IT raid on BBC: ಬಿಬಿಸಿಗೆ ಆದಾಯ ತೆರಿಗೆ ಅಧಿಕಾರಿಗಳ ಶಾಕ್; ದೆಹಲಿ, ಮುಂಬೈ ಕಚೇರಿಯಲ್ಲಿ ಐಟಿ ರೇಡ್

ಬಿಬಿಸಿಗೆ ಐಟಿ ಶಾಕ್!

ಬಿಬಿಸಿಗೆ ಐಟಿ ಶಾಕ್!

ಭಾರತದಲ್ಲಿರುವ ಬಿಬಿಸಿ (BBC) ವಾಹಿನಿಯ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (Income Tax department officer) ದಾಳಿ ಮಾಡಿದ್ದಾರೆ. ದೆಹಲಿ (Delhi) ಹಾಗೂ ಮುಂಬೈನಲ್ಲಿರುವ (Mumbai) ಬಿಬಿಸಿ ಕಚೇರಿ ಮೇಲೆ ಐಟಿ ದಾಳಿ ನಡೆದಿದೆ.

  • Trending Desk
  • 2-MIN READ
  • Last Updated :
  • Delhi, India
  • Share this:

    ದೆಹಲಿ/ಮುಂಬೈ: ಬಿಬಿಸಿ ವಾಹಿನಿಗೆ (BBC channel) ಐಟಿ ಶಾಕ್ (IT Shock) ಎದುರಾಗಿದೆ. ಭಾರತದಲ್ಲಿರುವ ಬಿಬಿಸಿ ವಾಹಿನಿಗಳ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (Income Tax department officer) ದಾಳಿ ಮಾಡಿದ್ದಾರೆ. ದೆಹಲಿ (Delhi) ಹಾಗೂ ಮುಂಬೈನಲ್ಲಿರುವ (Mumbai) ಬಿಬಿಸಿ ಕಚೇರಿ ಮೇಲೆ ಐಟಿ ದಾಳಿ ನಡೆದಿದೆ. ಆದಾಯ ತೆರಿಗೆ ಅಧಿಕಾರಿಗಳು ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ದಾಳಿ ಮಾಡಿ, ಮಹತ್ವದ ಕಡತಗಳನ್ನು (Important Documents) ಪರಿಶೀಲಿಸಿದ್ದಾರೆ. ಅಲ್ಲದೇ ಅಲ್ಲಿನ ಪ್ರಮುಖರ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.


    ಆದಾಯ ತೆರಿಗೆ ಇಲಾಖೆ ದಾಳಿ


    ಅಂತಾರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆ ಬೆಲೆಯಲ್ಲಿನ ಅಕ್ರಮಗಳ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ಬಿಬಿಸಿ ಆವರಣದಾದ್ಯಂತ ಶೋಧ ನಡೆಸುತ್ತಿದೆ. ಆದಾಯ ತೆರಿಗೆ ಅಧಿಕಾರಿಗಳು ಪ್ರಸ್ತುತ ನವದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಶೋಧನಾ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಐಟಿ ತನಿಖೆಗೆ ನಾವು ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ಈ ಪರಿಸ್ಥಿತಿಯನ್ನು ಆದಷ್ಟು ಬೇಗ ಪರಿಹರಿಸಲಾಗುವುದು ಎಂದು ನಾವು ಭಾವಿಸುತ್ತೇವೆ" ಎಂದು ಬಿಬಿಸಿ ಟ್ವೀಟ್ ಮಾಡಿದೆ. ಇನ್ನು ಬಿಬಿಸಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಪತ್ರಕರ್ತರ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಯಾರನ್ನೂ ಸಂಪರ್ಕಿಸಬಾರದು ಎಂದು ಅಧಿಕಾರಿಗಳು ನೌಕರರಿಗೆ ಎಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ.


    ಭಯಪಡದಂತೆ ಸಿಬ್ಬಂದಿಗಳಿಗೆ ಮೆಮೊ


    ಇದೇ ಸಮಯದಲ್ಲಿ ಸಂಸ್ಥೆಯು ಸಿಬ್ಬಂದಿಗೆ ಮೆಮೊ ಹೊರಡಿಸಿದ್ದು, ಕಚೇರಿಯಲ್ಲಿಲ್ಲದವರು ದೂರವಿರುವಂತೆ ಹಾಗೂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಗಾಬರಿಯಾಗದಂತೆ, ಭಯಗೊಳ್ಳದಂತೆ ವಿನಂತಿಸಿದ್ದು, ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ ಎಂದು ಆಶ್ವಾಸನೆ ನೀಡಿದೆ. ಇನ್ನು ತೆರಿಗೆ ಅಧಿಕಾರಿಗಳು ಸಿಬ್ಬಂದಿಗಳಿಗೆ ಕಚೇರಿಯಲ್ಲಿ ನಡೆಯುತ್ತಿರುವುದು ಸಮೀಕ್ಷೆ ಮಾತ್ರವಾಗಿದ್ದು, ಹುಟುಕಾಟವಲ್ಲ ಎಂದು ಸ್ಪಷ್ಟಪಡಿಸಿದ್ದು, ಫೋನ್ ಅನ್ನು ಹಿಂತಿರುಗಿಸಲಾಗುವುದು ಎಂದು ತಿಳಿಸಿದ್ದಾರೆ ಎಂಬುದು ತಿಳಿದು ಬಂದಿದೆ.


    ಇದನ್ನೂ ಓದಿ: Narendra Modi: ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಮೋದಿಯವರಿಂದ ಮಾತ್ರ ಸಾಧ್ಯ! ಅಮೇರಿಕಾ ಶ್ವೇತಭವನದ ಹೇಳಿಕೆ


    ಹಣಕಾಸು ವಿಭಾಗ ಪ್ರಶ್ನಿಸುತ್ತಿರುವ ತೆರಿಗೆ ಅಧಿಕಾರಿಗಳು


    ನಮಗೆ ಕೆಲವು ಸ್ಪಷ್ಟೀಕರಣಗಳು ಬೇಕಾಗಿವೆ ಮತ್ತು ಅದಕ್ಕಾಗಿ ನಮ್ಮ ತಂಡವು ಬಿಬಿಸಿ ಕಚೇರಿಗೆ ಭೇಟಿ ನೀಡುತ್ತಿದೆ ಮತ್ತು ನಾವು ಸಮೀಕ್ಷೆಯನ್ನು ನಡೆಸುತ್ತಿದ್ದೇವೆ. ನಮ್ಮ ಅಧಿಕಾರಿಗಳು ಖಾತೆ ಪುಸ್ತಕಗಳನ್ನು ಪರಿಶೀಲಿಸುತ್ತಿದ್ದಾರೆ. ಇದು ಹುಡುಕಾಟವಲ್ಲ ಎಂದು ಆದಾಯ ತೆರಿಗೆ ಮೂಲಗಳು ಹೇಳಿವೆ. ಇದೇ ಸಮಯದಲ್ಲಿ ತೆರಿಗೆ ಅಧಿಕಾರಿಗಳು ಬ್ಯಾಲೆನ್ಸ್ ಶೀಟ್ ಮತ್ತು ಖಾತೆಗಳ ವಿವರಗಳಿಗಾಗಿ ಬಿಬಿಸಿಯ ಹಣಕಾಸು ವಿಭಾಗವನ್ನು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.


    ಸರ್ಕಾರದ ವಿರುದ್ಧ ವಿಪಕ್ಷಗಳ ಆರೋಪ


    “ಇಂಡಿಯಾ: ದ ಮೋದಿ ಕ್ವೆಶ್ಚನ್ ಡಾಕ್ಯುಮೆಂಟರಿಯ ಎರಡೂ ಸೀರೀಸ್‌ಗಳನ್ನು ಕಳೆದ ತಿಂಗಳು ಸಾಮಾಜಿಕ ತಾಣಗಳಿಂದ ತೆಗೆದುಹಾಕಲಾಗಿದೆ. ಡಾಕ್ಯುಮೆಂಟರಿಯ ಲಿಂಕ್‌ಗಳನ್ನು ಹಂಚಿಕೊಳ್ಳುವ ಯೂಟ್ಯೂಬ್ ವಿಡಿಯೋಗಳು ಹಾಗೂ ಟ್ವಿಟರ್ ಪೋಸ್ಟ್‌ಗಳನ್ನು ನಿರ್ಬಂಧಿಸಲು ಕೇಂದ್ರವು ಐಟಿ ನಿಯಮಗಳ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡಿದೆ ಅಂತ ವಿಪಕ್ಷಗಳು ಆರೋಪಿಸಿವೆ. ಪ್ರತಿಪಕ್ಷ ನಾಯಕರು ಮತ್ತು ವಿದ್ಯಾರ್ಥಿಗಳು ಸಾಕ್ಷ್ಯಚಿತ್ರದ ಸಾರ್ವಜನಿಕ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ಡಾಕ್ಯುಮೆಂಟರಿ ನಿರ್ಬಂಧವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದು ವಿದ್ಯಾರ್ಥಿಗಳು, ಕಾಲೇಜು ಅಧಿಕಾರಿಗಳು ಮತ್ತು ಪೊಲೀಸರ ನಡುವೆ ಕ್ಯಾಂಪಸ್‌ನಲ್ಲಿ ಘರ್ಷಣೆಗೆ ಕಾರಣವಾಗಿತ್ತು.




    ವಿಪಕ್ಷಗಳಿಗೆ ಬಿಜೆಪಿ ತಿರುಗೇಟು


    ಬಿಬಿಸಿ ಡಾಕ್ಯುಮೆಂಟರಿಯನ್ನು ಬಿಜೆಪಿ ವಿರೋಧಿಸಿತ್ತು. ಇದೊಂದು ಮೋದಿ ವಿರುದ್ಧ ಆಧಾರವಿಲ್ಲದ ಹಾಗೂ ನಿಖರತೆ ಇಲ್ಲದ ಅಜೆಂಡಾ ಅಂತ ದೂರುತ್ತು. ಇನ್ನು ಆದಾಯ ತೆರಿಗೆ ಇಲಾಖೆಗೆ ತನ್ನ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ತಿಳಿಸಿದೆ.

    Published by:Annappa Achari
    First published: