ಐಟಿ ರಿಟರ್ನ್ಸ್ ಮತ್ತು ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆಯ ಅವಧಿ ಮತ್ತೆ ವಿಸ್ತರಣೆ
ಜುಲೈ 31ರೊಳಗೆ ಸಲ್ಲಿಕೆಯಾಗಬೇಕಿದ್ದ ಐಟಿ ರಿಟರ್ನ್ಸ್ ಅನ್ನು ಸಲ್ಲಿಸಲು ಡಿಸೆಂಬರ್ 31ರವೆಗೆ ಅವಕಾಶ ಇದೆ. ಕೊರೋನಾ ಕಾರಣದಿಂದ ಎರಡು ಬಾರಿ ಗಡುವು ಅವಧಿಯ ವಿಸ್ತರಣೆ ಆಗಿದೆ.
news18 Updated:October 24, 2020, 8:47 PM IST

ಸಾಂದರ್ಭಿಕ ಚಿತ್ರ.
- News18
- Last Updated: October 24, 2020, 8:47 PM IST
ನವದೆಹಲಿ: ಕೊರೋನಾ ಸಂಕಷ್ಟದಲ್ಲಿ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವ ಉದ್ದೇಶದಿಂದ ಐಟಿ ರಿಟರ್ನ್ಸ್ ಸಲ್ಲಿಕೆಯ ಅವಧಿಯನ್ನು ಸರ್ಕಾರ ಇನ್ನಷ್ಟು ವಿಸ್ತರಣೆ ಮಾಡಿದೆ. ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಡಿಸೆಂಬರ್ 31ರವರೆಗೆ ಅವಕಾಶ ಮಾಡಿಕೊಡಲಾಗಿದೆ. ಆಡಿಟಿಂಗ್ ಅಗತ್ಯ ಇರುವ ಖಾತೆಗಳವರಿಗೆ ಐಟಿ ರಿಟರ್ನ್ ಸಲ್ಲಿಕೆಯ ಅವಧಿಯನ್ನು ಜನವರಿ 31ರವರೆಗೆ ವಿಸ್ತರಿಸಲಾಗಿದೆ. ಹಾಗೆಯೇ, ಅಂತಾರಾಷ್ಟ್ರೀಯ ವಹಿವಾಟು ಹಾಗೂ ನಿರ್ದಿಷ್ಟಪಡಿಸಿದ ವಹಿವಾಟಿನ ದಾಖಲೆಗಳನ್ನ ಸಲ್ಲಿಸುವ ಅಗತ್ಯ ಇದ್ದವರಿಗೂ ಐಟಿಆರ್ ಸಲ್ಲಿಕೆಗೆ ಅಂತಿಮ ಗಡುವು ಜನವರಿ 31ರವರೆಗೆ ನಿಗದಿಪಡಿಸಲಾಗಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಈ ವಿಚಾರವನ್ನು ಪ್ರಕಟಿಸಿದೆ.
ಯಾವುದೇ ಸಾಂಕ್ರಾಮಿಕ ರೋಗ ಇರದೇ ಸಹಜ ವರ್ಷವಾಗಿದ್ದರೆ ಜುಲೈ 31ರೊಳಗೆ ಐಟಿ ರಿಟರ್ನ್ ಸಲ್ಲಿಸಬೇಕಿತ್ತು. ಆದರೆ, ಕೊರೋನಾ ಮಹಾಮಾರಿ ವಕ್ಕರಿಸಿ ಲಾಕ್ ಡೌನ್ ಆದ ಪರಿಣಾಮ ಆದಾಯ ತೆರಿಗೆ ಪಾವತಿಯ ದಿನಾಂಕವನ್ನು ನವೆಂಬರ್ 30ಕ್ಕೆ ಮುಂದೂಡಲಾಗಿತ್ತು. ಇದೀಗ ಈ ಗಡುವನ್ನು ಇನ್ನೂ ಒಂದು ತಿಂಗಳು ಮುಂದಕ್ಕೆ ಹಾಕಲಾಗಿದೆ. ತೆರಿಗೆ ಬಾಕಿಯನ್ನು ಸಂಪೂರ್ಣವಾಗಿ ಪಾವತಿ ಮಾಡದೇ ಇರುವವರು ಹಾಗೂ ಒಂದು ಲಕ್ಷಕ್ಕಿಂತ ಹೆಚ್ಚು ಸ್ವ ಪ್ರಮಾಣಿತ ತೆರಿಗೆ (ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್) ಕಟ್ಟಬೇಕಿರುವವರು ನಿಗದಿತ ಗಡುವಿನ ಒಳಗೆ ಪಾವತಿ ಮಾಡಬೇಕು. ಇಲ್ಲದಿದ್ದರೆ ಬಡ್ಡಿಯ ಹೇರಿಕೆ ಮಾಡಲಾಗುದು ಎಂದು ಸಿಬಿಡಿಟಿ ಎಚ್ಚರಿಸಿದೆ.
ಇದನ್ನೂ ಓದಿ: ದಸರಾ ಉಡುಗೊರೆ: ಕೇಂದ್ರ ಸರ್ಕಾರದಿಂದ 6,500 ಕೋಟಿ ಮೊತ್ತದ ಚಕ್ರಬಡ್ಡಿ ಮನ್ನಾ
ಇದೇ ವೇಳೆ, 2018-19ರ ವರ್ಷದ ವಾರ್ಷಿಕ ಜಿಎಸ್ಟಿ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31ರವರೆಗೆ ಅವಕಾಶ ಮಾಡಿಕೊಡಲಾಗಿದೆ. ವಾರ್ಷಿಕ 2 ಕೋಟಿಗಿಂತ ಹೆಚ್ಚು ವಹಿವಾಟು ಹೊಂದಿರುವವರು ವಾರ್ಷಿಕ ಜಿಎಸ್ಟಿ ರಿಟರ್ನ್ ಫೈಲ್ ಮಾಡುವುದು ಕಡ್ಡಾಯವಾಗಿದೆ.
ಯಾವುದೇ ಸಾಂಕ್ರಾಮಿಕ ರೋಗ ಇರದೇ ಸಹಜ ವರ್ಷವಾಗಿದ್ದರೆ ಜುಲೈ 31ರೊಳಗೆ ಐಟಿ ರಿಟರ್ನ್ ಸಲ್ಲಿಸಬೇಕಿತ್ತು. ಆದರೆ, ಕೊರೋನಾ ಮಹಾಮಾರಿ ವಕ್ಕರಿಸಿ ಲಾಕ್ ಡೌನ್ ಆದ ಪರಿಣಾಮ ಆದಾಯ ತೆರಿಗೆ ಪಾವತಿಯ ದಿನಾಂಕವನ್ನು ನವೆಂಬರ್ 30ಕ್ಕೆ ಮುಂದೂಡಲಾಗಿತ್ತು. ಇದೀಗ ಈ ಗಡುವನ್ನು ಇನ್ನೂ ಒಂದು ತಿಂಗಳು ಮುಂದಕ್ಕೆ ಹಾಕಲಾಗಿದೆ.
ಇದನ್ನೂ ಓದಿ: ದಸರಾ ಉಡುಗೊರೆ: ಕೇಂದ್ರ ಸರ್ಕಾರದಿಂದ 6,500 ಕೋಟಿ ಮೊತ್ತದ ಚಕ್ರಬಡ್ಡಿ ಮನ್ನಾ
ಇದೇ ವೇಳೆ, 2018-19ರ ವರ್ಷದ ವಾರ್ಷಿಕ ಜಿಎಸ್ಟಿ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31ರವರೆಗೆ ಅವಕಾಶ ಮಾಡಿಕೊಡಲಾಗಿದೆ. ವಾರ್ಷಿಕ 2 ಕೋಟಿಗಿಂತ ಹೆಚ್ಚು ವಹಿವಾಟು ಹೊಂದಿರುವವರು ವಾರ್ಷಿಕ ಜಿಎಸ್ಟಿ ರಿಟರ್ನ್ ಫೈಲ್ ಮಾಡುವುದು ಕಡ್ಡಾಯವಾಗಿದೆ.