126 ಮಕ್ಕಳ ಮಾರಣಹೋಮದ ಬಳಿಕ ಎಚ್ಚೆತ್ತುಕೊಂಡ ಬಿಹಾರ ಸಿಎಂ; ಆಸ್ಪತ್ರೆಯಲ್ಲಿ ಹೆಚ್ಚಿನ ಬೆಡ್​ ವ್ಯವಸ್ಥೆಗೆ ಆದೇಶ

ಶ್ರೀ ಕೃಷ್ಣ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳಿಲ್ಲದೇ, ಮೆದುಳಿನ ಜ್ವರದಿಂದ ಬಳಲಿ 120 ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ

Latha CG | news18
Updated:June 18, 2019, 7:00 PM IST
126 ಮಕ್ಕಳ ಮಾರಣಹೋಮದ ಬಳಿಕ ಎಚ್ಚೆತ್ತುಕೊಂಡ ಬಿಹಾರ ಸಿಎಂ; ಆಸ್ಪತ್ರೆಯಲ್ಲಿ ಹೆಚ್ಚಿನ ಬೆಡ್​ ವ್ಯವಸ್ಥೆಗೆ ಆದೇಶ
ಬಿಹಾರ ಸಿಎಂ ನಿತೀಶ್​ ಕುಮಾರ್​
  • News18
  • Last Updated: June 18, 2019, 7:00 PM IST
  • Share this:
ನವದೆಹಲಿ(ಜೂ. 18): ಮುಜಾಫರ್​ನಗರದಲ್ಲಿ 126 ಮಕ್ಕಳ ಮಾರಣಹೋಮ ನಡೆದ ಬಳಿಕ ಎಚ್ಚೆತ್ತುಕೊಂಡ ಬಿಹಾರ ಸಿಎಂ ನಿತೀಶ್​ ಕುಮಾರ್​ ಆಸ್ಪತ್ರೆಗಳಲ್ಲಿ ಹೆಚ್ಚಿನ ಬೆಡ್​ಗಳಿಗೆ ವ್ಯವಸ್ಥೆ ಮಾಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮುಜಾಫರ್​ನಗರದ ಶ್ರೀಕೃಷ್ಣ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 2,500 ಬೆಡ್​ಗಳ ವ್ಯವಸ್ಥೆ ಹಾಗೂ ರೋಗಿಗಳ ಕುಟುಂಬಸ್ಥರು ಉಳಿದುಕೊಳ್ಳಲು ಧರ್ಮಶಾಲಾ ಸ್ಥಾಪನೆ ಮಾಡಿ ಎಂದು ಆದೇಶಿಸಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ ಮಕ್ಕಳ ನಿರಂತರ ಸಾವು, ಪೋಷಕರ ಆಕ್ರಂದನ; ಎಲ್​ಜೆಪಿ ನಾಯಕ ಮಾತ್ರ ಗೋವಾದಲ್ಲಿ ಮೋಜು-ಮಸ್ತಿ?

ಪ್ರಸ್ತುತ 610 ಬೆಡ್​ಗಳಿರುವ ಶ್ರೀ ಕೃಷ್ಣ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯನ್ನು 2,500 ಬೆಡ್​ಗಳಿರುವ ಆಸ್ಪತ್ರೆಯನ್ನಾಗಿ ಪರಿವರ್ತಿಸುವುದು. ರೋಗಿಗಳ ಸಂಬಂಧಿಕರಿಗಾಗಿ ಪ್ರತ್ಯೇಕ ನಿರೀಕ್ಷಣಾ ಕೊಠಡಿ ಅಥವಾ ಧರ್ಮಶಾಲೆಯನ್ನು ನಿರ್ಮಿಸುವುದು ಎಂದು ಸಿಎಂ ನಿತೀಶ್​ ಸೂಚನೆ ನೀಡಿದ್ದಾರೆ.

ಶ್ರೀ ಕೃಷ್ಣ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳಿಲ್ಲದೇ, ಮೆದುಳಿನ ಜ್ವರದಿಂದ ಬಳಲಿ 120 ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಮುಜಾಫರ್​ನಗರ ಸೇರಿ ಪೀಡಿತ ಪ್ರದೇಶಗಳಲ್ಲಿ ಪರಿಸರ ಅಧ್ಯಯನ ನಡೆಸಿ, ವಿಶ್ಲೇಷಣೆ ನಡೆಸಬೇಕು ಎಂದು ಸಿಎಂ ನಿತೀಶ್​ ಕುಮಾರ್​ ಹೇಳಿದ್ದಾರೆ.
First published: June 18, 2019, 4:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading