Income tax return: ಡಿಸೆಂಬರ್​ 31 ಕೊನೆಯ ದಿನಾಂಕ; ಆನ್​​ಲೈನ್​ನಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

Income Tax Filing Deadlines; ನಾಳೆ ಕಡೆಯ ದಿನಾಂಕವಾಗಿದ್ದು (ಡಿಸೆಂಬರ್​ 31) ಐಟಿಆರ್​ ಪಾವತಿಸದೆ ಇದ್ದರೆ 10 ಸಾವಿರ ರೂ.ವರೆಗೆ ದಂಡವನ್ನು ತೆರಬೇಕಾಗುತ್ತದೆ.

ಆದಾಯ ತೆರಿಗೆ

ಆದಾಯ ತೆರಿಗೆ

  • Share this:
    ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಆದಾಯ ತೆರಿಗೆ ಇಲಾಖೆ 2019-20ರ ಹಣಕಾಸು ವರ್ಷ ಅಥವಾ 2020-21ರ ಆದಾಯ ತೆರಿಗೆ ರಿಟರ್ನ್​​ ಸಲ್ಲಿಸುವ ಗಡುವು ನಾಳೆಗೆ ಕೊನೆಗೊಳ್ಳುತ್ತಿದೆ(ಡಿಸೆಂಬರ್ 31) . ಆದ್ದರಿಂದ ಆದಾಯ ತೆರಿಗೆಯನ್ನು ಸಲ್ಲಿಸಲು ನಾಳೆ ಒಂದೆ ದಿನ ಬಾಕಿ ಉಳಿದಿದೆ. ತೆರಿಗೆ ಪಾವತಿದಾರರು ಈ ವರ್ಷದ ಆದಾಯ ತೆರಿಗೆ ಪಾವತಿಸಬೇಕಾಗಿದೆ. ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ ಐಟಿಆರ್​ ರಿಟರ್ನ್​​ ಅನ್ನು ಸುಲಭವಾಗಿ ಸಲ್ಲಿಸಬಹುದಾಗಿದೆ.

    ನಿಯಮಗಳ ಪ್ರಕಾರ, ವಾರ್ಷಿಕವಾಗಿ 250,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಗಳಿಸುವವರು ಕಡ್ಡಾಯವಾಗಿ ಐಟಿಆರ್​ ಸಲ್ಲಿಸಬೇಕಾಗುತ್ತದೆ. ಅಂತೆಯೇ 500,000 ರೂ ಮಿತಿಯ ಒಳಗಿನ ಹಿರಿಯ ನಾಗರಿಕರು ಅಥವಾ 60 ವರ್ಷ ಮತ್ತು 80 ವರ್ಷದೊಳಗಿನವರು ಕೂಡ ಪಾವತಿಸಬೇಕಾಗಿದೆ.

    ನಾಳೆ ಕಡೆಯ ದಿನಾಂಕವಾಗಿದ್ದು (ಡಿಸೆಂಬರ್​ 31) ಐಟಿಆರ್​ ಪಾವತಿಸದೆ ಇದ್ದರೆ 10 ಸಾವಿರ ರೂ.ವರೆಗೆ ದಂಡವನ್ನು ತೆರಬೇಕಾಗುತ್ತದೆ. 500,000 ರೂ ಮಿತಿಯವರು ಆದಾಯ ತೆರಿಗೆ ಪಾವತಿಸದಿದ್ದರೆ 1 ಸಾವಿರ ದಂಡವನ್ನು ನೀಡಬೇಕಾಗುತ್ತದೆ.

    ಆದಾಯ ತೆರಿಗೆ ಪಾವತಿಸದೆ ಇದ್ದವರು ಸುಲಭವಾಗಿ ಆನ್​ಲೈನ್​ ಮೂಲಕ ಪಾವತಿ ಮಾಡಬಹುದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

    -ಶಾಸ್ವತ ಖಾತೆ ಸಂಖ್ಯೆ (ಪಾನ್​ ಕಾರ್ಡ್​) ಬಳಸಿ ಆದಾಯ ತೆರಿಗೆ ವಿಭಾಗದ ಅಧಿಕೃತ ವೆಬ್​ಸೈಟ್​ incometaxindiaefiling.gov.in ಗೆ ಲಾಗ್​ ಇನ್​ ಆಗಬೇಕು

    - ಮೊದಲ ಬಾರಿಗೆ ನೊಂದಾಯಿಸುತ್ತಿರುವುದಾದರೆ ನೋದಾಯಿತ ಬಳಕೆದಾರರ ಆಯ್ಕೆಯನ್ನು (registered user option.) ಕ್ಲಿಕ್​ ಮಾಡಬೇಕು

    -ನಂತರ ಬಳಕೆದಾರರ ಪ್ರಕಾರ ಅರಿಸಬೇಕು (user type)

    -ಅದಾದ ಬಳಿಕ ಪಾನ್​​ ಕಾರ್ಡ್​ ವಿವರ, ಹೆಸರು, ಹುಟ್ಟಿದ ದಿನಾಂಕ, ವಸತಿ ಮುಂತಾದ ಮಾಹಿತಿಯನ್ನು ಭರ್ತಿ ಮಾಡಬೇಕು

    -ನಂತರ ನೋಂದಣಿ ಫಾರ್ಮ್​ ಭರ್ತಿ ಮಾಡಬೇಕು

    -ನೋಂದಣಿಯನ್ನು ಪರಿಶೀಲಿಸಿ

    -ಇಷ್ಟೆಲ್ಲಾ ಆದ ಬಳಿಕ ಲಾಗ್​ ಇನ್​ ಮಾಡಿ ಮತ್ತು ರಿಟರ್ನ್​ ಅನ್ನು ಫೈಲ್​ ಮಾಡಬೇಕು. ಎಲ್ಲಾ ದಾಖಲೆಯನ್ನು ಸರಿಯಾಗಿ ಒದಗಿಸಬೇಕು.

    -ನಂತರ ಎಲ್ಲಾವನ್ನು ಪರಿಶೀಲಿಸಬೇಕು. ಎಲೆಕ್ಟ್ರಾನಿಕ್​ ವೆರಿಫಿಕೇಶನ್​ ಕೋಡ್​(ಇವಿಸಿ) ಅಥವಾ ಅಧಾರ್​​ ಒಟಿಪಿ ಅಥವಾ ಡಿಜಿಟಲ್​ ಸಿಗ್ನೇಚರ್​​ ಬಳಸಿಕೊಂಡು ಆದಾಯ ತೆರಿಗೆಯನ್ನು ಆನ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ.
    First published: