• Home
 • »
 • News
 • »
 • national-international
 • »
 • Robert Vadra: ಬೇನಾಮಿ ಆಸ್ತಿ ಪ್ರಕರಣ: ರಾಬರ್ಟ್​ ವಾದ್ರಾ ಹೇಳಿಕೆ ದಾಖಲಿಸಲು ಮುಂದಾದ ಐಟಿ ಅಧಿಕಾರಿಗಳು

Robert Vadra: ಬೇನಾಮಿ ಆಸ್ತಿ ಪ್ರಕರಣ: ರಾಬರ್ಟ್​ ವಾದ್ರಾ ಹೇಳಿಕೆ ದಾಖಲಿಸಲು ಮುಂದಾದ ಐಟಿ ಅಧಿಕಾರಿಗಳು

ರಾಬರ್ಟ್​ ವಾದ್ರಾ

ರಾಬರ್ಟ್​ ವಾದ್ರಾ

Robert Vadra: ಐ ಟಿ ಅಧಿಕಾರಿಗಳು ರಾಬರ್ಟ್​ ವಾದ್ರಾ ಮನೆಗೆ ಭೇಟಿ ನೀಡಿದ್ದು, ಪ್ರಕರಣ ಕುರಿತು ಹೇಳಿಕೆ ದಾಖಲಿಸುತ್ತಿದ್ದಾರೆ

 • Share this:

  ನವದೆಹಲಿ (ಡಿ. 4): ಬೇನಾಮಿ ಆಸ್ತಿ ಪ್ರಕರಣ ಸಂಬಂಧ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್​ ವಾದ್ರಾ ಹೇಳಿಕೆ ದಾಖಲಿಸಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಹಿನ್ನಲೆ ಐ ಟಿ ಅಧಿಕಾರಿಗಳು ರಾಬರ್ಟ್​ ವಾದ್ರಾ ಮನೆಗೆ ಭೇಟಿ ನೀಡಿದ್ದು, ಪ್ರಕರಣ ಕುರಿತು ಹೇಳಿಕೆ ದಾಖಲಿಸುತ್ತಿದ್ದಾರೆ. ಕಾಂಗ್ರೆಸ್​​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪತಿ ರಾಬರ್ಟ್​ ವಾದ್ರಾ ವಿರುದ್ದ ಬೇನಾಮಿ ಆಸ್ತಿ ಪ್ರಕರಣ ಸಂಬಂಧ ಈಗಾಗಲೇ ವಿಚಾರಣೆ ಎದುರಿಸಿದ್ದಾರೆ. ಕೋವಿಡ್​ ಆತಂಕದ ಹಿನ್ನಲೆ ಈ ಪ್ರಕರಣ ತನಿಖೆಗೆ ಸಹಕರಿಸಲು ಸಾಧ್ಯವಾಗಿರಲಿಲ್ಲ.


  ರಾಬರ್ಟ್​ ವಾದ್ರಾ ನಿವಾಸ


  ಆದಾಯ ತೆರಿಗೆ ಇಲಾಖೆ ಹೊರತಾಗಿ ವಾದ್ರಾ ಅಕ್ರಮ ಹಣ ವರ್ಗಾವಣೆ ಪ್ರಕರಣ ಹಾಗೂ ವಿದೇಶದಲ್ಲಿ ಆಸ್ತಿ ಖರೀದಿಸಿದ ಪ್ರಕರಣದ ಅಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಎದುರಿಸುತ್ತಿದ್ದಾರೆ. ಈ ಆರೋಪದ ಅಡಿ ಅವರು ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.

  Published by:Seema R
  First published: