Onion Price: ಗಗನಕ್ಕೇರಿದ ಈರುಳ್ಳಿ ಬೆಲೆ: ವರ್ತಕರ ಮೇಲೆ ಐಟಿ ದಾಳಿ

ನಾಸಿಕ್​ನ ಇಬ್ಬರು ದೊಡ್ಡ ಈರುಳ್ಳಿ ವರ್ತಕರ ಮೇಲೆ ಈ ದಾಳಿ ನಡೆಸಲಾಗಿದೆ. ಇವರಿಬ್ಬರು ದೇಶೀಯ ಹಾಗೂ ರಫ್ತು ವ್ಯಾಪರದ ಮೇಲೆ ನಿಯಂತ್ರಣ ಹೊಂದಿದ್ದು, ಈ ವ್ಯಾಪಾರದಲ್ಲಿ ಗುರುತಿಸಿಕೊಂಡಿರದೆ ವಂಚನೆ ಎಸಗುತ್ತಿದ್ದರು. ಈ ಮೂಲಕ ಈರುಳ್ಳಿ ಕೊರತೆ ಸೃಷ್ಟಿಗೆ ಕಾರಣವಾಗಿದ್ದರು ಎನ್ನಲಾಗಿದೆ.

Seema.R | news18-kannada
Updated:November 11, 2019, 3:40 PM IST
Onion Price: ಗಗನಕ್ಕೇರಿದ ಈರುಳ್ಳಿ ಬೆಲೆ: ವರ್ತಕರ ಮೇಲೆ ಐಟಿ ದಾಳಿ
ಈರುಳ್ಳಿ
  • Share this:
ಮುಂಬೈ (ನ.11): ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ಜನಸಾಮಾನ್ಯರಲ್ಲಿ ಕಣ್ಣೀರು ತರಿಸುತ್ತಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾಗುತ್ತಿರುವುದು ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗಿದ್ದು, ಈ ಹಿನ್ನೆಲೆ ಈರುಳ್ಳಿ ವರ್ತಕರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಾಸಿಕ್​ನ ಇಬ್ಬರು ದೊಡ್ಡ ಈರುಳ್ಳಿ ವರ್ತಕರ ಮೇಲೆ ಈ ದಾಳಿ ನಡೆಸಲಾಗಿದೆ. ಇವರಿಬ್ಬರು ದೇಶೀಯ ಹಾಗೂ ರಫ್ತು ವ್ಯಾಪರದ ಮೇಲೆ ನಿಯಂತ್ರಣ ಹೊಂದಿದ್ದು, ಈ ವ್ಯಾಪಾರದಲ್ಲಿ ಗುರುತಿಸಿಕೊಂಡಿರದೆ ವಂಚನೆ ಎಸಗುತ್ತಿದ್ದರು. ಈ ಮೂಲಕ ಈರುಳ್ಳಿ ಕೊರತೆ ಸೃಷ್ಟಿಗೆ ಕಾರಣವಾಗಿದ್ದರು ಎನ್ನಲಾಗಿದೆ.

ಮಹಾರಾಷ್ಟ್ರ, ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ಮಳೆ ಹೆಚ್ಚಾದ ಹಿನ್ನೆಲೆ ಈರುಳ್ಳಿ ಕೊರತೆ ಸೃಷ್ಟಿಯಾಗಿದೆ. ಅಷ್ಟೇ ಅಲ್ಲದೇ ಮುಂಗಾರು ಬೆಳೆಗಳು ಹಾನಿಗೊಳಗಾಗಿದೆ.

ಇದನ್ನು ಓದಿ: ಎನ್​ಸಿಪಿ- ಕಾಂಗ್ರೆಸ್​ನೊಂದಿಗೆ ಶಿವಸೇನೆ ಸಖ್ಯ?: ರಾಜೀನಾಮೆ ಬಳಿಕ ಗುಟ್ಟುಬಿಟ್ಟುಕೊಟ್ಟ ಸಾವಂತ್

ಕೇಂದ್ರ ಸರ್ಕಾರದ ಏಜೆನ್ಸಿಯಾದ ಎಂಎಂಟಿಸಿ ನ.7ರಂದು 1 ಟನ್​ ಈರುಳ್ಳಿಯನ್ನು ಆಮದು ಮಾಡಿಕೊಂಡಿದೆ. ಆದಾಗ್ಯೂ ಈರುಳ್ಳಿ ಬೆಲೆ 100ರ ಗಡಿ ತಲುಪಿದೆ. ಡಿಸೆಂಬರ್​ವರೆಗೂ ಈರುಳ್ಳಿ ಬೆಲೆ ಇದೇ ರೀತಿ ದುಬಾರಿಯಾಗಿರಲಿದೆ ಎಂದು ವರ್ತರಕರು ತಿಳಿಸಿದ್ದಾರೆ.

First published:November 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ