್ನೆ ನಡೆದ ಒಂದು ಘಟನೆಯಲ್ಲಿ ಲಿಫ್ಟ್‌ನಲ್ಲಿ ನಾಯಿ ಮತ್ತು ಅದರ ಮಾಲೀಕ ಮತ್ತು ಒಬ್ಬ ಬಾಲಕ (Boy) ತೆರಳುತ್ತಿದ್ದ ಸಂದರ್ಭದಲ್ಲಿ ಸಾಕು ನಾಯಿ ಮಾಲೀಕನ (Pet Dog Owners) ಎದುರೇ ಆಕ್ರಮಣ (Attack) ಮಾಡಿದೆ. ಮತ್ತೊಂದು ಪ್ರಕರಣದಲ್ಲಿ 11 ವರ್ಷದ ಬಾಲಕನ ಮೇಲೆ ಪಿಟ್‌ಬುಲ್ ನಾಯಿ ದಾಳಿ ಮಾಡಿದ್ದು, ಆತನ ಮುಖಕ್ಕೆ 150 ಹೊಲಿಗೆ ಹಾಕಲಾಗಿದೆ. ಹೀಗೆ ಸಾಕು ನಾಯಿಗಳ ಕಾಟ ಕೂಡ ಹೆಚ್ಚಾಗಿದ್ದು, ಇದಕ್ಕೆ ಸರಿಯಾದ ರೀತಿ ಕ್ರಮವನ್ನು ಮಾಲೀಕರೇ ತೆಗೆದುಕೊಳ್ಳಬೇಕು ಎನ್ನುತ್ತಾರೆ ತಜ್ಞರು.

ಉತ್ತಮ ತಳಿಯ ನಾಯಿಗಳನ್ನು ಸಾಕುವಾಗ ಮಾಲೀಕರ ಮೈಯೆಲ್ಲಾ ಕಣ್ಣಾಗಿರಬೇಕು. ಸುಮ್ಮನೆ ಇರುವವರ ಮೇಲೆ ದಾಳಿ ಮಾಡಿ ಹಾನಿ ಮಾಡಿದರೆ ಖಂಡಿತ ಇದಕ್ಕೆ ನಾಯಿ ಮಾಲೀಕರೆ ಜವಾಬ್ದಾರರಾಗಿರುತ್ತಾರೆ. ಹೀಗಾಗಿ ನಾಯಿ ಸಾಕುವಾಗ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅಗತ್ಯವಾಗಿ ತೆಗೆದುಕೊಳ್ಳಬೇಕು. ಈ ಬಗ್ಗೆ ಸಾಕುಪ್ರಾಣಿಗಳ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಇಲ್ಲಿ ತಿಳಿಯೋಣ.

ನಾಯಿಗಳ ಸರಿಯಾದ ಪಾಲನೆ ಬಗ್ಗೆ ಮಾಲೀಕರಿಗೆ ಅರಿವು ಅಗತ್ಯ
"ನಾಯಿಗಳಿಗೆ ಸರಿಯಾದ ತರಬೇತಿ ನೀಡದ ಸಂದರ್ಭದಲ್ಲಿ ಇಂತಹ ಪ್ರಕರಣಗಳು ನಡೆಯುತ್ತವೆ. ನಾಯಿಗಳನ್ನು ಸಾಕುವ ಸರಿಯಾದ ಮಾರ್ಗದ ಬಗ್ಗೆ ತಳಿಯ ಆಯ್ಕೆ ಬಗ್ಗೆಯೂ ಮಾಲೀಕರು ಚೆನ್ನಾಗಿ ತಿಳಿದುಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಇಂತಹ ದಾಳಿಗಳಿಗೆ ಸರಿಯಾದ ತರಬೇತಿಯ ಕೊರತೆಯ ಜೊತೆಗೆ ಸರಿಯಾದ ವ್ಯಾಯಾಮದ ಕೊರತೆಯೂ ಕಾರಣ.

ನಾಯಿಗಳಿಗೆ ವಾಕಿಂಗ್‌ ಕರೆದುಕೊಂಡು ಹೋಗುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಪಿಟ್‌ಬುಲ್, ಬೀಗಲ್ ಅಥವಾ ಜರ್ಮನ್ ಶೆಫರ್ಡ್ ಯಾವುದೇ ತಳಿ ನಾಯಿಗಳು ಮಾನಸಿಕವಾಗಿ ಅಥವಾ ದೈಹಿಕವಾಗಿ ವ್ಯಾಯಾಮ ಮಾಡದಿರುವ ಸಂದರ್ಭದಲ್ಲಿ ಹತಾಶೆಯಿಂದಾಗಿ ಇವು ಹೀಗೆ ಮಾಡುತ್ತವೆ" ಎಂದು K9 ಸ್ಕೂಲ್ ಸ್ಥಾಪಕ ತಜ್ಞ ಅದ್ನಾನ್ ಖಾನ್ ಹೇಳುತ್ತಾರೆ.

ಸಾಕುಪ್ರಾಣಿಗಳ ಆತಂಕವನ್ನು ಹೇಗೆ ನಿವಾರಿಸುವುದು?
ಸಾಕು ನಾಯಿಗಳ ಆತಂಕವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಅವುಗಳಿಗೆ ಸಾಧ್ಯವಾದಷ್ಟು ದೈಹಿಕ ಮತ್ತು ಮಾನಸಿಕ ಮಾನ್ಯತೆ ನೀಡುವುದು. ತಳಿಯ ಆಧಾರದ ಮೇಲೆ ಅವುಗಳಿಗೆ ಎಷ್ಟು ವ್ಯಾಯಾಮ ಮಾಡಿಸಬೇಕು, ಮಾನಸಿಕವಾಗಿ ಸದೃಢವಾಗಲು ಏನೆಲ್ಲಾ ಚಟುವಟಿಕೆ ಮಾಡಿಸಬೇಕು ಎಂಬುದನ್ನು ಅರ್ಥ ಮಾಡಿಕೊಂಡು ತರಬೇತಿ ನೀಡುವುದರ ಮೂಲಕ ಇವುಗಳನ್ನು ಸುಧಾರಿಸಬಹುದು.

ಇದನ್ನೂ ಓದಿ:Dog Attack: 12 ವರ್ಷದ ಪುಟ್ಟ ಬಾಲಕನ ಮೇಲೆ ಎರಗಿದ ಬೀದಿನಾಯಿ, ಕಿತ್ತು ತಿನ್ನುವ ಭಯಾನಕ ವಿಡಿಯೋ ವೈರಲ್​!

"ಸಾಕುಪ್ರಾಣಿಗಳು ಕ್ರೀಡೆಗಳಂತಹ ಕೆಲಸಗಳಿಂದ ನಿಜವಾಗಿಯೂ ಪ್ರಯೋಜನ ಪಡೆಯುತ್ತವೆ. ಇಲ್ಲದಿದ್ದರೆ ಅವುಗಳೊಳಗೆ ಉಂಟಾಗುವ ಹತಾಶೆಯನ್ನು ಈ ರೀತಿ ದಾಳಿ ಮಾಡುವುದರ ಮೂಲಕ ವ್ಯಕ್ತಪಡಿಸುತ್ತವೆ" ಎನ್ನುತ್ತಾರೆ ತಜ್ಞರು.

ನಿಮ್ಮ ಸಾಕುನಾಯಿಯ ಆಕ್ರಮಣಕಾರಿ ವರ್ತನೆಯನ್ನು ತಿಳಿಯುವುದು ಹೇಗೆ?
ತಮ್ಮ ನಾಯಿಯನ್ನು ಸಂತೋಷವಾಗಿಡುವುದು ಹೇಗೆ ಎಂಬುದನ್ನು ಕಂಡುಹಿಡಿಯಲು ನಾಯಿ ತರಬೇತುದಾರ ಅಥವಾ ನಡವಳಿಕೆ ತಜ್ಞರೊಂದಿಗೆ ಸಂಪರ್ಕ ಹೊಂದಿರಬೇಕು ಎಂದು ಖಾನ್ ಹೇಳುತ್ತಾರೆ. ನಾಯಿಗಳು ಸಂತೋಷವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಮಾಲೀಕರಿಗೆ ಸಾಧ್ಯವಾಗುವುದಿಲ್ಲ.

ತುಂಬಾ ಹೈಪರ್ ಆಗಿರುವುದು, ತುಂಬಾ ಜಿಗಿಯುವುದು ಅಥವಾ ತುಂಬಾ ಖಿನ್ನತೆಗೆ ಒಳಗಾಗುವುದು ಅಥವಾ ಹೆಚ್ಚು ಬೊಗಳುವುದು ಅಥವಾ ಪ್ರಕ್ಷುಬ್ಧವಾಗಿರುವುದು. ನಿಮ್ಮ ನಾಯಿ ಮಲಗಿದ್ದರೂ ನಿದ್ರೆ ಮಾಡದಿದ್ದರೆ, ವಿಶ್ರಾಂತಿ ಪಡೆಯದಿರುವುದು, ಈ ಎಲ್ಲಾ ಚಿಹ್ನೆಗಳಿಂದ ನಾಯಿಗಳ ವರ್ತನೆ ಬದಲಾಗಿದೆ ಎಂದು ಮಾಲೀಕರು ತಿಳಿದುಕೊಳ್ಳಬಹುದು.

ನಿಮ್ಮ ನಾಯಿ ಯಾರನ್ನಾದರೂ ಕಚ್ಚಿದರೆ ಏನು ಮಾಡಬೇಕು?
ಆಕಸ್ಮಿಕವಾಗಿ ನಿಮ್ಮ ಸಾಕುನಾಯಿ ಬೇರೆಯವರನ್ನು ಕಚಚಿದರೆ, ಆ ವ್ಯಕ್ತಿಗೆ ನಾಯಿಗೆ ಹಾಕಿಸಿರುವ ಲಸಿಕೆಗಳ ಪತ್ರವನ್ನು ಕಳುಹಿಸುವುದು ಮೊದಲ ಅಗತ್ಯವಾಗಿರುತ್ತದೆ. ನಂತರ ನಿಮ್ಮ ನಾಯಿಯನ್ನು ಕಟ್ಟುನಿಟ್ಟಾದ ತರಬೇತಿ ಮತ್ತು ಪುನರ್ವಸತಿ ಕಾರ್ಯಕ್ರಮಕ್ಕೆ ಸೇರಿಸುವುದು; ಎಲ್ಲಾ ವೈದ್ಯಕೀಯ ಆರೈಕೆ ಮತ್ತು ಚೇತರಿಕೆಯ ಹಣವನ್ನು ಮಾಲೀಕರೇ ನೋಡಿಕೊಳ್ಳಬೇಕು ಎನ್ನುತ್ತಾರೆ ಖಾನ್.

ನಾಯಿಯನ್ನು ಪಡೆಯುವ ಮೊದಲು ಏನು ಮಾಡಬೇಕು?
ನಾಯಿ ಸಾಕುವ ನಿರ್ಧಾರಕ್ಕೆ ಬರುವ ಮುನ್ನ ನಮ್ಮ ಜೀವನಶೈಲಿಗೆ ಸರಿಹೊಂದುವ ತಳಿಯನ್ನು ಪಡೆಯಬೇಕು. ಅತ್ಯಂತ ಕ್ರೂರ ಎಂದು ಪರಿಗಣಿಸಲಾದ ಅತ್ಯಂತ ಅಪಾಯಕಾರಿ ತಳಿಗಳನ್ನು ಬೆಳೆಸುವಾಗ ಅವುಗಳಿಗೆ ಮೊದಲ ಎರಡು ವರ್ಷಗಳಲ್ಲಿ ಚೆನ್ನಾಗಿ ತರಬೇತಿ ಕೊಡಿಸಬೇಕು.

ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಇತರವುಗಳಂತಹ ಅತ್ಯಂತ ಅಸ್ತವ್ಯಸ್ತವಾಗಿರುವಂತಹ ಸಾಮಾಜಿಕ ಪರಿಸರದಲ್ಲಿಯೂ ಅವು ಹೊಂದಿಕೊಳ್ಳುವ ಹಾಗೆ ತರಬೇತಿ ಕೊಡಿಸಲು ಮೊದಲೇ ನಿರ್ಧರಿಸಬೇಕು. ಈ ಎಲ್ಲಾ ತರಬೇತಿಗಳಿಗೆ ಹೂಡಿಕೆ ಮಾಡಲು ಮಾಲೀಕರು ಸಿದ್ಧರಿರಬೇಕು ಎಂದು ಸಲಹೆ ನೀಡುತ್ತಾರೆ ಸಾಕುಪ್ರಾಣಿ ತಜ್ಞರು.

ಇದನ್ನೂ ಓದಿ:  Milk Crisis: ಲಂಪಿಯಿಂದ ರಾಜಸ್ಥಾನದಲ್ಲಿ 11 ಲಕ್ಷ ಹಸುಗಳಿಗೆ ಅನಾರೋಗ್ಯ, 4 ಲಕ್ಷ ಲೀಟರ್ ಹಾಲು ಉತ್ಪಾದನೆ ಕುಸಿತ!

ಹಣ ಉಳಿಸಲು ನಾಯಿಗಳಿಗೆ ತರಬೇತಿ ಕೊಡಿಸದಿದ್ದರೆ ಭವಿಷ್ಯದಲ್ಲಿ ಇಂತಹ ಅಪಾಯಕಾರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಾಯಿಗಳ ಸಾಕುವಿಕೆ ಪ್ರಕ್ರಿಯೆಯಲ್ಲಿ ಅರ್ಧಂಬರ್ಧ ಜ್ಞಾನವು ಖಂಡಿತ ಅಪಾಯಕಾರಿ, ಆದ್ದರಿಂದ ನಾಯಿಯನ್ನು ಮನೆಗೆ ತರುವ ಮೊದಲು ತಳಿಯ ಬಗ್ಗೆ ತಿಳಿದುಕೊಳ್ಳಿ ಮತ್ತು ಓದಿ. ತಳಿಯ ಅವಶ್ಯಕತೆಗೆ ಅನುಗುಣವಾಗಿ ನಾಯಿಗೆ ತರಬೇತಿ ನೀಡಿ ಎನ್ನುತ್ತಾರೆ ತಜ್ಞರು.
Published by:Ashwini Prabhu
First published: