news18-kannada Updated:February 1, 2021, 3:18 PM IST
ಆದಾಯ ತೆರಿಗೆ
ನವದೆಹಲಿ; ಮಧ್ಯಮ ವರ್ಗದ ನಿರೀಕ್ಷೆಗಳಿಗೆ ವಿರುದ್ಧವಾಗಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2021 ರ ಬಜೆಟ್ನಲ್ಲಿ ವೈಯಕ್ತಿಕ ಆದಾಯ ತೆರಿಗೆಯನ್ನು ಬದಲಿಸಿಲ್ಲ. ಆದಾಗ್ಯೂ, ಕೇಂದ್ರ ತೆರಿಗೆ ಬಜೆಟ್ ಆದಾಯ ತೆರಿಗೆ ಅನುಸರಣೆಯ ಭಾಗವಾಗಿ ಕೆಲವು ಬದಲಾವಣೆಗಳನ್ನು ತರಲಾಗಿದೆ.
ಪಿಂಚಣಿ ಮತ್ತು ಬಡ್ಡಿ ಆದಾಯದಿಂದ ಮಾತ್ರ ಆದಾಯವನ್ನು ಹೊಂದಿರುವ 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಯಾವುದೇ ಆದಾಯ ತೆರಿಗೆ ಸಲ್ಲಿಕೆ ಮಾಡುವ ಅಗತ್ಯವಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ರ ಕೇಂದ್ರ ಬಜೆಟ್ನಲ್ಲಿ ಘೋಷಿಸಿದ್ದಾರೆ.
75 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರ ಮೇಲಿನ ಹೊರೆಯನ್ನು ನಾವು ಕಡಿಮೆಗೊಳಿಸುತ್ತೇವೆ. ಪಿಂಚಣಿ ಮತ್ತು ಬಡ್ಡಿ ಆದಾಯವನ್ನು ಹೊಂದಿರುವ ಹಿರಿಯ ನಾಗರಿಕರಿಗೆ, ಅವರ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.ತೆರಿಗೆ ಪ್ರಕರಣಗಳನ್ನು ಪುನಃ ತೆರೆಯುವ ಸಮಯವನ್ನು 6 ವರ್ಷದಿಂದ 3 ವರ್ಷಕ್ಕೆ ಇಳಿಸಲು ಕೇಂದ್ರ ಸರ್ಕಾರ ಯೋಜಿಸಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಆದಾಯ ತೆರಿಗೆ ಸಲ್ಲಿಕೆಯನ್ನು ಮತ್ತಷ್ಟು ಸುಲಭಗೊಳಿಸಲು, ಐಟಿಆರ್ಗಳಲ್ಲಿ ಮೊದಲೇ ಭರ್ತಿ ಮಾಡಬೇಕಾದ ಸೆಕ್ಯೂರಿಟಿ ಮತ್ತು ಬಡ್ಡಿ ಆದಾಯವನ್ನು ಪಟ್ಟಿ ಮಾಡುವುದರಿಂದ ಬಂಡವಾಳ ಲಾಭ.
ಇದನ್ನು ಓದಿ: Union Budget 2021: ರೈಲ್ವೆ ಇಲಾಖೆಗೆ ದಾಖಲೆಯ 1,10 ಲಕ್ಷ ಕೋಟಿ ರೂ. ಅನುದಾನ ಘೋಷಣೆ
ಕೇಂದ್ರ ಸರ್ಕಾರವು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ಕೇಂದ್ರ ಸ್ಥಾಪಿಸಲು ಪ್ರಸ್ತಾಪ.
ಡಿಜಿಟಲ್ ಮೋಡ್ನಿಂದ ಹೆಚ್ಚು ವ್ಯವಹಾರ ಮಾಡುವ ಕಂಪನಿಗಳಿಗೆ ತೆರಿಗೆ ಲೆಕ್ಕಪರಿಶೋಧನೆ ಮಿತಿಯಿಂದ ವಿನಾಯಿತಿ.
50 ಲಕ್ಷ ರೂ.ಗಿಂತ ಹೆಚ್ಚಿನ ಆದಾಯವನ್ನು ಮರೆಮಾಚುವ ಗಂಭೀರ ತೆರಿಗೆ ಅಪರಾಧಗಳನ್ನು 10 ವರ್ಷಗಳ ನಂತರ ಮತ್ತೆ ತೆರೆಯಬಹುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
Published by:
HR Ramesh
First published:
February 1, 2021, 3:09 PM IST