Income Tax Return| ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ; ಪೋರ್ಟಲ್ ತಾಂತ್ರಿಕ ದೋಷದಿಂದಾಗಿ ಗಡುವು ವಿಸ್ತರಣೆ ಸಾಧ್ಯತೆ!

ತೆರಿಗೆ ಪಾವತಿದಾರರು ಪೋರ್ಟಲ್‌ನಲ್ಲಿ ತಾವು ಎದುರಿಸಿರುವ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದಿದ್ದರೂ ಅದು ಕೂಡಲೇ ಪರಿಹಾರವಾಗುವ ಲಕ್ಷಣಗಳು ಕಾಣುತ್ತಿಲ್ಲ ಎಂಬುದು ಪಾವತಿದಾರರ ಅಭಿಪ್ರಾಯವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಆರ್ಥಿಕ ವರ್ಷ 2020-21 ರ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸುವ ಗಡುವನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ವಿಸ್ತರಿಸುವ ಸಾಧ್ಯತೆ ಇದೆ ಎಂದು ತೆರಿಗೆ ವಿಶ್ಲೇಷಕರು ನ್ಯೂಸ್ 18 ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಆದಾಯ ತೆರಿಗೆ ಮರುಸಲ್ಲಿಕೆಯ ಅಂತಿಮ ಗಡುವು ಸಪ್ಟೆಂಬರ್ 30 ಆಗಿದೆ. ಈ ಬದಲಾವಣೆಗೆ ಪ್ರಮುಖ ಕಾರಣ www.incometax.gov.in ವೆಬ್‌ಸೈಟ್‌ನಲ್ಲಿ ಆದಾಯ ತೆರಿಗೆ ಮರುಸಲ್ಲಿಕೆ ಸಮಯದಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಎದುರಾಗಿರುವ ಸಮಸ್ಯೆಗಳು ಎಂಬುದಾಗಿ ತಿಳಿಸಲಾಗಿದೆ. ತೆರಿಗೆ ಪಾವತಿದಾರರು ವೆಬ್‌ಸೈಟ್‌ನಲ್ಲಿ ರುವ ಸಮಸ್ಯೆಗಳನ್ನು ವ್ಯಕ್ತಪಡಿಸಲು ಸಾಮಾಜಿಕ ತಾಣಗಳನ್ನು ಬಳಸಿಕೊಂಡಿ ದ್ದರು. ಜೂನ್ 7 ರಂದು ಆದಾಯ ತೆರಿಗೆ (Income Tax) ವಿಭಾಗವು ಸರಳ ಹಾಗೂ ವೇಗವಾದ ತೆರಿಗೆ ರಿಟರ್ನ್‌ಗಾಗಿ ಇ-ಫಿಲ್ಲಿಂಗ್ ಪೋರ್ಟಲ್ ಅನ್ನು ಪರಿಚಯಿಸಿತ್ತು. ಈ ಪೋರ್ಟಲ್ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದ್ದು ಇದರಿಂದ ತೆರಿಗೆ ಪಾವತಿದಾರರು ಸುಲಭವಾಗಿ ಆದಾಯ ತೆರಿಗೆ ಮರುಸಲ್ಲಿಕೆಯನ್ನು ಮಾಡಬಹುದು ಎಂದು ವಿಭಾಗ ತಿಳಿಸಿತ್ತು.


  ಆದರೆ ಆರಂಭದಲ್ಲಿಯೇ ವೆಬ್‌ಸೈಟ್ ಹಲವಾರು ತಾಂತ್ರಿಕ ದೋಷಗಳನ್ನು ಹೊಂದಿತ್ತು ಎಂಬುದು ಮಾಹಿತಿಗಳಿಂದ ತಿಳಿದುಬಂದಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಈ ವೆಬ್‌ಸೈಟ್ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದ್ದು ತೆರಿಗೆ ಪಾವತಿದಾರರು ಹಾಗೂ ತೆರಿಗೆ ವೃತ್ತಿಪರರು ಹೊಸ ಪೋರ್ಟಲ್‌ನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂಬುದಾಗಿ ವರದಿಗಳು ತಿಳಿಸಿವೆ.


  ಪೋರ್ಟಲ್ ಅನ್ನು ಪರಿಷ್ಕರಿಸಿದಾಗಿನಿಂದಲೂ ಹಲವಾರು ತಾಂತ್ರಿಕ ದೋಷಗಳನ್ನು ಒಳಗೊಂಡಿದೆ ಹೀಗಾಗಿ ಆದಾಯ ತೆರಿಗೆ ಪಾವತಿದಾರರಿಗೆ ತೆರಿಗೆ ಮರುಸಲ್ಲಿಕೆಯಲ್ಲಿ ವಿಳಂಬ ಉಂಟಾಗುತ್ತಿದೆ ಹಾಗೂ ತಾಂತ್ರಿಕ ದೋಷವನ್ನು ಎದುರಿಸುತ್ತಿದ್ದಾರೆ ಎಂದು ತೆರಿಗೆ ಸಂಪರ್ಕ ಸಲಹಾ ಸೇವೆಗಳ ಪಾಲುದಾರ ವಿವೇಕ್ ಜಲನ್ ತಿಳಿಸಿದ್ದಾರೆ. ತೆರಿಗೆ ಮರುಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ವೆಬ್‌ಸೈಟ್ ಇನ್ನೂ ಸಲ್ಲಿಕೆಯಾಗಿಲ್ಲ ಎಂಬ ಗುರುತನ್ನು ತೋರಿಸುತ್ತಿದೆ.


  ಇದನ್ನೂ ಓದಿ: Indian Army| ಇದೇ ಮೊದಲ ಬಾರಿಗೆ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್ ಶ್ರೇಣಿ ನೀಡಿದ ಭಾರತೀಯ ಸೇನೆ!

  ಮೌಲ್ಯಮಾಪಕರಿಗೆ ಹಿಂದಿನ ರಿಟರ್ನ್ ಸಲ್ಲಿಕೆಯಾಗಿದೆ ಯೆಂದು ಒಪ್ಪಿಕೊಳ್ಳುವ ಬಟನ್ ಫಾರ್ಮ್ 10A ನಲ್ಲಿ ನಿಷ್ಕ್ರಿಯಗೊಂಡಿದ್ದು, ಬ್ಯಾಲೆನ್ಸ್ ಶೀಟ್ ವಿವರಗಳು ಸರಿಯಾಗಿ ಕಂಡುಬರುತ್ತಿಲ್ಲವೆಂದು ವಿವೇಕ್ ತಿಳಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಪೋರ್ಟಲ್ ಹೀಗೆಯೇ ಕೆಲಸ ಮಾಡುತ್ತಿದ್ದು ತೆರಿಗೆ ಪಾವತಿದಾರರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ತೆರಿಗೆ ಮರುಸಲ್ಲಿಕೆ ದಿನಾಂಕವನ್ನು ವಿಸ್ತರಿಸಬೇಕು ಎಂದು ವಿವೇಕ್ ಮನವಿ ಮಾಡಿದ್ದಾರೆ.


  ತೆರಿಗೆದಾರರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇನ್ಫೋಸಿಸ್ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಲೀಲ್ ಪರೇಖ್ ಅವರನ್ನು ಭೇಟಿ ಮಾಡಿ ತೆರಿಗೆ ಪೋರ್ಟಲ್‌ನಲ್ಲಿರುವ ತಾಂತ್ರಿಕ ದೋಷಗಳ ಕುರಿತು ಚರ್ಚಿಸಲಿದ್ದಾರೆ ಎಂಬುದು ತಿಳಿದು ಬಂದಿದೆ. ತಾಂತ್ರಿಕ ದೋಷಗಳನ್ನು ಒಂದೆರಡು ವಾರಗಳಲ್ಲಿ ಪರಿಹರಿಸಬಹುದಾ ಗಿದ್ದರೂ ಪೋರ್ಟಲ್ ಕೆಲವೊಂದು ಸಮಸ್ಯೆಗಳನ್ನು ನಿರಂತರವಾಗಿ ಹೊಂದಿದೆ.


  ಇದನ್ನೂ ಓದಿ: Afghanistan: ಅಫ್ಘಾನ್ ನಿರಾಶ್ರಿತರಿಂದ ದೆಹಲಿ UNHCR ಕಚೇರಿ ಎದುರು ಪ್ರತಿಭಟನೆ

  ತೆರಿಗೆ ಪಾವತಿದಾರರು ಪೋರ್ಟಲ್‌ನಲ್ಲಿ ತಾವು ಎದುರಿಸಿರುವ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದಿದ್ದರೂ ಅದು ಕೂಡಲೇ ಪರಿಹಾರವಾಗುವ ಲಕ್ಷಣಗಳು ಕಾಣುತ್ತಿಲ್ಲ ಎಂಬುದು ಪಾವತಿದಾರರ ಅಭಿಪ್ರಾಯವಾಗಿದೆ. ಕೆಲವೊಂದು ದೋಷಗಳನ್ನು ಪರಿಹರಿಸಲು ಇನ್ನಷ್ಟು ಕಾಲಾವಕಾಶ ಬೇಕಾಗುತ್ತದೆ ಎಂಬುದು ತಾಂತ್ರಿಕ ವಿಭಾಗದ ಮಾಹಿತಿಯಾಗಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸು ವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸ ಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿ ನಿಂದ ಪಾಲಿಸಿ ಸೋಂಕಿ ನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳ ಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  First published: